ಪ್ರಚಲಿತ

ವಂದೇಮಾತರಂ ಬಿಟ್ಟೇಬಿಟ್ಟ ಮಹಾರಾಷ್ಟ್ರದ ಮೈತ್ರಿ ಸರ್ಕಾರ.! ಮಾಜಿ ಸಿಎಂ ಫುಲ್ ಗರಂ.!

ನಂಬಿಕೆ ದ್ರೋಹದಿಂದ ಸರ್ಕಾರ ರಚಿಸಿಕೊಳ್ಳುವಲ್ಲಿ ವಂಚಿತವಾದ ಭಾರತೀಯ ಜನತಾ ಪಕ್ಷ ಇದೀಗ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಂಡಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಭಾರತೀಯ ಜನತಾ ಪಕ್ಷ ಹಾಗೂ ಶಿವಸೇನೆ ಚುನಾವಣೆಯ ನಂತರ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು ನಂತರ ಶಿವಸೇನೆ ತನ್ನ ಸಿದ್ಧಾಂತವನ್ನು ಬದಿಗಿಟ್ಟು ತನ್ನ ಕಟು ವೈರಿ ಕಾಂಗ್ರೆಸ್ ಜೊತೆ ಸಖ್ಯ ಬೆಳೆಸಿಕೊಂಡು ಈಗ ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಜೊತೆ ಸೇರಿಕೊಂಡು ಸರ್ಕಾರ ರಚಿಸಿದೆ.

ತನ್ನ ಹಿಂದುತ್ವದ ಅಜೆಂಡಾದಿಂದಲೇ ಚುನಾವಣೆಯನ್ನು ಎದುರಿಸಿದ್ದ ಶಿವಸೇನೆ ನಂತರ ಅಧಿಕಾರಕ್ಕಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಮಾತ್ರವಲ್ಲದೆ ತನ್ನ ಸಿದ್ಧಾಂತಕ್ಕೂ ಮೋಸ ಮಾಡಿದೆ ಎಂದು ಬಿಜೆಪಿ ದೂಷಿಸಿದೆ. ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶಿವಸೇನೆಯ ಉದ್ಧವ್ ಠಾಕ್ರೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಸದನಕ್ಕೆ ಅವಮಾನ ಮಾಡಿದೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.

ಪ್ರತೀ ಸದನ ಆರಂಭವಾಗುವ ಮುನ್ನ ವಂದೇ ಮಾತರಂ ಗೀತೆಯನ್ನು ಹಾಡಲಾಗುತ್ತದೆ. ಆದರೆ ಈ ಬಾರಿ ಈ ನಿಯಮವನ್ನು ಮುರಿದು ಗೀತೆಗೆ ಅವಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆಯೇ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿರುವ ಶಿವಸೇನೆ ಈಗ ವಂದೇಮಾತರಂ ಗೀತೆಗೂ ಕತ್ತರಿ ಹಾಕಿದ್ದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.

-ಏಕಲವ್ಯ

Tags

Related Articles

FOR DAILY ALERTS
Close