ಪ್ರಚಲಿತ

ತೆರಿಗೆ ಕಳ್ಳರನ್ನು ಹಿಡಿದರೆ ಕೇಂದ್ರ ಸರಕಾರದಿಂದ ಬಿಗ್ ಗಿಫ್ಟ್!! ಮೋದಿ ಸರಕಾರದ ಘೋಷಣೆಯಿಂದ ಬೆಚ್ಚಿ ಬಿದ್ದ ಭ್ರಷ್ಟರು!!

ಮೋದಿ ಪ್ರಧಾನಿಯಾದ ಬಳಿಕ ದೇಶದ ಅಭಿವೃದ್ಧಿಗಾಗಿ ತಂದ ಯೋಜನೆಗಳು ಎಲ್ಲಾ ರಾಷ್ಟ್ರಗಳನ್ನು ಭಾರತದತ್ತ ನೋಡುವತ್ತ ಮಾಡುತ್ತಿದೆ!! ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನಾಲ್ಕು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ವಿಶ್ವದ ದೃಷ್ಟಿಯಲ್ಲಿ ಭಾರತದ ಚಿತ್ರಣವೇ ಬದಲಾಗುತ್ತಿದ್ದರೇ, ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ!! ಮೋದಿ ಒಬ್ಬ ಚಾಯ್‍ವಾಲಾ ಅಂತಾ ಜರಿದವರಿಗೆ ಮೋದೀಜೀ ತನ್ನ ಕೆಲಸದ ಮೂಲಕ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ!! ಮೋದೀಜೀ ಇಡೀ ದೇಶವನ್ನೇ ಬದಲಿಸಿದ್ದಾರೆ ಎಂದು ಹೇಳೋಕೆ ಪ್ರತೀಯೊಬ್ಬ ಭಾರತೀಯನೂ ಹೆಮ್ಮೆಪಡಬೇಕು!! ಮೋದಿಜೀ ಅಧಿಕಾರವಹಿಸಿದ ಬಳಿಗೆ ನೋಟು ಅಮಾನ್ಯೀಕರಣ ಮಾಡುವ ಮೂಲಕ ಇಡೀ ದೇಶದ ಜನತೆಯನ್ನು ಒಂದು ಬಾರಿ ತಲ್ಲಣ ಗೊಳಿಸಿದ್ದರು!!

Related image

ಅದಲ್ಲದೆ ನರೇಂದ್ರ ಮೋದೀಜೀಯವರ ನೋಟು ನಿಷೇಧ 2016 ನವೆಂಬರ್ 8 ಈ ದಿನ ಮಾತ್ರ ಯಾರೂ ಮರೆಯುವಂತಿಲ್ಲ!! ನೋಟು ರದ್ದತಿ’ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ತಾಕತ್ತನ್ನು ಬೇರೆ ಯಾರೇ ಪ್ರಧಾನಿಯಾಗಿದ್ದಿದ್ದರೂ ಬಹುಷಃ ಮಾಡಲಿಕ್ಕಾಗುತ್ತಿರಲಿಲ್ಲ !! ಡಿಮಾನಿಟೈಸೇಷನ್ ಎಂಬ ಅಸ್ತ್ರವೊಂದು ರಾಷ್ಟ್ರವಿರೋಧಿಗಳಿಗೆ, ಭ್ರಷ್ಟಾಚಾರಿಗಳಿಗೆ, ಉಗ್ರರಿಗೆ ಬೇರಾವ ರೀತಿಯಲ್ಲಿಯೂ ತಪ್ಪಿಸಿಕೊಳ್ಳಲಾಗದಂತಹ ಹೊಡೆತವನ್ನು ನೀಡಿದೆಯಷ್ಟೇ! ಅದೆಷ್ಟೋ ಮಿಲಿಯನ್ ಗಟ್ಟಲೇ ಕಪ್ಪು ಹಣದ ಲೆಕ್ಕ ಸಿಕ್ಕಿದ್ದಲ್ಲದೇ, ಅದೆಷ್ಟೋ ಕಡೆಗಳಲ್ಲಿ ತೆರಿಗೆ ಇಲಾಖೆಯವರು ದಾಳಿ ಕೂಡ ನಡೆಸಿದ್ದರು!! ಈ ನೋಟು ಅಮಾನ್ಯೀಕರಣ ಎಂಬುವುದು ಯಾವಾಗ ಜಾರಿಗೆ ಬಂತೋ ಅಂದು ಮಾತ್ರ ಕೆಲವರು ತಲ್ಲಣಿಸಿದ್ದು ಅಷ್ಟಿಷ್ಟಲ್ಲ!!  ರಾಜಕೀಯ ವ್ಯಕ್ತಿಗಳನ್ನಂತೂ ನೋಟು ಅಮಾನ್ಯೀಕರಣ ಎಂಬ ಮೋದೀಜೀಯ ಅಸ್ತ್ರ ಬುಡಮೇಲು ಮಾಡಿಬಿಟ್ಟಿತ್ತು!! ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ದುಡ್ಡು ಸುರಿಯಬೇಕು ಎಂದು ಮನದಟ್ಟುಮಾಡಿಕೊಂಡವರ ಅದೆಷ್ಟೋ ರಾಜಕಾರಣಿಗಳ ಆಸೆಗೆ ಈ ನೋಟು ಅಮಾನ್ಯೀಕರಣ ಕೊಳ್ಳಿಇಟ್ಟಿದ್ದಂತೂ ಅಕ್ಷರಸಃ ನಿಜ!! 

ಕೇಂದ್ರ ಸರಕಾರದಿಂದ 5 ಕೋಟಿ ಭರ್ಜರಿ ಬಹುಮಾನ!

ನೋಟು ಅಮಾನ್ಯೀಕರಣ ಮೂಲಕ ಬೇಡ ಬೇಡ ಎಂದರೂ ಕಪ್ಪು ಹಣ ಸಂಗ್ರಹಿಸಿದವರು ತಮ್ಮ ಹಣವನ್ನು ಹೊರ ಹಾಕಿದ್ದರು. ಇದೀಗ ಅಕ್ರಮವಾಗಿ ಆಸ್ತಿ ಮಾಡಿರುವವರ ಮೇಲೆ ಕಣ್ಣಿಟ್ಟಿದ್ದು, ಸಾಮಾನ್ಯ ಜನರಿಗೆ ವಿಶೇಷ ಆಹ್ವಾನವೊಂದು ನೀಡಿದೆ. ಕಪ್ಪು ಹಣ, ಅಕ್ರಮ ಆಸ್ತಿ ಹೊಂದಿರುವವರ ಬಗ್ಗೆ ಸರಿಯಾದ ಮಾಹಿತಿ ನೀಡಿದರೇ 50 ಲಕ್ಷದಿಂದ 5 ಕೋಟಿಯವರೆಗೆ ಭರ್ಜರಿ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ದೇಶದ ಸಾಮಾನ್ಯ ಪ್ರಜೆಯೂ ಅಕ್ರಮ ತಡೆಯುವಲ್ಲಿ ಭಾಗಿಯಾಗಬಹುದು.

ಕಪ್ಪು ಹಣವನ್ನು ತಮ್ಮ ಸಂಬಂಧಿಕರು, ಆಪ್ತರ ಹೆಸರಿನಲ್ಲಿ ಸಂಗ್ರಹಿಸಿ, ಅವರ ಹೆಸರಿನಲ್ಲಿ ಆಸ್ತಿ ಸಂಗ್ರಹಿಸಿ, ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಅಕ್ರಮಗಳನ್ನು ತಡೆಯಲು ಸಾರ್ವಜನಿಕರ ನೇರ ಸಹಕಾರ ಪಡೆಯುವುದು, ಅಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಅಕ್ರಮ ನಡೆಸುವವರಿಗೆ ಸೂಕ್ತ ಶಿಕ್ಷೆ ವಿಧಿಸುವುದು, ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡುತ್ತಿರುವವರಿಗೆ ಸೂಕ್ತ ಪಾಠ ಕಲಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಕಪ್ಪು ಹಣದ ಕುರಿತ ಮಾಹಿತಿಯನ್ನು ತೆರಿಗೆ ಇಲಾಖೆಯ ತನಿಖಾ ನಿರ್ದೇಶಕರಿಗೆ ನೀಡಬೇಕು. ಕಪ್ಪು ಹಣದ ಕುರಿತು ನಿಖರ ಮಾಹಿತಿಯೊಂದಿಗೆ ಮಾಹಿತಿ ನೀಡಿದರೇ ಐದು ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಅಲ್ಲದೇ ಆದಾಯ ತೆರಿಗೆ ವಂಚಿಸಿದವರ ಬಗ್ಗೆ ತೆರಿಗೆ ಇಲಾಖೆಯ ಡೈರೆಕ್ಟರ್ ಜನರಲ್ ಅಥವಾ ತತ್ಸಮಾನ ಅಧಿಕಾರಿಗಳಿಗೆ ಮಾಹಿತಿ ನೀಡಿದರೇ ಮಾಹಿತಿದಾರನಿಗೆ 50 ಲಕ್ಷ ಬಹುಮಾನ, ಬೇನಾಮಿ ವಹಿವಾಟಿನ ಕುರಿತು ತೆರಿಗೆ ಇಲಾಖೆಯ ಬೇನಾಮಿ ತಡೆ ಘಟಕದ ಜಂಟಿ ಅಥವಾ ಹೆಚ್ಚುವರಿ ಆಯುಕ್ತರಿಗೆ ಮಾಹಿತಿ ನೀಡಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಬೇನಾಮಿ ಸ್ವತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದಾಗ ಮಧ್ಯಾಂತರ ಬಹುಮಾನ ನೀಡಲಾಗುತ್ತದೆ. ಅಂತಿಮವಾಗಿ ಸ್ವತ್ತನ್ನು ವಶಪಡಿಸಿಕೊಂಡಾಗ ಒಟ್ಟು ಬಹುಮಾನ ಸಿಗುತ್ತದೆ. ಜಪ್ತಿ ಮಾಡಿದ 4 ತಿಂಗಳೊಳಗೆ ಸ್ವತ್ತಿನ ಶೇಕಡಾ.1ರಷ್ಟು ಅಥವಾ ಗರಿಷ್ಠ 10 ಲಕ್ಷ ರೂ. ಅನ್ನು ಮಧ್ಯಾಂತರವಾಗಿ ನೀಡಲಾಗುತ್ತದೆ. ಎರಡು ವರ್ಷದೊಳಗೆ ಯಾವುದೇ ಪ್ರಕರಣ ಈ ಸಂಬಂಧ ಬಾಕಿ ಇಲ್ಲದಿದ್ದರೆ ಪ್ರಕರಣ ಅಂತಿಮ ಎಂದು ಪರಿಗಣಿಸಿ, ಬಹುಮಾನದ ಮೊತ್ತ ಬಿಡುಗಡೆ ಮಾಡಲಾಗುತ್ತದೆ. ಆದರೆ ಜಪ್ತಿ ಮಾಡಿದ ಸ್ವತ್ತಿನ ಶೇಕಡಾ 5ರಷ್ಟು ಅಥವಾ ಗರಿಷ್ಠ 1 ಕೋಟಿ ರೂ. ಮಾತ್ರ ಬಹುಮಾನ ಸಿಗಲಿದೆ.

ಮಾಹಿತಿದಾರ ನೀಡುವ ವಿವರ ಅಧಿಕೃತವಾಗಿರಬೇಕು ಹಾಗೂ ಮಾಹಿತಿದಾರನ ಗುರುತನ್ನು ರಹಸ್ಯವಾಗಿಡಲಾಗುವುದು, ಇಲಾಖೆಯೂ ಯಾವುದೇ ಕಾರಣಕ್ಕೂ ಮಾಹಿತಿದಾರನ ವಿವರವನ್ನು ಎಲ್ಲಿಯೂ ಬಹಿರಂಗಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ!! ಕಳೆದ ವರ್ಷ ಈ ಬೇನಾಮಿ ಆಸ್ತಿ ಕಾನೂನನ್ನು ಪರಿಚಯಿಸಲಾಗಿದ್ದು, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಆದಾಯ ಗುಪ್ತಚರ ಇಲಾಖೆಗಳಿಂದ ಮಾಹಿತಿದಾರರಿಗೆ ಬಹುಮಾನ ನೀಡುವ ಪದ್ಧತಿ ಮೊದಲಿನಿಂದಲೂ ಇದೆ. ಬೇನಾಮಿ ಆಸ್ತಿ ಮತ್ತು ಕಪ್ಪು ಹಣ ಹೊಂದಿರುವವರನ್ನು ಪತ್ತೆ ಹಚ್ಚುವುದು ಆದಾಯ ತೆರಿಗೆ ಇಲಾಖೆ ಹಾಗೂ ಆಡಳಿತ ವಿಭಾಗಕ್ಕೆ ತುಂಬಾ ಕಷ್ಟದಾಯಕವಾದ ಕೆಲಸವಾಗಿದೆ. ಹೀಗಾಗಿ ನಾವು ಮಾಹಿತಿದಾರರಿಂದ ವಿವರ ಪಡೆದರೇ ಕೆಲಸ, ವೇಗವಾಗಿ ಪರಿಣಾಮಕಾರಿಯಾಗಿ ಮುಗಿಯುತ್ತದೆ, ಒಂದು ವೇಳೆ ನಾವು ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಿದರೇ, ದೇಶಾದ್ಯಂತ ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದು ಇದರ ಬೆನ್ನಲೇ ಹೊಸ ಬ್ರಹ್ಮಾಸ್ತ್ರವನ್ನು ಬಿಟ್ಟಿದ್ದಾರೆ!!

  • ಪವಿತ್ರ

 

 

Tags

Related Articles

Close