ಪ್ರಚಲಿತ

ಶಿವಾಜಿ ಮಹಾರಾಜರಿಗೆ ಅಪಮಾನ: ಮದರಾಸದಲ್ಲಿ ನೀಡುವ ಶಿಕ್ಷಣ ಇದೇನಾ?

ಶಿವಾಜಿ ಮಹಾರಾಜರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಜಿಹಾದಿ ಮನಸ್ಥಿತಿಯ ಮುಸ್ಲಿಂ ಬಾಲಕನೊಬ್ಬ, ಆ ಮೂಲಕ ಕೋಟ್ಯಾಂತರ ಶಿವಾಜಿ ಪ್ರಿಯರಿಗೆ ನೋವುಂಟು ಮಾಡಿದ್ದಾನೆ.

ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರ ಬಗ್ಗೆ ಮುಸ್ಲಿಂ ಹುಡುಗನೊಬ್ಬ ಅಶ್ಲೀಲವಾಗಿ ನಿಂದಿಸಿ, ಅವರ ಚಿತ್ರವನ್ನು ಆಕ್ಷೇಪಾರ್ಹವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ. ಈ ಚಿತ್ರ ವೈರಲ್ ಆಗಿ, ಹಿಂದೂ ಸಮಾಜದ ಕೆಂಗಣ್ಣಿಗೂ ಗುರಿಯಾಗಿತ್ತು. ಜಿಹಾದಿ ಮನ ಸ್ಥಿತಿಯ ಬಾಲಕನ ವಿರುದ್ದ ಹಿಂದೂ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ವಿಜಯಪುರದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮುಸ್ಲಿಂ ಹುಡುಗನ ವಿರುದ್ಧ ನಗರದ ಶಿವಾಜಿ ವೃತ್ತದ ಬಳಿ ಪ್ರತಿಭಟನೆಯನ್ನೂ ಹಿಂದೂ ಸಂಘಟನೆಗಳು ನಡೆಸಿದ್ದವು.

ವಿಜಾಪುರದ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ ೧೫೩ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮದರಸಾ, ಮಸೀದಿಗಳಲ್ಲಿ ಮಕ್ಕಳಿಗೆ ಎಂತಹ ಶಿಕ್ಷಣ ನೀಡುತ್ತಾರೆ ಎನ್ನುವುದಕ್ಕೆ ಇದೂ ಒಂದು ಸಾಕ್ಷಿ. ಎಳವೆಯಲ್ಲಿಯೇ ಮಕ್ಕಳಿಗೆ ದ್ವೇಷ ಮನೋಭಾವವನ್ನು ಬಿತ್ತಿ, ಅವರನ್ನು ಸಮಾಜಘಾತುಕ ಶಕ್ತಿಗಳನ್ನಾಗಿ ಬೆಳೆಯುವಂತೆ ಮಾಡಿ, ದೇಶಕ್ಕೆ ಮಾರಕರನ್ನಾಗಿ ಹೇಗೆ ಬೆಳೆಸಲಾಗುತ್ತದೆ. ಹಾದಿ ತಪ್ಪಿದ ಮಕ್ಕಳನ್ನು ಅವರ ಹೆತ್ತವರು ಸಹ ಸರಿ ಮಾಡುವ ಯತ್ನ ಮಾಡದೆ, ದೇಶದ್ರೋಹಿಗಳನ್ನಾಗಿಯೇ ಬೆಳೆಸುತ್ತಿರುವುದು ಅಪಾಯಕಾರಿ ಸಂಗತಿ.

ಕೆಲ ದಿನಗಳ ಹಿಂದೆ ಅಯ್ಯಪ್ಪ ಮಾಲೆ ತೊಟ್ಟು ವ್ರತದಲ್ಲಿದ್ದ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಜಿಹಾದಿ ಮನಸ್ಥಿತಿಯ ಮುಸ್ಲಿಂ ಸಹಪಾಠಿಗಳು ಹಲ್ಲೆ ನಡೆಸಿ, ಅಯ್ಯಪ್ಪ ಮಾಲೆ ಕಿತ್ತು ವಿಕೃತಿ ಮೆರೆದಿದ್ದರು. ಮಕ್ಕಳಲ್ಲಿ ಇಂತಹ ದ್ವೇಷ ಮನಸ್ಸನ್ನು ಸೃಷ್ಟಿ ಮಾಡುವವರು ಯಾರು? ಅವರನ್ನು ತಿದ್ದಿ ಬುದ್ದಿ ಹೇಳಬೇಕಾದವರೇ ಮದರಸಾ, ಮಸೀದಿಗಳಲ್ಲಿ ಅಕ್ರಮಗಳನ್ನು ನಡೆಸುವವರು, ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗೂ ಅದನ್ನೇ ಹೇಳಿಕೊಡುತ್ತಾರಷ್ಟೆ ಅಲ್ಲದೆ, ದೇಶಕ್ಕೆ ಬೇಕಾದದ್ದನ್ನು ಹೇಳಿ ಕೊಡಲು ಸಾಧ್ಯವೇ..

ಸರ್ಕಾರ ಇನ್ನಾದರೂ ಮದರಸಾ, ಮಸೀದಿ ಗಳ ಮೇಲೆ ಕಣ್ಣಿಟ್ಟಲ್ಲಿ ಉತ್ತಮ.

Tags

Related Articles

Close