ಪ್ರಚಲಿತ

ಉಗ್ರರನ್ನು ಸಹೋದರರೆನ್ನುವವರಿಂದ ಬಜರಂಗ ದಳ ನಿಷೇಧವಂತೆ

ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. ಹಿಂದೂ ಗಳ ಭಾವನೆಗೆ ಧಕ್ಕೆ ಮಾಡುವ ಮೂಲಕ, ಹಿಂದೂಗಳ ಕೆಂಗಣ್ಣಿಗೆ ಗುಕಿಯಾಗುವಂತಹ ಕೆಲಸಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಸದಾ ಒಂದಿಲ್ಲೊಂದು ವಿವಾದವನ್ನು ತನ್ನ ಮೈಮೇಲೆ ಎಳೆದುಕೊಳ್ಳುತ್ತದೆ.‌ ಹಿಂದೂಗಳನ್ನು ಕೆರಳಿಸಿ ‌ವಿವಾದಗಳನ್ನು ಸೃಷ್ಟಿಸಿಕೊಳ್ಳುವುದು ಇದೇ ಹೊಸದೇನಲ್ಲ.

ಅಂದ ಹಾಗೆ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ಪಡೆದರೆ ಹಿಂದೂ ಸಂಘಟನೆಯಾದ ‘ಬಜರಂಗ ದಳ’ ವನ್ನು ನಿಷೇಧ ಮಾಡುವುದಾಗಿ ಹೇಳಿದೆ. ಸ್ವತಃ ಡಿಕೆಶಿ ಅವರೇ ಕಾಂಗ್ರೆಸ್ ಪಕ್ಷದ ಈ ನಿಲುವನ್ನು ಪ್ರಕಟಿಸಿಯೂ ಆಗಿದೆ. ಸಮಾಜಮುಖಿ ಕೆಲಸಗಳ ಮೂಲಕವೇ ಹಿಂದೂ ಧರ್ಮದ ಸೇವೆ ಮಾಡುವ, ಹಿಂದೂ ಸಮಾಜಕ್ಕೆ ಆಪತ್ತು ಬಂದರೆ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಕೆಲಸವನ್ನು ಬಜರಂಗ ದಳ ಮಾಡುತ್ತಿದೆ. ಇಂತಹ ಹಿಂದೂ ಸಂಘಟನೆಗಳಿಂದ ದೇಶಕ್ಕೆ ಯಾವುದೇ ರೀತಿಯ ಅಪಾಯವೂ ಈ ವರೆಗೆ ಆಗಿಲ್ಲ. ಆದರೂ ಕಾಂಗ್ರೆಸಿಗರು ಈ ಸಂಘಟನೆಯ ಮೇಲೆ ಯಾಕಿಷ್ಟು ದ್ವೇಷ ಬೆಳೆಸಿಕೊಂಡಿದ್ದಾರೆ, ಯಾಕೆ ಹಿಂದೂ ಸಂಘಟನೆಗಳ ಭಯ ಕಾಂಗ್ರೆಸ್‌ಗೆ ಇದೆ ಎನ್ನುವುದೇ ಸದ್ಯದ ಪ್ರಶ್ನೆ ಮತ್ತು ಕುತೂಹಲ.

ಡಿಕೆಶಿ ಅವರಿಗೆ, ಅವರ ಕಾಂಗ್ರೆಸ್ ಪಕ್ಷಕ್ಕೆ ಉಗ್ರರು ಸಹೋದರರಾಗುತ್ತಾರೆ. ಕೋಮುಗಲಭೆ ಸೃಷ್ಟಿಸಿ ಅಶಾಂತಿ ಸೃಷ್ಟಿಸುವ ಕೆಲ ಅಲ್ಪಸಂಖ್ಯಾತರ ಮೇಲೆ ಮಮತೆ ಉಕ್ಕಿ ಹರಿಯುತ್ತದೆ. ಉಗ್ರರ ವಿರುದ್ಧ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಅದಕ್ಕೆ ಸಾಕ್ಷ್ಯ ಕೇಳುತ್ತಾರೆ. ಆದರೆ ಭಾರತದಲ್ಲೇ ಇದ್ದು ಸಮಾಜಕ್ಕೆ, ದೇಶಕ್ಕೆ ಯಾವುದೇ ದ್ರೋಹ ಎಸಗದ, ಅಪಾಯ ತಂದೊಡ್ಡದ ಹಿಂದೂ ಸಂಘಟನೆಗಳು ಮಾತ್ರ ಕಾಂಗ್ರೆಸ್‌ಗೆ ರುಚಿಸುವುದಿಲ್ಲ ಎಂದರೆ, ಕಾಂಗ್ರೆಸ್ ಮನಸ್ಸು ಪಕ್ಕಾ ಉಗ್ರರ ಮನಸ್ಥಿತಿ ಉಳ್ಳದ್ದು ಎನ್ನುವುದು ಎಂತಹವರಿಗೂ ಅರ್ಥವಾಗುವ ವಿಷಯ.

ಹಿಂದೂ‌ಗಳ ಮೇಲೆ ಕೆಂಡ ಕಾರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಮಾಜದ ಶಾಂತಿ ಸೌಹಾರ್ದತೆ ಭಂಗವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಡಿಕೆಶಿ ಮತ್ತು ಕಾಂಗ್ರೆಸ್ ಪಕ್ಷದ ಇಂತಹ ಕುತಂತ್ರ ದೇವರಿಗೂ ಇಷ್ಟವಾಗಿಲ್ಲ ಎಂದಿನಿಸುತ್ತದೆ. ಅದೇ ಕಾರಣಕ್ಕೆ ಎಂಬಂತೆ ಆ ಹೇಳಿಕೆಯ ಕೆಲವೇ ಹೊತ್ತಿನಲ್ಲಿ ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಹದ್ದು ದಾಳಿ ನಡೆಸಿ, ತುರ್ತು ಭೂಸ್ಪರ್ಷ ಮಾಡಲಾಗಿದೆ. ಹೆಲಿಕಾಪ್ಟರ್ ಗಾಜು ಪುಡಿಯಾಗಿದೆ.

ಗರುಡನನ್ನು ವಿಷ್ಣುವಿನ ವಾಹನ ಎಂದೇ ನಂಬಲಾಗುತ್ತದೆ. ಬಜರಂಗಿ ಎಂದರೆ ಆಂಜನೇಯ. ಬಜರಂಗಿ ನಾಡಿನಲ್ಲಿ ನಿಂತು ಬಜರಂಗದಳ ನಿಷೇಧಿಸುವುದಾಗಿ ಹೇಳಿದವರಿಗೆ ಅದರ ಪರಿಣಾಮದ ಪರಿಚಯವನ್ನು ದೇವರೇ ಮಾಡಿಸಿದಂತಿದೆ. ಇದರ ದೊಡ್ಡ ಮಟ್ಟದ ಪರಿಣಾಮ ಮೇ ೧೦ ರಂದು ಮತ ಪೆಟ್ಟಿಗೆ ಸೇರಿ, ಮೇ ೧೩ ರಂದು ಪ್ರಕಟವಾಗಲಿದೆ. ಜಾಗೃತ ಹಿಂದೂ ಸಮಾಜ ಕಾಂಗ್ರೆಸ್ ನ ದುರುಳರನ್ನು ಈ ಚುನಾವಣೆಯಲ್ಲಿ ಮನೆಗೆ ಅಟ್ಟುವಂತಾಗಲಿ ಎನ್ನುವುದೇ ನಮ್ಮ ಆಶಯ.

Tags

Related Articles

Close