ಪ್ರಚಲಿತ

ಬಿಗ್ ಬ್ರೇಕಿಂಗ್! ಕಾಂಗ್ರೆಸ್‌ಗೆ ಕೈ ಕೊಟ್ಟು ಜೆಡಿಎಸ್‌ ಸೇರುತ್ತಾರಾ ಮಂಡ್ಯದ ಗಂಡು.!? ಕಾಂಗ್ರೆಸ್‌ಗೆ ಗುಡ್ ಬೈ ಹೇಳಲು ತಯಾರಾದ ಅಂಬಿ.!

ಕಾಂಗ್ರೆಸ್‌ನಿಂದ ಪದೇ ಪದೇ ಅವಮಾನಕ್ಕೊಳಗಾಗಿ ಪಕ್ಷದಿಂದಲೇ ಹೊರನಡೆಯುವ ಮುನ್ಸೂಚನೆಯನ್ನು ನಟ ಮತ್ತು ಮಾಜಿ ಮಂಡ್ಯದ ಕಾಂಗ್ರೆಸ್ ಶಾಸಕ ಅಂಬರೀಶ್ ಅವರು ಕಾಂಗ್ರೆಸ್ ರಾಜ್ಯ ನಾಯಕರ ಮೇಲಿನ ಅಸಮಧಾನದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಾಗಲೂ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ , ತಮ್ಮಷ್ಟಕ್ಕೇ ತಾವಿದ್ದು ಪಕ್ಷದ ಯಾವ ಮುಖಂಡರ ಮಾತಿಗೂ ಬಗ್ಗದೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗಲೂ ಪಕ್ಷದ ನಿರ್ಧಾರವನ್ನು ಕಡೆಗಣಿಸಿದ್ದರು. ಆದ್ದರಿಂದ ಅಂಬರೀಶ್ ಕಾಂಗ್ರೆಸ್ ಬಿಡುತ್ತಾರೆ ಎಂಬ ಮಾತು ಕೇಳಿಬರುತ್ತಲೇ ಇತ್ತು. ಆದರೂ ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಯಾವುದೇ ಕೆಲಸ ಮಾಡದ ಅಂಬಿ, ಇದೀಗ ಪಕ್ಷ ಬಿಡುವ ಅನುಮಾನಕ್ಕೆ ಮತ್ತಷ್ಟು ಬಲ ನೀಡಿದ್ದಾರೆ.!

ಅಂಬರೀಶ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಲೇ ಬಂದಿದೆ ಎಂಬ ಆರೋಪ ಮಾಡಿ , ಚುನಾವಣೆಯಿಂದ ಹಿಂದೆ ಸರಿದಿದ್ದ ನಟ ಅಂಬರೀಶ್ ಈ ಹಿಂದಿನ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧವೇ ಅಸಮಧಾನ ಹೊರಹಾಕಿದ್ದರು. ಆದ್ದರಿಂದಲೇ ಅಂಬರೀಶ್ ಪಕ್ಷ ಬಿಡುತ್ತಾರೆ ಎಂಬ ಮಾತು ಬಹಳ ಜೋರಾಗಿಯೇ ಕೇಳಿಬರುತ್ತಿತ್ತು. ಆದರೆ ಇದೀಗ ಅಂಬಿ ನಡೆ ಗಮನಿಸಿದರೆ ತಮ್ಮ ಕಾಂಗ್ರೆಸ್ ಪಕ್ಷ ಬಿಟ್ಟು ತೆನೆಹೊತ್ತ ಮಹಿಳೆಯ ಕೈ ಹಿಡಿಯುತ್ತಾರೆಯೇ? ಎಂಬ ಅನುಮಾನ ವ್ಯಕ್ತವಾಗಿದೆ.

Image result for kumaraswamy

ಎಚ್‌ಡಿಕೆ ಜೊತೆ ರಾರಾಜಿಸುತ್ತಿದೆ ಅಂಬರೀಶ್ ಭಾವಚಿತ್ರ..!

ಈಗಾಗಲೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನ ತನ್ನದಾಗಿಸಿಕೊಂಡಿರುವ ಜೆಡಿಎಸ್‌‌ನ ಕುಮಾರಸ್ವಾಮಿ ಅವರ ಜೊತೆ ಇದೀಗ ನಟ ಅಂಬರೀಶ್ ಕೂಡ ಕೈಜೋಡಿಸಿ ನೇರವಾಗಿ ಜನತಾದಳ ಪಕ್ಷದ ತೆನೆಹೊತ್ತ ಮಹಿಳೆಯ ಕೈಹಿಡಿಯಲಿದ್ದಾರೆ. ಯಾಕೆಂದರೆ ಇದೀಗ ಮಂಡ್ಯದಾದ್ಯಂತ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ನಟ ಅಂಬರೀಶ್ ಅವರ ಭಾವಚಿತ್ರವಿರುವ ಫ್ಲೆಕ್ಸ್ , ಬ್ಯಾನರ್‌ಗಳು ರಾರಾಜಿಸುತ್ತಿವೆ. ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾವಚಿತ್ರವಿದ್ದರೆ, ಮತ್ತೊಂದೆಡೆ ಅಂಬರೀಶ್ ಅವರ ಭಾವಚಿತ್ರ ಇರುವ ಬ್ಯಾನರ್‌ಗಳನ್ನು ಅಭಿಮಾನಿಗಳು ನಗರದಾದ್ಯಂತ ಅಳವಡಿಸಿದ್ದಾರೆ. ಆದ್ದರಿಂದ ಅಂಬರೀಶ್ ಕಾಂಗ್ರೆಸ್ ಜೊತೆ ಮುನಿಸಿಕೊಂಡು ಇದೀಗ ಜೆಡಿಎಸ್‌ ಸೇರುವ ಮುನ್ಸೂಚನೆ ನೀಡಿದ್ದಾರೆ.

ಅಂಬರೀಶ್ ಅವರಿಗೆ ಕಾಂಗ್ರೆಸ್‌ನಲ್ಲಿ ಯಾವುದೇ ಮನ್ನಣೆ ಸಿಗುತ್ತಿಲ್ಲ, ಆದ್ದರಿಂದಲೇ ವಸತಿ ಸಚಿವರಾಗಿದ್ದ ಅಂಬಿಯನ್ನು ಸಚಿವ ಸಂಪುಟದಿಂದ ಸಿದ್ದರಾಮಯ್ಯ ಸರಕಾರ ಹೊರಹಾಕಿತ್ತು. ಅಂದಿನಿಂದ ಅಂಬರೀಶ್ ಶಾಸಕರಾಗಿದ್ದರೂ ಕೂಡ ಪಕ್ಷದ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಳ್ಳದೆ ಕೇವಲ ಹೆಸರಿಗಷ್ಟೇ ಸ್ಥಾನದಲ್ಲಿ ಮುಂದುವರಿದಿದ್ದರು. ಆದರೆ ಇದೀಗ ನೇರವಾಗಿ ಜೆಡಿಎಸ್‌ ಸೇರಲು ಮುಂದಾದ ಅಂಬರೀಶ್ ನಿರ್ಧಾರ ಕಂಡು ಸ್ವತಃ ಕಾಂಗ್ರೆಸಿಗರೇ ಕಂಗಾಲಾಗಿದ್ದಾರೆ.!

Related image

ಕಾಂಗ್ರೆಸ್‌ನಲ್ಲಿ ಇದ್ದೂ ಇಲ್ಲದಂತಿರುವ ಅಂಬರೀಶ್,ಮತ ಹಾಕಲೂ ಕೂಡ ಡಿ.ಸಿ ತಮ್ಮಣ್ಣ ಅವರ ಕಾರಿನಲ್ಲಿಯೇ ತೆರಳಿದ್ದರು. ಡಿ.ಸಿ ತಮ್ಮಣ್ಣ ಅವರು ಮಂತ್ರಿಯಾಗಲು ಕೂಡ ಅಂಬರೀಶ್ ಅವರೇ ಕಾರಣ ಎಂಬ ಅನುಮಾನ ಪಕ್ಷದಲ್ಲೇ ವ್ಯಕ್ತವಾಗಿದ್ದು, ಅದಕ್ಕೆಲ್ಲಾ ತೆರೆ ಎಳೆಯುವ ಸಲುವಾಗಿಯೇ ಅಂಬರೀಶ್ ಜೆಡಿಎಸ್‌ ಸೇರಲಿದ್ದಾರೆ ಎಂಬ ಸಂಶಯ ವ್ಯಕ್ಯವಾಗಿದೆ.!

–ಅರ್ಜುನ್

Tags

Related Articles

Close