ಪ್ರಚಲಿತ

ಇಂದಿನ ಉಪಚುನಾವಣೆ ಫಲಿತಾಂಶಗಳ ನಂತರ ನೀವು ಪ್ರಧಾನಿ ಮೋದಿ ಅಲೆ ಕಳೆದು ಹೋಗಿದೆ ಎಂದು ಭಾವಿಸಿದ್ದೀರಿ ಎಂದಾದರೆ ಖಂಡಿತವಾಗಿಯೂ ನೀವು ತಪ್ಪು ತಿಳಿಯುತ್ತಿದ್ದೀರಿ ಏಕೆ ಗೊತ್ತೆ?

ತೃತೀಯ ರಂಗದ ಘಟಾನುಘಟಿ ನಾಯಕರೆಲ್ಲ ಒಟ್ಟಾಗಿ ಮೋದಿ ವಿರುದ್ದ ತೊಡೆ ತಟ್ಟಿ ಮೋದಿ ಅಲೆಯನ್ನು ಮುಕ್ಕಾಗಿಸುತ್ತೇವೆ ಎಂದು ಬೀಗಿದಷ್ಟೆ ಬಂತು. ಆದರೆ ಅವರು ಅಂದು ಕೊಂಡಿರುವುದಕ್ಕೂ ವಾಸ್ತವಕ್ಕೂ ಬಹಳ ಅಂತರವಿದೆ ಎನ್ನುವುದು ಲೋಕಸಭೆ ಮತ್ತು ವಿಧಾನಸಭೆಗಳ ಉಪಚುನಾವಣೆಯ ಫಲಿತಾಂಶಗಳಿಂದ ಸಾಬೀತಾಗಿದೆ. ನಾಲ್ಕು ಲೋಕಸಭಾ ಕ್ಷೇತ್ರ ಮತ್ತು ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 2 ಲೋಕಸಭಾ ಮತ್ತು 2 ವಿಧಾನಸಭಾ ಸ್ಥಾನಗಳಲ್ಲಿ ಗೆದ್ದಿವೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು 2 ಲೋಕಸಭಾ ಮತ್ತು 6 ವಿಧಾನಸಭಾ ಸೀಟುಗಳನ್ನು ಪಡೆದುಕೊಂಡಿದ್ದರೆ ಮತ್ತು ಇತರ ಪಕ್ಷಗಳು 3 ವಿಧಾನಸಭಾ ಸೀಟುಗಳಲ್ಲಿ ಗೆದ್ದಿದ್ದಾರೆ. ಇಲ್ಲಿಗೆ ಮೋದಿ ಕಥೆ ಮುಗಿಯಿತು ಎಂದು ನೀವು ಭಾವಿಸಿದರೆ ನೀವು ನಿಜವಾಗಿಯೂ ತಪ್ಪು ತಿಳಿಯುತ್ತಿದ್ದೀರಿ!! ಅದು ಹೇಗೆ ಎಂದು ಗೊತ್ತೆ?

11 ವಿಧಾನಸಭಾ ಸ್ಥಾನಗಳು:
ನೂರ್ಪುರ್ (ಉತ್ತರಪ್ರದೇಶ), ಜೋಕಿಹಾತ್ (ಬಿಹಾರ್), ಥರಾಲಿ (ಉತ್ತರಾಖಂಡ್), ಗೊಮಿಯ ಮತ್ತು ಸಿಲ್ಲಿ (ಜಾರ್ಖಂಡ್), ಮಹೇಶ್ತಲಾ (ಪಶ್ಚಿಮ ಬಂಗಾಳ), ಅಂಪಾಟಿ (ಮೇಘಾಲಯ), ಶಹಕೋಟ್ (ಪಂಜಾಬ್) ಪಾಲಸ್ ಕಡೆಗಾಂವ್ (ಮಹಾರಾಷ್ಟ್ರ), ಶಹಕೋಟ್ (ಪಂಜಾಬ್) ಮತ್ತು ಚೆಂಗಣ್ಣೂರ್ (ಕೇರಳ).

4 ಲೋಕಸಭಾ ಸ್ಥಾನಗಳು:
ಕೈರಾನಾ(ಉತ್ತರ ಪ್ರದೇಶ), ನಾಗಾಲ್ಯಾಂಡ್, ಪಾಲ್ಗರ್ ಮತ್ತು ಬಂದಾರ ಗೊಂಡಿಯಾನ್ (ಮಹಾರಾಷ್ಟ್ರ)

ಕೈರಾನಾ ಸಂಸದೀಯ ಕ್ಷೇತ್ರದಲ್ಲಿ ಏನಾಯಿತು?

ಮುಸ್ಲಿಂ ಬಾಹುಳ್ಯದಿಂದಾಗಿ ನಿತ್ಯ ಕಿರುಕುಳ ಅನುಭವಿಸುತ್ತಿದ್ದ ಹಿಂದೂಗಳು, ಸಾಮೂಹಿಕ ಪಲಾಯನ ಮಾಡಿದ ಕೈರಾನ, ರಾಷ್ಟ್ರವ್ಯಾಪಿ ಸುದ್ದಿ ಮಾಡಿತ್ತು. ಇಲ್ಲಿ ಬಿಜೆಪಿಯ ಸಂಸದ ಹುಕುಂ ಸಿಂಗ್ ಅವರ ಮರಣದ ನಂತರ ಖಾಲಿಯಾಗಿದ್ದ ಸೀಟಿಗಾಗಿ ಚುನಾವಣೆ ನಡೆದಿತ್ತು ಮತ್ತು ಕಣದಲ್ಲಿ ಹುಕುಂ ಸಿಂಗ್ ಮಗಳು ಮ್ರಿಗಾಂಕ ಸಿಂಗ್ ಬಿಜಿಪಿ ಅಭ್ಯರ್ಥಿ ಆಗಿದ್ದರು. ಮ್ರಿಗಾಂಕ ಸಿಂಗ್ ಆರ್ ಎಲ್ ಡಿ ಯ ತಬಸ್ಸುಮ್ ಎದುರಿಗೆ ಸೋಲುಂಡಿದ್ದಾರೆ. ಆದರೂ ಇದು ಬಿಜೆಪಿಯ ಸೋಲು ಅಲ್ಲ ಎಂದೆ ಕಾಣಲಾಗುತ್ತಿದೆ. ಕಾರಣ:

  • ಎಲ್ಲಾ ವಿರೋಧ ಪಕ್ಷಗಳು ಜತೆಗೂಡಿದ ನಂತರವೂ ಬಿಜೆಪಿಯ ವೋಟ್ ಶೇರ್ ಅನ್ನು ಮುರಿಯುವಲ್ಲಿ ಅವರು ಸಫಲರಾಗಿಲ್ಲ.
  • ಸುಮಾರು 34 ಪ್ರತಿಶತ ಮತದಾರರು ಮುಸ್ಲಿಂ ಸಮುದಾಯದವರಾಗಿದ್ದಾರೆ ಎಂದು ಹೇಳಲಾಗಿದೆ. ಹಿಂದೂಗಳು ಸಾಮೂಹಿಕ ಪಲಾಯನ ಮಾಡಿರುವುದರಿಂದ ಬಿಜೆಪಿಗೆ ಬೀಳಬೇಕಾಗಿದ್ದ ಮತಗಳು ಬೀಳಿಲ್ಲ.
  • ಬಿಎಸ್ಪಿ, ಎಸ್ಪಿ ಮತ್ತು ಆರ್ ಎಲ್ ಡಿ ಜಾತಿ ಆಧಾರದ ಮೇಲೆ ತಮ್ಮದೇ ಆದ ವೋಟ್ ಶೇರ್ ಅನ್ನು ಹೊಂದಿದ್ದಾರೆ ಎಂಬ ಅಂಶವನ್ನು ನಿರಾಕರಿಸಲಾಗುವುದಿಲ್ಲ.
  • ತಬಸ್ಸುಮ್ ಅವರ ಮತ: 4,81,182 ಆದರೆ ಮ್ರಿಗಾಂಕೆ ದೊರಕಿದ ಮತ: 4,36,564 ಅಂದರೆ ತೀರಾ ಭಾರೀ ಬಹುಮತದಿಂದ ವಿರೋಧಿಗಳು ಬಿಜೆಪಿಯನ್ನು ಸೋಲಿಸಿಲ್ಲ. ಹಿಂದೂಗಳು ಪಲಾಯನವಾಗಿಲ್ಲದಿದ್ದಲ್ಲಿ ಬಿಜೆಪಿಗೆ ಬಹುಮತ ನಿಶ್ಚಿತವಾಗಿತ್ತು.

ಮಹಾರಾಷ್ಟ್ರದ ಪಾಲ್ಗರ್:

ಈ ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿಯ ಗವಿತ್ ರಾಜೇಂದ್ರ ಧೇದ್ಯ ಶಿವಸೇನೆಯ ವಿರುದ್ಧ 44,589 ಅಂತರದಿಂದ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಸೇನೆ ತನ್ನನ್ನು ತಾನು ಅಜೇಯ ಎಂದು ತಿಳಿದುಕೊಂಡು ಬೆಜೆಪಿಯ ಮೇಲೆ ಎಗರಾಡುತ್ತಿತ್ತು. ಆದರೀಗ ಶಿವಸೇನೆಯು ಬಿಜೆಪಿ ಎದುರು ಮಣ್ಣು ಮುಕ್ಕಿದೆ.

ನಾಗಾಲ್ಯಾಂಡ್ ಉತ್ತರ ಅಂಗಾಮಿ:
ಬಿಜೆಪಿಯ ಬೆಂಬಲದಿಂದ ನ್ಯಾಶನಲಿಸ್ಟ್ ಡೆಮೊಕ್ರಾಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ ಪೂರ್ಣ ಬಹುಮತದೊಂದಿಗೆ ವಿಜಯಿಯಾಗಿದೆ.

ಮಹಾರಾಷ್ಟ್ರದ ಬಂದರಾ ಗೊಂಡಿಯಾನ್:
ಎನ್ಸಿಪಿಯ ಮಧುಕರ್ ಕುಕಡೆ ಅವರು ಬಿಜೆಪಿಯ ಹೇಮಂತ್ ಪಾಟ್ಲೆ ವಿರುದ್ಧ ಕೇವಲ 16,112 ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ ಗೆಲುವಿನ ಅಂತರ ತೀರಾ ಕಡಿಮೆಯಿದೆ ಎನ್ನುವುದನ್ನು ಗಮನಿಸಬೇಕಾಗಿದೆ.

ಇನ್ನು ವಿಧಾನಸಭಾ ಚುನಾವಣೆಗಳಿಗೆ ಬಂದರೆ :

ಭಾರತೀಯ ಜನತಾ ಪಕ್ಷದ ಸುಜಿತ್ ಕುಮಾರ್ ಘೋಷ್ ಅವರು ತ್ರಿಣಮೂಲ ಕಾಂಗ್ರೆಸ್ ಅಭ್ಯರ್ಥಿಯ ಎದುರು 62,896 ಅಂತರದಿಂದ ಸೋತಿದ್ದಾರೆ. ಬಂಗಾಳದಂತಹ ರಾಜ್ಯದಲ್ಲಿ ಬಿಜೆಪಿ ಖಾತೆ ತೆರೆಯುವುದೆ ಕಷ್ಟ, ಸಾಲು ಸಾಲು ಕಾರ್ಯಕರ್ತರ ಹೆಣ ಬೀಳುತ್ತಿದ್ದರೂ ಅಂತಹ ವಿಷಮ ಪರಿಸ್ಥಿತಿಯಲ್ಲೂ ಬಿಜೆಪಿ ತ್ರಿಣಮೂಲ ಕಾಂಗ್ರೆಸ್ ಗೆ ಪ್ರತಿರೋಧ ಒಡ್ಡುತ್ತಿದೆ ಎಂದರೆ ಮೆಚ್ಚಬೇಕಾದದ್ದೆ. ಉತ್ತರಾಖಂಡದಲ್ಲಿ ಬಿಜೆಪಿ ಗೆದ್ದಿದ್ದರೆ, ಮಹಾರಾಷ್ಟ್ರದ ಕಡೆಗಾಂವ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಿಂದೆಗೆದುಕೊಂಡಿರುವ ಕಾರಣ ಕಾಂಗ್ರೆಸಿಗೆ ಸೀಟು ದೊರಕಿದೆ. ಕರ್ನಾಟಕದ ಆರ್ ಆರ್ ನಗರದಲ್ಲಿ ಕೇವಲ 25000 ಸಾವಿರ ಮತಗಳ ಅಂತರದಿಂದ ಸೋತಿದೆ ಅಷ್ಟೆ.

ಇನ್ನು ಕಮ್ಯೂನಿಷ್ಟರ ಕೇರಳದಲ್ಲಿಯೂ ಸಾಲು ಸಾಲು ಬಿಜೆಪಿ ಕಾರ್ಯಕರ್ತರ ಹೆಣ ಬೀಳುತ್ತಿದೆ. ಆದರೂ ಎದೆ ಗುಂದದೆ ನ್ಯಾಯಕ್ಕಾಗಿ ಹೋರಾಟ ನಡೆಸುವ ಕಾರ್ಯಕರ್ತರ ಪರಿಶ್ರಮದಿಂದಾಗಿ ಬಿಜೆಪಿ ಮೂರನೆ ಸ್ಥಾನಕ್ಕೆ ಬಂದು ನಿಲ್ಲುವಂತಾಗಿದೆ. ಇಲ್ಲಿ ಸಿಪಿಎಮ್ ನ ಅಭ್ಯರ್ಥಿಯ ಎದುರು ಬಿಜೆಪಿ ಅಭ್ಯರ್ಥಿ ಪಿ.ಎಸ್. ಶ್ರೀಧರನ್ ಪಿಳ್ಳೈ 35,270 ಮತಗಳಿಂದ ಸೋತಿದ್ದಾರೆ.

ಇಲ್ಲಿ ಒಂದು ಗಮನಿಸಬೇಕಾದ ವಿಚಾರವೆಂದರೆ ಲೋಕಸಭಾ ಹಾಗೂ ವಿಧಾಸಭಾ ಕ್ಷೇತ್ರಗಳಿಗೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ ಮತ್ತು ವಿರೋಧಿಗಳು ಒಳ ಒಪ್ಪಂದ, ಮಸಲತ್ತುಗಳನ್ನು ಮಾಡಿಕೊಂಡು ಸ್ಪರ್ಧಿಸುತ್ತಿದ್ದಾರೆ. ಜಾತಿವಾರು ಮತಗಳು ಹರಿದು ಹಂಚಿ ಸಹಜವಾಗಿಯೆ ವಿರೋಧಿಗಳಿಗೆ ಜಯವಾಗಿದೆ. ಆದರೆ ಬಿಜೆಪಿ ಸೋತಿದ್ದರೂ ಅದರ ವೋಟ್ ಶೇರಿನಲ್ಲಿ ಏರಿಕೆ ಕಂಡುಬಂದಿರುವುದು ವಿರೋಧಿಗಳು ತೀರಾ ಸುಲಭವಾಗಿ ಗೆದ್ದಿಲ್ಲ ಎನ್ನುವುದನ್ನು ತೋರಿಸುತ್ತಿದೆ. ಗುಂಪಾಗಿ ಬಂದ ನರಿಗಳು ಏಕಾಂಗಿ ಸಿಂಹವನ್ನು ಸೋಲಿಸುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ ಅಷ್ಟೆ.

2019 ರಲ್ಲಿ ಮೋದಿ ಏಕಾಂಗಿಯಾಗಿ ಸ್ಪರ್ಧಿಸುತ್ತಾರೆ ಮತ್ತು ವಿರೋಧಿಗಳು ಗುಂಪಾಗಿ ಬರುತ್ತಾರೆ. ಉಪಚುನಾವಣೆಗಳಲ್ಲಿ ಬಿಜೆಪಿ ಒಂದೆರಡು ಕ್ಷೇತ್ರದಲ್ಲಿ ಸೋತಿತು ಎಂದ ಮಾತ್ರಕ್ಕೆ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಸುಲಭವಾಗಿ ಸೋಲಿಸುತ್ತೇವೆ ಎಂದು ವಿರೋಧಿಗಳು ಬಂಬಡಾ ಬಜಾಯಿಸುತ್ತಿದ್ದಾರೆ. ಕೌರವರಲ್ಲಿ 11 ಹನ್ನೊಂದು ಅಕ್ಷೋಹಿಣಿ ಸೈನ್ಯ ಮತ್ತು ಪಾಂಡವರಲ್ಲಿ ಕೇವಲ 7 ಅಕ್ಷೋಹಿಣಿ ಸೈನ್ಯಗಳಿದ್ದವು. ಗೆಲುವು ತಮ್ಮದೆ ಎಂದು ಕೌರವರು ಬೀಗುತ್ತಿದ್ದರು. ಪಾಂಡವರ ಕಡೆಯಲ್ಲಿ ಧರ್ಮವಿತ್ತು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜಗದೊಡೆಯ ಶ್ರೀಕೃಷ್ಣ ಪರಮಾತ್ಮನಿದ್ದ. ಎಲ್ಲಿ ಧರ್ಮವಿರುವುದೋ ಅಲ್ಲಿ ಕೃಷ್ಣನಿರುತ್ತಾನೆ. ಎಲ್ಲಿ ಕೃಷ್ಣನಿರುತ್ತಾನೋ ಅಲ್ಲಿ ಗೆಲುವಿದೆ. ಕೌರವರಾರು-ಪಾಂಡವರಾರು, ಧರ್ಮ ಮಾರ್ಗದಲ್ಲಿ ನಡೆಯುವವರು ಯಾರು ಅಧರ್ಮಿಗಳು ಯಾರು ಎನ್ನುವುದು ದೇಶಕ್ಕೇ ತಿಳಿದಿದೆ. ಗೆಲುವು ಧರ್ಮ ರಕ್ಷಕರಿಗೇ ದೊರೆಯಲಿದೆ.

-ಶಾರ್ವರಿ

Tags

Related Articles

Close