ಪ್ರಚಲಿತ

ಶಿಕ್ಷಣ ಕ್ರಾಂತಿಗೆ ದಿಟ್ಟ ಹೆಜ್ಜೆಯಿಟ್ಟ ಯೋಗಿ ಸರಕಾರ!! ಉತ್ತರ ಪ್ರದೇಶದಲ್ಲಿ ಕೆಜಿಯಿಂದ ಪಿಜಿಯವರೆಗೆ ಎಲ್ಲವೂ ಉಚಿತ..

ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ!! ಫೈರ್ ಬ್ರಾಂಡ್ ಅಂತಾನೇ ಪ್ರಖ್ಯಾತಿಯನ್ನು ಹೊಂದಿರುವಂತಹ ಯೋಗಿ ಆದಿತ್ಯನಾಥರು ಒಬ್ಬ ಮಾಸ್ಟರ್ ಮೈಂಡ್ ಅಂತಾನೇ ಹೇಳಬಹುದು!! ಯಾಕೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಅಲ್ಲಿನ ಬದಲಾವಣೆಗಳು ಹೇಳತೀರದ್ದು!! ಯಾವುದೇ ಸಮಸ್ಯೆಯನ್ನಾದರೂ ತೆಗೆದುಕೊಳ್ಳಿ, ಉತ್ತರ ಪ್ರದೇಶ ಈ ಹಿಂದೆ ಬದುಕಲು ಯೋಗ್ಯವೇ ಅಲ್ಲ ಎಂಬಂತಿದ್ದಷ್ಟು ಅಪರಾಧಗಳು ತುಂಬಿ ತುಳುಕುತ್ತಿತ್ತು!!

ಆದರೆ ಇದೀಗ ಯೋಗಿ ಆದಿತ್ಯನಾಥರ ಆಡಳಿತದಿಂದಾಗಿ ಇಡೀ ಉತ್ತರಪ್ರದೇಶ ರಾಜ್ಯ ಅದೆಷ್ಟು ಬದಲಾಣೆಯನ್ನು ಕಂಡಿದೆ ಎಂದರೆ ಅಟ್ಟಹಾಸದಿಂದ ಬೀಗುತ್ತಿದ್ದ ರೌಡಿಗಳು ತಮ್ಮ ವರಸೆಯನ್ನೇ ಬದಲಾಯಿಸಿಕೊಂಡು ಮಾಮುಲಿ ಮನುಷ್ಯರಂತೆ ಬದುಕುತ್ತಿದ್ದಾರೆ ಎಂದರೆ ಯೋಗಿ ಆದಿತ್ಯನಾಥರ ಆಡಳಿತ ಅದೆಷ್ಟು ಸಮರ್ಥವಾಗಿದೆ ಎನ್ನುವುದನ್ನು ಗಮನಿಸಬಹುದು!! ಅಷ್ಟೇ ಅಲ್ಲದೇ ಫೈರ್ ಬ್ರ್ಯಾಂಡ್ ಖ್ಯಾತಿಯ ಯೋಗಿ ಆದಿತ್ಯನಾಥರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗೆ ಮನೆಮಾತಾಗಿವೆಯೋ, ಅವರು ಕೈಗೊಂಡ ಕಾನೂನು ಸುವ್ಯವಸ್ಥೆಯೂ ರಾಜ್ಯದ ಗಡಿದಾಟಿ ಸುದ್ದಿಯಾಗುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಂತೂ ಅಪಾರವಾದ ಬದಲಾವಣೆಗಳನ್ನು ತಂದಿದ್ದಾರೆ!!

Related image

ಕೆಜಿಯಿಂದ ಪಿಜಿಯವರೆಗೆ ಉಚಿತ ಶಿಕ್ಷಣ

ಇದೀಗ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಿದ್ದು ಕಿಂಡನ್ ಗಾರ್ಡನ್‍ನಿಂದ ಪೋಸ್ಟ್ ಗ್ರಾಜುವೇಶನ್‍ವರೆಗೆ ಉಚಿತ ಶಿಕ್ಷಣವನ್ನು ನೀಡುವ ಮಹತ್ತರವಾದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಉತ್ತರಪ್ರದೇಶಕ್ಕೆ ಸಿಎಂ ಯೋಗಿ ಆದಿತ್ಯನಾಥ ನಿರ್ಧರಿಸಿದ್ದಾರೆ!! ಈ ಬಗೆಗಿನ ಘೋಷಣೆ ಶೀಘ್ರದಲ್ಲೇ ಹೊರ ಬೀಳುವ ನಿರೀಕ್ಷೆ ಇದೆ.. ಈ ಬಗ್ಗೆ ಮಾಹಿತಿ ನೀಡಿರುವ ಯುಪಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಕೆಲವು ನಗರಗಳಲ್ಲಿ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆ ಜಾರಿಗೊಳ್ಳಲಿದೆ ಎಂದಿದ್ದಾರೆ.. ಹಿಂದಿನಿಂದಲೂ ಶಿಕ್ಷಣವನ್ನು ಉಚಿತಗೊಳಿಸುವ ಬಗ್ಗೆ ಯೋಗಿ ಆದಿತ್ಯನಾಥರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದೀಗ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಡಲು ಅವರು ನಿರ್ಧರಿಸಿದ್ದು ಶೀಘ್ರದಲ್ಲಿ ಈ ಹೊಸ ನಿರ್ಧಾರ ಜಾರಿಗೊಳ್ಳಲಿದೆ..

ಅದಲ್ಲದೆ ಇದಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅನೇಕ ಬದಲಾವಣೆಗಳನ್ನೇ ತಂದಿದ್ದಾರೆ!! ಪರೀಕ್ಷೆ ದುಷ್ಕೃತ್ಯಗಳ ವಿರುದ್ಧ ಯೋಗಿ ಸರ್ಕಾರವು ಈಗಾಗಲೇ ಕೈಗೊಂಡಿರುವ ಕ್ರಮ ನಿಜಕ್ಕೂ ಅಭೂತಪೂರ್ವವಾಗಿರುವಂತಹದ್ದು!! ಪರೀಕ್ಷಾ ಕೊಠಟಿಯಲ್ಲಿ ಸಿಸಿಟಿವಿಯನ್ನು ಅಳವಡಿಸುವ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು!! ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಮಾಡುವ ದುರ್ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕೂಡಾ ಯೋಗಿ ಸರಕಾರ ಅನೇಕ ಕ್ರಮಗಳನ್ನು ಈಗಾಗಲೇ ಕೈಗೊಂಡಿತ್ತು.. ಇಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಪ್ರದೇಶದಲ್ಲಿ ಕಂಡು ಕೇಳರಿಯದ ರೀತಿ ಬದಲಾವಣೆಯನ್ನು ಮಾಡಿದ್ದಾರೆ!!

Image result for yogi adityanath

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಲೇ ಕೆಲವರು ಅರಚಾಡಲು ಶುರು ಮಾಡಿದ್ದರು!! ಅವರು ಒಬ್ಬ ಸನ್ಯಾಸಿ ಎಂದೆಲ್ಲಾ ಬಾಯಿಗೆ ಬಂದ ಹಾಗೆ ಮಾತನಾಡಿದವರು ಅದೆಷ್ಟೋ ಜನ!! ಹಿಂದೂ ಸಂತನಿಗೆ ರಾಜಕೀಯ ಪಟ್ಟ ನೀಡಿದರೆ ರಾಜ್ಯದ ಮುಸ್ಲಿಮರು ರಾಜ್ಯ ಬಿಟ್ಟು ಹೋಗಬೇಕಾಗುತ್ತದೆ ಎಂದು ಸುಳ್ಳು ಪ್ರಚಾರ ಮಾಡಿದ್ದರು!! ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇಡೀ ದೇಶವೇ ಇದೀಗ ಉತ್ತರ ಪ್ರದೇಶದತ್ತ ನೋಡುವ ಹಾಗೆ ಆಗಿದೆ!! ಇಡೀ ರಾಜ್ಯದಲ್ಲಿ ಇಂತಹ ಮುಖ್ಯಮಂತ್ರಿ ಇದ್ದರೆ ಸಾಕು ದೇಶ ಅಭಿವೃದ್ಧಿಯಾಗುವುದು ಖಂಡಿತ!!

source: https://news13.in/archives/109449

  • ಪವಿತ್ರ
Tags

Related Articles

FOR DAILY ALERTS
Close