ಇತಿಹಾಸ

ಯುದ್ಧವಾದರೂ ಸರಿಯೇ! ಅಖಂಡ ಕಾಶ್ಮೀರ ಬೇಕೆಂದು ನೆಹರೂವಿಗೆ ಛೀಮಾರಿ ಹಾಕಿದ್ದ ಧೀಮಂತ ವ್ಯಕ್ತಿ ಯಾರು ಗೊತ್ತೇ?

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದೆಷ್ಟೊ ಮಂದಿ ವೀರಾರು ದೇಶಕೋಸ್ಕರ ಹೋರಾಡಿ, ಪ್ರಾಣವನ್ನೇ ಕೊಟ್ಟ ದೇಶಭಕ್ತರ ಬಗ್ಗೆ ನಾವು ಕೇಳಿದ್ದೇವೆ ಹಾಗೂ ತಿಳಿದಿದ್ದೇವೆ… ಆದರೆ ದೇಶವನ್ನೇ ತನ್ನ ಅಧಿಕಾರಕ್ಕೋಸ್ಕರ ಬಳಸಿ ದೇಶವನ್ನೇ ತಲೆತಗ್ಗಿಸುವಂತಹ, ನಾಚಿಕೆಗೇಡಿನ ವಿಚಾರವೂ ನಡೆದಿದೆ ಅಂದರೆ ನಂಬ್ತೀರಾ!!!

ಹೌದು…. ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಗತ್‍ಸಿಂಗ್, ಚಂದ್ರಶೇಖರ ಅಜಾದ್, ರಾಜಗುರು ಹೀಗೆ ಸಾವಿರಾರು ಮಂದಿ ಸ್ವಾತಂತ್ಯವನ್ನು ತಂದುಕೊಡುವಲ್ಲಿ ದೇಶಕ್ಕೋಸ್ಕರ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರು. ಆದರೆ ಭಾರತದ ಗಣತೆಯನ್ನೇ ತಗ್ಗಿಸುವಂತಹ ಕೆಲಸ ಒಬ್ಬ ಭಾರತೀಯನೇ ಮಾಡಿದ್ದಾರೆ ಎಂದರೆ, ಅದು ನಂಬಲಸಾಧ್ಯ!!! ಆದರೆ ಇದು ನಂಬಲೇ ಬೇಕು!! ಅವರು ಬೇರಾರು ಅಲ್ಲ ಜವಹರ್‍ಲಾಲ್ ನೆಹರೂ!!

1947ರ ನಂತರ ಭಾರತಕ್ಕೆ ಸ್ವಾತಂತ್ರ್ಯ ಬಂತಾದರೂ, ದೇಶದಲ್ಲಿ ಬ್ರಿಟಿಷರು ಆಡಳಿತದ ನಡೆಸಿದ 530ಕ್ಕೂ ಹೆಚ್ಚು ಪ್ರದೇಶಗಳನ್ನು ಸ್ಥಳೀಯ ರಾಜರುಗಳಿಂದ ನಿರ್ವಹಿಸಲ್ಪಟ್ಟಿತ್ತು. ಅನೇಕ ರಾಜರುಗಳು ತಮ್ಮ ಭೂಮಿಯನ್ನು ಮರಳಿ ಪಡೆಯಲು ಬಯಸಿದ್ದಲ್ಲದೇ ಸ್ವತಂತ್ರ ರಾಷ್ಟ್ರದಲ್ಲಿ ಉಳಿಯಲು ಬಯಸಿದ್ದರು. ಆ ಸಂದರ್ಭದಲ್ಲಿ ಮಹಾನ್ ವ್ಯಕ್ತಿಯಾದ ನೆಹರೂ ಬ್ರಿಟಿಷ್ ರಾಜರುಗಳನ್ನು ಉಳಿಯಲು ಮನವರಿಕೆ ಮಾಡದೇ, ಭಾರತವನ್ನು ಒಂದು ರಾಷ್ಟ್ರವೆಂದು ಘೋಷಿಸಿದರು.

ಆ ಸಂದರ್ಭದಲ್ಲಿ ಸರ್ದಾರ್ ಪಟೇಲರಿಗೆ ಕಠಿಣ ಜವಾಬ್ದಾರಿಯನ್ನು ನೀಡಲಾಯಿತು. 565 ಅರೆ-ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ , ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು. ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರು. 1947ರ ಮೇ 6ರಂದು ಪಟೇಲರು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಈಗಲೇ ಚಿವುಟಿಹಾಕುವುದಾಗಿತ್ತು.

ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ, ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು, ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಕಾಂಗ್ರೆಸ್ ಹಾಗೂ ಈ ರಾಜಕುಮಾರರಲ್ಲಿ ಮೂಲಭೂತವಾದ ಯಾವುದೇ ಚಕಮಕಿಯಿಲ್ಲ ಎಂದು ಪಟೇಲರು ಸ್ಪಷ್ಟಪಡಿಸಿದರೂ , 1947 ಆಗಸ್ಟ್ 15ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು. ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಅದರಲ್ಲೂ ಮುಖ್ಯವಾಗಿ ಹೆಚ್ಚುತ್ತಿದ್ದ ಪ್ರತಿಭಟನೆಯ ವಿರುದ್ಧ, ನಿರರ್ಥಕತೆಯನ್ನೂ ಈ 565 ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು. ಬರಿಯ ಮೂರು, ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿಸಿದರು.

ಸ್ವಾತಂತ್ರ್ಯದ ನಂತರ, ಪಾಕಿಸ್ತಾನವು ಕಾಶ್ಮೀರ ಮತ್ತು ಲಕ್ಷದ್ವೀಪಗಳ ರಾಜ್ಯಗಳ ಮೇಲೆ ಕಣ್ಣಿಟ್ಟಿತ್ತು. ಆದರೆ ಸರ್ದಾರ್ ಪಟೇಲ್, ಜಿನ್ನಾ ನಂಬಿಕಸ್ಥ ಮನುಷ್ಯನಲ್ಲ ಮತ್ತು ಇವನಿಂದ ದೇಶಕ್ಕೆ ತೊಂದರೆ ಆಗಲಿವೆ ಎಂಬುವುದು ಸ್ವಾತಂತ್ರ್ಯಪೂರ್ವವಾಗಿಯೇ ಇವರಿಗೆ ತಿಳಿದಿತ್ತು. ನಂತರದ ದಿನದಲ್ಲಿ, ಪಾಕಿಸ್ತಾನ ಲಕ್ಷದ್ವೀಪವನ್ನು ವಶಪಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿದ್ದಲ್ಲದೇ, ಅದನ್ನು ವಶಪಡಿಸಿಕೊಳ್ಳಲು ಹಲವು ನೌಕಾಹಡುಗುಗಳನ್ನು ಈ ಪ್ರತ್ಯೇಕ ದ್ವೀಪಗಳಿಗೆ ಕಳುಹಿದ್ದನು. ಆದರೆ ಈ ಮೊದಲೇ ಸರ್ದಾರ್ ಪಟೇಲ್ ಅವರು ಭಾರತೀಯ ನೌಕಾಪಡೆಗೆ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರಿಂದ ಪಾಕಿಸ್ತಾನ ಹಡಗುಗಳನ್ನು ಮರಳಿ ಕಳುಹಿಸುವತ್ತ ಭಾರತೀಯ ಸೇನೆ ಯಶಸ್ಸನ್ನು ಗಳಿಸಿತ್ತು. ಅಲ್ಲದೇ ದೊಡ್ಡ ಅನಾಹುತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿತ್ತು.

ಸರ್ದಾರ್ ಪಟೇಲ್ ಹೈದರಾಬಾದ್ ಮತ್ತು ಜುನಾಗಡ್‍ಗಳನ್ನು ತಮ್ಮ ವಶಪಡಿಸಿಕೊಳ್ಳಲು ಹಲವು ಉತ್ತಮ ತಂತ್ರಗಳನ್ನು ರೂಪಿಸಿದ್ದರು. ಆದರೆ ಕಾಶ್ಮೀರವನ್ನು ಭಾರತೀಯ ಪ್ರಾಂತ್ಯಕ್ಕೆ ತರುವ ಕಾರ್ಯವನ್ನು ನೆಹರೂ ತೆಗೆದುಕೊಂಡರು ಅದರ ಪರಿಣಾಮ ನಾವು ಇಂದಿಗೂ ಅನುಭವಿಸುತ್ತಿದ್ದೇವೆ. ಅಷ್ಟೇ ಅಲ್ಲದೇ ಅವರ ಆಡಳಿತದಲ್ಲಿ ನಾವು 1.25 ಲಕ್ಷ ಚದರ ಮೀಟರ್‍ಗಳಷ್ಟು ಭಾರತದ ಭೂಮಿಯನ್ನು ಚೀನಾ ಮತ್ತು ಪಾಕಿಸ್ತಾನದಿಂದ ಕಳೆದುಕೊಂಡಿದ್ದೇವೆ. ಇದು ಶಾಶ್ವತವಾಗಿ ಬಗೆಹರಿಯಾದ ನೋವಿನಂತೆ ನಮಗೆ ಇಂದು ಕಾಡುತ್ತಿದೆ!!

ಹೈದರಾಬಾದ್ ಮತ್ತು ಜುನಾಗಢ್ ರಾಜ್ಯಗಳನ್ನು ಭಾರತಕ್ಕೆ ಏಕೀಕರಣಗೊಳ್ಳುವ ಮೊದಲು ಸರ್ದಾರ್ ಪಟೇಲ್‍ರು ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಇವರ ಕಠಿಣವಾದ ನಿರ್ಧಾರ ಮತ್ತು ಬದ್ದತೆಯು ಇವರ ಕೆಲಸದಿಂದ ಹಿಂತೆಗೆದುಕೊಳ್ಳುವಂತೆ ಬಿಡಲಿಲ್ಲ. ಆದರೆ ಮತ್ತೊಂದೆಡೆ ನೆಹರೂ ಅವರ ಸ್ಥಿತಿ ಮಾತ್ರ ಸಂಪೂರ್ಣ ಹತಾಶರಾಗಿದ್ದು,ಪಟೇಲ್‍ರು ರಾಜ್ಯಗಳನ್ನು ಮರಳಿ ಪಡೆಯುವಲ್ಲಿ ಸಮರ್ಥರಾಗಿದ್ದಾರೆ ಎಂದು ಅವರು ನಂಬಿಯೂ ಇರಲಿಲ್ಲ. ಹಾಗಾಗಿ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಾಗಿ ನಿರ್ಧರಿಸಿ, ಭಾರತೀಯ ಭೂಪ್ರದೇಶದ ನಿಯಂತ್ರಣವನ್ನು ಮಾಡಲು ಲಾರ್ಡ್ ಮೌಂಟ್‍ಬ್ಯಾಟನ್‍ಗೆ ನೀಡಿದಲ್ಲದೇ ಪಟೇಲರನ್ನು ಅಧಿಕಾರದಿಂದ ಹೊರಗಿಟ್ಟರು. ಭಾರತದ ಸ್ವಾತಂತ್ರ್ಯನಂತರವೂ ಲಾರ್ಡ್ ಮೌಂಟ್‍ಬ್ಯಾಟನ್ ಭಾರತದ ಗವರ್ನರ್ ಜನರಲ್ ಆಗಿರಲು ಇದುವೇ ಒಂದು ಕಾರಣ!!

ನೆಹರೂ ಅವರ ಪ್ರಮಾದಗಳನ್ನು ಒಂದೆರೆಡು ಪುಟಗಳಲ್ಲಿ ಅಲ್ಲ ಇಡೀ ಪುಸ್ತಕದಲ್ಲಿ ಬರೆದರೂ ಮುಗಿಯುವುದಿಲ್ಲ.

ಹೈದರಾಬಾದ್ ವಿಚಾರದಲ್ಲಿ ನೆಹರು ಬಹಳ ಸೌಮ್ಯವಾಗಿ ಮುಸ್ಲಿಂಮರನ್ನು ಸಮಾಧಾನ ಪಡಿಸಲು ಮುಂದಾಗಿದ್ದರು. ಈ ಬಗ್ಗೆ ಸರ್ದಾರ್ ಅವರು ಸಿ
ಗೋಪಾಲಚಾರಿಯವರಲ್ಲಿ “ಹುಣ್ಣು”ನ್ನು ತೆಗೆದು ಹಾಕಲು ಯಾವುದೇ ರೀತಿಯ ಕ್ರಮಕೈಗೊಳ್ಳಬೇಕೆಂದಿಲ್ಲ ಮತ್ತು ನೆಹರೂ ತಮ್ಮ ಮಿತಿಯಲ್ಲಿದ್ದರೆ ಒಳಿತು ಎಂದಿದ್ದಾರೆ ಎಂದು ಮ್ಯಾನಿಬೆನ್ ಪಟೇಲ್‍ರ ಡೈರಿಯಲ್ಲಿ ಬರೆದಿದ್ದಾರೆ.

“ಭವಿಷ್ಯದ ಪೀಳಿಗೆಗಳು ಭಾರತದ ಹೃದಯಕ್ಕೆ ಹುಣ್ಣುಮಾಡಿದ್ದಕ್ಕಾಗಿ, ಅದನ್ನು ನಾವು ಅನುಮತಿಸಿದ್ದಕ್ಕಾಗಿ ನಮ್ಮನ್ನು ದೂಷಿಸಲು ಮತ್ತು ಶಾಪ ನೀಡಲು ನಾನು ಯಾವತ್ತು ಬಯಸುವುದಿಲ್ಲ ಎಂದು ಸರ್ದಾರ್ ಪಟೇಲ್ ರಾಜಾಜಿಯವರಲ್ಲಿ ಹೇಳಿದ್ದರು. ಒಂದು ಕಡೆ ಪಾಶ್ಚಿಮಾತ್ಯ ಪಾಕಿಸ್ತಾನ ಮತ್ತು ಇನ್ನೊಂದು ಬದಿಯಲ್ಲಿ ಪೂರ್ವ ಪಾಕಿಸ್ತಾನರು (ಅವರ ಕಲ್ಪನೆಯಲ್ಲಿ (ಎ) ಪ್ಯಾನ್-ಇಸ್ಲಾಮಿಕ್ ಬ್ಲಾಕ್…..(ಅವರು ಬಯಸುತ್ತಾರೆ) ದೆಹಲಿಗೆ ಬಂದು ಮೊಘಲ್ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸುತ್ತಾರೆ. ಒಮ್ಮೆ ನಾವು ಹೈದರಾಬಾದ್‍ಗೆ ಪ್ರವೇಶಿಸಿದರೆ, ಆಗ ಇದು ಅಂತಾರಾಷ್ಟ್ರೀಯ ವ್ಯವಹಾರವಾಗುವುದಿಲ್ಲ. ಬದಲಾಗಿ ಇದು ರಾಜ್ಯ ಸಚಿವಾಲಯದ ಕಾರ್ಯಾಲಯವಾಗಲಿದೆ. ನೀವು ಮತ್ತು ಪಂಡಿತ್ ರಾಜ್ಯಗಳ ಸಚಿವಾಲಯವನ್ನು ದಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ?”(ಸೆಪ್ಟೆಂಬರ್ 13, 1948) ಎಂದು ಡೈರಿಯಲ್ಲಿ ಬರೆದಿದ್ದರು.

ಸ್ವಾತಂತ್ರ್ಯದ ಸಮಯದಿಂದಲೂ ಭಾರತದ ಪ್ರಜಾಪ್ರಭುತ್ವದ ರಾಜಕೀಯದಲ್ಲಿ ಯಾವುದೇ ಅಭಿವೃದ್ದಿ ನಡೆದರೂ ನೆಹರೂ ಅತಿದೊಡ್ಡ ಹಸ್ತಕ್ಷೇಪ ಮಾಡಲಿದ್ದಾರೆ ಎಂದು ಆ ಪುಸ್ತಕದಲ್ಲಿ ಹೇಳಿದ್ದಾರೆ. “ಸರ್ದಾರ್ ಪಟೇಲ್ ಅವರು ನೆಹರೂ-ಲಿಕ್ವಾಟ್ ಅಲಿ ಒಪ್ಪಂದದ ಬಗ್ಗೆ ಅಸಮಾಧಾನದಲ್ಲಿದ್ದರು. ಪೂರ್ವಪಾಕಿಸ್ತಾನದಿಂದ ವಲಸೆ ಹೋದ ಹಿಂದುಗಳ ಸಂಖ್ಯೆ ಹೆಚ್ಚಾಗಿದ್ದು ಮತ್ತು ಹೆಚ್ಚಿನ ಸಂಖ್ಯೆಯ ಹಿಂದೂಗಳು ಭಾರತಕ್ಕೆ ವಲಸೆ ಬಂದರು. ಅಷ್ಟೇ ಅಲ್ಲದೇ ಜನರನ್ನು ಸಾಯಿಸುವಾಗಲು, 30ಲಕ್ಷಕ್ಕಿಂತ ಹೆಚ್ಚು ಜನರು ಬಂಗಾಳದ ಕ್ಷಾಮಕ್ಕೆ ತುತ್ತಾದಗಲೂ ನೆಹರು ಚಿಂತಿಸಲಿಲ್ಲ. ಅಷ್ಟೇ ಅಲ್ಲದೇ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡುತ್ತಿದ್ದಾಗಲು ಸುಮ್ಮನಿದ್ದುದನ್ನು ಸರ್ದಾಲ್ ಪಟೇಲರು ಗಮನಿಸಿದರು” (ಏಪ್ರಿಲ್5, 1950).

“ಹಿಂದೂಗಳು ಸಿಂಧ್, ಪಂಜಾಬ್, ಬಲೂಚಿಸ್ತಾನ್ ಮತ್ತು ಫ್ರಾಂಟಿಯರ್ ಪ್ರಾಂತ್ಯಗಳಲ್ಲಿ ಸಂಪೂರ್ಣವಾಗಿ ನಶಿಸಿಹೋಗಿದ್ದಾರೆ. ಇನ್ನು ಪೂರ್ವ ಪಾಕಿಸ್ತಾನದಲ್ಲಿ ಮತ್ತು ಹಫಿಝರ್ ರೆಹಮಾನ್‍ನಂತಹ ಜನರು ಭಾರತದಲ್ಲಿ ನೆಲೆಸಿರುತ್ತಾರಲ್ಲದೇ ಇದು ಪುನರಾವರ್ತಿಸುತ್ತದೆ. ನಂತರ ಭಾರತದಲ್ಲಿ ನಮ್ಮ ಸ್ಥಾನ ಏನು? ನಮ್ಮ ವಂಶಜರು ನಮಗೆ ಇನ್ನು ದ್ರೋಹಿಗಳು ಎಂದು ಕರೆಯುತ್ತಾರೆ”(ಏಪ್ರಿಲ್ 24, 1950).

ಆದ್ದರಿಂದ, ಸರ್ದಾರ್ ಪಟೇಲ್ ಇಡೀ ಜಮ್ಮು ಕಾಶ್ಮೀರವನ್ನು ಭಾರತೀಯರ ಆಳ್ವಕೆಗೆ ಒಳಪಡಬೇಕೆಂದು ಬಯಸಿದ್ದರೇ ಹೊರತು ರಾಜಿ ಮಾಡಲು ಯಾವತ್ತು ಬಯಸಿದವರಲ್ಲ.. ಆದರೆ ನೆಹರೂ ಮಾತ್ರ ಅವರ ಸ್ಥಾನಮಾನದ ಬಗ್ಗೆ ಚಿಂತಿಸಿದ್ದಲ್ಲದೇ ಜನಪ್ರಿಯತೆಯ ಗಳಿಸುವಲ್ಲಿ ತನ್ನ ದೇಶದ ಭಾಗವನ್ನೇ ಬೇರೆಯವರಿಗೆ ನೀಡಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಸ್ವತಃ ತಮ್ಮ ಮೌಲ್ಯಯುತ ಸಾಧನೆಗಾಗಿ ನೆಹರೂ, ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡರು. ಆ ಸಂದರ್ಭದಲ್ಲಿ ಕಾಶ್ಮೀರದ ಸಮಸ್ಯೆಯನ್ನು
ವಿಶ್ವಸಂಸ್ಥೆಗೆ ತೆಗೆದುಕೊಳ್ಳಬಾರದು ಎಂದು ಸರ್ದಾರ್ ಪಟೇಲ್ ಸಲಹೆ ನೀಡಿದ್ದಲ್ಲದೇ ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಸಲಹೆ
ನೀಡಿದರು. ಅಷ್ಟೇ ಅಲ್ಲದೇ ಪಾಕಿಸ್ತಾನಕ್ಕೆ ವಲಸೆ ಬಂದ ಮುಸ್ಲಿಂ ಜಮೀನ್ದಾರರು ಜಮ್ಮು ಪ್ರದೇಶದಲ್ಲಿ ಫಲವತ್ತಾದ ಭೂಮಿಯನ್ನು ಹಿಂದುಳಿದ ಹಿಂದೂ ನಿರಾಶ್ರಿತರಿಗೆ ಕೊಡಲಿಲ್ಲ ಎನ್ನುವುದರ ವರದಿಗಳೂ ಬಂದಿದ್ದವು. ಬದಲಿಗೆ , ಶೇಖ್ ಇಂತಹ ಭೂಮಿಯನ್ನು ಮುಸ್ಲಿಂ ನಿರಾಶ್ರಿತರಿಗೆ ಮಾತ್ರ ನೀಡುತ್ತಿದ್ದ(ಮೇ 1, 1949)……(ವರದಿಗಳು ಇದ್ದವು) ಅಲ್ಲದೇ ಬಹುತೇಕ ಸರ್ಕಾರಿ ನೌಕರರು ಪಾಕಿಸ್ತಾನದವರೇ ಆಗಿದ್ದರು ಕೂಡ “.

ನೆಹರೂ ಅವರು ಶೆಖ್‍ಅಬ್ದುಲ್‍ರ ಬಹಳ ಆತ್ಮೀಯ ಸ್ನೇಹಿತರಾಗಿದ್ದರು, ಆದರೆ ಸರ್ದಾರ್ ಮಾತ್ರ ಅವರನ್ನು ನಂಬಲಿಲ್ಲ. ” ಬಕ್ಷಿ ಗುಲಾಮ್ ಮೊಹಮ್ಮದ್ ಅವರು
ಸರ್ದಾರ್ ಪಟೇಲ್ ಅವರೊಂದಿಗೆ ಹೈದರಾಬಾದ್ ಸಮಸ್ಯೆಯನ್ನು ಬಗೆಹರಿಸಿದಂತೆ, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು. ಆದರೆ ನೆಹರೂ ಮಾತ್ರ ಸರ್ದಾರ್ ಅವರಿಗೆ ಕಾಶ್ಮೀರದ ಮೇಲೆ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಅನುಮತಿ ನೀಡಲಿಲ್ಲ”.

ಯಾವಾಗ ಕಾಶ್ಮೀರದ ವಿಚಾರದಲ್ಲಿ ತೊಡಕುಗಳು ಆರಂಭವಾದಾಗ, ನೆಹರು ಮತ್ತವರ ನಿಷ್ಠಾವಂತರು ಜಮ್ಮುವನ್ನು ಭಾರತಕ್ಕೆ ಉಳಿಸಿಕೊಳ್ಳಲು ಪ್ರಸ್ತಾವನೆಯನ್ನು ತಂದರು ಮತ್ತು ಉಳಿದ ಭಾಗವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದರು. ” ನಮಗೆ ಸಂಪೂರ್ಣ ಪ್ರದೇಶ ಬೇಕು,, ಮತ್ತು ನಾವು ಈಡೀ ಕಾಶ್ಮೀರಕ್ಕಾಗಿ ಯುದ್ದವನ್ನು ಮಾಡುತ್ತೇವೆ” ಎಂದು ಪಟೇಲ್‍ಗೆ ನೆಹರೂ ಅಪಹಾಸ್ಯ ಮಾಡಿದರು. (ಜುಲೈ 23, 1949). ತದ ನಂತರದಲ್ಲಿ ಪಟೇಲ್ ಪ್ರಸ್ತಾಪವನ್ನು ತಿರಸ್ಕರಿಸಿ ಅವರು ಜೀವಂತವಾಗಿರುವ ತನಕವೂ ನಾನು ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಎಂದಿದ್ದರು.

ಒಂದುವೇಳೆ ಸರ್ದಾರ್ ಪಟೇಲರಿಗೆ ಕಾಶ್ಮೀರದ ಬಗ್ಗೆ ಸಮಸ್ಯೆಯನ್ನು ಬಗೆಯರಿಸಲು ಅವಕಾಶ ನೀಡುತ್ತಿದ್ದರೇ ಇತ್ತು ನಾವು ಯಾವುದೇ ರೀತಿಯ ಸಂಕಷ್ಟವನ್ನು
ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೇ ನೆಹರೂ ಅವರ ಅಧಿಕಾರದ ಆಸೆ ಇವತ್ತು ನಮ್ಮನ್ನು ಬಲಿಪಶುಗಳಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.

Source : Politics of Nehru – Found by Patel

-ಅಲೋಖಾ

Tags

Related Articles

Close