ಪ್ರಚಲಿತ

ನರೇಂದ್ರ ಮೋದಿಯವರ ಒಂದು ಉಪಕ್ರಮ ಮತ್ತು ಸೌದಿಯ ಮೊತ್ತ ಮೊದಲ ಯೋಗಾಚಾರಿಣಿ ನೌಫ್ ಮಾರ್ವಾಯ್ ಅವರ ಶತಪ್ರಯತ್ನದಿಂದಾಗಿ ಇಂದು ಮಕ್ಕಾ-ಮದೀನಾದಲ್ಲೂ ಯೋಗಾಭ್ಯಾಸ ನಡೆಯುವಂತಾಗಿದೆ!!

ಒಂದಲ್ಲ ಎರಡಲ್ಲ ಬರೋಬ್ಬರಿ ಇಪ್ಪತ್ತು ವರ್ಷಗಳ ಸಂಘರ್ಷಗಳ ಬಳಿಕ ನೌಫ್ ಮಾರ್ವಾಯ್ ಎಂಬ ಮುಸ್ಲಿಂ ಮಹಿಳೆ ಇಸ್ಲಾಮಿನ ಭೂಮಿ, ಸೌದಿ ಅರೇಬಿಯಾದ ಮೊತ್ತ ಮೊದಲ ‘ಯೋಗಾಚಾರಿಣಿ’ ಎನಿಸಿಕೊಳ್ಳುತ್ತಾರೆ. ಕಟ್ಟರ್ ಮುಸ್ಲಿಂ ದೇಶದಲ್ಲಿ ಭಾರತದ ಯೋಗವನ್ನು ಪ್ರಚಾರ-ಪ್ರಸಾರ ಮಾಡುವುದು ಸುಲಭದ ಮಾತಾಗಿರಲಿಲ್ಲ. ಇದಕ್ಕಾಗಿ ನೌಫ್ ಪಟ್ಟ ಕಷ್ಟ ಎಷ್ಟಿರಬಹುದು ಎನ್ನುವುದನ್ನು ನಾವು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.

ನೌಫ್ ನ ಪರಿವಾರ ಸದಾ ಆಕೆಯ ಬೆನ್ನುಲುಬಾಗಿ ನಿಂತಿದ್ದರಿಂದ ಇದು ಸಾಧ್ಯವಾಯಿತೆನ್ನುತ್ತಾರೆ ಆಕೆ. ಸ್ವತಃ ನೌಫ್ ಅವರ ತಂದೆ ಮೊಹಮ್ಮದ್ ಮರ್ವಾಯ್ ಒಬ್ಬ ಕ್ರೀಡಾಪಟು ಮತ್ತು ಸುಮಾರು 45 ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಸಮರ ಕಲೆಗಳನ್ನು ತಂದಿದ್ದರು. ತಂದೆಯ ಸಂಪೂರ್ಣ ಸಹಕಾರ ಇದ್ದುದರಿಂದಲೇ ನೌಫ್ ಅಸಾಧ್ಯವಾದದ್ದನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಒಂದು ಸ್ತ್ರೀ ಸ್ವಾತ್ರಂತ್ರ್ಯಕ್ಕೆ ಮಹತ್ವ ಕೊಡದಂತಹ, ಉಗ್ರ ಇಸ್ಲಾಮಿನ ಪ್ರತಿಪಾದಕ ದೇಶದಲ್ಲಿ ಒಬ್ಬ ಮಹಿಳೆ ಯೋಗವನ್ನು ಪ್ರಚುರ ಪಡಿಸುವುದು, ಸುಲಭದ ಮಾತಾಗಿರಲಿಲ್ಲ.

ಸರಿ ಸುಮಾರು ಇಪ್ಪತ್ತು ವರ್ಷಗಳ ಗುದ್ದಾಟದ ಬಳಿಕ ಇಂದು ನೌಫ್ ಸೌದಿಯ ಮೊತ್ತ ಮೊದಲ ಪ್ರಮಾಣೀಕರಿಸಿದ ಯೋಗಾಚಾರಿಣಿ! ಇಂದು ಇಸ್ಲಾಮಿನ ಜನನಿ, ಪೈಂಗಬರರ ಭೂಮಿ ಮೆಕ್ಕಾ-ಮದೀನಾದಲ್ಲೂ ಯೋಗಾಭ್ಯಾಸ ನಡೆಸಲಾಗುತ್ತದೆ ಎಂದರೆ ನೌಫ್ ನ ಸಾಧನೆಗೊಂದು ಸಲಾಂ ಎನ್ನಲೆಬೇಕು. ನೌಫ್ ನ ಪ್ರಯತ್ನ ಮತ್ತು ಹೋರಾಟವನ್ನು ಶ್ಲಾಘಿಸಿದ ಅಧ್ಯಕ್ಷ ರಾಮ್ ನಾಥ್ ಕೋವಿಂದ್, ಇತ್ತೀಚೆಗೆ ತನ್ನ ದೇಶದಲ್ಲಿ ಪ್ರಾಚೀನ ಭಾರತೀಯ ಯೋಗದ ಅಭ್ಯಾಸವನ್ನು ಜನಪ್ರಿಯಗೊಳಿಸಿರುವುದಕ್ಕಾಗಿ ಆಕೆಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಸೌದಿಯಲ್ಲಿ ಯೋಗಾಭ್ಯಾಸ ಮಾಡಿಸುತ್ತಿದ್ದ ಪ್ರಪ್ರಥಮ ಮತ್ತು ಏಕೈಕ ಮಹಿಳೆ ನಾನು, ಯೋಗದ ಬಗ್ಗೆ ಬಹಿರಂಗವಾಗಿ ಮಾತನಾಡಲು ಶುರುಮಾಡಿದ್ದೇ 2004ರ ಬಳಿಕ ಎನ್ನುತ್ತಾ ತಮ್ಮ ಸಂಘರ್ಷದ ವಿವರವನ್ನು ಬಿಚ್ಚಿಡುತ್ತಾರೆ ನೌಫ್. ಯೋಗ ಎಂದರೇನೆಂದೆ ಇಲ್ಲಿ ಹಲವರಿಗೆ ಗೊತ್ತಿರಲಿಲ್ಲ, ಆದ್ದರಿಂದ ಯೋಗವನ್ನು ಕಾನೂನು ಬದ್ದಗೊಳಿಸುವ ತನ್ನ ಪ್ರಯತ್ನಕ್ಕೆ ಇಲ್ಲಿನ ಅಧಿಕಾರಿಗಳು ಸೊಪ್ಪು ಹಾಕುತ್ತಿರಲಿಲ್ಲ ಎನ್ನುತ್ತಾರೆ ಆಕೆ. ಅಲ್ಲದೆ ಸ್ತ್ರೀ ಸ್ವಾತಂತ್ರ್ಯವನ್ನ್ನು ನಿರಾಕರಿಸುವ ಉಗ್ರಗಾಮಿ ತತ್ವಗಳು ಯೋಗಭ್ಯಾಸ ಮಾಡಕೂಡದೆಂದು ಆಕೆಯ ಮೇಲೆ ಒತ್ತಡವನ್ನೂ ಹೇರುತ್ತಿದ್ದವು. ಆದರೂ ಆಕೆ ಛಲಬಿಡದೆ ಯೋಗವನ್ನು ಕಲಿಸಿಕೊಡುತ್ತಿದ್ದರು ಮತ್ತು ಸೌದಿಯಲ್ಲಿ ಯೋಗವನ್ನು ಪ್ರಚುರ ಪಡಿಸಲು ಹೆಣಗಾಡುತ್ತಿದ್ದರು. 2006 ರಲ್ಲಿ ಆಕೆಯ ಪ್ರಯತ್ನಕ್ಕೆ ತಣ್ಣೀರೆರಚಿದ್ದ ಸೌದಿಯ ಅಧಿಕಾರಿಗಳು, 2015 ರಲ್ಲಿ ಬದಲಾಗುತ್ತಾರೆ! ಹೇಗೆ ಗೊತ್ತೆ?

ನರೇಂದ್ರ ಮೋದಿಯಿಂದಾಗಿ!! ಹೌದು, ಯೋಗವನ್ನು ವಿಶ್ವ ಮಂಚದಲ್ಲಿ ಪ್ರಚುರ ಪಡಿಸುವ ಪ್ರಧಾನಿ ಮೋದಿ ಅವರ ಪ್ರಯತ್ನದಿಂದಾಗಿ ವಿಶ್ವ ಸಂಸ್ಥೆಯು ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತು. ಇದೆ ಸಂಧರ್ಭದಲ್ಲಿ ಸೌದಿಯ ಜೆಡ್ಡಾದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕೃತವಾಗಿ ಮತ್ತು ಸಾರ್ವಜನಿಕವಾಗಿ ಯೋಗಭ್ಯಾಸವನ್ನು ಕೈಗೊಳ್ಳಲಾಯಿತು ಎನ್ನುತ್ತಾರೆ ನೌಫ್ ಮಾರ್ವಾಯ್. ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಸಹಾಯದಿಂದ ಹಲವಾರು ಯೋಗ ಕಾರ್ಯಕ್ರಮಗಳನ್ನು ಹಮ್ಮಿ ‘ಅರಬ್ ಯೋಗ ಫೌಂಡೇಶನ್’ ಮೂಲಕ ಸೌದಿಯಲ್ಲಿ ಯೋಗವನ್ನು ಪ್ರಚುರ ಪಡಿಸಲಾಯಿತು ಎನ್ನುತ್ತಾರೆ ಆಕೆ. ಒಬ್ಬ ಮೋದಿಯಿಂದಾಗಿ ಪ್ರಪಂಚದಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗಳಾದವು ನೋಡಿ!!

ಒಬ್ಬ ಮುಸ್ಲಿಂ ವ್ಯಕ್ತಿ, ಯೋಗಾಚಾರ್ಯ ಅಥವಾ ಯೋಗಾಚಾರಿಣಿ ಆಗಬಹುದೆ ಎನ್ನುವ ಪ್ರಶ್ನೆಗೆ ನೌಫ್ ಹೌದು ನಾವು ಏಕಕಾಲಕ್ಕೆ ಎರಡೂ ಆಗಿರಬಹುದು ಎನ್ನುವ ಉತ್ತರ ನೀಡುತ್ತಾರೆ. ಯೋಗ ಧರ್ಮಕ್ಕೆ ಸಂಬಂಧ ಪಟ್ಟದ್ದಲ್ಲ, ಅದು ಒಂದು ವಿಜ್ಞಾನ, ಪ್ರಪಂಚದ ಇನ್ನಾವುದೇ ಪ್ರಾಚೀನ ಕ್ರೀಡೆಯಂತೆಯೆ ಯೋಗ ಕೂಡ, ಇದರಲ್ಲಿ ಧರ್ಮದ ಮಾತೆಲ್ಲಿಂದ ಬರುತ್ತದೆ ಎನ್ನುತ್ತಾರೆ ನೌಫ್. ಯೋಗದ ಬಳಿಕ ಈಗ ಭಾರತೀಯ ಆಯುರ್ವೇದ ಪದ್ದತಿಯೂ ನಿಧಾನವಾಗಿ ಸೌದಿಯ ಮುಖ್ಯಧಾರೆಯ ಚಿಕಿತ್ಸೆಯಲ್ಲಿ ಜಾಗ ಪಡೆಯುತ್ತಿದೆ ಎನ್ನುತ್ತಾ ತಮ್ಮ ರಾಜ ಅಬ್ದುಲ್ ಅಜೀಜ್ ಮತ್ತು ರಾಜಕುಮಾರ ಸಲ್ಮಾನ್ ಬಿನ್ ಅವರ ಉದಾರವಾದಿ ಇಸ್ಲಾಮಿನ ಪ್ರತಿ ಆಸ್ಥೆಯನ್ನು ಹೊಗಳುತ್ತಾರೆ ನೌಫ್ ಮಾರ್ವಾಯ್.

ಸುಮಾರು 10 ವರ್ಷಗಳಿಂದ ಭಾರತ ಮತ್ತು ಸೌದಿಯೊಂದಿಗೆ ಬಾಂಧವ್ಯ ಹೊಂದಿರುವುದರಿಂದ ನರೇಂದ್ರ ಮೋದಿಯವರನ್ನು ಮತ್ತು ಭಾರತವನ್ನು ಸೌದಿಯ ಜನರು ಎಷ್ಟು ಗೌರವದಿಂದದ ಕಾಣುತ್ತಾರೆ ಎನ್ನುವುದು ನನಗೆ ಗೊತ್ತು. ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಮತ್ತು ಅವರ ವಿದೇಶಿ ನೀತಿ ಬಹಳ ಆಕರ್ಷಕವಾಗಿವೆ, ವಿಶೇಷವಾಗಿ ಯೋಗವನ್ನು ವಿಶ್ವಸಂಸ್ಥೆಗೆ ಕೊಂಡುಹೋಗುವ ಅವರ ಅಭೂತ ಪೂರ್ವ ಪ್ರಯತ್ನದಿಂದಾಗಿ ನಾನು ಅವರ ಬಗ್ಗೆ ಹೆಚ್ಚು ತಿಳಿಯಲ್ಪಟ್ಟೆ ಹಾಗೂ ಸೌದಿ ಅರೇಬಿಯಾದಲ್ಲಿನ ಅನೇಕ ಯೋಗಿಗಳು ಮತ್ತು ಜನರಿಗೆ ಅವರ ಕೆಲಸ ಮತ್ತು ಪಾತ್ರದ ಬಗ್ಗೆ ತಿಳಿದಿದೆ ಎಂದು ನಾನು ಆಶ್ಚರ್ಯ ಪಡುತ್ತೇನೆ ಎನ್ನುತ್ತಾರೆ ನೌಫ್. ನರೇಂದ್ರ ಮೋದಿ ಅವರು ಖುದ್ದು ಈಕೆಯ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುವುದು ತನ್ನ ಜೀವನದ ಸಂತೋಷದ ಕ್ಷಣ ಎನ್ನುತ್ತಾರೆ ನೌಫ್ ಮಾರ್ವಾಯಿ.

-ಶಾರ್ವರಿ

Tags

Related Articles

Close