ಪ್ರಚಲಿತ

ದೇಶದ 10 ಸಾವಿರ ವಿದ್ಯಾರ್ಥಿಗಳಿಗೆ ಬಂಪರ್ ಭಾಗ್ಯ ಘೋಷಿಸಿದ ಮೋದಿ!! ಜಗದೊಡೆಯನನ್ನು ಕಾಣಲಿದ್ದಾರೆ ಈ ಅದೃಷ್ಟವಂತ ವಿದ್ಯಾರ್ಥಿಗಳು!!

ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೇಳಿದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುವುದಂತೂ ಖಂಡಿತ!! ನರೇಂದ್ರ ಮೋದಿ ಕೇವಲ ರಾಜಕಾರಣಿ ಯಷ್ಟೇ ಅಲ್ಲ. ಅವರೊಬ್ಬ ಗುರು, ಮಾರ್ಗದರ್ಶಕ. ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಆಶಾಕಿರಣ. ಅದೆಷ್ಟೋ ಜನರು ಅವರನ್ನೇ ತಮ್ಮ ಬದುಕಿನ ಆದರ್ಶ ವ್ಯಕ್ತಿಯನ್ನಾಗಿ ಆರಾಧಿಸುತ್ತಾರೆ. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ದಾಮೋದರ ದಾಸ್ ಮೋದಿ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಯಾಗಿ ಬೆಳೆದು ನಿಂತಿರುವುದು ಸಾಮಾನ್ಯ ಸಂಗತಿಯಲ್ಲ.!! ಪ್ರತಿಯೊಂದು ವಿಚಾರದಲ್ಲೂ ವಿನೂತನ ವೈಶಿಷ್ಟತೆಗಳನ್ನು ಹೊಂದಿರುವ ಜಗತ್ತಿನ ಸರ್ವ ಶ್ರೇಷ್ಟ ನಾಯಕ. ಈ ವ್ಯಕ್ತಿ ಮಾತನಾಡಲು ನಿಂತರೆ ಇಡೀ ಜಗತ್ತೇ ಕಿವಿನಿವಿರಿಕೊಂಡು ಕುಂತಿರುತ್ತದೆ. ಅವರ ಮಾತಿನ ಶೈಲಿಯೇ ಹಾಗೆ. ಅದು ವಿಶ್ವವನ್ನೇ ಗೆಲ್ಲುವಂತಹ ಮಾತು. ಅವರು ಬರುತ್ತಾರೆಂದರೆ ಇಡೀ ಜಗತ್ತೇ ಕೆಂಪು ಹಾಸಿನ ಹಾಸಿಗೆಯನ್ನು ಚಾಚಿ, ನಮೋ ಎಂದುಬಿಡುತ್ತದೆ. ಮಾತ್ರವಲ್ಲ, ಮೋದಿ ಬಂದು ತಮ್ಮ ರಾಷ್ಟ್ರಗಳಲ್ಲಿ ಮಾತನಾಡಿದರೆ ತಮ್ಮ ರಾಷ್ಟ್ರದ ಘನತೆ ಗೌರವ ಹೆಚ್ಚುತ್ತದೆ ಎಂದು ತಿಳಿಯುತ್ತಾರೆ. ಅಷ್ಟೊಂದು ಶ್ರೀಮಂತ ವ್ಯಕ್ತಿತ್ವವನ್ನು ಹೊಂದಿಕೊಂಡಿದ್ದಾರೆ ನಮ್ಮ ಭವ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಇದೀಗ ವಿದ್ಯಾರ್ಥಿಗಳಿಗೊಂದು ಬಂಪರ್ ಭಾಗ್ಯ ಬಂದೊದಗಿದ್ದು ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಮೋದೀಜೀಯೊಂದಿಗೆ ಸಂವಾದ ನಡೆಸುವ ಅದೃಷ್ಟ ಒಲಿದು ಬಂದಿದೆ!!

Image result for modi with students

ಡಿಜಿಟಲ್ ವೇದಿಕೆಯಲ್ಲಿ ಮೋದಿ ಜೊತೆ 10 ಸಾವಿರ ವಿದ್ಯಾರ್ಥಿಗಳು ಸಂವಾದ!!

ಸಾವಿರಾರು ಮಂದಿ ವಿದ್ಯಾರ್ಥಿಗಳು ಡಿಜಿಟಲ್ ಪ್ಲಾಟ್‍ಫಾರ್ಮ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿದೆ ಸಂವಾದ ನಡೆಸುವ ಅವಕಾಶವನ್ನು ಪಡೆಯಲಿದ್ದಾರೆ!! ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಹೊಸ ಹೊಸ ಐಡಿಯಾಗಳನ್ನು ನೀಡುವ ಅವಕಾಶ ಯುವ ಮನಸ್ಸುಗಳಿಗೆ ಇಲ್ಲಿ ದೊರೆಯಲಿದೆ!! ಮೈಗೌ. ಇನ್‍ನಲ್ಲಿ ಆಯೋಜಿಸಲ್ಪಟ್ಟ ಗವರ್ನೆನ್ಸ್ ಕ್ವಿಝ್ ಮೂಲಕ ಆರಿಸಲ್ಪಡುವ ಸುಮಾರು 8 ಸಾವಿರದಿಂದ 10 ಸಾವಿರ ವಿದ್ಯಾರ್ಥಿಗಳು ಡಿಜಿಟಲ್ ಟೌನ್ ಹಾಲ್‍ನಲ್ಲಿ ಮುಂದಿನ ತಿಂಗಳು ಪ್ರಧಾನಿಯೊಂದಿಗೆ ಸಂವಾದ ನಡೆಸಲಿದ್ದಾರೆ!! ಈ ಕ್ವಿಝ್‍ನಲ್ಲಿ 20 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ!! ಭಾಗವಹಿಸಲಿಚ್ಛಿಸುವವರು ಕ್ವಿಝ್‍ನಲ್ಲಿನ 20 ಪ್ರಶ್ನೆಗಳಿಗೆ ಉತ್ತರಿಸಬೇಕು, ಇದಕ್ಕಾಗಿ ಅವರಿಗೆ 200 ಸೆಕೆಂಡುಗಳನ್ನು ನೀಡಲಾಗುತ್ತದೆ!! ಫುಲ್ ಮಾರ್ಕ್ ಪಡೆದವರು ಅಥವಾ 20 ನಿಮಿಷದೊಳಗೆ ಉತ್ತರ ನೀಡಿದವರು ಮೋದಿಯೊಂದಿಗೆ ಸಂವಾದ ನಡೆಸುವ ಅವಕಾಶ ಪಡೆಯಲಿದ್ದಾರೆ!!

Image result for modi with students

ಅದಲ್ಲದೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಇಂದು ಸರಿಯಾದ ಶಿಕ್ಷಣ ಪಡೆದರೆ ಮಾತ್ರ ಮುಂದೆ ದೇಶದಲ್ಲಿ ಉನ್ನತ ಸ್ಥಾನದಲ್ಲಿ ಏರಲು ಸಾಧ್ಯ ಎಂದು ಮನದಲ್ಲಿಟ್ಟುಕೊಂಡು ಪ್ರತೀ ಬಾರಿಯೂ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ!! ಈ ಮೊದಲು ಕೂಡಾ ದೆಹಲಿಯ ಟಲ್ಕಾ ಟೋರ ಸ್ಟೇಡಿಯಂನಲ್ಲಿ ನರೇಂದ್ರ ಮೋದಿಯವರ ಮಾತುಗಳು ಮಕ್ಕಳನ್ನು ಮತ್ತಷ್ಟು ಪರೀಕ್ಷೆಗೆ ತಯಾರಾಗುವಂತೆ ಮಾಡಿತ್ತು. ಪರೀಕ್ಷೆಯ ವೇಳೆ ಶಾಲಾ ಕಾಲೇಜಿನ ಮಕ್ಕಳು ಯಾವ ರೀತಿ ತಯಾರಾಗಬೇಕೆಂಬ ಇಂಚಿಂಚೂ ಮಾಹಿತಿಯನ್ನು ನೀಡಿ ಮಕ್ಕಳು ಪುಳಕಿತರಾಗುವಂತೆ ಮಾಡಿದರು. ಅದಲ್ಲದೆ ಮಕ್ಕಳು ಯಾವ ರೀತಿ ಪರೀಕ್ಷೆಗೆ ತಯಾರಾಗಬೇಕು ಎಂದು ಕೂಡಾ ಪುಸ್ತಕವನ್ನು ಬರೆದು ಮಕ್ಕಳಿಗೆ ಸ್ಫೂರ್ತಿಯಾಗಿದ್ದರು ಮೋದಿ!!

Related image

ಪ್ರತಿ ದಿನ 18-19 ಗಂಟೆ ಬ್ಯುಸಿಯಾಗಿರೋ ಮೋದಿ ತಾವೂ ಕೂಡ ಎಲ್ಲರ ಹಾಗೆ ಸಾಮಾನ್ಯರಂತೆ ಬದುಕುವ ಹಂಬಲವಿರುವ ಮನುಷ್ಯ ಅವರು. ಪ್ರಧಾನಮಂತ್ರಿ ಯಾದರೂ ತಮ್ಮ ಪುಸ್ತಕ ಬರೆಯುವ ಹವ್ಯಾಸವನ್ನು ಇಂದಿಗೂ ಮೋದಿಯವರು ನಿಲ್ಲಿಸಿಲ್ಲ. ಒಂದು ದಶಕಕ್ಕೂ ಹೆಚ್ಚಿನ ಕಾಲ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇಂಗ್ಲಿಷ್, ಗುಜರಾತಿ, ಹಿಂದಿ ಸೇರಿದಂತೆ ಅನೇಕ ಭಾಷೆಗಳಿಗೆ ಮೋದಿಯವರ ಪುಸ್ತಕಗಳು ತರ್ಜುಮೆ ಗೊಂಡು ಕೋಟ್ಯಾಂತರ ಜನ ಓದಿದ್ದಾರೆ. ಮೋದಿಯವರ ಸ್ಫೂರ್ತಿದಾಯಕ ಭಾಷಣಗಳಿಗೆ, ರಾಜತಾಂತ್ರಿಕ ನಿಲುವಿಗಳಿಗಷ್ಟೇ ಅಭಿಮಾನಿಗಳಿಲ್ಲ. ಅವರ ಬರವಣಿಗೆಗೂ ಓದುಗರಿದ್ದಾರೆ. ದೇಶದ ಅಬಿವೃದ್ಧಿಗಾಗಿ ಎಷ್ಟು ಒತ್ತನ್ನು ನೀಡುತ್ತಾರೋ ಅಷ್ಟೇ ಕಾಳಜಿಯನ್ನು ಮೋದೀಜೀ ಮಕ್ಕಳಿಗಾಗಿಯೂ ನೀಡುತ್ತಾರೆ ಎಂಬುವುದು ಅಷ್ಟೇ ಸತ್ಯ!!

  • ಪವಿತ್ರ
Tags

Related Articles

Close