ಪ್ರಚಲಿತ

ಜಾಗತಿಕ ಹಸಿವು ನಿವಾರಣೆಗೆ IBSA ಫಂಡ್‌ಗೆ 1 ಮಿಲಿಯನ್ US ಡಾಲರ್ ನೆರವು ನೀಡಿದ ಭಾರತ

ಹಸಿವು ಜೀವ ಸಂಕುಲವನ್ನು ಮನಬಂದಂತೆ ಆಟವಾಡಿಸುತ್ತದೆ. ಹಸಿವಿನ ಕಾರಣದಿಂದ ಅದೆಷ್ಚೋ ಜೀವ ರಾಶಿಗಳು ‌ಮುರಣವನ್ನಪ್ಪುತ್ತವೆ. ಇದಕ್ಕೆ ಮನುಷ್ಯನೂ ಹೊರತಲ್ಲ.

ಭಾರತ ದಂತಹ ಅನೇಕ ದೇಶಗಳಲ್ಲಿ ಬಡತನ ಮತ್ತು ಇತರ ಕಾರಣಗಳಿಂದ ಹಸಿವು ಎಂಬ ಸಮಸ್ಯೆ ಇನ್ನೂ ಜೀವಂತವಾಗಿದೆ. ಪ್ರಧಾನ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಬಡಜನರ ಹಸಿವು ನೀಗಿಸುವ ನಿಟ್ಚಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವುದು ‌ಎಲ್ಲರಿಗೂ ತಿಳಿದ ವಿಷಯ.

ಸದ್ಯ ಕೇಂದ್ರ ಸರ್ಕಾರ ಹಸಿವು ಮತ್ತು ಬಡತನಗಳನ್ನು ವಿಶ್ವದಿಂದ ಮುಕ್ತವಾಗಿಸಲು ಹೊರಟಿದೆ. ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ‌ ಸೇರಿಕೊಂಡು ಸ್ಥಾಪನೆ ಮಾಡಿರುವ ಬಡತನ ಮತ್ತು ಹಸಿವು ನಿವಾರಣಾ ನಿಧಿಗೆ ಭಾರತವು ಒಂದು ಮಿಲಿಯನ್ ಯುಎಸ್ ಡಾಲರ್‌ಗಳನ್ನು ಕೊಡುಗೆ ನೀಡಿದೆ.‌

ಈ ಬಗ್ಗೆ ಯುಎನ್‌ನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಭಾರತದ ಪರ ದಕ್ಷಿಣ – ದಕ್ಷಿಣ ಸಹಕಾರಕ್ಕಾಗಿ ದಿಮಾ ಆಲ್ ಖತೀಬ್‌ಗೆ ಚೆಕ್ ಹಸ್ತಾಂತರ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ಜಾಗತಿಕವಾಗಿ ದಕ್ಷಿಣದೆಲ್ಲೆೆಡೆ IBSA ನಿಧಿಯು ಲಕ್ಷಾನುಲಕ್ಷ ಜನರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ದಕ್ಷಿಣ- ದಕ್ಷಿಣ ಸಹಕಾರದ ಉತ್ಸಾಹವನ್ನು ಇದು ಹೆಚ್ಚಿಸಿದ್ದು, ಭಾರತ ಎಂದಿಗೂ ತನ್ನ ಬೆಂಬಲವನ್ನು ಈ ಸಹಕಾರಕ್ಕೆ ನೀಡಲು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಭಾರತದ ಜಿ 20 ಅಧಯಕ್ಷೀಯ ಗಮನವು ಜನರ ಅಭಿವೃದ್ಧಿ, ಜನರಿಂದ ಜನರಿಗಾಗಿಯೇ ಇತ್ತು ಎಂದು ಅವರು ದೃಢಪಡಿಸಿದ್ದಾರೆ.

ಒಟ್ಟಿನಲ್ಲಿ ಭಾರತ ದೇಶದೊಳಗಿನ ಜನರ ಹಸಿವು, ಬಡತನ ನಿವಾಕಣೆಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದು, ಆ ಮೂಲಕ ದೇಶವನ್ನು ಹಸಿವು ಮುಕ್ತ ಮತ್ತು ಸಶಕ್ತಗೊಳಿಸಲು ಕ್ರಮ ಕೈಗೊಂಡಿದೆ. ಜೊತೆಗೆ ಜಾಗತಿಕ ಹಸಿವಿಗೂ ನೆರವು ನೀಡಿದ ಭಾರತದ ಕ್ರಮ ಶ್ಲಾಘನೀಯ ಎನ್ನಬಹುದು.

Tags

Related Articles

Close