ಪ್ರಚಲಿತ

ಶಿವಾಜಿ ಮಹಾರಾಜರಿಗೂ ಬಸ್ರೂರಿಗೂ ಏನು ಸಂಬಂಧ?! ಏಕೆ ಛತ್ರಪತಿ ಶಿವಾಜಿ ಮಹಾರಾಜರ ಆಗಮನವಾದ ದಿನವನ್ನು ಸರ್ವ ಸಿದ್ಧತೆಯೊಂದಿಗೆ ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ ಬಸ್ರೂರು?

ತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಸಂಸ್ಥಾಪಕರು ಮಾತ್ರವಲ್ಲ ಭಾರತದ ನೌಕಾಸೇನೆಯ ಪಿತಾಮಹರೂ ಕೂಡ ಹೌದು. ೨೦೧೭ ರಿಂದ ದಕ್ಷಿಣದ ಕರಾವಳೀ ತೀರವಾದ ಬಸ್ರೂರಿನಲ್ಲಿ ‘ಬಸ್ರೂರು ಇತಿಹಾಸ ದಿನಾಚರಣೆಯನ್ನು’ ಆಚರಿಸಲಾಗುತ್ತಿದೆ.ಮತ್ತು ಈ ಬಾರಿ ಫೆಬ್ರವರಿ ೧೩ ರಂದು ಬಸ್ರೂರು ,ಸ್ವಾತಂತ್ರ ದಿನ ಮಹೋತ್ಸವವನ್ನು ಆಚರಿಸಲಾಗುತ್ತದೆ. ಮೊದಲಿನ ಎರಡು ವಾಕ್ಯಗಳಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದುಕೊಳ್ಳಬೇಡಿ ಸಂಬಂಧ ಖಂಡಿತವಾಗಲೂ ಇದೆ.ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕುಂದಗನ್ನಡಕ್ಕೂ,ಅಪೂರ್ವ ಕರಾವಳೀ ತೀರಕ್ಕೂ ಪ್ರಖ್ಯಾತವಾಗಿದೆ. ಇಂತಹಾ ಕುಂದಾಪುರದ ಒಂದು ಸಣ್ಣ ಊರು ಬಸ್ರೂರು. ಈ ಪುರಾತನ ಪಟ್ಟಣದ ಹೆಸರು ವಸುಪುರ. ಕರಾವಳಿಯ ಪ್ರಮುಖ ಬಂದರು ಹೊಂದಿದ್ದ ಪಟ್ಟಣವಾಗಿದ್ದ ಈ ಸ್ಥಳವು ಪ್ರಸಿದ್ಧ ವ್ಯಾಪಾರಕೇಂದ್ರವೂ ಆಗಿತ್ತು.ಕೆಳದಿಯ ಸಾಮಂತ ಅರಸರು ಬಳಸುತ್ತಿದ್ದ ಈ ಬಂದರು ಪಟ್ಟಣವು ಯಾತ್ರಿಗಳಿಗೆ ತಂಗುದಾಣ,ವ್ಯಾಪಾರಿಗಳಿಗೆ,ಶಿಲ್ಪಿಗಳಿಗೆ,ಕಲಾವಿದರಿಗೆ ವ್ಯವಸ್ಥಿತ ಅಗ್ರಹಾರವನ್ನು ಹೊಂದಿತ್ತು.ವಿಜಯನಗರ ಅರಸರ ಆಳ್ವಿಕೆಯಲ್ಲಿ ಔನತ್ಯವನ್ನು ವನ್ನು ಹೊಂದಿ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಈ ಪಟ್ಟಣವು ಈಗ ತನ್ನೆಲ್ಲಾ ವೈಭವವನ್ನು ಕಳೆದುಕೊಂಡು ಹಳ್ಳಿಯಾಗಿ ಉಳಿದಿದೆ.ಇತಿಹಾಸಗಾರ ಪಶ್ಚಿಮದ ಯಾತ್ರಿ ಇಬ್ನ್ನು ಬತುವ ಮಲಬಾರಿಗೆ ಹೋಗುವ ದಾರಿಯಲ್ಲಿ ಸಿಕ್ಕಿದ್ದ ಬಸ್ರೂರಿನ ವೈಭವದ ಬಗ್ಗೆ ಉಲ್ಲೇಖಿಸಿದ್ದಾರೆ.

ಭಾರತೀಯ ನೌಕಾಪಡೆಯ ಪಿತಾಮಹರಾದ ಶಿವಾಜಿ ಮಹಾರಾಜರು ೧೬೬೪ ರಲ್ಲಿ ಡಿಸೆಂಬರ್ ೫ ದರಂದು ಕೊಂಕಣ ಸಮುದ್ರದಲ್ಲಿ ಸಿಂಧುದುರ್ಗ ಸ್ಥಾಪಿಸಿದರು.ಇದರೊಂದಿಗೆ ವಿಜಯದುರ್ಗ ಮತ್ತು ಸುವರ್ಣ ದುರ್ಗಗಳನ್ನೂ ಬಲಪಡಿಸಿದರು.ಇವುಗಳು ಸಮುದ್ರದ ಮೂಲಕ ಬರುವ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಲು ಮತ್ತು ಮರಾಠರ ನೌಕಾದಳಕ್ಕೆ ರಕ್ಷಣೆಯನ್ನು ಒದಗಿಸಲು ಸಹಾಯಕವಾಗಿದ್ದವು.ಇತಿಹಾಸದ ಪ್ರಕಾರ ಶಿವಾಜಿ ಮಹಾರಾಜರ ನೌಕಾದಳವು ೫೦೦ ರರಷ್ಟು ಸಣ್ಣ ದೊಡ್ಡ ಹಡಗುಗಳ ಬಲಿಷ್ಠ ದಳವಾಗಿತ್ತು.ಗುರುಬ್,ತಾರೆಂದೇ,ಮುಬಾರ್ ಸಿಹದ್,ಪೆಗಾರ್ ಇತ್ಯಾದಿ ಹೆಸರುಗಳ ಹಡಗುಗಳು ಅವರಲ್ಲಿತ್ತು.ದೌಲತ್ ಖಾನ್ ಮತ್ತು ಮಾಯಾಂಕ್ ಭಂಡಾರಿ ಎಂಬ ಪ್ರಮುಖರನ್ನು ಹೊಂದಿದ್ದ ಶಿವಾಜಿ ಮಹಾರಾಜರ ನೌಕಾದಳವು ಪಾದಾತಿ ದಳ ಮತ್ತು ಅಶ್ವದಳದಷ್ಟೇ ಬಲಿಷ್ಠವೂ ಪ್ರಮುಖವೂ ಆಗಿತ್ತು. ಭಾರತೀಯರ ಇತಿಹಾಸದಲ್ಲಿ ಮಾತ್ರವಲ್ಲದೆ ಬ್ರಿಟಿಷ್ ಮತ್ತು ಪೋರ್ಚುಗೀಸರ ಇತಿಹಾಸದ ದಾಖಲೆಗಳಲ್ಲೂ ಶಿವಾಜಿ ಮಹಾರಾಜರ ನೌಕಾದಳದ ವಿವರಣೆಗಳು ಕಂಡುಬರುತ್ತದೆ.೧೬೬೫ ರಲ್ಲಿ ಶಿವಾಜಿ ಮಹಾರಾಜರು ತಮ್ಮ ಮೊದಲ ನೌಕಾದಳದ ದಂಡಯಾತ್ರೆಯನ್ನು ಕೈಗೊಂಡರು.ಮರಾಠರಿಗೆ ಜಂಜೀರಾ ನವಾಬರೊಂದಿಗೆ ಪ್ರತೀಬಾರಿ ಮುಖಾಮುಖಿಯಾಗುತ್ತಿತ್ತು. ಈ ಬಾರಿ ಅವರನ್ನು ಎದುರಿಸಲು ಶಿವಾಜಿ ಮಹಾರಾಜರು ೫೦ ಯುದ್ಧ ನೌಕೆ ಮತ್ತು ೪೦೦೦ ಸೈನಿಕರನ್ನು ಹೊತ್ತ ಸಣ್ಣ ಹಡಗುಗಳು ಯುದ್ಧಕ್ಕೆ ಹೋರಾಟವು. ೧೬೬೫ ರಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ಸೇನೆಯು ಶಿವಾಜಿ ಮಹಾರಾಜರ ನೇತೃತ್ವದಲ್ಲಿ ಸಿಂಧೂದುರ್ಗದಿಂದ ಹೊರಟು ಬಸ್ರೂರಿಗೆ ಆಗಮಿಸಿದರು. ರಾಯಘಡಕ್ಕೆ ಹೋಗುವ ದಾರಿಯಲ್ಲಿ ಮಹಾರಾಜರು ಗೋಕರ್ಣದಲ್ಲಿ ಸ್ವಲ್ಪದಿನ ತಂಗಿ ಮತ್ತೆ ಯಾತ್ರೆ ಮುಂದುವರೆಸಿದರು.ಈ ರೀತಿಯಾಗಿ ಶಿವಾಜಿ ಮಹಾರಾಜರು ಕರ್ನಾಟಕದ ಕರಾವಳಿಯಲ್ಲಿ ಶತ್ರುಗಳ ಹಾವಳಿಗೆ ತಡೆ ಹಿಡಿದರು.

ಈ ಪ್ರಥಮ ನೌಕಾ ಅಭಿಯಾನ ಮತ್ತು ಪೋರ್ಚುಗೀಸರ ಮೇಲಿನ ವಿಜಯಗಾಥೆಯ ಅಂಗವಾಗಿ ಬಸ್ರೂರಿನಲ್ಲಿ ಕಳೆದ ೪ ವರ್ಷಗಳಿಂದ ವಿಜಯೋತ್ಸವ ಆಚರಿಸಲಾಗುತ್ತದೆ.ಹಿಂದವೀ ಸಾಮ್ರಾಜ್ಯ ಸಂಸ್ಥಾಪಕರಾದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಕರಾವಳಿಗೂ ಆಗಮಿಸಿದ್ದರೆಂಬುದು ನಮಗೆ ಸಂತೋಷಕ್ಕಿಂತಲೂ ಜಾಸ್ತಿ ಧನ್ಯತೆಯನ್ನು ನೀಡುವ ವಿಚಾರ..ಶಿವಾಜಿ ಮಹಾರಾಜರು ನಮ್ಮ ಮಣ್ಣನ್ನು ಪಾವನಗೊಳಿಸಿದ್ದರೆಂಬುದು ತುಂಬಾ ಸಂತೋಷಕರ ವಿಷಯ..ಭಾರತೀಯ ನೌಕಾ ಸೇನೆಯ ಪಿತಾಮಹರಾದ ಶ್ರೀ ಶಿವಾಜಿ ಮಹಾರಾಜರ ಸಾಹಸ,ಸ್ಥೈರ್ಯ ,ಮನೋಬಲ ಮತ್ತು ನಿಷ್ಠೆಯು ನಮಗೆಲ್ಲರಿಗೂ ಮಾದರಿಯಾಗಿದೆ..ಶಿವಾಜಿ ಮಹಾರಾಜರ ವಿಜಯೀ ದಿನದ ಶುಭಾಶಯಗಳು..

-Deepashree M

Tags

Related Articles

FOR DAILY ALERTS
Close