ಪ್ರಚಲಿತ

ಪ್ರಧಾನ ಮಂತ್ರಿಯಾದ ಬಳಿಕ ಒಟ್ಟು 17 ಮುಸ್ಲಿಂ ದೇಶಗಳಿಗೆ ಭೇಟಿ ನೀಡಿದ ಮೋದಿ!! ಪ್ರಪಂಚದಾದ್ಯಂತ ಮುಸ್ಲಿಂ ರಾಷ್ಟ್ರಗಳು ನಮೋ ಎನ್ನುತ್ತಿದ್ದರೆ ಭಾರತದ ಮುಸ್ಲಿಮರು ಮೋದಿಯನ್ನು ದ್ವೇಷಿಸುತ್ತಿದ್ದಾರೆ!!

ಇವತ್ತು ವಿಶ್ವವೆ ಮೋದಿ ಅವರ ನಾಯಕತ್ವದ ಮೋಡಿಗೆ ಬೆಕ್ಕಸ ಬೆರಗಾಗಿದೆ. ಅಮೇರಿಕಾದಿಂದ ಆಸ್ಟ್ರೇಲಿಯಾದವರೆಗೆ ಎಲ್ಲಾ ದೇಶಗಳು ಮೋದಿಗೆ “ನಮೋ” ಎನ್ನುತ್ತಿವೆ. ವಿಶ್ವದ ಎಲ್ಲಾ ರಾಷ್ಟ್ರಗಳ ಜೊತೆ ಸೌಹಾರ್ದ ಸಂಬಂಧವನ್ನು ಏರ್ಪಡಿಸುವ ತನ್ನ ಕೂಟನೀತಿಯ ಅಂಗವಾಗಿ ಮೋದಿ ಕಟ್ಟರ್ ಇಸ್ಲಾಮಿಕ್ ರಾಷ್ಟ್ರಗಳ ಜೊತೆಯೂ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸ್ಥಾಪಿಸುವಲ್ಲಿ ಸಫಲರಾಗಿದ್ದಾರೆ. ಇರಾನ್, ಯುಎಇ ಮತ್ತು ಪ್ಯಾಲೆಸ್ತೀನ್ ನಂತಹ ಕಟ್ಟರ್ ಇಸ್ಲಾಮಿಕ್ ದೇಶಗಳು ಕೂಡಾ ಮೋದಿ ಮೋಡಿಗೆ ಒಳಗಾಗಿವೆ!!

ಮುಸ್ಲಿಂ ದೇಶಗಳೆಲ್ಲಾ ಮೋದಿಯವರನ್ನು ತೆರೆದ ಬಾಹುಗಳಿಂದ ಆಲಿಂಗಿಸಿಕೊಳ್ಳುತ್ತಿವೆ. ಆದರೆ ಭಾರತದಲ್ಲಿ ಮದರಸಾದ ಮೌಲ್ವಿಗಳು ಮಾತ್ರ ಮೋದಿ ಅವರ ತಲೆ ತೆಗೆಯಿರಿ, ಗಡ್ಡ ಬೋಳಿಸಿರಿ, ಚುನಾವಣೆಯಲ್ಲಿ ಅವರನ್ನು ಸೋಲಿಸಿ ಎನ್ನುತ್ತಿದ್ದಾರೆ. ವಿಶ್ವದ ಇತರ ದೇಶಗಳ ಮುಸ್ಲಿಮರಿಗೆ ಕಂಡ ಮೋದಿಯ ಒಳ್ಳೆಯ ಗುಣಗಳು ನಮ್ಮ ದೇಶದ ಮುಸಲ್ಮಾನರಿಗೆ ಏಕೆ ಕಾಣುವುದಿಲ್ಲ?

ಮೋದಿ ಹೋದಲೆಲ್ಲಾ ಕೆಂಪು ಚಾದರ ಹಾಸಿ ಅವರನ್ನು ಸ್ವಾಗತಿಸುವ ದೇಶಗಳಲ್ಲಿ ಸೌದಿ, ಓಮಾನ್, ಜೋರ್ಡಾನ್, ಪ್ಯಾಲೆಸ್ತೀನ್, ಇಂಡೋನೇಶಿಯಾ ಮುಂತಾದ ದೇಶಗಳಿವೆ. ಅರಬ್ ದೇಶಗಳ ಸುಲ್ತಾನ-ರಾಜಕುಮಾರರು ಕೂಡಾ ಖುದ್ದು ಮೋದಿಯವರ ಸ್ವಾಗತಕ್ಕೆ ಬಾಗಿಲ ಬಳಿ ನಿಂತು ಕಾಯುತ್ತಿರುತ್ತಾರೆ!! ಭಾರತದಲ್ಲಿ ಇದುವರೆಗೂ ಯಾವ ಪ್ರಧಾನ ಮಂತ್ರಿಗೂ ದೊರಕಿರದ ಭವ್ಯ ಸ್ವಾಗತ ಇಂದು ಮೋದಿ ಅವರಿಗೆ ದೊರೆಯುತ್ತಿದೆ. ದೇಶ “ಭಕ್ತ”ರಿಗೆ ಎದೆಯುಬ್ಬಿಸಿ ನಡೆಯುವ ವಿಚಾರವಿದು. 2015 ರಿಂದ 2018 ರವರೆಗೆ ಮೋದಿ ಒಟ್ಟು 17 ಮುಸ್ಲಿಂ ದೇಶಗಳಿಗೆ ಭೇಟಿ ನೀಡಿದ್ದಾರೆ. 2015 ರಲ್ಲಿ ಮೊತ್ತ ಮೊದಲು ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದ ಮೋದಿ, ಇದೆ ಬುಧವಾರದಂದು ಇಂಡೋನೇಷಿಯಾಕ್ಕೆ ಭೇಟಿ ನೀಡಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಮೋದಿಗೆ ರಾಜಾತಿಥ್ಯ ದೊರೆಯುತ್ತಿದೆ. ಪುರುಷ, ಮಹಿಳೆ ಮತ್ತು ಮಕ್ಕಳೆನ್ನುವ ಬೇಧವಿಲ್ಲದೆ ಎಲ್ಲರೂ ಮೋದಿ ಅವರ ಮೇಲೆ ಮುಗಿಬಿದ್ದು ಆಲಿಂಗಿಸಿಕೊಳ್ಳುತ್ತಿದ್ದಾರೆ, ಅವರ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

ಸೌದಿ ಅರಬ್ ಇಸ್ಲಾಮಿನ ಜನನಿ ಎಂದು ಕರೆಯಲ್ಪಡುತ್ತದೆ. ಅಂತಹ ಸೌದಿ ಸರಕಾರ ತನ್ನ ದೇಶದ ಸರ್ವೋಚ್ಚ ನಾಗರಿಕ ಉಪಾಧಿ ‘ದ ಕಿಂಗ್ ಅಬ್ದುಲ್ಲಾಜೀಜ್ ಸಾಶ್’ ಅನ್ನು ಒಬ್ಬ ಹಿಂದೂ ವ್ಯಕ್ತಿ, ಮೋದಿಯವರಿಗೆ ನೀಡಿ ಸನ್ಮಾನಿಸಿದೆ!! ಪ್ಯಾಲೆಸ್ತೀನ್ ನ ಪ್ರಧಾನಮಂತ್ರಿ ಮೋದಿಯವರನ್ನು ಕೊಂಡಾಡುತ್ತಾ, “ಮೋದಿ ಒಬ್ಬ ವಿಶ್ವ ನಾಯಕ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನ ಜಗಳವನ್ನು ಕೊನೆಗಾಣಿಸುವ ತಾಕತ್ತು ಕೇವಲ ಮೋದಿಗಿದೆ” ಎಂದು ಬಾಯಿತುಂಬಾ ಕೊಂಡಾಡಿದ್ದಾರೆ.

ಪ್ಯಾಲೆಸ್ತೀನ್ ಭೇಟಿಗೆ ಜೋರ್ಡನ್ ಸರಕಾರ ಮೋದಿ ಅವರಿಗೆ ಹೆಲಿಕಾಪ್ಟರ್ ನೀಡಿದ್ದರೆ, ಪ್ಯಾಲೆಸ್ತೀನ್ ನ ಜಾನಿ ದುಶ್ಮನ್ ಯಹೂದಿ ದೇಶವಾದ ಇಸ್ರೇಲಿನ ವಾಯು ಸೇನೆ ಮೋದಿ ಅವರಿಗೆ ಭದ್ರತೆ ಒದಗಿಸಿತ್ತು! ಇದೆ ರೀತಿ ಸೌದಿ ಕೂಡಾ ಮೊತ್ತ ಮೊದಲ ಬಾರಿಗೆ ಮೋದಿಗಾಗಿ ಇಸ್ರೇಲಿನ ವಿಮಾನಗಳು ತನ್ನ ಆಕಾಶದ ಮೇಲಿಂದ ಹಾರಾಡಲು ಅನುಮತಿ ನೀಡಿದೆ!! ಇದು ಮೋದಿ ಅವರ ವರ್ಚಸ್ಸು. ಶತಮಾನದ ಶತ್ರುಗಳು ತಮ್ಮ ದ್ವೇಷ ಮರೆತು ಹತ್ತಿರವಾಗುತ್ತಿರುವುದು ಕೇವಲ ಮತ್ತು ಕೇವಲ ಮೋದಿಗಾಗಿ.

ಯೂಎಇ ಯ ರಾಜಧಾನಿ ಅಬುಧಾಭಿಯಲ್ಲಿ ಮೋದಿ ಮಂದಿರದ ಶಿಲಾನ್ಯಾಸ ನೆರವೇರಿಸಿರುವುದು ಮುಸ್ಲಿಂ ದೇಶಗಳು ಮೋದಿ ಸ್ನೇಹಕ್ಕಾಗಿ ನಾವು ಏನು ಮಾಡಲೂ ಸಿದ್ದ ಎನ್ನುವ ಸಂದೇಶವನ್ನು ಸಾರುತ್ತಿದೆ. ನಾವೀಗ ಇರುವುದು ಕಾಂಗ್ರೆಸಿನ “ಭಿಕ್ಷಾಂದೇಹಿ ಭಾರತದಲ್ಲಲ್ಲ”, ಬದಲಾಗಿ ಮೋದಿಯವರ “ಧರ್ಮೋ ರಕ್ಷತಿ ರಕ್ಷಿತಃ ಭಾರತದಲ್ಲಿ”. ಭಾರತವೀಗ ಆರ್ಥಿಕವಾಗಿ ಸಬಲವಾಗಿರುವ ದೇಶ. ಹಿಂದಿನಂತೆ ಭಿಕ್ಷಾಪಾತ್ರೆ ಹಿಡಿದು ವಿದೇಶಿಗಳ ಮುಂದೆ ತಲೆ ತಗ್ಗಿಸಿ ನಿಲ್ಲುವ ಗ್ರಹಚಾರ ನಮಗಿಲ್ಲ. ಬದಲಾಗಿ ಈಗ ಭಾರತದ ಮುಂದೆ “ರಕ್ಷಾಂ ದೇಹಿ” ಎನ್ನುತ್ತಾ, ವಿಶ್ವದ ದೇಶಗಳು ಮಂಡಿಯೂರಿ ಕುಳಿತಿವೆ. ಹಿಂದಿನಂತೆ ಭಾರತವನ್ನು ನಗಣ್ಯವಾಗಿ ಕಾಣುವಂತಿಲ್ಲ, ಏಕೆಂದರೆ ಇಡಿಯ ವಿಶ್ವದಲ್ಲಿ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತ ಅಮೇರಿಕಾವನ್ನೆ ಹಿಂದಿಕ್ಕಲಿದೆ ಎನ್ನುವ ಸತ್ಯ ಎಲ್ಲರಿಗೂ ಗೊತ್ತಾಗಿದೆ. ಇದಕ್ಕೆ ಕಾರಣ ಮೋದಿ ಅವರ ಸಮರ್ಥ ನಾಯಕತ್ವ.

ಅಮೇರಿಕಾದ ಕಪಿ ಮುಷ್ಟಿಯಲ್ಲಿ ನರಳುತ್ತಿರುವ ರಾಷ್ಟ್ರಗಳಿಗೆ ಈಗ ಭಾರತವೆ ಏಕೈಕ ಆಸರೆ. ಭಾರತದ ಹಿಂದೂ ಹೃದಯ ಸಾಮ್ರಾಟ ಮೋದಿ, ಸನಾತನದ “ವಸುದೈವ ಕುಟುಂಬಕಂ” ಧ್ಯೇಯವನ್ನು ಪಾಲಿಸುವವರು ಎನ್ನುವುದು ಜಗತ್ತಿಗೆ ಅರ್ಥವಾಗಿದೆ. ಅದಕ್ಕೆ ವಿಶ್ವದ ನಾನಾ ದೇಶಗಳು ಮೋದಿಯವರ ಸ್ನೇಹಕ್ಕಾಗಿ ಹಾತೊರೆಯುತ್ತಿರುವುದು. ವಿದೇಶದವರಿಗೆ ಅರ್ಥವಾದ ವಿಚಾರ ನಮ್ಮ ದೇಶದ ಅಂಧ ಗುಲಾಮರಿಗೆ ಅರ್ಥವಾಗಿಲ್ಲ ಎನ್ನುವುದೆ ಬೇಸರದ ವಿಚಾರ. ಪೂರ್ವಾಗ್ರಹಗಳನ್ನು ತ್ಯಜಿಸಿ ಆತ್ಮದ ನಿರ್ಮಲ ಕಣ್ಣುಗಳಿಂದ ಮೋದಿಯವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಮೋದಿ ಬೆಲೆ ಕಟ್ಟಲಾಗದ ಕೋಹಿನೂರ್ ವಜ್ರ ಎನ್ನುವುದು ತಿಳಿಯುವುದು. ಭಾರತವನ್ನು ವಿಶ್ವ ಗುರುವಾಗಿಸುವ ಸಾಮರ್ಥ್ಯ ಉಳ್ಳ ಮೋದಿಗೆ ನಮೋ ನಮೋ…

-ಶಾರ್ವರಿ

Tags

Related Articles

Close