ಪ್ರಚಲಿತ

ಅಯೋಧ್ಯೆಯ ಬಾಲರಾಮನ ನಿರ್ಮಾಣಕ್ಕೆ ಕಾರ್ಕಳದ ಕೃಷ್ಣಶಿಲೆ

ದೇಶ ವಿದೇಶದ ಬಹುಕೋಟಿ ಶ್ರೀರಾಮ ಭಕ್ತರ ಕನಸು ಮನ ಸಾಗುವ ಕಾಲ ಸನ್ನಿಹಿತವಾಗುತ್ತಿದೆ. ರಾಮ ಜನ್ಮ ಭೂಮಿ ಅಖೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ರಾಷ್ಟ್ರ ಮಂದಿರ ನಿರ್ಮಾಣ ಕಾರ್ಯ ಸಹ ಭರದಿಂದ ಸಾಗುತ್ತಿದೆ. ಈ ಭವ್ಯ ಆಲಯದಲ್ಲಿ ಪ್ರತಿಷ್ಟೆ ಮಾಡಿರುವ ಬಾಲ ರಾಮನ ಪ್ರಾಣ ಪ್ರತಿಷ್ಟೆಗಾಗಿ ವಿಗ್ರಹ ನಿರ್ಮಿಸಲು ಕರ್ನಾಟಕದ ಕಾರ್ಕಳದ ಶಿಲೆಯನ್ನು ಆಯ್ಕೆ ಮಾಡಲಾಗಿದೆ.

ಕಾರ್ಕಳದ ನೆಲ್ಲಿಕಾರಿನಿಂದ ಕೃಷ್ಣಶಿಲೆಯನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ಈ ಶಿಲೆಗೆ ವಿಶೇಷವಾದ ಪೂಜೆ ಸಲ್ಲಿಸಿ ರಾಮ ಜನ್ಮಭೂಮಿಗೆ ಕಳುಹಿಸಿಕೊಡಲಾಗಿದೆ. ಕಳೆದ ತಿಂಗಳಷ್ಟೇ ಅಯೋಧ್ಯೆಯಿಂದ ಪರಿಣತರ ತಂಡವೊಂದು ನೆಲ್ಲಿಕಾರಿಗೆ ಆಗಮಿಸಿ, ಶಿಲೆಯನ್ನು ಗುರುತಿಸಿ ತೆರಳಿತ್ತು. ಇದೀಗ ಈ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.

ಒಂಬತ್ತು ಟನ್ ತೂಕ ಹೊಂದಿರುವ ಈ ಶಿಲೆಯನ್ನು ಭೂಮಿಯಿಂದ ಬೇರ್ಪಡಿಸಿ, ಬಜಗೋಳಿಯ ಅಯ್ಯಪ್ಪ ಮಂದಿರಕ್ಕೆ ತಂದು, ಅದಕ್ಕೆ ಹಿಂದೂ ಸಂಘಟನೆಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಶಿಲೆಯು ೯ ಟನ್ ತೂಕ, ೯.೫ ಅಡಿ ಉದ್ದ, ೬ ಅಡಿ ಅಗಲ, ೪.೫ ಅಡಿ ದಪ್ಪವಿದ್ದು, ಟ್ರಕ್ ಮುಖಾಂತರ ಈ ಶಿಲೆಯನ್ನು ಬಹುದೂರದ ಅಯೋಧ್ಯೆಗೆ ಕಳುಹಿಸಿ ಕೊಡಲಾಗಿದೆ.‌

ಒಟ್ಟಿನಲ್ಲಿ ಕರ್ನಾಟಕದ ಕಾರ್ಕಳದ ಕಲ್ಲಿಗೂ ರಾಮನಾಲಯದಲ್ಲಿ ಮಾನ್ಯತೆ ಸಿಕ್ಕಿದ್ದು, ಬಹುಕೋಟಿ ಕನ್ನಡಿಗರಿಗೂ ಸಂತಸದ ವಿಷಯವಾಗಿದೆ.

Tags

Related Articles

Close