ಇತಿಹಾಸ

ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೂ ದೆಹಲಿಯಲ್ಲಿ ಜಾಗ ನೀಡದ ಕಾಂಗ್ರೆಸ್! ದಿಕ್ಕು ತೋಚದೆ ಕೊನೆಗೆ ಅವರ ಕುಟುಂಬ ಮಾಡಿದ್ದು ಏನು ಗೊತ್ತೇ?

ಭೀಮಾರಾವ್ ಅಂಬೇಡ್ಕರ್. ದೇಶಕಂಡ ಮಹಾ ರಾಜಕೀಯ ಮುತ್ಸದ್ದಿ. ಇಂದು ದೇಶ ಒಂದು ಕಾನೂನು ಎಂಬ ತಳಹದಿಯಲ್ಲಿ ನಡೆಯುತ್ತಿದೆ ಎಂದರೆ ಅದನ್ನು ಅಂದೇ ಬಿತ್ತಿದ್ದ ದೇಶದ ಭವಿಷ್ಯದ ಚಿಂತಕ. ದಲಿತ ಜಾತಿಯಲ್ಲಿ ಜನಿಸಿ, ಅಸ್ಪ್ರಶ್ಯತೆಯಿಂದ ಬಳಲುತ್ತಿದ್ದ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿ ಸಮಾಜದಲ್ಲಿ ಅದೇನೋ ಬದಲಾವಣೆಯನ್ನು ತರಲು ಯತ್ನಿಸಿದ್ದ ಮಹಾ ಹೋರಾಟಗಾರ.

ಅವಮಾನ ಮಾಡಿತ್ತು ತನ್ನದೇ ಪಕ್ಷ..!

ದೇಶದಲ್ಲಿ ದಲಿತರನ್ನು ಪೆÇೀಷಿಸುವ ಪಕ್ಷ ಎಂದು ಹಿಂದಿನಿಂದಲೂ ಬೀಗಿಕೊಳ್ಳುವ ಒಂದು ರಾಷ್ಟ್ರೀಯ ಪಕ್ಷ ಇದ್ದರೆ ಅದು ಭಾರತೀಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ತನ್ನದು ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಬೀಗಿಕೊಳ್ಳುವ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯ ಹೋರಾಟಗಾರರನ್ನು ನಡೆಸಿಕೊಂಡ ರೀತಿ ನೋಡಿದರೆ ಎಂತವರಿಗೂ ಆಕ್ರೋಶ ಅನ್ನೋದು ಭುಗಿಲೇಳಬಹುದು.

ನಮ್ಮದು ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಬೀಗುತ್ತಿರುವ ಕಾಂಗ್ರೆಸ್‍ನ ದಲಿತ ವಿರೋಧಿ ಕರಾಳ ಮುಖ ಇದೀಗ ಮತ್ತೊಮ್ಮೆ ಬಯಲಾಗಿದೆ. ಹಿಂದಿನಿಂದಲೂ ಸಂವಿಧಾನ ಶಿಲ್ಪಿಯನ್ನು ಅವಮಾನಿಸುತ್ತಲೇ ಬಂದಿದ್ದಾರೆ ಕಾಂಗ್ರೆಸ್ ಪಕ್ಷದ ನಾಯಕರು. ಅಂಬೇಡ್ಕರ್ ದಲಿತರ ಆರಾಧಕರು ಎಂಬುವುದು ಸತ್ಯ. ದಲಿತ ವರ್ಗದಲ್ಲಿ ಹುಟ್ಟಿ, ಆ ಜಾತಿಯಲ್ಲಿ ಅಸ್ಪರ್ಶತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರೂ ದಲಿತರ ಉದ್ಧಾರಕ್ಕಾಗಿ ಹಗಳಿರುಳು ದುಡಿದವರು ಅಂಬೇಡ್ಕರ್. ಭಾರತದ ಸಂವಿಧಾನದ ಶಿಲ್ಪಿಯಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ, ದೇಶ ಸೇವೆಯೇ ಈಶ ಸೇವೆ ಎನ್ನುತ್ತಾ ಜೀವನ ಸಾಗಿಸಿದವರು ಅಂಬೇಡ್ಕರ್!!. ನೆಹರೂ ಪ್ರೇರಿತ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯ ವಿರುದ್ಧ ಸಮರ ಸಾರಿ ತನ್ನದೇ ಶೈಲಿಯಲ್ಲಿ ಅಧಿಕಾರ ನಡೆಸಿದವರು ಅಂಬೇಡ್ಕರ್.

ಸಂವಿಧಾನ ಶಿಲ್ಪಿ ಅಂದರೆ ಸಾಕು, ಪಕ್ಕನೆ ಕಣ್ಣ ಮುಂದೆ ಬರುವುದು ಅಂಬೇಡ್ಕರ್. ಯಾಕೆಂದರೆ ಇಡೀ ಸಂವಿಧಾನವನ್ನು ನಾಜೂಕಾಗಿ ರಚಿಸಿ, ಅದನ್ನು ಇಂದಿಗೂ ಗೌರವಿಸುವಂತೆ ಮಾಡಿದ್ದ ಅಂಬೇಡ್ಕರ್ ಪ್ರಶ್ನಾತೀತ ವ್ಯಕ್ತಿತ್ವ. ಆದರೆ ಕಾಂಗ್ರೆಸ್‍ಗೆ ಮಾತ್ರ ಅವರು ಕೇವಲ ಆಟದ ಗೊಂಬೆಯಾಗಿ ಬಿಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನುಡಿಸಿದಂತೆ ಕುಣಿಯುವ ಕಾಂಗ್ರೆಸ್ ನಾಯಕರಿಗೆ ಅಂಬೇಡ್ಕರ್ ಕಾಣೋದೇ ಇಲ್ಲ. ತನ್ನ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಅಂಬೇಡ್ಕರ್‍ನ್ನು ನೆಪ ಮಾತ್ರಕ್ಕೆ ಗೌರವಿಸುತ್ತಿತ್ತು ಎಂಬುವುದು ಎಲ್ಲರಿಗೂ ತಿಳಿದ ವಿಷಯ.. ಆದರೆ ಅವರು ನಿಧನರಾದಾಗ ಅಂತ್ಯ ಸಂಸ್ಕಾರಕ್ಕೆ ಒಂಚೂರೂ ಜಾಗ ನೀಡದೆ ಅವಮಾನಿಸಿದ್ದರು ಕಾಂಗ್ರೆಸ್ಸಿಗರು ಎಂದರೆ ಯಾರೂ ನಂಬಲಸಾಧ್ಯ!!

Related image

ಅಂಬೇಡ್ಕರ್ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಜಾಗ ನೀಡದ ಕಾಂಗ್ರೆಸ್!!

ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ನಿಧನರಾದಾಗ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕೆ ಆರಡಿ ಜಾಗ ನೀಡಲಿಲ್ಲ ಎಂದರೆ ಕಾಂಗ್ರೆಸ್ ಯಾವ ಮಟ್ಟಿಗೆ ಅಂಬೇಡ್ಕರ್‍ರವರನ್ನು ನಡೆಸಿಕೊಂಡಿದೆ ಎಂದು ಇಲ್ಲಿ ಅರ್ಥವಾಗುತ್ತದೆ!! ಶವ ಸಂಸ್ಕಾರಕ್ಕೆ ಆರಡಿ ಜಾಗ ನೀಡದ ಕಾಂಗ್ರೆಸ್‍ಗೆ ಅಂಬೇಡ್ಕರ್ ಅನ್ನುವ ಹೆಸರು ಹೇಳುವ ಯಾವುದೇ ನೈತಿಕತೆ ಇಲ್ಲ ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಅವರು ಹೇಳಿದ್ದಾರೆ!!

ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ! ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ದಲಿತರ ಮತಗಳನ್ನು ಸೆಳೆಯುವ ಕಾಂಗ್ರೆಸ್ ಪಕ್ಷ ಅಂಬೇಡ್ಕರ್‍ಅನ್ನು ನಡೆಸಿಕೊಂಡಿದ್ದನ್ನು ನೆನೆಪಿಸಿ ಕೊಂಡರೆ ಮೈ ಉರಿಯುತ್ತದೆ. ಇದು ನಾನು ಮಾಡುವ ಆರೋಪವಲ್ಲ, ಇತಿಹಾಸವನ್ನು ಯಾರಿಂದಲೂ ಬದಲಸಲು ಸಾಧ್ಯವಿಲ್ಲ!!

ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 6/6 ಅಡಿ ಜಾಗವನ್ನು ನೀಡದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು!

ಕಣ್ಣಿರಿಟ್ಟು ಅಂಗಲಾಚಿದ ಕುಟುಂಬ ಕೊನೆಗೆ ದಿಕ್ಕು ತೋಚದೆ ಮುಂಬೈ ಅಗಿನ ಬಾಂಬೆಯ ಸಮುದ್ರ ತೀರದಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು

ದಲಿತರು ಕಾಂಗ್ರೆಸ್ ಮುಖವಾಡ ಅರಿಯಲಿ:

ಕಾಂಗ್ರೆಸ್ ಪಕ್ಷಕ್ಕೆ ದಲಿತರ ಬಗ್ಗೆ ನಿಜವಾದ ಕಾಳಜಿ ಇಲ್ಲ.. ವೋಟ್‍ಬ್ಯಾಂಕ್ ಮೇಲೆ ಕಣ್ಣಿಟ್ಟು ಅಂಬೇಡ್ಕರ್ ಫೋಟೋ ಇಟ್ಟುಕೊಂಡು ನಾಟಕ ಮಾಡುತ್ತಾರೆ!! ದಲಿತರು ಕಾಂಗ್ರೆಸ್‍ನ ಈ ಮುಖವಾಡವನ್ನು ಅರ್ಥಮಾಡಿಕೊಳ್ಳಬೇಕು!! ಪ್ರಧಾನಿ ನರೇಂದ್ರ ಮೋದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ!! ಈ ಕಾರಣಕ್ಕಾಗಿಯೇ ಪ್ರಸಕ್ತ ವರ್ಷ ಬಾಬಾಸಾಹೇಬ್ ಅಂಬೇಡ್ಕರ್ ಅವರ 126ನೇ ಜಯಂತೋತ್ಸವವನ್ನು ಪಕ್ಷದ ವತಿಯಿಂದ ದೇಶಾದ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.

ಅಂಬೇಡ್ಕರ್ ವಾಸದ ಮನೆ ಸ್ಮಾರಕ:

ಅಂಬೇಡ್ಕರ್ ವಾಸವಾಗಿದ್ದ ಮುಂಬಯಿನ ಮನೆ, ಲಂಡನ್‍ನಲ್ಲಿ ನೆಲೆಸಿದ್ದ ಮನೆಯನ್ನು ಕೇಂದ್ರ ಸರ್ಕಾರದಿಂದ ವಹಿಸಿಕೊಂಡು ಅಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ.. ಡಾ .ಅಂಬೇಡ್ಕರ್ ತತ್ವ- ಆದರ್ಶ ಚಿಂತನೆಗಳನ್ನು ಸಂರಕ್ಷಿಸುವ ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ಕಳೆದ ಕಳೆದ 7 ದಶಕಗಳಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ!! ದೇಶ ಸೇವೆಯನ್ನು ಮಾಡಿದವರನ್ನು ಯಾವತ್ತೂ ಮೋದಿ ಸರಕಾರ ಕೈ ಬಿಡುವುದಿಲ್ಲ!! ಅವರಿಗೆ ತಕ್ಕುದಾದ ಎಲ್ಲಾ ಗೌರವವನ್ನೂ ಮೋದಿ ಸರಕಾರ ಸಿಗುವಂತೆ ಮಾಡುತ್ತದೆ!!

Image result for modi

ಅವರು ನೆಹರೂ ಕುಟುಂಬದಂತೆ ಬೆಳ್ಳಿ ಚಮಚವನ್ನು ಬಾಯಿಯಲ್ಲಿಟ್ಟುಕೊಂಡು ಬೆಳೆದವರಲ್ಲ. ಹುಟ್ಟು ಬಡವನಾಗಿ, ಮೇಲ್ವರ್ಗದ ಜನಾಂಗದಿಂದ ಶೋಷಿತರಾಗಿಯೇ ಬೆಳೆದು ಸಾಧನೆ ಮಾಡಿದವರು ಅಂಬೇಡ್ಕರ್.. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರೀತಿ ನೀತಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು ಅಂಬೇಡ್ಕರ್. ಆದರೆ ಕಾಂಗ್ರೆಸ್ ಮಾತ್ರ ಸಂಘ ಪರಿವಾರವನ್ನು ಕಂಡರೆ ಅಂಬೇಡ್ಕರ್ ಆಗುವುದಿಲ್ಲ. ಅದನ್ನು ವಿರೋದಿಸುತ್ತಿದ್ದರು ಎಂದು ಸುಳ್ಳು ಹೇಳುತ್ತಿದ್ದು, ದಲಿತರ ಓಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈವಾಗ ಜನರಿಗೆ ಎಲ್ಲಾನೂ ಅರ್ಥವಾಗುತ್ತಿದೆ. ಜನರು ಎಲ್ಲವನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಕಾಲ ಬದಲಾಗಿದೆ. ಈಗ ಜನರು ಯಾವುದು ಸತ್ಯ ಯಾವುದು ಸುಳ್ಳು ಎಂದು ತಿಳಿದವರಾಗಿದ್ದಾರೆ.

ಕಾನೂನು ದಿನಾಚರಣೆ ದೇಶದೆಲ್ಲೆಡೆ ಆಚರಿಸಲಾಗಿತ್ತು. ಅಂದು ಅಂಬೇಡ್ಕರ್ ಭಾವಚಿತ್ರವನ್ನಿಟ್ಟು ಪೂಜಿಸಲಾಗಿತ್ತು. ಕೇಂದ್ರದ ಮೋದಿ ಸರ್ಕಾರವೂ ದೇಶದೆಲ್ಲಡೆ ಜಾಹಿರಾತಿನ ಮೂಲಕ ಅಂಬೇಡ್ಕರ್ ಸಾಧನೆಯನ್ನು ನೆನಪಿಸಿದ್ದರು. ಕಾನೂನು ಅಂದರೆ ಅಂಬೇಡ್ಕರ್, ಅಂಬೇಡ್ಕರ್ ಅಂದರೆ ಕಾನೂನು ಎಂಬ ಗೌರವವನ್ನು ಮತ್ತಷ್ಟು ನೆನಪಾಗುವಂತೆ ಮಾಡಿದ್ದರು ಕೇಂದ್ರ ನರೇಂದ್ರ ಮೋದಿ ಸರ್ಕಾರ.

ಆದರೆ ನಮ್ಮ ಘನತೆ “ತೆತ್ತ” ಕರ್ನಾಟಕದ ಮುಖ್ಯಮಂತ್ರಿ ಸಿದ್ದರಮಯ್ಯನವರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿದ್ದರು… ಸಂವಿಧಾನವನ್ನು ನಿರ್ಮಿಸಿದ್ದು ತಾನೇ ಎಂಬಂತೆ ಅಹಂಕಾರದಿಂದ ತಾನು (ರಾಜ್ಯ ಸರ್ಕಾರ) ಬಿಡುಗಡೆಗೊಳಿಸಿದ್ದ ಜಾಹಿರಾತಿನಲ್ಲಿ ತನ್ನದೇ ಭಾವಚಿತ್ರವನ್ನು ಹಾಕಿ ದರ್ಪವನ್ನು ಮೆರೆಯುತ್ತಾ ಬರುತ್ತಿದ್ದಾರೆ!! ಈ ಮೂಲಕ ಅಂಬೇಡ್ಕರ್ ಮತ್ತೆ ಅವಮಾನ ಮಾಡಿದ್ದಾರೆ. ಬಿಡುಗಡೆಗೊಳಿಸಿದ್ದ ಇಡಿ ಪುಟದ ಜಾಹಿರಾತಿನಲ್ಲಿ ಕೇವಲ ಸಿದ್ದರಾಮಯ್ಯನವರ ಫೆÇೀಟೋ ಹಾಕುವ ಮೂಲಕ ತಾನೊಬ್ಬನೇ ಶ್ರೇಷ್ಟ ಎಂಬ ಸಂದೇಶವನ್ನು ಸಾರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತನ್ನನ್ನು ತಾನು ಹೀರೋ ಎಂಬಂತೆ ಬಿಂಬಿಸಿಕೊಳ್ಳುಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಸಿದ್ದರಾಮಯ್ಯನವರು ಈಗ ಅಂಬೇಡ್ಕರ್‍ರನ್ನೂ ಹೈಜಾಕ್ ಮಾಡಿ ತಾನೇ ಸಂವಿಧಾನ ರಚಿಸಿದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಈ ದೇಶದಲ್ಲಿ ದಲಿತರೆನ್ನುವವರು ಕಾಂಗ್ರೆಸ್‍ಗೆ ಮತಹಾಕಬೇಕುನ್ನುವ ಪದ್ದತಿಯನ್ನು ಹುಟ್ಟುಹಾಕಿದ್ದವರು ಕಾಂಗ್ರೆಸ್ಸಿಗರು. ಕೇವಲ ಓಟ್ ಬ್ಯಾಂಕ್‍ಗಾಗಿ ಅಸ್ಪರ್ಶತೆಯೆನ್ನುವ ಭೂತವನ್ನು ಹುಟ್ಟುಹಾಕಿ ಅದನ್ನು ಇಂದಿಗೂ ಜೀವಂತವಾಗಿ ಇರುವಂತೆ ನೋಡಿಕೊಳ್ಳುತ್ತಿದೆ. ಆದರೆ ಪರಿಪರಿಯಾಗಿ ಅವರಿಗೆ ಅವಮಾನ ಮಾಡುತ್ತಿದೆ ಕಾಂಗ್ರೆಸ್. ಈವರೆಗೂ ದಲಿತರಿಗಾಗಿ ಜಾರಿಗೆ ತಂದ ಯಾವುದೇ ಒಂದು ವರದಿಗಳನ್ನು ಜಾರಿ ಮಾಡಲು ಬಿಟ್ಟಿಲ್ಲ. ಹಲವಾರು ಯೋಜನೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಈವರೆಗೆ ಒಂದೂ ಜಾರಿಯಾಗದೆ ದಲಿತರಿಗೆ ಹಾಗೂ ಅಂಬೇಡ್ಕರ್ಗೆ ಅವಮಾನ ಮಾಡಿದ್ದು ಯಾರು..?

ರಾಜ್ಯ ಕಾಂಗ್ರೆಸ್ ಸರ್ಕಾರ ಯಾವೊಬ್ಬ ದಲಿತನಿಗಾದರೂ ಸರ್ಕಾರದಲ್ಲಿ ಉನ್ನತ ಹುದ್ದೆಯ ಅವಕಾಶ ನೀಡಿದೆಯಾ..? ಕಾಂಗ್ರೆಸ್‍ನಲ್ಲಿ ಮಲ್ಲಿಕಾರ್ಜುನ ಖರ್ಗೆ ಸಹಿತ ಹಲವಾರು ಕಾಂಗ್ರೆಸ್ ನಾಯಕರು ಇದ್ದರೂ ಅವರನ್ನು ಮೇಲಕ್ಕೆ ಬರಲು ಸಿದ್ದರಾಮಯ್ಯ ಯಾಕೆ ಬಿಟ್ಟಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದಲಿತ ನಾಯಕನಾಗಿದ್ದರೂ ಅವರಿಗೆ ಹಲವಾರು ಬಾರಿ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶ ಇದ್ದರೂ ಯಾಕೆ ಕೊಟ್ಟಿಲ್ಲ..? ಬಿಡಿ? ಕನಿಷ್ಠ ಪಕ್ಷ ಸಚಿವ ಸ್ಥಾನಕ್ಕಾಗಿ ಅವರು ಎಷ್ಟು ಬಾರಿ ದೆಹಲಿಗೆ ತೆರಳಿ ಸೋನಿಯಾ ಮೇಡಂ ಮನೆ ಬಾಗಿಲನ್ನು ಬಡಿಯಬೇಕಾಯ್ತು..?

ಒಟ್ಟಿನಲ್ಲಿ ದಲಿತರ ನೆಪದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ಗೆ ಅವಮಾನ ಮಾಡಿದ ಕಾಂಗ್ರೆಸ್ಸಿಗರು ಚುನಾವಣೆ ಸಮಯದಲ್ಲಿ ಮಾತ್ರ ಅಂಬೇಡ್ಕರ್ ನೆನಪಿಗೆ ಬರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಅಂಬೇಡ್ಕರ್ ಫೆÇೀಟೋ ಹಿಡಿದುಕೊಂಡು ದಲಿತ ವರ್ಗದ ಮತವನ್ನು ಸೆಳೆಯಲು ಬರುತ್ತೆ. ಈ ಕಾಂಗ್ರೆಸ್ಸಿಗರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ..? ನೆಹರೂ ಕಾಲದಿಂದಲೂ ಅಂಬೇಡ್ಕರ್‍ಗೆ ಅವಮಾನ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಈಗಲೂ ಅದನ್ನು ಮುಂದುವರೆಸುತ್ತಲೇ ಇದೆ.

ಕಾಂಗ್ರೆಸ್ಸಿಗರಿಂದ ಮತ್ತೆ ನಿಮ್ಮ ಮುಖ ನೋಡಬೇಕಾದರೆ ಚುನಾವಣೆ ಬರಬೇಕು. ಅಂದು ಖಂಡಿತಾ ನಿಮ್ಮ ಭಾವಚಿತ್ರ ತೋರಿಸಿಕೊಂಡು ಮತ ಬೇಡಲು ಬಂದೇ ಬರುತ್ತಾರೆ… ಅಷ್ಟೆಲ್ಲಾ ದೇಶಕ್ಕಾಗಿ ಸಹಾಯ ಮಾಡಿದ ಅಂಬೇಡ್ಕರ್‍ಗೆ ಕಾಂಗ್ರೆಸ್ ಮಾಡಿದ ಅವಮಾನ ಇಡೀ ದೇಶಕ್ಕೆ ಮಾಡಿದ ಅವಮಾನ!!

ಪವಿತ್ರ

 

Tags

Related Articles

Close