ಪ್ರಚಲಿತ

ಮಗು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ ಎನ್ನುವುದನ್ನು ಭಾಗವತದಲ್ಲಿ ಕಪಿಲ ಮಹರ್ಷಿ ವಿವರಿಸಿದ ನಿಗೂಢ ರಹಸ್ಯ ವಿಜ್ಞಾನಿಗಳ ಪಾಲಿಗೆ ಇಂದಿಗೂ ಸವಾಲಾಗಿ ಪರಿಣಮಿಸಿದೆ!

ಕದರ್ಮ ಮಹರ್ಷಿಗಳ ಮಗನಾದ, ಸಾಕ್ಷಾತ್ ವಿಷ್ಣು ಸಂಭೂತನಾದ ಕಪಿಲ ಮಹರ್ಷಿಯು ತನ್ನ ತಾಯಿಯಾದ ದೇವಹೂತಿಗೆ ಗರ್ಭದ ಬೆಳವಣಿಗೆಯ ಬಗ್ಗೆ ತಿಳಿಸಿದರು. ಸಹಸ್ರಾರು ವರ್ಷಗಳ ಹಿಂದೆಯೇ ಗರ್ಭದ ಬೆಳವಣಿಗೆ ಹೇಗಾಗುತ್ತದೆ ಎನ್ನುವುದನ್ನು ಇಂದು ವಿಜ್ಞಾನವು ಹೇಗೆ ವಿವರಿಸುತ್ತದೋ ಅದೇ ರೀತಿಯಲ್ಲಿ ವಿವರಿಸಿದ ವಿಚಾರ ಖಂಡಿತವಾಗಿಯೂ ಒಂದು ಅಚ್ಚರಿ. ಸನಾತನ ಧರ್ಮವು ಅತ್ಯಂತ ವೈಜ್ಞಾನಿಕ ಧರ್ಮವಾಗಿದೆ ಎನ್ನುವುದ್ನು ಸಹಸ್ರಾರು ವರ್ಷಗಳ ಹಿಂದಿನ ಭಾಗವತೇ ವಿವರಿಸಿದೆ ಎಂದರೆ ಹಿಂದಿನ ಕಾಲದಲ್ಲಿ ವಿಜ್ಞಾನವು ಎಷ್ಟೊಂದು ಉಚ್ರಾಯಸ್ಥಿತಿಯಲ್ಲಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಬಹುದು.

ದೇವಹೂತಿಯು ತಪಸ್ಸಿಗೆ ತೆರಳುತ್ತಿದ್ದಾಳೆ ಎನ್ನುವುದನ್ನು ಅರಿತ ಆಕೆಯ ಮಗನಾದ ಕಪಿಲನು ಮಹತ್ತತ್ವ, ಇನ್ನಿತರ ತತ್ವಗಳು, ತನ್ಮಾತ್ರೆ, ಯೋಗಭ್ಯಾಸ, ಭಕ್ತರ ರೀತಿನೀತಿ, ಮೂರ್ತಿಪೂಜೆ, ಕಾಲವೈಶಿಷ್ಠ್ಯ, ಹೀಗೆ ಪ್ರತಿಯೊಂದೂ ವಿಚಾರದ ಕುರಿತು ವಿವರಿಸಿದ ಬಳಿಕ ತಾಯಿಯ ಅಪೇಕ್ಷೆಯ ಮೇರೆಗೆ ಗರ್ಭದ ಬೆಳವಣಿಗೆಯ ಕುರಿತು ವಿವರಿಸಿದ.

ಮಗುವು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ ಎನ್ನುವುದು ಇಂದಿನ ವಿಜ್ಞಾನಿಗಳಿಗೂ ವಿವರಿಸಲು ಸಾಧ್ಯವಿಲ್ಲ. ಗರ್ಭದ ಬೆಳವಣಿಗೆಯ ಬಗ್ಗೆ ವಿಜ್ಞಾನಿಗಳು ವಿವರಿಸಬಹುದೇ ಹೊರತು, ಗರ್ಭದಲ್ಲಿರುವ ಮಗುವಿನ ಮನಃಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಸಹಸ್ರಾರು ವರ್ಷಗಳ ಹಿಂದೆ ವೇದವ್ಯಾಸರು ಸಂಕಲಿಸಿದ ಭಾಗವತದಲ್ಲಿ ವಿವರಿಸಲಾಗಿದೆ. ಈ ವಿಚಾರ ಇಂದಿಗೂ ವಿಜ್ಞಾನಿಗಳ ಪಾಲಿಗೆ ಸವಾಲಾಗಿ ಪರಿಣಮಿಸಿದೆ.

ಆಹಾರದ ಮೂಲಕ ಪುರುಷನ ದೇಹದಲ್ಲಿ ವೀರ್ಯವು ಉತ್ಪತ್ತಿಯಾಗುತ್ತದೆ. ಸ್ತ್ರೀ-ಪುರುಷರ ಸಮಾಗಮದ ಬಳಿಕ ವೀರ್ಯವು ಸ್ತ್ರೀಯ ಗರ್ಭವನ್ನು ಸೇರಿಕೊಳ್ಳುತ್ತದೆ. ಜೀವಿಯು ಪಾಪ ಪುಣ್ಯಗಳನ್ನು ಸ್ವರ್ಗ ಮತ್ತು ನರಕದಲ್ಲಿ ಅನುಭವಿಸಿದರೂ ದೇಹ ಸಂಬಂಧವನ್ನುಂಟುಮಾಡುವ ಕರ್ಮಗಳು ಸದಾ ಉಳಿದಿರುತ್ತದೆ. ಅದು ಸ್ತ್ರೀ ಯೋನಿಯನ್ನು ಪ್ರವೇಶಿಸಿ ಸ್ತ್ರೀಯ ರಜಸ್ಸಿನಲ್ಲಿ(ಅಂಡಾಶಯ) ಕಲೆತು `ಕಲಲ’ ರೂಪವನ್ನು ತಾಳುತ್ತದೆ. ಇದು ರಾತ್ರಿಗಳಲ್ಲಿ ಪಕ್ವವಾಗಿ ಗುಳ್ಳೆಯ ಆಕಾರವನ್ನು ಹೊಂದುತ್ತದೆ. ಇದನ್ನು ಬುದ್ಭುದ ರೂಪವೆನ್ನುತ್ತಾರೆ.

ಹತ್ತು ದಿನಗಳ ಬಳಿಕ ಬೋರೆಯ ಹಣ್ಣಿನ ರೂಪವನ್ನು ಪಡೆದು ಕೆಲವು ದಿನಗಳಲ್ಲಿ ಮಾಂಸಖಂಡವಾಗಿ ಏರ್ಪಟ್ಟು ಮೊಟ್ಟೆಯ ಆಕಾರವನ್ನು ಪಡೆಯುತ್ತದೆ. ಒಂದು ತಿಂಗಳ ಒಳಗೆ ಆ ಮಾಂಸಪಿಂಡದಲ್ಲಿಯೇ ತಲೆಯ ರಚನೆಯಾಗುತ್ತದೆ. ಎರಡು ತಿಂಗಳಲ್ಲಿ ಕೈ-ಕಾಲು ಮುಂತಾದ ಅಂಗಗಳ ಉತ್ಪತ್ತಿಯಾಗುತ್ತದೆ. ಮೂರನೇ ತಿಂಗಳಲ್ಲಿ ಉಗುರು, ಮೈಕೂದಲು, ಎಲುಬು, ಚರ್ಮ, ಸ್ತ್ರೀ-ಪುರುಷರನ್ನು ಸೂಚಿಸುವ ಲಿಂಗಗಳು ಮತ್ತು ನವದ್ವಾರಗಳು ರಚನೆಯಾಗುತ್ತದೆ.

ನಾಲ್ಕನೆಯ ತಿಂಗಳಲ್ಲಿ ಮಾಂಸ ಮತ್ತು ಸಪ್ತಧಾತುಗಳು ಹುಟ್ಟಿಕೊಳ್ಳುತ್ತದೆ. ಐದನೆಯ ತಿಂಗಳಲ್ಲಿ ಹಸಿವು, ಬಾಯಾರಿಕೆ ಉಂಟಾಗುತ್ತದೆ. ಆರನೆಯ ತಿಂಗಳಲ್ಲಿ ಗರ್ಭದ ಚೀಲದೊಳಗಡೆ ಬಿಗಿಯಾಗಿ ಬಿಗಿಯಾಗಿ ಆವರಿಸಲ್ಪಟ್ಟು, ಶಿಶುವು ಕೋಶದ ಬಲಭಾಗಕ್ಕೆ ತಿರುಗುತ್ತದೆ. ಆಗ ಗರ್ಭವತಿಯು ಉಣ್ಣುವ, ಕುಡಿಯುವ ಆಹಾರ ಪಾನೀಯಗಳಿಂದ ಎಲ್ಲಾ ಧಾತುಗಳ ಪೋಷಣೆಗೊಳ್ಳುತ್ತದೆ. ಹಾಗೆಯೇ ಕ್ರಿಮಿಕೀಟಗಳು ಸೃಜಿಸಲ್ಪಡುವ ಮಲಮೂತ್ರ ಸ್ಥಾನದಲ್ಲಿರುತ್ತದೆ.

ಆ ಸಮಯದಲ್ಲಿ ಗರ್ಭವಾಸವಾಗಿರುವ ಶಿಶುವನ್ನು ಅನೇಕ ಕ್ರಿಮಿಕೀಟಗಳು ಕಚ್ಚುತ್ತದೆ. ಸುಮದಂತೆ ಕೋಮಲವಾಗಿರುವ ಚರ್ಮವನ್ನು ಕಚ್ಚುವಾಗ ಮಗುವಿಗೆ ನೋವಾಗುತ್ತದೆ. ಆ ಘಳಿಗೆಯಲ್ಲಿ ಮಗುವು ನೋವನ್ನು ತಾಳಲಾರದೆ ಮೂರ್ಛೆ ಹೋಗುತ್ತದೆ. ಕೆಲವೊಮ್ಮೆ ಚೇತರಿಸಿಕೊಳ್ಳುತ್ತದೆ. ಅಮ್ಮನ ರುಚಿಗನುಸಾರವಾಗಗಿ ಸೇವಿಸಲ್ಪಡುವ ಕಹಿ, ಖಾರ, ಹುಳಿ, ಉಪ್ಪು ಮೊದಲಾದ ಪದಾರ್ಥಗಳಿಂದ ಅದು ನರಳಬೇಕಾಗುತ್ತದೆ. ಈ ಹಿಂಸೆಯು ಅಸಹನೀಯವಾಗಿದ್ದರೂ ಗರ್ಭಸ್ಥ ಮಗುವಿನ ರೋದನವನ್ನು ಕೇಳುವವರು ಯಾರು? ಆಗ ಶಿಶುವಿಗೆ ಜನ್ಮಾಂತರದಲ್ಲಿ ಮಾಡಿದ ದುಷ್ಕರ್ಮಗಳ ಅರಿವು ಉಂಟಾಗಿ ಪಶ್ಚಾತಾಪದಿಂದ ನಿಟ್ಟುಸಿರು ಬಿಡುತ್ತದೆ. ಹಾಗಾಗಿ ಆ ವೇಳೆಯಲ್ಲಿ ನೆಮ್ಮದಿ ಇರುವುದಿಲ್ಲ.

ಏಳನೆಯ ತಿಂಗಳಲ್ಲಿ ಜ್ಞಾನಶಕ್ತಿಯು ಉಂಟಾಗುತ್ತದೆ. ತಾನು ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕ್ಕಾಗಿ ಕ್ಷಮಿಸಲು ಭಗವಂತನನ್ನು ಪ್ರಾರ್ಥಿಸುತ್ತದೆ. ದೇಹಧಾರಿಯಾದ ಜೀವವು ಶಿಶುವಿನ ರೂಪದಲ್ಲಿ ಎಂಟು ಮತ್ತು ಒಂಬತ್ತನೆಯ ತಿಂಗಳಲ್ಲಿ ಗರ್ಭಕೋಶದೊಳಗಿದ್ದು, ಮಲಮೂತ್ರದ ನಡುವೆ ಬಿದ್ದುಕೊಂಡು ಸಮಯವನ್ನು ಕಳೆಯುತ್ತದೆ. ಅತ್ತಿಂದಿತ್ತ, ಇತ್ತಿಂದತ್ತ ಹೊಟ್ಟೆಯೊಳಗಡೆ ಚಲಿಸುತ್ತಾ ತಾಯಿಯ ಉದರದಿಂದ ಹೊರಬರಲು ಸಮಯವನ್ನು ಕಾಯುತ್ತಿರುತ್ತದೆ. ಅದು ಹೊಟ್ಟೆಯಲ್ಲಿ ಇದ್ದಲ್ಲಿಯೇ ಇರದೆ ಚಲಿಸುತ್ತಿರುತ್ತದೆ. ಗರ್ಭದಲ್ಲಿ ಆ ಶಿಶುವು ಭಗವಂತನನ್ನು ಪ್ರಾರ್ಥಿಸುತ್ತದೆ.

‘ಹೇ ಭಗವಂತಾ, ನಿನ್ನ ಚರಣಾರವಿಂದವನ್ನು ಶರಣು ಹೋಗುತ್ತೇನೆ. ಭಗವಂತ ಪಾದಾರವಿಂದಗಳನ್ನು ಆಶ್ರಯಿಸಿದವನಿಗೆ ಯಾರಿಂದಲೂ ಅಂಜಿಕೆ ಇರುವುದಿಲ್ಲವಂತೆ, ಅಂತಹ ದಿವ್ಯ ಪಾದಾರವಿಂದಗಳನ್ನು ಇನ್ನೊಮ್ಮೆ ಆಶ್ರಯಿಸುತ್ತೇನೆ. ಪ್ರಕೃತಿ ಪುರುಷರನ್ನು ನಿಯಮಿಸುವ, ನಿಯಂತ್ರಿಸುವ, ಪರಮ ಪುರುಷನಾದ ಪರಮೇಶ್ವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಒಂಬತ್ತು ತಿಂಗಳನ್ನು ದಾಟಿಸಿ ದಶಮಾಸಕ್ಕೆ ನನ್ನನ್ನು ಒಯ್ದ ಪರಮಾತ್ಮನಿಗೆ ಪುನಃ ಪ್ರಣಾಮಗಳು…’ ಹೀಗೆ ಮಗುವು ಭಗವಂತನನ್ನು ಪ್ರಾರ್ಥಿಸುತ್ತದೆ.

ಸ್ತುತಿಸಿ ಅಮ್ಮನ ಉದರದೊಳಗಡೆ ಚಲನವಲಗಣನ್ನುಗೈಯ್ಯುತ್ತಿರುವಾಗ ಕೂಸು ಕೆಳಮುಖವಾದಾಗ ಪ್ರಸವ ಕಾಲದ ವಾಯುವು ತಕ್ಷಣ ಅದನ್ನು ಹೊರದೂಡುತ್ತದೆ. ಆಗ ಮಗುವಿನ ಜನನವಾಗುತ್ತದೆ.
ಹೊರಬಂದ ಕೂಡಲೇ ಒಮ್ಮೆ ಉಸಿರಾಟ ತಡೆದಂತಾಗಿ ಗರ್ಭಾವಸ್ಥೆಯಲ್ಲಿದ್ದ ಜ್ಞಾನವು ನಶಿಸಿ ಹೋಗುತ್ತದೆ. ಪುನಃ ಅಜ್ಞಾನ ಪ್ರವೇಶಿಸಿ ಉಸಿರು ಪ್ರಾರಂಭವಾಗಿ ಗಟ್ಟಿಯಾಗಿ ಅಳತೊಡಗುತ್ತದೆ. ಮಾತಾಪಿತೃಗಳು ಹಾಲುಕೊಟ್ಟು ತೊಟ್ಟಿಲಲ್ಲಿ ಮಲಗಿಸಿದರೂ ಏನನ್ನೂ ಹೇಳಲು ಸಾಧ್ಯವಾಗದೆ ಕಷ್ಟಪಡುತ್ತದೆ. ಅದರ ಪರಿಸ್ಥಿತಿಯನ್ನು ಉಳಿದವರು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಆಮೇಲೆ ನಿಧಾನವಾಗಿ ಬೆಳೆಯುತ್ತಾ ಶೈಶಾವಸ್ಥೆಯನ್ನು ದಾಟಿ ಪೌಗಂಡಾವಸ್ಥೆಯನ್ನು ಪ್ರವೇಶಿಸುತ್ತದೆ. ಇದು ಶೈಶವ ಮತ್ತು ಯೌವನಾವಸ್ಥೆಯ ನಡುವೆ ಇರುತ್ತದೆ. ಆ ಅವಸ್ಥೆಯನ್ನು ದಾಟಿ ಬೆಳೆದರೂ ಹಿಂದಿನ ಜನ್ಮಗಳ ಮರೆವಿನಿಂದಾಗಿ ಪುನಃ ಲೌಕಿಕದಲ್ಲಿ ತೊಡಗಿ ಜೀವನದಲ್ಲಿ ಪಾಪ ಪುಣ್ಯವನ್ನು ಸಂಪಾದಿಸುವನು. ಆತ್ಮನನ್ನು ಅರಿಯದೆ ಇದ್ದರೆ ಅವನಿಗೆ ಎಂದಿಗೂ ಮುಕ್ತಿ ಇರುವುದಿಲ್ಲ. ಅವನ ಅನೇಕ ಜನ್ಮಗಳ ಆಯುಷ್ಯದಲ್ಲಿ ತೊಳಲಾಟವೇ ಇರುತ್ತದೆ. ಸುಖವು ಕೇವಲ ಭ್ರಮೆಯಾಗುತ್ತದೆ. ಆದ್ದರಿಂದ ಶಾಶ್ವತ ಮುಕ್ತಿ, ಜನ್ಮಾಂತರಗಳಿಂದ ಮೋಕ್ಷ ಪಡೆಯಬೇಕಾದರೆ, ಸಂಸಾರ ಸಂಕೋಲೆಯಿಂದ ಬಿಡಿಸಲ್ಪಡಬೇಕಾದರೆ ಭಕ್ತಿಯೊಂದೇ ಮಾರ್ಗ ಎನ್ನುವುದನ್ನು ಕಪಿಲನು ತನ್ನ ತಾಯಿಗೆ ವಿವರಿಸುತ್ತಾನೆ.
ಸಹಸ್ರಾರು ವರ್ಷಗಳ ಹಿಂದೆಯೇ ರಚಿತವಾದ ಭಾಗವತದಲ್ಲಿ ಗರ್ಭಾವಸ್ಥೆಯಲ್ಲಿ ಮಗುವಿನ ಆಲೋಚನಾಲಹರಿಯನ್ನು ಇಂದಿನ ಯಾವ ಮನಶಾಸ್ತ್ರಜ್ಞನಿಗೂ ವಿವರಿಸಲು ಸಾಧ್ಯವಿಲ್ಲ. ಇದು ಇಂದಿಗೂ ವಿಜ್ಞಾನಿಗಳ ಪಾಲಿಗೆ ಸವಾಲಾಗಿ ಪರಿಣಮಿಸಿದೆ.

ಚೇಕಿತಾನ

Tags

Related Articles

Close