ಪ್ರಚಲಿತ

ದೇಶದ ಆರ್ಥಿಕತೆ ಬೆಳವಣಿಗೆಯ ನಿರಂತರತೆಯನ್ನು ಕಾಯ್ದುಕೊಂಡಿದ್ದೇವೆ: ನಿರ್ಮಲಾ ಸೀತಾರಾಮನ್

ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ.ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸಭೆಯಲ್ಲಿ ಮಾತನಾಡಿದ್ದಾರೆ.

ಪ್ರಸ್ತುತ ಭಾರತದ ಹಣಕಾಸು ಸ್ಥಿತಿ, ಆರ್ಥಿಕ ನೀತಿಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧ ಎಂದು ಅವರು ಹೇಳಿದ್ದಾರೆ.

ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಹಾಗೆ ವಿರೋಧ ಪಕ್ಷ ಕಾಂಗ್ರೆಸ್‌ ನಾಯಕ ಮತ್ತು ಸಂಸದ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದು, ಈ ಟೀಕೆಗಳಿಗೆ ಸಚಿವೆ ಉತ್ತರ ನೀಡಿದ್ದಾರೆ. ಭಾರತದ ದ್ವಿತೀಯ ತ್ರೈಮಾಸಿಕದ ಹಣಕಾಸಿನ ಸ್ಥಿತಿ ಗತಿ ವಿಶ್ವದಲ್ಲಿಯೇ ಅತ್ಯಂತ ಅಧಿಕವಾಗಿರುವುದಾಗಿದೆ. ಇದು ಭಾರತ ವೇಗವಾಗಿ ಬೆಳೆಯುತ್ತಿದೆ, ಇಲ್ಲಿನ ಆರ್ಥಿಕತೆ ಬೆಳೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ದೇಶದ ಆರ್ಥಿಕತೆಯ ಬಗ್ಗೆ ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸಿರುವ ಕಳವಳದ ಬಗ್ಗೆ ಮಾತನಾಡಿರುವ ಸಚಿವೆ, ದೇಶದ ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವ ಸಂಬಂಧ ಸರ್ಕಾರದ ನಿಲುವನ್ನು ಸ್ಪಷ್ಟ ಪಡಿಸಿದರು. ಕೇಂದ್ರ ಸರ್ಕಾರವು ಮುಕ್ತವಾಗಿ ಆರ್ಥಿಕ ನೀತಿಗಳ ಬಗ್ಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಮುಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಂಭವನೀಯ ಚರ್ಚೆಗಳನ್ನು ನಡೆಸಲಿದೆ. ನಮ್ಮ ಸರ್ಕಾರ ಆರ್ಥಿಕತೆಗಳ ಬಗ್ಗೆ ಚರ್ಚೆ ನಡೆಸಲು ಹಿಂಜರಿಯುವುದಿಲ್ಲ. ಈ ಸ್ಪಷ್ಟನೆಯನ್ನು ‌ನಾವು ನೀಡುತ್ತೇವೆ. ನಮ್ಮ ದ್ವಿತೀಯ ತ್ರೈಮಾಸಿಕದ ಆರ್ಥಿಕತೆ ತುಂಬಾ ಉತ್ತಮವಾಗಿದೆ. ವಿಶ್ವದಲ್ಲಿಯೇ ನಮ್ಮ ಆರ್ಥಿಕತೆ ಅತ್ಯಧಿಕವಾಗಿದೆ. ವೇಗವಾಗಿ ಬೆಳೆಯುತ್ತಿರುವ ನಮ್ಮ ದೇಶದ ಆರ್ಥಿಕತೆಯನ್ನು ನಾವು ನಿರಂತರವಾಗಿ ಉಳಿಸಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

Tags

Related Articles

Close