ಪ್ರಚಲಿತ

ಕಾನೂನು, ಪ್ರಜಾಪ್ರಭುತ್ವಗಳು ಅಸಮರ್ಪಕ ಶಾಸಕಾಂಗ ವ್ಯವಸ್ಥೆಯಿಂದ ದುರ್ಬಲಗೊಳ್ಳುತ್ತದೆ: ಅಮಿತ್ ಶಾ

ಕಾನೂನು ಮತ್ತು ಪ್ರಜಾಪ್ರಭುತ್ವವನ್ನು ಅಸಮರ್ಪಕ ಶಾಸಕಾಂಗ ಕರಡು ವ್ಯವಸ್ಥೆ ದುರ್ಬಲ ಮಾಡುತ್ತದೆ. ನ್ಯಾಯಾಂಗ ವ್ಯವಸ್ಥೆಯು ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಶಾಸಕಾಂಗ ಕರಡು ರಚನೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಕರಡು ರಚನೆ ಸರಿಯಾಗಿದ್ದಲ್ಲಿ ಕಾರ್ಯನಿರ್ವಾಹಕರಿಂದ ಕನಿಷ್ಟ ದೋಷಗಳು ಕಂಡುಬರುತ್ತವೆ. ಇದರಿಂದ ಕಾನೂನು ಶಿಕ್ಷಣವನ್ನು ಸಹ ನೀಡುವುದಕ್ಕೆ ಸುಲಭವಾಗುತ್ತದೆ. ಕಾನೂನಿನ ಕರಡು ರಚನೆಗಳು ಸ್ಪಷ್ಟ ಮತ್ತು ಸುಲಭವಾಗಿವೆ. ಸರಳವೂ ಹೌದು. ಸ್ಪಷ್ಟ ಕರಡು ನ್ಯಾಯಾಂಗ ವ್ಯವಸ್ಥೆಯನ್ನು ತಹಬದಿಯಲ್ಲಿಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತದಿಂದಲೇ ಪ್ರಜಾಪ್ರಭುತ್ವದ ಕಲ್ಪನೆ ಸಹ ಹೊರಹೊಮ್ಮಿದೆ. ಭಾರತೀಯ ಸಂವಿಧಾನ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಹಲವಾರು ವಿಷಯಗಳನ್ನು ಎರವಲು ಪಡೆಯುತ್ತದೆ. ಸಂವಿಧಾನದ ಅಕ್ಷರ ಮತ್ತು ಆಶೋತ್ತರಗಳನ್ನು ತಿಳಿದುಕೊಂಡು ಜನರ ಸಮಸ್ಯೆಗಳಿಗೆ ಸೂಕ್ತವಾದ ಕಾನೂನು ರಚನೆ ಮಾಡುವುದು ಶಾಸಕಾಂಗ ಇಲಾಖೆಯ ಮಹತ್ತರ ಜವಾಬ್ದಾರಿ ಎಂದು ಶಾ ನುಡಿದಿದ್ದಾರೆ.

Tags

Related Articles

Close