ರಾಜ್ಯ

ಯೂಟರ್ನ್ ಮಾಸ್ಟರ್ ಕೇಜ್ರಿವಾಲರ “ಆಪ್” ಅನ್ನು ಗುಡಿಸಿ ಗುಂಡಾತರ ಮಾಡಿದ ಕರ್ನಾಟಕದ ಮಹಾ ಜನತೆ!! 2019ರ ಮಹಾ ಗಠ್ ಬಂಧನಕ್ಕೆ ಬಿತ್ತು ಭಾರೀ ಹೊಡೆತ!!

ಮೋದಿ ಅಲೆ ಮುಗಿದೇ ಹೋಯಿತು, ಅದು ಭಾರತೀಯ ಜುಮ್ಲಾ ಪಾರ್ಟಿ, ಕರ್ನಾಟಕದಲ್ಲಿ ಮೋದಿ ಮೋಡಿ ನಡೆಯುವುದೆ ಇಲ್ಲ ಎನ್ನುತ್ತಿದ್ದವರು ಮೋದಿ ಅಲೆಗಲ್ಲ ಮೋದಿ ಸುನಾಮಿಗೆ ಕೊಚ್ಚಿ ಹೋಗಿ ಅರಬ್ಬಿ ಸಮುದ್ರ ಸೇರಿ ಬಿಟ್ಟರು!! ಸಿದ್ದು-ಕುಮ್ಮಿ-ಒವೈಸಿ-ಮಾಯಾ ಯಾರ ಮೋಡಿಗೂ ಜನತೆ ಬಗ್ಗಲಿಲ್ಲ. ಮೋದಿಗೆ ಮನಸೋತ ಕರುನಾಡ ಜನತೆ ಬಹುಮತವನ್ನು ಭಾಜಪ ಮಡಿಲಿಗೆ ಹಾಕಿದರು. ಈ ಮಧ್ಯೆ ಯೂ ಟರ್ನ್ ಮಾಸ್ಟರ್- ದೆಹಲಿ ಮಾಲಕ, ಅರವಿಂದ ಕೇಜ್ರಿವಾಲರ “ಆಪ್” ಪಕ್ಷ ಕೂಡ ಕರ್ನಾಟಕದ ಚುನಾವಣೆಯಲ್ಲಿ ಒಂದು ಕೈ ನೋಡಲು ಬಂದಿತ್ತು. ಆದರೆ ಮೋದಿ ಸುನಾಮಿಯನ್ನು ಎದುರಿಸಲಾಗದ ಆಪ್, ಕೊಚ್ಚಿ ಹೋಗಿ ಕೊಲ್ಲಿ ರಾಷ್ಟ್ರ ಸೇರಿದೆ. ಕರ್ನಾಟಕದ ಜನತೆ “ಪೊರಕೆ” ಪಕ್ಷವನ್ನು ಅವರದೆ ಪೊರಕೆ ತೆಗೆದುಕೊಂಡು ಗುಡಿಸಿ ಗುಂಡಾತರ ಮಾಡಿ, ಸ್ವಚ್ಚ ಕರ್ನಾಟಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ!!

ಕರ್ನಾಟಕ ಚುನಾವಣೆಯಲ್ಲಿ 29 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಆಪ್ ಪಕ್ಷ ತನ್ನ ಠೇವಣಿ ಕಳೆದುಕೊಂಡು ಮಕಾಡೆ ಮಲಗಿದೆ. ಈ ಚುನಾವಣೆಯಲ್ಲಿ ಬೆಂಗಳೂರಿನ 18 ಮತ್ತು ರಾಜ್ಯದ ಇತರ 11 ಕಡೆಗಳಲ್ಲಿ ಆಪ್ ಸ್ಪರ್ಧಿಸಿತ್ತು. ಆದರೆ ರಾಜ್ಯದಲ್ಲಿ ಒಂದೇ ಒಂದು ಸೀಟ್ ಕೂಡಾ ಗೆಲ್ಲಲಾಗದೆ ಕೈ ಸುಟ್ಟುಕೊಂಡಿದೆ ಪೊರಕೆ ಪಕ್ಷ. ಕರ್ನಾಟಕ ಆಪ್ ನ ಕಾರ್ಯದರ್ಶಿ ರೆಡ್ಡಿ ಈ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ತಮಗೆ ಬೆಂಬಲ ಇದ್ದರೂ ಅವು ಮತಗಳಾಗಿ ಪರಿವರ್ತನೆಗೊಳ್ಳದ್ದನ್ನು ಕಂಡು ಅವರು ಕಕ್ಕಾಬಿಕ್ಕಿಯಾಗಿದ್ದಾರೆ. ಕರ್ನಾಟಕದ ಜನತೆ ತಮ್ಮನ್ನು ಸಂಪೂರ್ಣವಾಗಿ ತೊಳೆದು ಬಿಟ್ಟಿದ್ದಾರೆ ಎಂದು ಗೋಳಿಡುತ್ತಿದ್ದಾರೆ ರೆಡ್ಡಿ.

ಆಪ್ ಸೋಲು ತೃತೀಯ ರಂಗಕ್ಕೆ ಬಹು ದೊಡ್ಡ ಪೆಟ್ಟು:

2019 ರ ಮಹಾ ಸಮರಕ್ಕೆ ರಣ ಕಹಳೆ ಮೊಳಗಿರುವ ಪರಿವಾರ ಪಕ್ಷದ ರಾಜಮಾತೆಯ ಸಾಕು ಪುತ್ರ ಈ ಕೇಜ್ರೀವಾಲ್. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಹಣಿಯಲು ಎಲ್ಲ ತಗಡು ಪಕ್ಷಗಳನ್ನು ಒಗ್ಗೂಡಿಸಿ ತೃತೀಯ ರಂಗ ಸ್ಥಾಪಿಸಿ ಚೌ-ಚೌ ಬಾತ್ ಸರಕಾರ ರೂಪಿಸಿ ಮಂದ ಬುದ್ದಿಯನ್ನು ಪ್ರಧಾನಿಯನ್ನಾಗಿಸುವ ಮೇಡಮ್ ಜಿ ಕನಸಿಗೆ ಆಪ್ ನ ಸೋಲು ತಣ್ಣೀರೆರಚಿದೆ. ಆಪ್ ಕೂಡಾ ತೃತೀಯ ರಂಗದ ಪಾಲುದಾರ ಪಕ್ಷ. 2019 ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುವುದು ಖಡಾ ಖಂಡಿತ. ಹತ್ತು ಹಲವು ಪಕ್ಷಗಳ ಬೆಂಬಲ ಪಡೆದು ಕೊಂಡು ತನ್ನ ಮಗನನ್ನು ಪ್ರಧಾನ ಮಂತ್ರಿಯ ಪಟ್ಟಕ್ಕೇರಿಸಲು ಸೋನಿಯಾ ಹವಣಿಸುತ್ತಿದ್ದಾರೆ. ಕೇಜ್ರಿವಾಲ್, ಓವೈಸಿ ಮತ್ತು ಮಾಯಾವತಿಯ ಪಕ್ಷಗಳು ಕರ್ನಾಟಕದಲ್ಲಿ ಒಂದೇ ಒಂದು ಸೀಟನ್ನು ಕೂಡಾ ಗಳಿಸಲಾಗದ್ದು ತೃತೀಯ ರಂಗದ ಪಾಲಿಗೆ ನುಂಗಲಾರದ ತುತ್ತಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಈಗಾಗಲೆ ಹಲವಾರು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ. ದಿಲ್ಲಿಯಲ್ಲಿ ತೋರಿಸಿದಂತೆ ಗೋವಾ ಮತ್ತು ಪಂಜಾಬಿನಲ್ಲಿ ತನ್ನ ಜಾದೂ ತೋರಿಸುತ್ತೇನೆ ಎಂದು ಬೀಗುತ್ತಿದ್ದ ಕೇಜ್ರಿವಾಲರಿಗೆ ಅಲ್ಲಿಯ ಜನರೂ ಪೊರಕೆ ಏಟು ನೀಡಿದ್ದಾರೆ. ಈಗ ಕರ್ನಾಟಕದ ಸರದಿ. ಹೀಗೆ ಪ್ರತಿಯೊಂದು ರಾಜ್ಯದಲ್ಲಿ ಸೋಲುತ್ತಾ ಹೋದರೆ ತೃತೀಯ ರಂಗದಲ್ಲಿ ಪೊರಕೆ ಪಕ್ಷಕ್ಕೆ ಕವಡೆ ಕಾಸಿಸ ಕಿಮ್ಮತ್ತೂ ಇರುವುದಿಲ್ಲ. ಹೊಸ ರಾಜ್ಯಗಳನ್ನು ಗಳಿಸುವ ಗೋಜಿಗೆ ಹೋಗದೆ ಇರುವ ದೆಹಲಿಯನ್ನೆ ಉಳಿಸಿಕೊಂಡರೆ ಕೇಜ್ರಿವಾಲರ ಪಾಲಿಗೆ ಅದೆ ದೊಡ್ದ ಸಾಹಸ !! ಗೋಸುಂಬೆಯಂತೆ ಕ್ಷಣ ಕ್ಷಣಕ್ಕೂ ಬಣ್ಣ ಬದಲಾಯಿಸುವ ಕೇಜ್ರಿವಾಲನನ್ನು ಕರ್ನಾಟಕದ ಜನತೆ ನಂಬಿ ಖೆಡ್ಡಾಕ್ಕೆ ಬೀಳಲಿಲ್ಲ ಅದು ನಮ್ಮ ಪುಣ್ಯ.

ದೇಶದಲ್ಲಿ ಮತ್ತೊಮ್ಮೆ ಗಠ್ ಬಂಧನ್ ಸರಕಾರ ಬಂದು ಯೂಪಿಎ-3 ಅಧಿಕಾರದ ಗದ್ದುಗೆಯಲ್ಲಿ ಕೂರಲೇ ಬಾರದು. ಹಾಗಾಗಲು ದೇಶಪ್ರೇಮಿಗಳು ಬಿಡಬಾರದು. ಭಾರತಮಾತೆಯನ್ನು ಖದೀಮರ ಕೈ ಯಿಂದ ಕಡು ಕಷ್ಟದಿಂದ ಪಾರು ಮಾಡಿ, ಮೋದಿಯವರ ಬಲಿಷ್ಟ ಕೈಗಳಲ್ಲಿ ಇಟ್ಟಿದ್ದರಿಂದ ಇವತ್ತು ಆಕೆಯ ಕೀರ್ತಿ ಪ್ರಪಂಚದಲ್ಲೆಲ್ಲ ಹರಡುತ್ತಿದೆ. ಈ ಕೀರ್ತಿ ನಿರಂತರವಾಗಿರಬೇಕಾದರೆ 2019ರಲ್ಲಿ ಮೋದಿಯವರು ಭಾರೀ ಬಹುಮತದಿಂದ ಮತ್ತೊಮ್ಮೆ ಗದ್ದುಗೆ ಏರಬೇಕು. ದೇಶದ ಮಹಾಜನತೆ ಮುಂದಿನ ಐದು ವರ್ಷಗಳವರೆಗೆ ಮೋದಿಯನ್ನೆ ಪ್ರಧಾನ ಸೇವಕನ್ನನ್ನಾಗಿಸಬೇಕು. 2019 ಏಕ್ ಬಾರ್ ಫಿರ್ ಮೋದಿ ಸರ್ಕಾರ್…..

-ಶಾರ್ವರಿ

Tags

Related Articles

Close