ಪ್ರಚಲಿತ

ಸಾಮಾನ್ಯರಿಗೂ ಒದಗಿಬಂತು ಅತ್ಯುನ್ನತ ಪ್ರಶಸ್ತಿ: ಮೋದಿಯಿಂದ‌ ಎಲ್ಲವೂ ಸಾಧ್ಯ!

ಈ ಬಾರಿ ಪದ್ಮ ಪುರಸ್ಕಾರಗಳನ್ನು ಪಡೆದ ಗಣ್ಯರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಪದ್ಮ ಪ್ರಶಸ್ತಿ ಪುರಸ್ಕೃತರ ಶ್ರೀಮಂತ ಮತ್ತು ವೈವಿದ್ಯಮಯ ಕೊಡುಗೆಗಳನ್ನು ಈ ದೇಶ ಗೌರವಿಸುತ್ತದೆ ಎಂದು ಹೇಳಿದ್ದಾರೆ. ನಮ್ಮ ಬೆಳವಣಿಗೆಗಳನ್ನು ಹೆಚ್ಚಿಸುವಲ್ಲಿ ಈ ಗಣ್ಯರ ಪ್ರಯತ್ನವನ್ನು ಭಾರತ ಗೌರವಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹ್ಯಾಷ್‌ಟ್ಯಾಗ್ #peoplespadma ಜೊತೆಗೆ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ಆ ಮೂಲಕ ಪುರಸ್ಕೃತ ಗಣ್ಯರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪುರಸ್ಕಾರಗಳನ್ನು ನೀಡಲಾಗುತ್ತದೆ. ೨೦೨೩ ರ ಪುರಸ್ಕಾರಗಳನ್ನು ಇಂದು ಪುರಸ್ಕೃತರಿಗೆ ಪ್ರದಾನಿಸಲಾಗಿದೆ. ಇದರಲ್ಲಿ ಆರು ಪದ್ಮ ವಿಭೂಷಣ, ಒಂಬತ್ತು ಪದ್ಮಭೂಷಣ ಮತ್ತು ೧೦೬ ಪದ್ಮಶ್ರೀ ಪ್ರಶಸ್ತಿಗಳನ್ನು ಅರ್ಹರಿಗೆ ನೀಡಲಾಗಿದೆ. ಪುರಸ್ಕಾರಕ್ಕೆ ಭಾಜನರಾದವರಲ್ಲಿ ಹತ್ತೊಂಬತ್ತು ಮಹಿಳೆಯರು, ಏಳು ಜನರಿಗೆ ಮರಣೋತ್ತರ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಪ್ರತಿ ವರ್ಷವೂ ಭಾರತದ ಅತ್ಯುತ್ತಮ ಪುರಸ್ಕಾರಗಳಲ್ಲಿ ಮುಖ್ಯ ಪುರಸ್ಕಾರಗಳಾದ ಪದ್ಮ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುತ್ತದೆ.

Tags

Related Articles

Close