ಪ್ರಚಲಿತ

ಭಾರತ ವಿರೋಧಿಗಳಿಗೆ ಉರಿ ಹೆಚ್ಚಿಸಿದೆ ಅಮೆರಿಕದ ಹೇಳಿಕೆ

ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ವಿದೇಶದಲ್ಲಿ ನಿಂತು ಭಾರತವನ್ನು, ಭಾರತದ ಪ್ರಜಾಪ್ರಭುತ್ವವನ್ನು ಬಾಯಿಗೆ ಬಂದಂತೆ ಸದರಿ, ವಿವಾದ ಸೃಷ್ಟಿಸಲು ಹೊರಟ ಸಂಗತಿ ಎಲ್ಲರಿಗೂ ಗೊತ್ತಿರುವಂತದ್ದೇ. ಭಾರತದ ಪ್ರಧಾನಿ ಮೋದಿ ಅವರನ್ನು, ಬಿಜೆಪಿ ಪಕ್ಷವನ್ನು ವಿರೋಧಿಸುವ ಭರದಲ್ಲಿ ದೇಶದ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿ, ಭಾರತದ ಮಾನ ಹರಾಜು ಮಾಡಲು ಅನೇಕ ಬಾರಿ ಮುಂದಾಗಿರುವ ವಿಷಯ ನಮಗೆಲ್ಲಾ ತಿಳಿದಿದೆ.

ಹೀಗೆ ಭಾರತವನ್ನು, ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸುವ ರಾಹುಲ್ ಗಾಂಧಿಯಂತಹವರಿಗೆ ಮುಖಕ್ಕೆ ಹೊಡೆದಂತಾಗುವ ವಿಷಯವೊಂದು ಘಟಿಸಿದೆ. ಜಗತ್ತಿನ ದೊಡ್ಡಣ್ಣ ಎಂದೆನಿಸಿ ಕೊಂಡಿರುವ ಅಮೆರಿಕ ಭಾರತವನ್ನು ಕುರಿತು ನೀಡಿರುವ ಹೇಳಿಕೆ, ರಾಹುಲ್ ಗಾಂಧಿಯವರಂತಹ ದೇಶ ವಿರೋಧಿ ಹೇಳಿಕೆಗಳನ್ನು ನೀಡುವವರಿಗೆ ತಕ್ಕ ಉತ್ತರ ಎಂದರೂ ತಪ್ಪಾಗಲಾರದು.

ಅಮೆರಿಕದ ಶ್ವೇತ ಭವನವು ಭಾರತದ ಪ್ರಜಾಪ್ರಭುತ್ವವನ್ನು ಕುರಿತು ಹಾಡಿ ಹೊಗಳಿಗೆ. ಭಾರತದ ಪ್ರಜಾಪ್ರಭುತ್ವ ಅಮೋಘವಾಗಿದ್ದು, ಭಾರತಕ್ಕೆ ತೆರಳಿದವರಿಗೆ ಇದರ ಸವಿಯನ್ನು ಅನುಭವಿಸಲು ಸಾಧ್ಯ ಎಂದಿದೆ. ಜೊತೆಗೆ, ಭಾರತದಲ್ಲಿ ಪ್ರಜಾಪ್ರಭುತ್ವದ ಹದೆಗೆಡುತ್ತಿದೆ ಎನ್ನು ವ ಅಪವಾದವನ್ನು ಸಹ ಅಮೆರಿಕ ತಳ್ಳಿ ಹಾಕಿದೆ.

ಅಂದ ಹಾಗೆ ಪ್ರಧಾನಿ ಮೋದಿ ಅವರು ಈ ತಿಂಗಳಾಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ರೂ ಅಮೆರಿಕದ ವೈಟ್ ಹೌಸ್ ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ.

ಒಟ್ಟಿನಲ್ಲಿ ವಿದೇಶಿ ನೆಲದಲ್ಲಿ ನಿಂತು ಭಾರತದ ಬಗ್ಗೆ ನಾಲಿಗೆ ಹರಿಯ ಬಿಡುವ ರಾಹುಲ್ ಗಾಂಧಿಯಂತಹವರಿಗೆ ಅಮೆರಿಕ ನೀಡಿರುವ ಈ ಹೇಳಿಕೆ ಬಿಸಿ ತುಪ್ಪದಂತೆ ಆಗಿರಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಭಾರತದ ನೆಲದಲ್ಲೇ ಬೆಳೆದು, ಇಲ್ಲಿನ ನೀರು, ಗಾಳಿ, ಆಹಾರ ಸೇವಿಸಿ, ಭಾರತದ ಬಗ್ಗೆಯೇ ಬಾಯಿಗೆ ಬಂದಂತೆ ಒದರುವವರಿಗೆ, ಭಾರತದ ಬಗ್ಗೆ ವಿದೇಶಗಳಿಗಿರುವ ಗೌರವವೂ ಇಲ್ಲದೇ ಹೋಗಿರುವುದು ದುರಂತವಲ್ಲದೆ ಬೇರೇನಲ್ಲ.

ಇನ್ನಾದರೂ ವಿದೇಶಿ ನೆಲದಲ್ಲಿ ಭಾರತವನ್ನು ತೆಗಳುವವರಿಗೆ ಜ್ಞಾನೋದಯವಾಗಲಿ ಎಂಬ ಆಶಯ ನಮ್ಮೆಲ್ಲರದ್ದು.

Tags

Related Articles

Close