ಪ್ರಚಲಿತ

ಗಂಗಾವತಿಯಲ್ಲೂ ಮೋದಿ ದರ್ಬಾರ್! ಕನ್ನಡದಲ್ಲೇ ಮಾತು ಆರಂಭಿಸಿ ಗವಿ ಸಿದ್ದೇಶ್ವರರಿಗೆ ನಮನ ಸಲ್ಲಿಸಿದ ಚೌಕಿದಾರ!

ದೇಶಾದ್ಯಂತ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿ ವಿಪಕ್ಷಗಳ ವಿರುದ್ಧ ಸಮರ ಸಾರಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕದ ಗಂಗಾವತಿಯಲ್ಲಿ ಮತ್ತೊಮ್ಮೆ ಘರ್ಜಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ ಮೋದಿ ಮತ್ತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಜೆಡಿಎಸ್‌ ನಾಯಕರ ವಿರುದ್ಧ ನೇರಾನೇರ ಹರಿಹಾಯ್ದಿದ್ದಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ್ದ ಮೋದಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದ್ದು ನೂಕುನುಗ್ಗಲು ಆರಂಭವಾಗಿತ್ತು. ಸ್ವಲ್ಪ ಸ್ವತಃ ಪ್ರಧಾನಿ ಮೋದಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದು, ನಿಮ್ಮ ಈ ಅಭಿಮಾನ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ, ಯಾರೂ ನೂಕುನುಗ್ಗಲು ಮಾಡಬೇಡಿ ಎಂದು ಕೇಳಿಕೊಂಡರು. ಮೈತ್ರಿ ಸರಕಾರದ ವಿರುದ್ಧ ವಿವಿಧ ರೀತಿಯ ಆರೋಪ ಮಾಡಿದ ಪ್ರಧಾನಿ ಮೋದಿ, ಈ ಹಿಂದೆ ಕರ್ನಾಟಕದಲ್ಲಿ ೧೦% ಕಮಿಷನ್ ಸರಕಾರ ಇತ್ತು, ಇದೀಗ ೨೦% ಕಮಿಷನ್ ಪಡೆಯುವ ಸರಕಾರ ಇದೆ ಎಂದು ಆರೋಪಿಸಿದ್ದು, ದೇವೇಗೌಡರ ಕುಟುಂಬದ ವಿರುದ್ಧ ಟೀಕಿಸಿದ್ದಾರೆ.!

ರೇವಣ್ಣ ವಿರುದ್ಧ ಮೋದಿ ಟೀಕೆ!

೨೦೧೪ರಲ್ಲಿ ಮೋದಿ ಪ್ರಧಾನಿಯಾದರೆ ಕೆಲವರು ದೇಶ ಬಿಡುತ್ತೇನೆ ಎಂದು ಹೇಳಿಕೊಂಡಿದ್ದರು, ಆದರೆ ಬಹುಮತದಿಂದ ಗೆದ್ದ ನಂತರ ಕೂಡ ದೇಶ ಬಿಡಲೇ ಇಲ್ಲ. ಇದೀಗ ಮತ್ತೆ ಅದೇ ಕುಟುಂಬದ ಕೆಲವರು ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ, ಇವರ ಅಸಲಿ ಬಣ್ಣ ಕರ್ನಾಟಕದ ಜನತೆಗೆ ತಿಳಿದಿದೆ ಅಲ್ವೇ ಎಂದು ಟೀಕಿಸಿದರು. ಅದೇ ರೀತಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದ ಮೋದಿ, ಕರ್ನಾಟಕದಲ್ಲಿ ಶೀಘ್ರ ಮತ್ತೆ ಸುಭದ್ರ ಸರಕಾರ ರಚನೆ ಆಗಲಿದೆ ಎಂದು ಹೇಳಿದರು. ಅದೇ ರೀತಿ ಕುಮಾರಸ್ವಾಮಿ ಅವರು ಇತ್ತೀಚಿಗೆ ಸೇನೆಗೆ ಸೇರುವ ಯುವಕರು ಹೊಟ್ಟೆಗೆ ತಿನ್ನಲು ಗತಿ ಇಲ್ಲದೆ ಸೇನೆಗೆ ಸೇರುತ್ತಾರೆ ಎಂದು ಹೇಳಿಕೊಂಡಿದ್ದು ಇದೀಗ ಮೋದಿ ಇದರ ವಿರುದ್ಧವೂ ಗುಡುಗಿದ್ದಾರೆ. ಮೋದಿಯನ್ನು ವಿರೋಧಿಸುವ ಭರದಲ್ಲಿ ವಿಪಕ್ಷಗಳು ನಮ್ಮ ದೇಶದ ಸೈನಿಕರಿಗೆ ಅವಮಾನ ಮಾಡುತ್ತಿದ್ದಾರೆ, ಇಂತಹ ಪಕ್ಷಕ್ಕೆ ನೀವು ಮತ ಹಾಕುತ್ತೀರಾ ಅಥವಾ ಬೆಂಬಲಿಸುತ್ತೀರಾ ಎಂದು ಹೇಳಿದ ಮೋದಿ, ಕುಮಾರಸ್ವಾಮಿ ವಿರುದ್ದವೂ ನೇರ ವಾಗ್ದಾಳಿ ನಡೆಸಿದ್ದಾರೆ.!

ಹಿಂದಿನ ಸರಕಾರ ಸೈನಿಕರಿಗೆ ಕಳಪೆ ಮಟ್ಟದ ಶಸ್ತ್ರಾಸ್ತ್ರ ನೀಡಿ ಸೈನಿಕರ ಬಲ ಕಸಿದುಕೊಂಡಿತ್ತು, ಆದರೆ ಈಗ ನಮ್ಮ ದೇಶದ ಸೈನಿಕರು ಎಲ್ಲಾ ಆಧುನಿಕ ಶಸ್ತ್ರಾಸ್ತ್ರ ಹಿಡಿದು ಬಲಿಷ್ಠವಾಗಿದೆ, ನೀವೇ ಯೋಚಿಸಿ ದೇಶದ ಹಿತ ಕಾಯುವ ಸರಕಾರ ಯಾವುದು ಎಂದು ಹೇಳಿಕೊಂಡರು. ಕೇವಲ ವೋಟಿಗಾಗಿ ನಾಟಕವಾಡುವ ಪಕ್ಷಗಳಿಗೆ ಈ ಬಾರಿ ಜನರೇ ಉತ್ತರ ನೀಡಬೇಕಿದೆ ಎಂದು ಹೇಳಿದರು. ದೇಶವನ್ನು ತುಂಡು ತುಂಡಾಗಿ ಮಾಡುತ್ತೇವೆ ಎಂದವರ ಜೊತೆ ಕಾಂಗ್ರೆಸ್ ಜೆಡಿಎಸ್‌ ಸೇರಿಕೊಂಡಿದೆ, ಆದರೆ ದೇಶದ ಜನರು ಯಾರ ಪರವಾಗಿ ನಿಂತಿದ್ದಾರೆ ಎಂಬುದು ಈ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿಕೊಂಡ ಮೋದಿ, ರೈತರ ವಿಚಾರದಲ್ಲಿ ಕರ್ನಾಟಕ ಸರಕಾರ ಯಾವ ರೀತಿ ಆಟ ಆಡುತ್ತಿದೆ ಎಂಬುದು ನಾವೂ ನೋಡುತ್ತಿದ್ದೇವೆ, ಇದಕ್ಕೆಲ್ಲ ಮತ್ತೊಮ್ಮೆ ನಮ್ಮ ಸರಕಾರ ಬರಲಿ ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಹೇಳಿಕೊಂಡರು.!

ಸೈನಿಕರನ್ನು ಅವಮಾನ ಮಾಡಿದವರು ಯಾರೇ ಆಗಿರಲಿ ಅಂತವರು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರಿಗೆ ನಮ್ಮ ಸರಕಾರ ವಿಶೇಷ ಗೌರವ ನೀಡಿದರೆ ವಿಪಕ್ಷಗಳು ಸೈನಿಕರಿಗೆ ಅವಮಾನ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
Close