ಪ್ರಚಲಿತ

ಸರ್ಜಿಕಲ್ ಸ್ಟ್ರೈಕ್ ಸುಳ್ಳು: ಕಾಂಗ್ರೆಸ್‌ನಿಂದ ಮತ್ತೊಮ್ಮೆ ಭಾರತೀಯ ಸೈನಿಕರಿಗೆ ಅಪಮಾನ!

ಭಾರತದ ಸಶಸ್ತ್ರ ಪಡೆಗಳ ಕುರಿತು ಕಾಂಗ್ರೆಸ್ ಸದಸ್ಯ ದಿಗ್ವಿಜಯ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಪುಲ್ವಾಮಾ ಭಯೋತ್ಪಾದಕ ದಾಳಿಯ ಹುತಾತ್ಮ ಯೋಧನ ಪತ್ನಿ, ಭದ್ರತಾ ಪಡೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಷಯಗಳನ್ನು ರಾಜಕೀಯಗೊಳಿಸಬಾರದು ಎಂದು ದಿಗ್ವಿಜಯ್ ಸಿಂಗ್ ಅವರಿಗೆ ಕಿವಿಮಾತು ಹೇಳಲಾಗಿದೆ.

ದಿಗ್ವಿಜಯ್ ಜಮ್ಮು ಕಾಶ್ಮೀರದ ಭಾಕಸರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದು, ಶ್ರೀನಗರದಿಂದ ತನ್ನ ಸಿಬ್ಬಂದಿ ‌ಗಳನ್ನು ಏರ್‌ ಲಿಫ್ಟ್ ಮಾಡಿ ಸಿಆರ್‌ಪಿ‌ಎಫ್ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಲಿಲ್ಲ. ಇದರಿಂದಲೇ ೪೦ ಮಂದಿ ಸೈನಿಕರು ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡರು ಎಂದು ಟೀಕಿಸಿದ್ದರು. ಹಾಗೆಯೇ ಸರ್ಜಿಕಲ್ ಸ್ಟ್ರೈಕ್ ‌ಗೆ ಸಂಬಂಧಿಸಿದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಾಯಕರು ಹಲವಾರು ಜನರನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕ ಹತ್ಯೆ ಮಾಡಿದ್ದಾಗಿ ಹೇಳುತ್ತಾರೆ. ಆದರೆ ಇದಕ್ಕೆ ಪುರಾವೆಗಳಿಲ್ಲ. ಅವರು ಸುಳ್ಳಿನ ಕಂತೆಯನ್ನು ಕಟ್ಟಿಕೊಂಡು ಆಡಳಿತ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಅವರ ಇಂತಹ ಹೇಳಿಕೆ ಗಳಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯಗೊಳಿಸದಂತೆಯೂ ಜನರು ಬುದ್ಧಿವಾದ ಹೇಳಿದ್ದಾರೆ.

ಈ ಬಗ್ಗೆ ಪುಲ್ವಾಮಾ ದಾಳಿಯ ಹುತಾತ್ಮ ಯೋಧ ನಸೀರ್ ಅಹಮ್ಮದ್ ಅವರ ಪತ್ನಿ ಶಾಜಿಯಾ ಕೌಸರ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸೈನಿಕರ ಬಗ್ಗೆ ನಮಗೆ ಹೆಮ್ಮೆ ಇದೆ. ಈ ದಾಳಿಯಲ್ಲಿ ಹಲವು ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಕುಟುಂಬ ಹೇಗೆ ಜೀವನ ನಡೆಸುತ್ತಿದೆ ಎಂದು ಆ ಕುಟುಂಬದವರಿಗೆ ತಿಳಿದಿದೆ. ರಾಜಕೀಯಕ್ಕೆ ಇಂತಹ ವಿಷಯಗಳನ್ನು ಬಳಸಬಾರದು ಎಂದು ತಿಳಿಸಿದ್ದಾರೆ.

ನಿವೃತ್ತ ಮೇ. ಜ. ಕೆಕೆ ಸಿನ್ಹಾ ಅವರು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಹಿರಿಯ ರಾಜಕಾರಣಿ ದಿಗ್ವಿಜಯ ಸಿಂಗ್ ಈಗ ನಮ್ಮ ಸಶಸ್ತ್ರ ಪಡೆಗಳ ಕುರಿತು ಪ್ರಶ್ನಿಸುತ್ತಿದ್ದಾರೆ. ಅವರು ರಾಜಕೀಯದಲ್ಲಿ ಏನು ಬೇಕಾದರೂ ಮಾಡಬಹುದು. ಆದರೆ ಅವರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಅವರ ಕೆಟ್ಟ ಅಭ್ಯಾಸ. ಅವರು ಪಾಕ್ ಪರ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.

Tags

Related Articles

Close