ಪ್ರಚಲಿತ

ಬ್ರೇಕಿಂಗ್! ಮಮತಾ ಬ್ಯಾನರ್ಜಿ ದೂರಿಗೆ ಡಿಜಿ-ಐಜಿಪಿಯನ್ನೇ ಬದಲಾಯಿಸಲು ಹೊರಟ ಕುಮಾರ ಸ್ವಾಮಿ ಹಾಗೂ ದೇವೇಗೌಡ..!ಕನ್ನಡತಿಗೆ ಬೆಲೆ ಇಲ್ಲದಂತಾಯಿತೇ..?

ಕಾಂಗ್ರೆಸ್ ಆಡಳಿತದಿಂದ ರೋಸಿ ಹೋಗಿದ್ದ ಜನತೆ ಭಾರತೀಯ ಜನತಾ ಪಕ್ಷವನ್ನು ಅತಿದೊಡ್ಡ ಪಕ್ಷವಾಗಿ ಬೆಂಬಲಿಸಿ ಸರ್ಕಾರ ಬದಲಾವಣೆಗೆ ಒತ್ತು ನೀಡಿದ್ದರು. ಆದರೆ ಸ್ವಲ್ಪದರಲ್ಲೇ ಬಹುಮತವನ್ನು ಕಳೆದುಕೊಂಡ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲು ಅಸಾಧ್ಯವಾಯಿತು. ಹೀಗಾಗಿ ಉಳಿದೆರಡು ಪಕ್ಷಗಳಾದ ಕಾಂಗ್ರೆಸ್ ಹಾಗೂ ಜನತಾ ದಳ ಒಟ್ಟುಗೂಡಿ ಸರ್ಕಾರ ರಚನೆಗೆ ಮುಂದಾಗಿ ಇದೀಗ ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿ ಪ್ರಮಾಣ ವಚನ ಸ್ವೀಕರಿಸಿಯೂ ಆಗಿದೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ಉತ್ತಮ ಮುಖ್ಯಮಂತ್ರಿಯಾಗಬಹುದು ಎಂದು ಜನತೆ ಭಾವಿಸಿದ್ದರು. ಆದರೆ ಈ ಊಹೆಯನ್ನು ನೂತ ಮುಖ್ಯಮಂತ್ರಿ ಕುಮಾರ ಸ್ವಾಮಿ ಹುಸಿ ಮಾಡಿದ್ದಾರೆ. ಆರಂಭದ ಸುದ್ಧಿಗೋಷ್ಟಿಯಲ್ಲೇ ಮಠಾಧೀಶರ ವಿರುದ್ಧ ಮಾತನಾಡಿ ಅವರಿಗೆ ಎಚ್ಚರಿಕೆಯನ್ನೂ ನೀಡಿ ಮತ್ತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾದಿಯನ್ನು ತುಳಿಯುವತ್ತ ಹೆಜ್ಜೆ ಹಾಕುತ್ತಿದ್ದುದು ಸ್ಪಷ್ಟವಾಗಿದೆ. ಈ ಮಧ್ಯೆ ಇದೀಗ ಮತ್ತೊಂದು ಲೋಪವನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಎಸಗಲಿದ್ದಾರೆ.

ಡಿಐಜಿಯನ್ನೇ ಬದಲಾಯಿಸಲು ಹೊರಟ ಕುಮಾರ ಸ್ವಾಮಿ..!

ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ನಡೆದ ಸಣ್ಣ ವ್ಯತ್ಯಾಸಕ್ಕೆ ಡಿಜಿಪಿಯನ್ನೇ ಬದಲಾಯಿಸಲು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸರ್ಕಾರ ನಿರ್ಧರಿಸಿದೆ. ಪ್ರಮಾಣ ವಚನ ಸಮಾರಂಭದ ವೇಳೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಸಮಾರಂಭ ಆರಂಭಕ್ಕೂ ಮುನ್ನವೇ ಭಾರೀ ಗಾಳಿ ಮಳೆಯಿಂದ ಸಮಾರಂಭದ ಆವರಣ ಅಸ್ತವ್ಯಸ್ತವಾಗಿತ್ತು. ಆದರೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಮತ್ತೆ ಸಮಾರಂಭ ನಡೆಸಲು ಅನುಕೂಲವಾಗಿದೆ.

ಆದರೆ ಈ ಮಧ್ಯೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಡಿಐಜಿ ನೀಲಮಣಿ ರಾಜು ವಿರುದ್ದ ಗರಂ ಆಗಿದ್ದರು. ಪ್ರಮಾಣ ವಚನ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಗೆ ಗೌರವ ನಮನ ಸಲ್ಲಿಸಲು ತೆರಳಿದ ನೀಲಮಣಿ ರಾಜು ಅವರಿಗೆ ಮಮತಾ ಕ್ಲಾಸ್ ತೆಗದುಕೊಂಡಿದ್ದಾರೆ. ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ತುಸು ದೂರ ಮಮತಾ ಬ್ಯಾನರ್ಜಿ ಅವರು ನಡೆದುಕೊಂಡೇ ವೇದಿಕೆ ಬಳಿ ಬಂದಿದ್ದರಂತೆ. ಇದು ಮಮತಾ ಬ್ಯಾನರ್ಜಿಗೆ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.

Image result for kumaraswamy

ಹೀಗಾಗಿ ಗೌರವ ವಂದನೆ ಸಲ್ಲಿಸಲು ಆಗಮಿಸಿದ್ದ ಡಿಐಜಿ ನೀಲಮಣಿ ರಾಜು ವಿರುದ್ದ ಮಮತಾ ಗರಂ ಆಗಿದ್ದರು. ಮಾತ್ರವಲ್ಲದೆ ಈ ದೂರನ್ನು ಸ್ವತಃ ಮಾಜಿ ಪ್ರಧಾನಿ ಹಾಗೂ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಬಳಿ ಹೇಳಿಕೊಂಡಿದ್ದಾರೆ. ದೂರದ ನೆಂಟಳ ದೂರು ಕೇಳಿದ ದೇವೇಗೌಡ ಹಾಗೂ ಕುಮಾರ ಸ್ವಾಮಿ ಇದೀಗ ಕನ್ನಡಿಗಳ ರಕ್ಷಣೆಯನ್ನು ಬಿಟ್ಟು ಪಶ್ಚಿಮದವಳ ಮಾತು ಕೇಳಲು ಮುಂದಾಗಿದ್ದಾರೆ.

ಡಿಐಜಿ ನೀಲಮಣಿಯನ್ನು ವರ್ಗಾವಣೆ ಮಾಡಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ಕುಮಾರ ಸ್ವಾಮಿಯವರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿಯವರು ನೀಲಮಣಿಯನ್ನು ವರ್ಗಾವಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸೋಮವರವೇ ನೀಲಮಣಿಯವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ ಹೊಸ ಡಿಐಜಿ ನೇಮಕಕ್ಕೆ ಮುಂದಾಗಿದ್ದಾರೆ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೀಲಮಣಿ ವಿರುದ್ಧ ರೇಗಾಡಿದಾಗಲೂ ಸುಮ್ಮನಿದ್ದ ದೇವೇಗೌಡ ಹಾಗೂ ಕುಮಾರ ಸ್ವಾಮಿ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳೇ ಕೇಳಿ ಬರುತ್ತಿದೆ. ಕನ್ನಡತಿಯನ್ನು ರಕ್ಷಿಸಲಾಗದ ಈ ನಾಯಕರು ನಮಗೇಕೆ ಬೇಕು ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಮಾತ್ರವಲ್ಲದೆ ಡಿಐಜಿ ನೀಲಮಣಿಯವರನ್ನು ಮಮತಾ ನಿಂದಿಸಿದ ವೀಡಿಯೋ ಕೂಡಾ ವೈರಲ್ ಆಗಿದೆ. 

ಕನ್ನಡಿಗರ ರಕ್ಷಣೆ ಮಾಡುತ್ತೇನೆ ಎಂದು ಹೇಳುತ್ತಲೇ ಬಂದಿರುವ ಕುಮಾರ ಸ್ವಾಮಿ ಅಧಿಕಾರ ಹಿಡಿದ ಕೂಡಲೇ ಕನ್ನಡತಿಗೆ ಆದ ಅವಮಾನವನ್ನು ಸರಿಪಡಿಸುವುದನ್ನು ಬಿಟ್ಟು ಮತ್ತೆ ಆಕೆಯನ್ನು ವರ್ಗಾವಣೆ ಮಾಡುವ ಮೂಲಕ ಆಕೆಗೆ ಮಹಾವಮಾನ ಮಾಡಲು ಹೊರಟಿದ್ದಾರೆ. ಕುಮಾರ ಸ್ವಾಮಿಯವರ ಈ ನಿಲುವೇ ಮುಂದೆ ಸರ್ಕಾರದ ಅಧಃಪತನಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

-ಏಕಲವ್ಯ

Tags

Related Articles

Close