ಪ್ರಚಲಿತ

70 ವರ್ಷಗಳ ಬಳಿಕ ಈ ಹಳ್ಳಿಗೆ ಸಿಕ್ತು ವಿದ್ಯುತ್ ಸೌಲಭ್ಯ!! ಪ್ರಧಾನಿ ನರೇಂದ್ರ ಮೋದಿಯಿಂದ ಹೊಸ ದಾಖಲೆ!!

ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದಾಗಿ ವಿಶ್ವದೆಲ್ಲೆಡೆ ಪ್ರಸಿದ್ದಿಯನ್ನು ಹೊಂದಿದವರು!! ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಉನ್ನತ ಸ್ಥಾನದಲ್ಲಿ ಇರಿಸಬೇಕೆಂದು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಸಾಗುತ್ತಿದ್ದು, “ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕ’!! ಕಾಂಗ್ರೆಸ್ ಪಕ್ಷ ಗರೀಬಿ ಹಟಾವೋ ಎಂಬ ಯೋಜನೆಯನ್ನು ತಂದಿದ್ದು ಅದು ಯಾರ ಗರೀಬಿಹಟಾವೋ ಅನ್ನೋದು ಮಾತ್ರ ಇನ್ನೂ ಅರ್ಥವಾಗಿಲ್ಲ.

ಬಹುಶಃ ತಮ್ಮ ಪಕ್ಷದ ನಾಯಕರುಗಳ `ಗರೀಬಿ ಹಟಾವೋ’ಗೋಸ್ಕರ ಅವರು ಆ ರೀತಿಯ ಘೋಷಣೆಯಾವಾಗಲೂ ಹೇಳ್ತಿರ್ತಾರೋ ಏನೋ ಎಂದು ತಿಳಿಯುತ್ತಿಲ್ಲ!!ರಾಜ್ಯದಲ್ಲಿ ನಡೆಯುತ್ತಿರುವ ಐಟಿ ಅಧಿಕಾರಿಗಳ ದಾಳಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರ ಮನೆಯಲ್ಲಿ ಸಿಕ್ಕ ಕೋಟಿಕೋಟಿ ಹಣವನ್ನ ನೋಡಿದರೆ ಅರ್ಥವಾಗುತ್ತೆ ಇವರು ಇಲ್ಲಿಯವರೆಗೂ ಯಾರ ಗರೀಬಿ ಹಟಾವೋ ಮಾಡಿದರಂತ!! ಯಾಕೆಂದರೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳು ಕಳೆದರೂ ಇನ್ನೂ ಕೆಲ ಪ್ರದೇಶಗಳು ವಿದ್ಯುತ್ ಸೌಲಭ್ಯ ದೊರಕದೆ ಕತ್ತಲಲ್ಲಿರುವುದು ನಿಜವಾಗಿಯೂ ವಿಷಾದನೀಯವೇ ಸರಿ!! ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸಿದರೂ ದೇಶಕ್ಕಾಗಿ ಏನು ಮಾಡಿದರೂ ಎಂಬುವುದೇ ಅರ್ಥವಾಗುತ್ತಿಲ್ಲ!!

ದಿನಕ್ಕೆ 18 ಗಂಟೆಗಳ ಕಾಲ ದುಡಿಯುತ್ತಿರುವ ದೇಶದ ಪ್ರಧಾನಿ ಮೋದಿಜೀ ಮಾತ್ರ ಕಾಂಗ್ರೆಸ್ ನವರು ಮಾಡಿದ್ದ `ಗರೀಬಿ ಹಟಾವೋ’ಘೋಷಣೆಯನ್ನ ಅಕ್ಷರಶಃ ಪಾಲಿಸಿ ದೇಶದ ಬಡವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಮುಂದಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ `ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)’ ಘೋಷಣೆ ಮಾಡಿ ದೇಶದ ಪ್ರತಿ ಮನೆಗೂ ವಿದ್ಯುತ್ ಸೌಲಭ್ಯ ಕಲ್ಪಿಸಲು ಯೋಜನೆಯೊಂದನ್ನು ಘೋಷಿಸಿದ್ದರು. ಅದರಂತೇ ಇದೀಗ ಅದೆಷ್ಟೋ ವರ್ಷಗಳ ಕಾಲ ವಿದ್ಯತ್ ಇಲ್ಲದೇ ಜೀವನ ಸಾಗಿಸುತ್ತಿದ್ದ ಮನೆಗೆ ವಿದ್ಯುತ್ ನೀಡಿದ್ದಾರೆ!! ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದ ಜನಕ್ಕೆ ಮೋದಿ ಬೆಳಕು ಚೆಲ್ಲಿದ್ದಾರೆ!!

ದೇಶದೆಲ್ಲೆಡೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ಏನು ಮಾಡುತ್ತಿವೆ ಎಂದು ವಿರೋಧ ಮಾಡುವ ವಿರೋಧ ಪಕ್ಷಗಳಿಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ತಕ್ಕ ಉತ್ತರ ನೀಡಲಾಗುತ್ತಿದೆ. ಇದೀಗ ಬಿಜೆಪಿ ನೇತೃತ್ವದ ಮಹಾರಾಷ್ಟ್ರದ ಸರ್ಕಾರ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು, ದೇಶಕ್ಕೆ ಸ್ವತಂತ್ರ್ಯ ದೊರೆತು 70 ವರ್ಷದ ಬಳಿಕವೂ ವಿದ್ಯುತ್ ಸಂಪರ್ಕವಿಲ್ಲದೇ ಪರದಾಡುತ್ತಿದ್ದ ಹಳ್ಳಿಯೊಂದಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ದಾಖಲೆ ಬರೆದಿದೆ.

ಬುಡಕಟ್ಟು ನಿವಾಸಿಗಳೇ ವಾಸಿಸಿರುವ ಮಹಾರಾಷ್ಟ್ರದ ಅಮರಾವತಿ ಧರ್ಣಿಯ ಗ್ರಾಮಕ್ಕೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ವಿದ್ಯುತ್ ಇಲ್ಲದೇ ನಿತ್ಯ ರಾತ್ರಿ ಹಲವು ಸಮಸ್ಯೆಗಳಿಗೆ ಸಿಲುಕಿದ್ದ ಬುಡಕಟ್ಟು ಸಮುದಾಯಕ್ಕೆ ವಿದ್ಯುತ್ ಸಂಪರ್ಕ ದೊರೆತಿರುವುದು ಭಾರಿ ಅನುಕೂಲ ಕಲ್ಪಿಸಿದಂತಾಗಿದೆ.

ವಿದ್ಯುತ್ ಸಂಪರ್ಕವಿಲ್ಲದೇ ನಿತ್ಯ ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಕಾರ್ಯದಿಂದ ಭಾರಿ ಅನುಕೂಲವಾಗಿದೆ ಎಂದು ಧರ್ಣಿ ನಿವಾಸಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಕ್ಸಲ ಪ್ರಭಾವವುಳ್ಳ ಬುಡಕಟ್ಟು ಸಮುದಾಯದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ದೊರೆತಿರುವುದು, ನಕ್ಸಲರ ಪ್ರಭಾವ ಕಡಿಮೆಗೊಳಿಸಲು, ಹಿಡಿತದಲ್ಲಿಟ್ಟುಕೊಳ್ಳಲು ಅನುಕೂಲವಾಗಲಿದೆ.

ಪವಿತ್ರ

Tags

Related Articles

Close