ಪ್ರಚಲಿತ

ಸರಕು ರಫ್ತಿನಲ್ಲಿ ಸೇವಾ ವಲಯವನ್ನು ಮೀರಿಸಿದೆ ಭಾರತ

ಇಡೀ ವಿಶ್ವವೇ ‌ಕೊರೋನಾ ಮಾರಕ ಸೋಂಕಿನ ಬಳಿಕ ಹಲವಾರು ಬದಲಾವಣೆಗಳಿಗೆ ತೆರೆದುಕೊಂಡಿದೆ. ಕೆಲವು ರಾಷ್ಟ್ರಗಳು ಈ ಅವಧಿಯ ಬಳಿಕ ಚೇತರಿಸಿಕೊಳ್ಳುವುದಕ್ಕೆ ‌ಕಷ್ಟ ಪಡುತ್ತಿದ್ದರೆ ಭಾರತ ಮಾತ್ರ ಎಲ್ಲಾ ರಾಷ್ಟ್ರಗಳು ಮೂಗಿಗೆ ಹೊರ ಸೇರಿಸುವ ಹಾಗೆ ಅಭಿವೃದ್ಧಿಯ ವಿಷಯದಲ್ಲಿ ವಿಷಮ ಪರಿಸ್ಥಿತಿಯನ್ನು ಸಹ ಹತೋಟಿಗೆ ತೆಗೆದುಕೊಂಡು, ದೇಶವನ್ನು ಪ್ರಗತಿಯ ಹಾದಿಯಲ್ಲಿ ತೆಗೆದುಕೊಂಡು ಹೋದದ್ದು ನಿಜಕ್ಕೂ ಅಚ್ಚರಿಯೇ ಹೌದು.

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ದೇಶದ ಗೌರವವನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದೆ. ಅಲ್ಲದೆ ಭಾರತ ಸಹ ಇಂದು ವಿಶ್ವಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸುವಷ್ಟರ ಮಟ್ಟಿಗೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಭಾರತ ಇಂದು ಹಲವಾರು ಮೌಲ್ಯಯುತ ಉತ್ಪನ್ನಗಳನ್ನು ಉತ್ಪಾದಿಸುವುದರ ಜೊತೆಗೆ, ಅದರ ರಫ್ತಿನಲ್ಲಿಯೂ ಮುಂಚೂಣಿ ಸಾಧಿಸಿದೆ. ಇದು ದೇಶದ ಪ್ರಗತಿಗೆ ಹಿಡಿದ ಕೈಗನ್ನಡಿ ಎನ್ನಬಹುದು.

ಸರಕು ವಲಯದ ರಫ್ತಿಗೆ ಸಂಬಂಧಿಸಿದ ಹಾಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿದ್ದು, ಸರಕು ವಲಯವು ಪ್ರಪ್ರಥಮ ಬಾರಿಗೆ ರಫ್ತಿಗೆ ಸಂಬಂಧಿಸಿದ ಹಾಗೆ ಸೇವಾ ವಲಯವನ್ನು ಮೀರಿಸಿರುವುದಾಗಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಉಪಕ್ರಮದಿಂದಾಗಿ ಈ ಸಾಧನೆ ನಮ್ಮಿಂದ ಸಾಧ್ಯವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಫ್ತು 762 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ. ಸರಕುಗಳ ರಫ್ತು 454 ಬಿಲಿಯನ್ ಡಾಲರ್‌ಗೆ ತಲುಪಿದೆ. ಭಾರತ ಶೀಘ್ರವೇ ಒಂದು ಟ್ರಿಲಿಯನ್ ಡಾಲರ್‌ ರಫ್ತು ತಲುಪಲಿದೆ ಎಂದು ಅವರು ತಿಳಿಸಿದ್ದಾರೆ. ಮೇಕ್ ಇನ್ ಇಂಡಿಯಾ ಉಪಕ್ರಮದಿಂದ ಭಾರತ ರಫ್ತಿನಲ್ಲಿ ನಾಲ್ಕನೇ ಸ್ಥಾನ ತಲುಪಿರುವುದಾಗಿ ಅವರು ಹೇಳಿದ್ದಾರೆ.

ಯಾವ ವಸ್ತುಗಳನ್ನು ಈ ಹಿಂದೆ ನಾವು ವಿದೇಶಗಳಿಂದ ಆಮದು ಮಾಡುವ ಅನಿವಾರ್ಯತೆ ಇತ್ತೋ, ಇಂದು ಅದೇ ವಸ್ತುಗಳನ್ನು ನಾವು ರಫ್ತು ಮಾಡುವ ಮಟ್ಟಿಗೆ ನಮ್ಮ ಸಾಮರ್ಥ್ಯ ಬೆಳೆಸಿಕೊಂಡಿದ್ದೇವೆ ಎಂದರೆ, ಅದು ನಮ್ಮ ದೇಶದ ಸಾಮರ್ಥ್ಯ ಇಂದು ಅತ್ಯಂತ ಸೂಕ್ತ ಮತ್ತು ಸರಿಯಾದ ಮುಮದಾಲೋಚನೆಯುಳ್ಳ ವ್ಯಕ್ತಿಯ ಕೈಯಲ್ಲಿದೆ. ದೇಶ ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ. ದೇಶದ ಶಕ್ತಿ‌ ಯ ಪರಿಚಯ ಇಡೀ ವಿಶ್ವಕ್ಕಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

Tags

Related Articles

Close