ಪ್ರಚಲಿತ

ಸಿಎಂ ಕುಮಾರಸ್ವಾಮಿಗೆ ಭಾರೀ ಮುಖಭಂಗ.! ಐಟಿ ಕಛೇರಿ ಮುಂದೆ ಪ್ರತಿಭಟಿಸಿ ಬೆತ್ತಲಾದ ಕುಮಾರಸ್ವಾಮಿ ಬಂಡವಾಳ.!

ಲೋಕಸಭಾ ಚುನಾವಣೆ ರಂಗೇರುತ್ತಿದ್ದಂತೆಯೇ ಈ ಬಾರಿ ಕರ್ನಾಟಕದಲ್ಲಿ ರಾಜಕೀಯ ನಾಟಕಗಳೂ ಮೇಳೈಸುತ್ತಿದೆ. ಅದರಲ್ಲೂ ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರವಂತೂ ಈ ಬಾರಿಯ ಹೈವೋಲ್ಟೇಜ್ ಕದನವಾದಂತಿದೆ. ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯ ಎದುರು ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಸ್ಪರ್ಧಿಸುತ್ತಿದ್ದು ಈ ಬಾರಿಯ ಮಂಡ್ಯ ಕದನ ದಿನಕ್ಕೊಂದು ರೋಚಕ ಟ್ವಿಸ್ಟ್ ಪಡೆಯುತ್ತಿದೆ.

ತನ್ನ ಮಗನನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಹಣದ ಹೊಳೆಯನ್ನೇ ಹರಿಸಲು ಮುಂದಾಗಿದ್ದಾರೆ. ಅದೆಷ್ಟೇ ಖರ್ಚಾದರೂ ನೋ ವರಿ, ಈ ಬಾರಿ ನಿಖಿಲ್ ಗೆಲ್ಲಲೇ ಬೇಕೆಂದು ಕುಮಾರಸ್ವಾಮಿ ಟೊಂಕ ಕಟ್ಟಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆ ಕೂಡಾ ಜನತಾ ದಳ ಮುಖಂಡರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಜೆಡಿಎಸ್ ಆಪ್ತರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆದಿತ್ತು. ಏಕಕಾಲದಲ್ಲಿ ಈ ದಾಳಿ ನಡೆದಿತ್ತು.

ಈ ದಾಳಿ ನಡೆದಿದ್ದೇ ತಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಮೈತ್ರಿಗಳು ಐಟಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ನೂರಾರು ಜನರನ್ನು ಸೇರಿಸಿ ಐಟಿ ಇಲಾಖೆಗೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದರು. ಪ್ರಧಾನಿ ಮೋದಿಯವರೇ ತನ್ನ ಆಪ್ತರ ಮನೆಯ ಮೇಲೆ ಐಟಿ ದಾಳಿ ನಡೆಸುತ್ತಿದ್ದಾರೆ. ಈ ಮೂಲಕ ಧ್ವೇಷದ ರಾಜಕೀಯ ನಡೆಸುತ್ತಿದ್ದಾರೆ ಎಂದು ದೂರಿದ್ದರು.

ಆದರೆ ಇಂದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬೆಚ್ಚಿ ಬೀಳಿಸುವಂತಹಾ ಸುದ್ಧಿ ಹೊರಬಿದ್ದಿದೆ. ಇತ್ತೀಚೆಗೆ ಐಟಿ ಇಲಾಖೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂಬಂಧಿ ಪರಮೇಶ್ ಎಂಬವರ ಮನೆಯ ಮೇಲೆ ದಾಳಿ ನಡೆಸಿತ್ತು. ಈ ದಾಳಿಯನ್ನು ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿ ಮೋದಿಯತ್ತ ಬೆರಳು ತೋರಿಸಿದ್ದರು. ಆದರೆ ಇಂದು ಅದೇ ಪರಮೇಶ್ ಎಂಬವರ ಮನೆಯಲ್ಲಿ ಬರೋಬ್ಬರಿ ಹನ್ನೊಂದುವರೆ ಕೋಟಿ ಹಣ ಪತ್ತೆಯಾಗಿದೆ ಎಂಬ ಮಾಹಿತಿ ವಿಡಿಯೋ ಸಹಿತವಾಗಿ ಹೊರಬಿದ್ದಿದೆ.

ಕುಮಾರಸ್ವಾಮಿ ಸಂಬಂಧಿ ಪರಮೇಶ್ ಮನೆಗೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಲಾಕರ್ ಬೀಗವನ್ನು ಕೇಳಿದ್ದು ಪರಮೇಶ್ ಇದಕ್ಕೆ ಸಹಕರಿಸಿಲ್ಲ. ಬೀಗ ಕಳೆದುಹೋಗಿದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಐಟಿ ಅಧಿಕಾರಿಗಳು ಬೀಗವನ್ನು ಒಡೆದು ಪರಿಶೀಲಿಸಿದಾಗ ಕಂತೆ ಕಂತೆಗಳಂತೆ ಹಣ ಲಭ್ಯವಾಗಿದ್ದು ಐಟಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಇದೀಗ ಕುಮಾರಸ್ವಾಮಿಯವರಿಗೆ ತೀವ್ರ ಮುಖಭಂಗವಾಗಿದ್ದು ವಿಪಕ್ಷ ನಾಯಕರು ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close