ಪ್ರಚಲಿತ

ಭಾರತದಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್? ಮ್ಯಾನ್ಮಾರ್ನಲ್ಲಿ ಭಯೋತ್ಪಾದಕ ಶಿಬಿರಗಳನ್ನು ಧೂಳಿಪಟ ಮಾಡಿದ ಭಾರತೀಯ ಸೈನ್ಯ!! ವಿರೋಧಿಗಳ ಗಾಯದ ಮೇಲೆ ಬರೆ ಎಳೆದ ಮೋದಿ ಸರಕಾರ!!

ಪಾಕಿಸ್ತಾನದ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದ ವೀಡೀಯೋ ಬಿಡುಗಡೆ ಮಾಡಿ ನಲ್ವತ್ತೆಂಟು ಗಂಟೆಗಳೂ ಕಳೆದಿಲ್ಲ, ಅದಾಗಲೇ ಭಾರತೀಯ ಸೇನೆ ಮ್ಯಾನ್ಮಾರ್ನಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎನ್ನುವ ವರದಿಗಳು ಬಂದಿವೆ! ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಉಗ್ರ ಪ್ರೇಮಿಗಳ ಹೃದಯದಲ್ಲಿ ಮೊದಲೆ ಗಾಯವಾಗಿತ್ತು. ಈಗ ಮೋದಿ ಸರಕಾರ ಮ್ಯಾನ್ಮಾರಿನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ವಿರೋಧಿಗಳ ಗಾಯದ ಮೇಲೆ ಬರೆ ಎಳೆದಿದೆ. ಟುಕುಡೆ-ಟುಕುಡೆ ಗ್ಯಾಂಗ್ ಈ ಸ್ಟ್ರೈಕ್ ಗಳನ್ನು ನುಂಗಲೂ ಆಗದೆ ಉಗುಳಲೂ ಆಗದೆ ವಿಲ ವಿಲ ಒದ್ದಾಡುತ್ತಿದೆ. ಭಾರತವನ್ನು ಟುಕುಡೆ ಮಾಡುವವರೆ ಭಸ್ಮವಾಗುತ್ತಿದ್ದಾರೆ.

ನ್ಯಾಶನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ NSCN(K) ನ ಖಪ್ಲಾಂಗ್ ಪಕ್ಷಕ್ಕೆ ಸೇರಿದ ಶಿಬಿರದ ಮೇಲೆ ಭಾರತೀಯ ಸೇನೆಯು ಯಶಸ್ವಿ ದಾಳಿ ನಡೆಸಿ ಶಿಬಿರಗಳನ್ನು ಧೂಳೀಪಟ ಮಾಡಿದೆ. ಪರಿಣಾಮವಾಗಿ ಐದು ಬಂಡುಕೋರರು ಕೈಲಾಸ ಯಾತ್ರೆ ಕೈಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಭಾರತೀಯ ಸೇನೆಯ ಭಯೋತ್ಪಾದನಾ ವಿರೋಧಿ ಘಟಕದ 12 ಕಮಾನುಗಳು ಮ್ಯಾನ್ಮಾರ್ ಒಳಗೆ ಮೂರು ಕಿಲೋಮೀಟರ್ ಚಲಿಸಿ ಶಿವಲೋದಲ್ಲಿರುವ ಉಗ್ರರ ಶಿಬಿರದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದಾರೆ.

ಭಾರತೀಯ ಸೇನೆಯ 12 ಪ್ಯಾರಾ ಸೈನಿಕರು ಮ್ಯಾನ್ಮಾರ್ ನ ಒಳಗೆ ಶರ ವೇಗದಿಂದ ದಾಖಲಾಗಿ ಬಂಡುಕೋರರ ಶಿಬಿರಗಳನ್ನು ಧ್ವಂಸಗೈದು ಬುಧವಾರ (27 ಜೂನ್) ಸುಮಾರು ಮಧ್ಯಾಹ್ನ 2 ಗಂಟೆಗೆ ವಾಪಾಸು ಮರಳಿ ಬಂದಿದ್ದಾರೆ. ಬಂಡಾಯ ಶಿಬಿರವನ್ನು ಮೋರ್ಟಾರ್ ಗಳು, ಗ್ರೆನೇಡ್ ಲಾಂಚರ್ಗಳು ಮತ್ತು ರಾಕೆಟ್ ಲಾಂಚರ್ಗಳನ್ನು ಉಪಯೋಗಿಸಿ ಪುಡಿಗೈಯಲಾಗಿದೆ. ಭಾರತೀಯ ಸೈನಿಕರಿಗೆ ಯಾವುದೇ ಗಾಯಗಳು ಆಗಿಲ್ಲ ಮತ್ತು ಸಾವುನೋವುಗಳು ಸಂಭವಿಸಿಲ್ಲ. NSCN(K) ಯ ಮಾಹಿತಿ ಕಾರ್ಯದರ್ಶಿ ಐಸಾಕ್ ಸುಮಿ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಭಾರೀ ಸಂಖ್ಯೆಯ ಭಾರತೀಯ ಸೇನೆಯ ಸೈನಿಕರು ಗಡಿ ರೇಖೆಯನ್ನು ದಾಟಿ ನಾಗಾ ಶಿಬಿರಗಳ ಮೇಲೆ ಏಕಾ ಏಕಿ ದಾಳಿ ನಡೆಸಿದರು. ಯಾದೃಚ್ಛಿಕವಾಗಿ ನಡೆಸಿದ ಈ ದಾಳಿಗೆ ನಾಗಾ ಬಂಡುಕೋರರು ಪ್ರತಿದಾಳಿ ನಡೆಸಿ ಸೇನೆ ಮುಂದುವರಿಯದಂತೆ ನೋಡಿಕೊಂಡಿತು. ನಿನ್ನೆ ಮಧ್ಯಾಹ್ನ ನಡೆದ ದಾಳಿಯಲ್ಲಿ ನಡೆದ ಸಾವುನೋವುಗಳನ್ನು ಸ್ಪಷ್ಟವಾಗಿ ಕಂಡುಹಿಡಿಯಲಾಗಲಿಲ್ಲ ಎಂದು ಬಂಡುಕೋರರ ಕಾರ್ಯದರ್ಶಿ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ನಿಯಂತ್ರಣ ರೇಖೆ ದಾಟಿ, ಮ್ಯಾನ್ಮಾರ್ ಒಳಗೆ ಚಲಿಸಿ ಈಶಾನ್ಯ ಬಂಡಾಯ ಗುಂಪಿನ ನೆಲೆಗಳ ಮೇಲೆ ನಡೆಸಿದ ಎರಡನೇ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ಇದಾಗಿದೆ. ಇದಕ್ಕೆ ಮುನ್ನವೂ 2015ರಲ್ಲಿ ಒಂದು ಬಾರಿ ಮೋದಿ ಸರಕಾರ ಮ್ಯಾನ್ಮಾರಿನಲ್ಲಿ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. 2019 ರಲ್ಲಿ ಮೋದಿಗೆ ಏತಕ್ಕೆ ಮತ ನೀಡಬೇಕು ಎಂದು ಅನುಮಾನ ಇರುವವರು ಮೋದಿ ಅವರು ಉಗ್ರರನ್ನು ಮಟ್ಟ ಹಾಕಲು ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನೊಮ್ಮೆ ಕಣ್ ಬಿಟ್ಟು ನೋಡಬೇಕು. ಅಂತರಾಷ್ಟ್ರೀಯ ಗಡಿ ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಕೈಲಾಸ ಯಾತ್ರೆ ಮಾಡಿಸುವ ಛಾತಿ ಕೇವಲ ಮೋದಿ ಅವರಿಗೆ ಮಾತ್ರ ಇರುವುದು. ದೇಶ ರಕ್ಷಣೆಯ ಬಗ್ಗೆ ಕಾಳಜಿ ಇರುವವರು ಮೋದಿಗಲ್ಲದೆ ಬೇರಿನ್ನಾರಿಗೂ ಮತ ನೀಡಲಾರರು. ಎಲ್ಲಕ್ಕಿಂತ ಮೊದಲು ದೇಶ ಎನ್ನುವ ಏಕಮಾತ್ರ ರಾಜಕಾರಣಿ ಮೋದಿ.

-ಶಾರ್ವರಿ

Tags

Related Articles

Close