ಪ್ರಚಲಿತ

ಪ್ರಧಾನಿ ಮೋದಿ ವಿರುದ್ಧದ ಕಾಂಗ್ರೆಸ್ ಆರೋಪಗಳಿಗೆ ಜನತೆಯೇ ಉತ್ತರ ನೀಡಲಿದ್ದಾರೆ: ಅಮಿತ್ ಶಾ

ಕೇವಲ ಭಾರತೀಯರಿಗೆ ಮಾತ್ರವಲ್ಲದೆ ಪ್ರಧಾನಿ ಮೋದಿ ಅವರ ಮೇಲೆ ವಿಶ್ವಕ್ಕೆಯೇ ಅಚಲವಾದ ನಂಬಿಕೆ ಇದೆ. ಪ್ರಧಾನಿ ಮೋದಿ ಸಾಧನೆಗಳನ್ನು ಇಡೀ ಜಗತ್ತು ಹೊಗಳುತ್ತಿದೆ. ಆದರೆ ಕಾಂಗ್ರೆಸಿಗರು ಮಾತ್ರ ಸದಾ ಕಾಲ ಪ್ರಧಾನಿ ಮೋದಿ ಅವರನ್ನು ನಿಂದಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನ ಈ ಎಲ್ಲಾ ಆರೋಪಗಳಿಗೂ ಭಾರತದ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಮೋದಿ ಅವರನ್ನು ಎಷ್ಟೇ ಜರೆದರೂ, ಅವರ ಪ್ರಖ್ಯಾತಿ ಕಡಿಮೆಯಾಗುತ್ತಿಲ್ಲ. ಬದಲಾಗಿ ವಿಶ್ವದೆಲ್ಲೆಡೆ ಪ್ರಧಾನಿಗಳಿಗೆ ಗೌರವ ಮತ್ತು ಆದರ ಹೆಚ್ಚಾಗುತ್ತಿದೆ. ಪ್ರಧಾನಿ ಮೋದಿ ಅವರ ಪ್ರಖ್ಯಾತಿ, ಶಕ್ತಿ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಅವರನ್ನು ಎಷ್ಟೇ‌ ನಿಂದಿಸಿದರೂ ಜನರನ್ನು ಅವರ ವಿರುದ್ಧ ಎತ್ತಿಕಟ್ಟುವ ಉಪಾಯ ಫಲಿಸುತ್ತಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಚಾರಗಳ ಕೊರತೆಯಿಂದ ಕಾಂಗ್ರೆಸ್ ಪಕ್ಷ ಬಡವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಭಾರತವನ್ನು ಇಡೀ ವಿಶ್ವವೇ ಗೌರವಿಸುವಂತೆ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶ‌ ಸಮೃದ್ಧವಾಗಿದೆ. ಇಲ್ಲಿನ ಮೂಲ ಸೌಕರ್ಯಗಳು ಅಭಿವೃದ್ಧಿ ಆಗಿವೆ. ದೇಶದ ಭದ್ರತಾ ವ್ಯವಸ್ಥೆ, ಗಡಿಗಳು ಸದೃಢಗೊಂಡಿವೆ ಎಂದು ಅವರು ಹರ್ಷಿಸಿದ್ದಾರೆ.

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಸಾಧ್ಯವಿದೆಯೇ ಎಂದು ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸುತ್ತೇನೆ. ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವ ಕಾಂಗ್ರೆಸ್ ಬುದ್ಧಿ, ಸ್ಥಿಮಿತ ಕಳೆದುಕೊಂಡಂತಿದೆ. ಕಾಂಗ್ರೆಸ್ ಮೋದಿ ಅವರನ್ನು ಎಷ್ಟೇ ತೆಗಳಲಿ, ಬಿಜೆಪಿ ಗೆಲುವು ಸಾಧಿಸಿಯೇ ಸಾಧಿಸುತ್ತದೆ. ಕಾಂಗ್ರೆಸ್‌ಗೆ ಕರ್ನಾಟಕದ ಜನತೆಯನ್ನು ತಮ್ಮ ಪ್ರಚೋದನೆಗೆ ಒಳಪಡಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮೋದಿ ಅವರನ್ನು ತೆಗಳಿದಷ್ಟು ಅವರು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ ಎಂದು ಶಾ ಹೇಳಿದ್ದಾರೆ.

Tags

Related Articles

Close