ಪ್ರಚಲಿತ

ಕೇಂದ್ರದ ವಿರುದ್ಧ ತೊಡೆತಟ್ಟಿದ್ದ ಬಂಡುಕೋರನಿಗೆ ಕರುನಾಡಲ್ಲಿ ಬಂಧನದ ಭೀತಿ: ಅಂದರ್ ಆಗುತ್ತಾನಾ ಟಿಕಾಯತ್?

ರಾಕೇಶ್ ಟಿಕಾಯತ್.. ಈ ಹೆಸರು ಭಾರತೀಯರೆಲ್ಲರಿಗೂ ಚಿರಪರಿಚಿತ.ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ರೈತರ ಹಿತದೃಷ್ಟಿಯಿಂದ ಕೃಷಿ ಕಾಯ್ದೆ ಜಾರಿಗೆ ತಂದಾಗ, ಕೃಷಿಕರ ಹೆಸರಿನಲ್ಲಿ ದೇಶ ವಿರೋಧಿಗಳನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಿದ ಈ ಕ್ರಿಮಿ ಯಾರಿಗೆ ತಾನೇ ನೆನಪಿಲ್ಲ ಹೇಳಿ.

ಈತನ ಹೆಸರು ಕೇಳಿದಾಗ ಈ ದೇಶದ ನೈಜ ರೈತರಿಗೆ ಎಲ್ಲಿಲ್ಲದ ಪಿತ್ತ ನೆತ್ತಿಗೇರಿ ಬಿಡುತ್ತದೆ. ಕೃಷಿಕ ರನ್ನು ಮೋದಿ ಸರ್ಕಾರದ ವಿರುದ್ಧ ಎತ್ತಿ ಕಟ್ಟಿ, ತನ್ನ ಜೇನು ತುಂಬಿಸಿಕೊಂಡ ಈ ಖದೀಮ, ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಖಲೀಸ್ಥಾನಿ ಉಗ್ರರ ನೆರವನ್ನೂ ಪಡೆದಿದ್ದ ಎಂಬ ಮಾತುಗಳೂ ಕೇಳಿ ಬಂದಿತ್ತು. ಇಂತಹ ದೇಶ ವಿರೋಧಿ ಹಿನ್ನೆಲೆ ಹೊಂದಿರುವ ರಾಕೇಶ್ ಟಿಕಾಯತ್‌ನ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.

ಈ ನಕಲಿ ರೈತನ ವಿರುದ್ಧ ದೂರು ನೀಡಿದವರಾರು?, ಈ ಬಾರಿ ಆತನ ವಿರುದ್ಧ ಕೇಳಿ ಬಂದಿರುವ ಆರೋಪವಾದರೂ ಏನು ಎಂಬುದಕ್ಕೆ ಉತ್ತರ ಇಲ್ಲಿದೆ. ಕೆಲ ಸಮಯದ ಹಿಂದೆ ಬೆಂಗಳೂರಿನ ಗಾಂಧೀ ಭವನದಲ್ಲಿ ರಾಕೇಶ್ ಟಿಕಾಯತ್‌ ಸಮ್ಮುಖದಲ್ಲಿ ನಡೆದಿದ್ದ ಕರ್ನಾಟಕದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ‘ಆತ್ಮಾವಲೋಕನ ಮತ್ತು ಸ್ಪಷ್ಟೀಕರಣ ಸಭೆ’ ನಡೆಸಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡಿದ್ದ ಟಿಕಾಯತ್ ಕೂಡಾ ಭಾಗವಹಿಸಿದ್ದರು. ಈ ಸಭೆಯಲ್ಲಿ ಟಿಕಾಯತ್ ಮೇಲೆ ಮಸಿ ಎರಚಿ, ಹಲ್ಲೆ ನಡೆಸಿದ ಆರೋಪದಡಿ ಶಿವಕುಮಾರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಘಟನೆಗೆ ಸಂಬಂಧಿಸಿದ‌ಂತೆ ಶಿವಕುಮಾರ್ ಅವರು ಸಹ ಖಾಸಗಿ ದೂರು ಸಲ್ಲಿಸಿದ್ದು, ಈ ಸಭೆಯಲ್ಲಿ ಅನುಸೂಯಮ್ಮ ಎಂಬವರು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರಿಗೆ ಕನ್ನಡ ಭಾಷೆಯಲ್ಲಿ ಮಾತನಾಡುವಂತೆ ಹೇಳಿದರೂ ಅವರು ಅದನ್ನು ಗಮನಿಸದೆ ತಮಿಳಿನಲ್ಲಿಯೇ ಮಾತು ಮುಂದುವರಿಸಿದ್ದರು. ಇದನ್ನು ಪ್ರಶ್ನಿಸಿ ಮೈಕ್ ಕಸಿಯಲು ಶಿವಕುಮಾರ್ ಅವರು ವೇದಿಕೆ ಏರಿದ್ದು, ಈ ಸುಂದರ್ಭದಲ್ಲಿ ಆರೋಪಿಗಳಾದ ರಾಕೇಶ್ ಟಿಕಾಯತ್, ಅನುಸೂಯಮ್ಮ, ಯುದ್ಧ ವೀರ ಸಿಂಗ್ ಮೊದಲಾದವರು ತಮ್ಮ ಮೇಲೆ ಕುರ್ಚಿಗಳನ್ನೆತ್ತಿ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾಗಿ ದೂರು ದಾರ ಶಿವಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಖಾಸಗಿ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

ಒಟ್ಟಿನಲ್ಲಿ ರೈತರ ಹೆಸರಿನಲ್ಲಿ ದೊಂಬಿ ಎಬ್ಬಿಸಿ ತನ್ನ ಜೇಬು ತುಂಬಿಸಿಕೊಂಡಿದ್ದ ಟಿಕಾಯತ್, ಕರ್ನಾಟಕದಲ್ಲಿಯೂ ತನ್ನ ಬಾಲ ಬಿಚ್ಚಿದ್ದು, ಆ ಮೂಲಕ ರಾಜ್ಯದ ನೈಜ ರೈತರ ಕೆಂಗಣ್ಣಿಗೂ ಗುರಿಯಾಗಿದ್ದಾನೆ. ರೈತರ ಹೆಸರು ಹೇಳಿ ತಮ್ಮ ಖಾತೆ ತುಂಬಿಸಿಕೊಳ್ಳುತ್ತಿರುವ, ದೇಶದ ಸಾಮರಸ್ಯ ಕೆಡಹುತ್ತಿರುವ ಇಂತಹ ನಾಚಿಗೆಕೆಟ್ಟವರಿಗೆ ತಕ್ಕ ಶಾಸ್ತಿಯಾದರಷ್ಟೇ ದೇಶ ಉಳಿಯಬಹುದು. ಇಲ್ಲವಾದರೆ ದೇಶದ ಬೆನ್ನೆಲುಬಾಗಿರುವ ರೈತರು ಸಂಕಷ್ಟದಲ್ಲೇ ಬದುಕಬೇಕಾದೀತು. ಇಂತಹ ಸಮಾಜಘಾತುರಕ ಬಗ್ಗೆ ಎಚ್ಚರ ಅಗತ್ಯ.

Tags

Related Articles

Close