ಪ್ರಚಲಿತ

ಭಾರತದ ಸಿಂಹ ಘರ್ಜನೆಗೆ ಬೆದರಿತೆ ಡ್ರಾಗನ್? ಕಳೆದ ಒಂದು ವರ್ಷದಿಂದ ಡೋಕ್ಲಾಮ್ ಪ್ರಸ್ಥಭೂಮಿಯಲ್ಲಿ ಕಮಕ್ ಕಿಮಕ್ ಎನ್ನುತ್ತಿಲ್ಲ ಚೀನಾ!! ಗಡಿ ನಿಯಂತ್ರಣ ರೇಖೆ ಈಗ ಪ್ರಶಾಂತ!!

ದೆಹಲಿ ಸಿಂಹದ ಘರ್ಜನೆಗೆ ಶಾಂಘಾಯಿ ಡ್ರಾಗನ್ ಕುಂಯ್ ಕುಂಯ್ ಎನ್ನುತ್ತಿದೆಯೆ? ಪ್ರಸ್ತುತ ಡೋಕ್ಲಾಮ್ ನಲ್ಲಿ ನೆಲೆಸಿರುವ ಶಾಂತಿ ಅನ್ನು ನೋಡಿದರೆ ಹಾಗೆಯೆ ಇದೆ ಎನ್ನಿಸುತ್ತಿದೆ!! ಭೂತಾನಿನ ಡೋಕ್ಲಾಮಿನಲ್ಲಿ ಭಾರತೀಯ ಮತ್ತು ಚೀನೀ ಪಡೆಗಳ ನಡುವೆ ಕಳೆದ ವರ್ಷ ಉದ್ವಿಗ್ನತೆ ಉಂಟಾಗಿತ್ತು. 73 ದಿನಗಳ ಕಾಲ ನಡೆದ ಈ ಚೀನಾ-ಭಾರತ ಮುಖಾಮುಖಿಯ ಒಂದು ವರ್ಷದ ಬಳಿಕ 14,000 ಅಡಿ ಎತ್ತರದಲ್ಲಿರುವ, 89 ಕಿಲೋಮೀಟರ್ ಅಗಲಕ್ಕೂ ಹರಡಿರುವ ಡೋಕ್ಲಾಮ್ ಪ್ರಸ್ಥಭೂಮಿಯ ಶಾಂತಿ ನೆಲೆಸಿದೆ.

ಚೀನೀಯರು ಡೋಕ್ಲಾಮ್ ಅನ್ನು ಡಾಂಗ್ಲ್ಯಾಂಗ್ ಎಂದು ಕರೆಯುತ್ತಾರೆ ಮತ್ತು ಆ ಪ್ರದೇಶ ಚೀನಾಕ್ಕೆ ಸೇರಿದ್ದೆಂದು ವಾದಿಸುತ್ತಾರೆ. ಕಳೆದ ವರ್ಷ ಸರಿ ಸುಮಾರು ಇದೆ ಹೊತ್ತಿಗೆ ಚೀನಾ ಸರಕಾರ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿತ್ತು. ವಾಸ್ತವವಾಗಿ ಚೀನಾಕ್ಕೆ ಈ ಪ್ರದೇಶದ ಮೇಲೆ ಯಾವುದೇ ಹಕ್ಕಿಲ್ಲ ಆದ್ದರಿಂದ ಚೀನಾ ರಸ್ತೆ ನಿರ್ಮಾಣ ಕಾರ್ಯ ಕಾನೂನು ಬಾಹಿರವೆಂದು ಭಾರತ ಆಕ್ಷೇಪ ವ್ಯಕ್ತ ಪಡಿಸಿತ್ತು. ಚೀನೀ ಸೇನೆ ಮತ್ತು ಭಾರತೀಯ ಸೇನೆ ಡೋಕ್ಲಾಮಿನಲ್ಲಿ ಮುಖಾಮುಖಿಯಾಗಿ ಯುದ್ದದಂತಹ ಸ್ಥಿತಿ ನಿರ್ಮಾಣವಾಗಿತ್ತು. ಅತ್ತ ಚೀನೀ ಕುಳ್ಳ ಡ್ರಾಗನ್ ಗಳು ಕೆಂಗಣ್ಣು ಬಿಡುತ್ತಿದ್ದರೆ, ಇತ್ತ ಭಾರತೀಯ ಸೇನೆ ಅವರೆದುರಿಗೆ ಬಲಾಢ್ಯ ಸಿಖ್ ಮತ್ತು ಜಾಟ್ ಸೈನಿಕರನ್ನು ಛೂ ಬಿಟ್ಟಿತ್ತು.

ಭಾರತೀಯ ಸೈನಿಕರ ದೇಹದಾರ್ಢ್ಯ ನೋಡಿದ ಚೀನೀ ಸೈನಿಕರ ಜಂಘಾಬಲವೇ ಉಡುಗಿಹೋಗಿತ್ತು! ಗಡಿ ರೇಖೆಯಲ್ಲಿ ಚೀನಾದ ಮಹಾ ಗೋಡೆಯಂತೆಯೆ ಭಾರತೀಯ ಸೈನಿಕರು ಭದ್ರವಾಗಿ ನಿಂತಿದ್ದರು. ಬಿರುಗಾಳಿಯೆ ಬಂದರೂ ಭಾರತೀಯ ಸೈನಿಕರು ಅಲುಗಾಡುತ್ತಿರಲಿಲ್ಲ, ಮತ್ತು ಚೀನಾದ ಒಂದು ತರಗೆಲೆಯೂ ಭಾರತಕ್ಕೆ ಹಾರಿ ಬರದಂತೆ ತಮ್ಮ ದೇಹದಿಂದಲೆ ತಡೆ ಗೋಡೆ ಕಟ್ಟಿದ್ದರು ಭಾರತೀಯ ವೀರರು. ಒಂದಲ್ಲ ಎರಡಲ್ಲ ಬದಲಾಗಿ ಸರಿ ಸುಮಾರು ಎರಡೂವರೆ ತಿಂಗಳು ಡೋಕ್ಲಾಮಿನ ಪ್ರಸ್ಥಭೂಮಿಯಲ್ಲಿ ಮಾನವ ಗೋಡೆ ನಿರ್ಮಿಸಿ ಇತಿಹಾಸ ರಚಿಸಿದ್ದರು ಭಾರತೀಯ ಸೈನಿಕರು!

ಚೀನೀ ಡ್ರಾಗನ್ ಕೆಂಗಣ್ಣಿಗೆ ಭಾರತದ ಸಿಂಹ ಬೆದರುವುದಿಲ್ಲ ಎನ್ನುವುದು ಯಾವಾಗಾ ಗೊತ್ತಾಯಿತೋ ಆಗ ಡೋಕ್ಲಾಮಿನಿಂದ ಮೆಲ್ಲನೆ ಕಾಲ್ಕಿತ್ತರು ಚೀನೀ ಸೈನಿಕರು. 73 ದಿನಗಳ ಬಳಿಕ ಆಗಷ್ಟ್ 28ರಂದು ಡೋಕ್ಲಾಮ್ ನಿಂದ ಹಿಂದೆ ಸರಿದು ಉದ್ವಿಗ್ನತೆಗೆ ಮುಕ್ತಾಯ ಹಾಡಿತು ಚೀನಾ ಸರಕಾರ. ಅಂದಿನಿಂದ ಇಂದಿನವರೆಗೂ ಚೀನಾ ಸರಕಾರದ ಕಡೆಯಿಂದ ಡೋಕ್ಲಾಮಿನಲ್ಲಿ ರಸ್ತೆ ನಿರ್ಮಾಣವನ್ನು ಪುನರಾರಂಭಿಸುವ ಯೋಜನೆಯ ಯಾವುದೇ ಚಿನ್ಹೆಗಳು ಕಂಡುಬರುತ್ತಿಲ್ಲ. ಡೋಕ್ಲಾಮಿನಲ್ಲಿ ಉದ್ವಿಗ್ನತೆ ಅಂತ್ಯಗೊಂಡ ನಂತರ, ಚೀನಾದ ಸೇನೆಯು ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್ಎಸಿ)ನ ಆಚೆ ಬದಿಯಲ್ಲೆ ಠಿಕಾಣಿ ಹೂಡಿದೆ! ಅಂದರೆ ತನ್ನ ಭಾಗದ ಗಡಿಯನ್ನು ಚೀನಾ ಸೇನೆ ದಾಟುತ್ತಲೆ ಇಲ್ಲ. ಬದಲಿಗೆ ಟಿಬೆಟ್ನಲ್ಲಿ ತನ್ನ ಮಿಲಿಟರಿ ಶಕ್ತಿಯನ್ನು ತೀವ್ರವಾಗಿ ಹೆಚ್ಚಿಸುತ್ತಿದೆ.

ಭಾರತವೂ ಕೈ ಕಟ್ಟಿ ಕುಳಿತಿಲ್ಲ, ಬದಲಿಗೆ ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ ಮತ್ತು ‘ರಾಯಲ್ ಭೂತಾನ್ ಆರ್ಮಿಗೆ’ ಭಾರಿ ಪ್ರಮಾಣದ ಸೇನಾ ಸಹಕಾರ ನೀಡಿ ಭೂತಾನಿನ ಸೇನೆಯನ್ನು ಸಶಕ್ತೀಕರಣಗೊಳಿಸುತ್ತಿದೆ! ಭಾರತೀಯ ಸೇನೆಯ ಮಿಲಿಟರಿ ಟ್ರೇನಿಂಗ್ ಟೀಮ್ ಭೂತಾನಿನ ರಾಯಲ್ ಆರ್ಮಿಗೆ ಕಠಿಣ ತರಬೇತಿ ನೀಡಿ ತಮ್ಮಂತೆಯೆ ಪರಾಕ್ರಮಿಗಳನ್ನಾಗಿಸುತ್ತಿದೆ. ಭಾರತೀಯ ಸೇನೆಯ ತರಬೇತಿಯಿಂದಾಗಿ ಭೂತಾನಿನ ಸೈನಿಕರು ಹಿಂದಿಗಿಂತಲೂ ಹೆಚ್ಚು ಆಕ್ರಾಮಕರಾಗಿದ್ದಾರೆ. ಭಾರತವು ತನ್ನ ಹಸಿಮರ ಬೇಸ್ ಮತ್ತು ಬಾಗ್ಡೋಗ್ರ ಬೇಸ್ ಅನ್ನು ನವೀಕರಿಸುತ್ತಿದೆ. ಹೊಸ ಸುಖೋಯ್ 30 MKI ಫೈಟರ್ ಜೆಟ್ ಗಳನ್ನು ಹಸಿಮಾರಾದಲ್ಲಿ ನಿಯೋಜಿಸಲಾಗಿದೆ ಮುಂದಿನ ದಿನಗಳಲ್ಲಿ ಹೊಸ ರಫೆಲ್ ಜೆಟ್ ಗಳನ್ನು ಈ ಬೇಸ್ ನಲ್ಲಿ ನಿಯೋಜಿಸಲಾಗುತ್ತದೆ. ಎಂತಹ ದೂರದೃಷ್ಟಿ, ಎಂತಹ ಸ್ಪಷ್ಟ ನಿರ್ಧಾರ ಮೋದಿ ಸರಕಾರದ್ದು!! ” ಚೀನಾ ಈಗ ಮತ್ತೊಮ್ಮೆ ಡೋಕ್ಲಾಮಿಗೆ ಪ್ರವೇಶಿಸಲು ಅಸಾಧ್ಯ. ಈ ಪ್ರದೇಶದಲ್ಲಿ ಜಾಗರೂಕತೆ ಮತ್ತು ಸೇನೆಯ ಉಪಸ್ಥಿತಿ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದೆ” ಎಂದು ಹಿರಿಯ ಸೇನಾಧಿಕಾರಿ ತಿಳಿಸಿದ್ದಾರೆ.

ಇತ್ತ ಭೂಪ್ರದೇಶದಲ್ಲಿ ಚೀನೀ ಚಟುವಟಿಕೆಯ ಮೇಲೆ ಭಾರತೀಯ ಸೈನಿಕರು ಹದ್ದಿನ ಕಣ್ಣಿಟ್ಟಿದ್ದರೆ, ಅತ್ತ ಆಕಾಶದಲ್ಲಿ ಭಾರತದ ಮೂರನೆ ಕಣ್ಣು ಅಂತರಿಕ್ಷದ ಉಪಗ್ರಹಗಳು ಚೀನೀ ಸೈನಿಕರ ಮೇಲೆ ನಿಗಾ ಇಟ್ಟಿದೆ! ಅಲ್ಲದೆ ಸಿಕ್ಕಿಂನಲ್ಲಿ Black Cats Division ಅನ್ನು ನಿಯೋಜಿಸಲಾಗಿದೆ. ಈ ಪಡೆಯ ಮುಖ್ಯಸ್ಥರ ಪ್ರಕಾರ ಡೋಕ್ಲಾಮ್ ವಿವಾದದ ಬಳಿಕ ಚೀನೀ ಸೈನಿಕರು ಭಾರತೀಯ ಸೈನಿಕರನ್ನು ಅತ್ಯಂತ ಗೌರವದಿಂದ ಕಾಣತೊಡಗಿದ್ದಾರೆ. ಹಿಂದೆಲ್ಲಾ ಭಾರತೀಯ ಸೈನಿಕರ ಜೊತೆ ಒರಟಾಗಿ ವರ್ತಿಸುತ್ತಿದ್ದ ಚೀನೀ ಸೈನಿಕರು ಈಗ ಆದರದಿಂದ ಮಾತನಾಡುತ್ತಾರೆ ಮತ್ತು ಸೇನೆಯ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಿದ್ದಾರೆ! ಚೀನಿಯರ ಭೂಪ್ರದೇಶದ ಉಲ್ಲಂಘನೆಗಳ ಸಂಖ್ಯೆ ಕೂಡಾ ತೀವ್ರವಾಗಿ ಕುಸಿದಿದೆ. ಹಿಂದೆಲ್ಲಾ ಇದು ಭಾರತೀಯ ಭೂಪ್ರದೇಶ ಎಂದರೆ ಸಿಟ್ಟಿಗೀಡಾಗಿ ಅವಾಚ್ಯವಾಗಿ ಬಯ್ಯುತ್ತಿದ್ದ ಜನರು ಈಗ ತೆಪ್ಪಗೆ ತೆರಳುತ್ತಾರೆ ಎನ್ನುತ್ತಾರೆ ತವಾಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೇನಾಧಿಕಾರಿ. ನೋಡಿ ಎಂತಹ ಬದಲಾವಣೆ!!

ಈ ಎಲ್ಲಾ ಬದಲಾವಣೆಗಳಿಗೆ ಭಾರತದ ಸಮರ್ಥ ನಾಯಕತ್ವ ಕಾರಣ ಎಂದರೆ ತಪ್ಪೆ? ಮೋದಿ ನಾಯಕತ್ವದಲ್ಲಿ ಭಾರತೀಯ ಸೇನೆ ಹಿಂದೆಂದಿಗಿಂತಲೂ ಹೆಚ್ಚು ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ಸುಳ್ಳೆ? ಮೋದಿ ಅಂತಹ ಸಮರ್ಥ ನಾಯಕನ ಅವಶ್ಯಕತೆ ಭಾರತಕ್ಕಿದೆ. ಭಾರತದ ಭದ್ರತೆಯ ದೃಷ್ಟಿಯಿಂದ ಮೋದಿ ಮತ್ತೊಮ್ಮೆ ಗೆಲ್ಲುವುದು ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರೆ ಉತ್ಪ್ರೇಕ್ಷೆಯೆ? ಯೋಚಿಸಿ, ನೀವೇ ನಿರ್ಧರಿಸಿ.

-ಶಾರ್ವರಿ

Tags

Related Articles

Close