ಪ್ರಚಲಿತ

ಬಜೆಟ್ ನಂತರ ಮತ್ತೆ ಏರಿದ ಪ್ರತೀ ಕರ್ನಾಟಕದ ಪ್ರಜೆಯ ತಲೆಯ ಮೇಲಿನ ಸಾಲದ ಹೊರೆ!! ಈಗ ನೀವೆಷ್ಟು ಸಾಲಗಾರರು ಗೊತ್ತಾ?!

ಹೇಳಿರಲಿಲ್ಲವೇ?! ಸಿದ್ಧರಾಮಯ್ಯನ ಸರಕಾರಕ್ಕೆ ಸಾಲ ಮಾಡುವುದು ಬಿಟ್ಟು ಬೇರೇನೂ ಗೊತ್ತಿಲ್ಲ ಎನ್ನುವುದು ಸತ್ಯವಾದರೂ ಇವತ್ತು ರಾಜ್ಯದ ಜನತೆಯ ಮೇಲೆ ಸಾಲ ಮಾತ್ರ ಬರೋಬ್ಬರಿ ಇದೆ ಬಿಡಿ! ಪ್ರತಿ ಪ್ರಜೆಯ ಮೇಲೆ ಕರ್ನಾಟಕ ಸರಕಾರದ ಸಾಲವು ೪೪,೭೬೯ ರೂಗಳಿಗೆ ತಲುಪುತ್ತಿದೆ! ಸಾಲ ಮಾತ್ರ ಮಾಡೋದೇ ಇಲ್ಲ ಎನ್ನುವ ಸಿದ್ದಾಂತ ಇಟ್ಟುಕೊಂಡೇ ಗದ್ದುಗೆ ಏರಿದ ಸಿದ್ಧರಾಮಯ್ಯ ಮಾತ್ರ ಸಾಲ ಮಾಡಿ ಮಾಡಿ, ಈಗ ನಂ ೧ ಸಾಲಗಾರ ಎನ್ನಿಸಿದ್ದಾರೆ!!

ಪ್ರಸಕ್ತ ಆಯವ್ಯಯದಲ್ಲಿ ಪ್ರಸ್ತಾಪವಾದ ೩೯,೩೨೮ ಕೋಟಿ ರೂ ಸಾಲದೊಂದಿಗೆ ಕರ್ನಾಟಕದ ಒಟ್ಟು ಸಾಲವು ೨,೮೬,೭೯೦ ಕೋಟಿ ರೂ ತಲುಪಿತ್ತು! ೨೦೨೧-೨೨ ರ ಹೊತ್ತಿಗೆ ಇದು ೪,೧೮,೧೭೯ ಕೋಟಿ ರೂ ತಲುಪುವ ಸಾಧ್ಯತೆ ಇದೆ!! ಹಾಸ್ಯಾಸ್ಪದವೇನೆಂದರೆ, ರಾಜ್ಯ ಸರಕಾರ ಮರುಪಾವತಿಗೆ ೧೧,೦೮೬ ಕೋಟಿ ರೂ ಮೀಸಲಿಟ್ಟಿದ್ದರೆ, ಬಡ್ಡಿ ಪಾವತಿಗೆ ೧೬,೨೦೮ ಕೋಟಿ ರೂ ಇರಿಸಿದೆ!! ಇದರೊಂದಿಗೆ ರಾಜ್ಯ ಸರಕಾರ ಸಾಲದ ಶೂಲಕ್ಕೇರುವುದು ನಿಶ್ಚಿತ!! ಜಿಎಸ್ ಡಿಪಿಯ ಶೇ.೨೫ರಷ್ಟು ಸಾಲ ಮಾಡುವ ಅವಕಾಶವಿದ್ದರೂ ಸಾಲದ ಪ್ರಮಾಣವು ರಾಜ್ಯದ ಒಟ್ಟಾರೆ ಆಯವ್ಯಯಕ್ಕಿಂತ ೮೪ ಸಾವಿರ ಕೋಟಿ ರೂ ಹೆಚ್ಚಿದೆ! ಸದ್ಯಕ್ಕೆ ರಾಜ್ಯದ ಜಿಎಸ್ ಡಿಪಿ ಶೇ.೨೦.೩೬ ಇದೆಯಾದರೂ ವಿತ್ತೀಯ ಕೊರತೆ ೩೫,೧೨೭ ಕೋಟಿ ರೂಗಳೆಂದರೆ ಶೇ‌.೨.೪೯ ರಷ್ಟಿದೆ!!

ಬಿಡಿ! ಸರಣಿ ಮೇಲೆ ಸರಣಿ ಭಾಗ್ಯಗಳನ್ನು ಕೊಟ್ಟು, ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಕುಲಗೆಡಿಸಿರುವ ಸಿದ್ಧರಾಮಯ್ಯನ ಸರಕಾರವೊಂದು, ವಿತ್ತೀಯ ಶಿಸ್ತಿನ ಮಿತಿಯನ್ನೂ ಮೀರಿ ಹೆಚ್ಚು ಖರ್ಚು ಮಾಡಿ ಈಗ ಕರ್ನಾಟಕವನ್ನು ಸಾಲದ ಹೊರೆಯಲ್ಲಿ ಮುಳುಗಿಸಿದೆ ಅಷ್ಟೆ! ವರ್ಷದಿಂದ ವರ್ಷಕ್ಕೆ ಸಾಲ ಹೆಚ್ಚುತ್ತಿರುವುದು ಹಣಕಾಸು ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ತಿಳಿದೇ ಇದೆ ಬಿಡಿ!! ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ, ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಇದ್ದದ್ದು ೧.೧೨ ಲಕ್ಷ ಕೋಟಿ ರೂ! ಆದರೆ, ಬರು ಬರುತ್ತಾ ೨.೪೨ ಲಕ್ಷ ಕೋಟಿ ರೂ ಗಳನ್ನು ತಲುಪುವ ನಿರೀಕ್ಷೆ ಇರುವುದು ರಾಜ್ಯದ ಆರ್ಥಿಕ ಶಿಸ್ತಿನ ಭವಿಷ್ಯ ಏನಾಗುಬಹುದೆಂದು ತೋರಿಸಿದೆ!

ಸ್ವಲ್ಪ ಯೋಚಿಸಬೇಕು!! ಸಾಲದ ಮೇಲಿನ ಬಡ್ಡಿ, ಅಸಲು, ಮತ್ತೊಂದಿಷ್ಟು ಸಾಲ ಎಂದು ಹಳೆ ಸಾಲ ತೀರಿಸಲು ಹೊಸಾ ಸಾಲ ಮಾಡಬೇಕಾದ ಪರಿಸ್ಥಿತಿ ಇವತ್ತಿನ ರಾಜ್ಯ ಸರಕಾರಕ್ಕಿದೆ ಎನ್ನುವುದಾದರೆ, ಕಾಂಗ್ರೆಸ್ ಎಷ್ಟರ ಮಟ್ಟಿಗೆ ಪ್ರಗತಿಯತ್ತ ನಡೆದಿದೆ ಯೋಚಿಸಿ! ಜನಪ್ರಿಯತೆ ಗಳಿಸಬೇಕೆಂಬ ಭರದಲ್ಲಿ, ಜನಪರ ಯೋಜನೆಗಳನ್ನು ಮಿತಿ ಮೀರಿ ಜಾರಿಗೆ ತಂದು, ಅದರಲ್ಲಿಯೂ ಅಲ್ಪಸಂಖ್ಯಾತರ ಓಲೈಕೆಗೆ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡಿ, ಅದಲ್ಲದೇ ಚುನಾವಣೆಗೂ ಕೂಡಾ ಹಣ ಮಾಡುವ ಭರದಲ್ಲಿ, ರಾಜ್ಯದ ಜನತೆಯನ್ನು ಮರೆತು ಮಾಡಿದ ಹಗರಣ, ಭ್ರಷ್ಟಾಚಾರಗಳಿವರಯಲ್ಲವಾ! ಅವೆಲ್ಲವೂ, ಇವತ್ತಿನ ಕರ್ನಾಟಕದ ನಂ ೧ ಸರಕಾರದ ಸಾಧನೆ!

ಬರೇ ಬಜೆಟ್ಟು, ಚುನಾವಣೆ, ಮಣ್ಣು ಮಸಿ ಎಂದು ಬಜೆಟ್ ಗೆ ಸರಿಯಾಗಿ ರಾಜ್ಯವನ್ನು ನಡೆಸದೇ ,ತಿಂಗಳಿಗೊಂದು ಬಜೆಟ್ ಸೃಷ್ಟಿಸುತ್ತಾ, ಕೇಂದ್ರದ ಯೋಜನೆಗಳನ್ನು ಸರಿಯಾಗಿ ಅಳವಡಿಸದೇ, ರೈತರ ಆತ್ಮಹತ್ಯೆಗೆ ಕಾರಣರಾಗಿ, ಕೊನೆಗೆ ಪರಿಹಾರ ಘೋಷಣೆಯೆಂದು ಮಾಡಿ, ಅತ್ತ ರೈತರಿಗೆ ಬದುಕೂ ಇಲ್ಲ ಪರಿಹಾರವೂ ಇಲ್ಲ ಎಂಬಂತೆ ಮಾಡುವ ದುರ್ದೈವವೊಂದಿದೆಯಲ್ಲವಾ?! ಸರಕಾರವನ್ನು ಸಾಲದ ಶೂಲಕ್ಕೇರಿಸಿ ಇನ್ನೇನು ಕೊನೆಯುಸಿರು ಎಳೆಯಲಿದೆ!!

ಮಜಾ ಎಂದರೆ, ಈಗಾಗಲೇ ಸರಕಾರದ ಮೇಲೆ ೨ ಲಕ್ಷ ಕೋಟಿ ರೂ ಗಳ ಮೇಲೆ ಸಾಲವಿದೆ! ಪ್ರಸಕ್ತ ಆರ್ಥಿಕ ಸಾಲಿನಲ್ಲಿ ೩೭,೦೯೨ ಸಾವಿರ ಕೋಟಿ ರೂ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ! ಆಗ, ವರ್ಷಾಂತ್ಯಕ್ಕೆ ಸಾಲದ ಮೊತ್ತ ೨,೪೨,೪೨೦ ಕೋಟಿ ರೂ ತಲುಪಲಿದೆ! ಈ. ನಿರೀಕ್ಷೆಯನ್ನೂ ಮೀರಿ ಆರ್ಥಿಕ ವರ್ಷದ ಅಂತ್ಯಕ್ಕೆ ಸಾಲದ ಪ್ರಮಾಣ ೨.೫೦ ಲಕ್ಷ ಕೋಟಿ ರೂ ದಾಟಲಿದೆ! ಅಂದರೆ, ಪ್ರತಿ ಪ್ರಜೆಯ ಮೇಲೆ, ೩೮೦೦೦ ರೂ ಗಳಿಗೂ ಹೆಚ್ಚು ಸಾಲದ ಹೊರೆ!!

ಈ ವರ್ಷದ, ಅಂದರೆ ೨೦೧೭ – ೧೮ ನೇ ಸಾಲಿನ ೧,೮೬,೫೬೧ ಕೋಟಿ ರೂ ನ ಬಜೆಟ್ ಮಂಡಿಸಿದ್ದು ಸಿದ್ಧರಾಮಯ್ಯನ ಸರಕಾರ! ರಾಜ್ಯದ ಬೊಕ್ಕಸದಲ್ಲಿ ಹಣವೇ ಇಲ್ಲದೇ, ಬಜೆಟ್ ಮಂಡಿಸಿದ್ದ ಸಿದ್ಧರಾಮಯ್ಯರೆಂಬ ಮುಖ್ಯಮಂತ್ರಿ ಓಹೋ!! ಸಾಲ ಮಾಡಿಯಾದರೂ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತೇನೆ ಎಂದು ಸಾಲ ಮಾಡುತ್ತ ಈಗ ಬರುವ ಸರಕಾರಕ್ಕೆ ಸಾಲದ ಹೊರೆ ಹೊರಿಸಲು ಅಣಿಯಾಗಿರುವ ಸಿದ್ಧರಾಮಯ್ಯನ ಸರಕಾರ ಸ್ವಲ್ಪವಾದರೂ ಜವಾಬ್ದಾರಿಯುತವಾಗಿದ್ದರೆ ಕರ್ನಾಟಕದ ಜನತೆಗೆ ಈ ಗತಿ ಬರುತ್ತಿರಲಿಲ್ಲ ಬಿಡಿ!

ಬಿಡಿ!! ತೆರಿಗೆ ಸಂಗ್ರಹವೂ ಕೂಡ ಹಿನ್ನಡೆಯಲ್ಲಿದೆ!! ೧,೪೪,೮೯೨ ರೂ ರಾಜಸ್ವ ಸಂಗ್ರಹ ಲೆಕ್ಕಾಚಾರ ನೀಡಿದ್ದ ಸಿದ್ದರಾಮಯ್ಯ ಸರಕಾರ, ಹಿಂದಿನ ವರ್ಷದ ತೆರಿಗೆ ಸಂಗ್ರಹ ಬೆಳವಣೆಗೆಯ ಆಧಾರದ ಮೇಲೆ ನಿಗದಿಪಡಿಸಿತ್ತು! ಆದರೆ, ಜಿ ಎಸ್ ಟಿ ಜಾರಿಯಿಂದಾಗಿ ತೆರಿಗೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ಶೆ ೭ – ೮ ರೊಳಗಿರುವುದರಿಂದ ಸಾಲ ಅನಿವಾರ್ಯ! ನಿರೀಕ್ಷಣೆ ಮಾಡಿದ್ಧು ಶೇ ೧೪ – ೧೫ ರಷ್ಟಿತ್ತು!! ಜೊತೆಗೆ ಜನಪರ ಯೋಜನೆ ಎಂದು, ೫೦೦೦೦ ರೂವರೆಗಿನ ಸಾಲವನ್ನು ಮನ್ನಾ ಮಾಡಿ, ೮೧೬೫ ಕೋಟಿ ರೂ ಸಾಲದ ಹೊರೆಯಿದೆ! ಸಾಲ ಮನ್ನಕ್ಕಾಗಿ, ಈಗಾಗಲೇ ೨೯೯೯ ಕೋಟಿ ರೂ ಗಳನ್ನು ಪೂರಕ ಬಜೆಟ್ ನಲ್ಲಿ ಒದಗಿಸಿದ್ದು ಇನ್ನೂ ೫೧೬೬ ಕೋಟಿ ರೂ ಗಳನ್ನು ನೀಡಬೇಕಿದೆ!!

– ಪೃಥು ಅಗ್ನಿಹೋತ್ರಿ

Tags

Related Articles

Close