ಪ್ರಚಲಿತ

ಬಿಗ್ ಬ್ರೇಕಿಂಗ್! ಐವರ ಪಟ್ಟಿ ಬಿಡುಗಡೆಗೊಳಿಸಿದ ಅಮಿತ್ ಶಾ..! ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ ಉತ್ತರ ಕರ್ನಾಟಕದ ಟೈಗರ್.!

ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಪಟ್ಟಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷವೂ ತನ್ನ ಪಟ್ಟಿಯನ್ನು ಅಂತಿಮಗೊಳಿಸಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ನಿರಾಯಾಸವಾಗಿ ಗೆಲ್ಲುವ ಐದು ಮಂದಿಯ ಹೆಸರನ್ನು ಭಾರತೀಯ ಜನತಾ ಪಕ್ಷ ಬಿಡುಗಡೆಗೊಳಿಸಿದೆ.

ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್, ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ,ಎಸ್.ರುದ್ರೇಗೌಡ, ರಘುನಾಥ್ ರಾವ್ ವಲ್ಕಾಪುರೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಟಿಕೆಟ್ ನೀಡಿ ಆದೇಶ ಹೊರಡಿಸಿದ್ದಾರೆ. ಜೂನ್‍ನಲ್ಲಿ ಒಟ್ಟು 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಇದೀಗ ಐವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದ್ದಾರೆ.

ಉತ್ತರ ಕರ್ನಾಟಕದ ಟೈಗರ್ ಎನ್.ರವಿಕುಮಾರ್..!

ಎನ್.ರವಿಕುಮಾರ್. ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ. ರಾಜ್ಯದಲ್ಲಿ ಪಕ್ಷದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರೂ ಯಾವತ್ತೂ ಪ್ರಚಾರ ಗಿಟ್ಟಿಸಿಕೊಂಡು ಮಾಧ್ಯಮಗಳ ಮುಂದೆ ಬಂದು ತನ್ನನ್ನು ಬಿಂಬಿಸಿಕೊಂಡವರಲ್ಲ. ಎಲೆಮರೆಯ ಕಾಯಿಯಂತೆ ಪಕ್ಷದ ಕೆಲಸವನ್ನು ನಿಷ್ಟೆಯಿಂದ ಮಾಡುವ ಇವರು ಭಾರತೀಯ ಜನತಾ ಪಕ್ಷದ ಅನೇಕ ಗೆಲುವಿಗೆ ಕಾರಣಕರ್ತರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದ ರವಿಕುಮಾರ್ ಅವರು ಹುಟ್ಟು ಹೋರಾಟಗಾರ. ತನ್ನ ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಕೆಲಸ ಮಾಡಿ ಹೋರಾಟದ ಜೀವನವನ್ನು ಆರಂಭಿಸಿದವರು ಇವರು. ಹಿಂದುತ್ವವೇ ಉಸಿರಾಗಿಸಿಕೊಂಡು ಅದರ ನೆರಳಿನಲ್ಲೇ ತನ್ನ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದ ಇವರನ್ನು ಕಂಡರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಮುಖರಿಗೆ ಅಚ್ಚು ಮೆಚ್ಚು. ಈ ಕಾರಣಕ್ಕಾಗಿಯೇ ಇವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರು.

ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರೂ ಅಹಂ ಇಲ್ಲದೆ ಪಕ್ಷದ ಸಾಮಾನ್ಯ ಕಾರ್ಯಕರ್ತರೊಂದಿಗೆ ಕೆಲಸ ಮಾಡುತ್ತಿದ್ದ ಇವರು ಇನ್ನೂ ಬ್ರಹ್ಮಚಾರಿ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಭಾರತೀಯ ಜನತಾ ಪಕ್ಷದ ಕಛೇರಿಯೇ ಇವರ ವಾಸಸ್ಥಾನ. ತನ್ನ ಕೆಲ ವಸ್ತ್ರಗಳನ್ನು ಹಿಡಿದುಕೊಂಡು ಕಛೇರಿಯಲ್ಲೇ ವಾಸ್ತವ್ಯವನ್ನು ಹೂಡುತ್ತಾರೆ ಇವರು. ಇಂತಹಾ ಸರಳ ವ್ಯಕ್ತಿಯನ್ನೇ ಇದೀಗ ಪಕ್ಷ ಗುರುತಿಸಿಕೊಂಡಿದೆ.

ತನ್ನ ವಿದ್ಯಾರ್ಥಿ ಜೀವನದಿಂದಲೂ ಹೋರಾಟದ ಹಾದಿಯನ್ನೇ ತುಳಿದುಕೊಂಡು ಬಂದಿದ್ದ ಇವರಿಗೆ ಉತ್ತರ ಕರ್ನಾಟಕದಲ್ಲಿ ವಿಶೇಷವಾದ ಬಿರುದನ್ನೇ ಜನ ನೀಡಿದ್ದಾರೆ. ಅದುವೇ “ಟೈಗರ್ ರವಿ ಕುಮಾರ್”. ಎಬಿವಿಪಿಯಲ್ಲಿ ಉಗ್ರ ಹೋರಾಟದ ಮೂಲಕ ಗುರುತಿಸಿಕೊಂಡೇ ಇವರು ಟೈಗರ್ ಎಂಬ ಹೆಸರನ್ನು ಪಡೆದುಕೊಂಡಿದ್ದರು. ಉತ್ತರ ಕರ್ನಾಟಕದಲ್ಲಿ ಟೈಗರ್ ರವಿ ಕುಮಾರ್ ಎಂದರೆ ಪಕ್ಕನೆ ಇವರನ್ನು ಜನ ನೆಪಿಸಿಕೊಳ್ಳುತ್ತಾರೆ. ಜನರೊಂದಿಗೆ ಸಾಮಾನ್ಯವಾಗಿ ಬೆರೆಯುವ ಇವರು ಪಕ್ಷದ ಯಾವುದೇ ಜವಬ್ಧಾರಿಯನ್ನೂ ಸಮರ್ಥವಾಗಿ ನಿಭಾಯಿಸಬಲ್ಲವರು.

ಇವರ ಸಾಧನೆಯನ್ನು ಕಂಡಂತಹ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಆಯ್ಕೆ ಮಾಡಿದ್ದಾರೆ. ಈ ಮೂಲಕ ಪಕ್ಷದಲ್ಲಿ ಘರ್ಜಿಸುತ್ತಿದ್ದ ಇವರು ಇನ್ನು ಮುಂದೆ ನಾಡಿನ ಜನರಿಗಾಗಿ ಕೆಲಸ ಮಾಡಿ ಎಂಬ ಸಂದೇಶದೊಂದಿಗೆ ಸಂಘದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಸಂಘ ಹಾಗೂ ಪಕ್ಷ ಎಂದಿಗೂ ಕೈ ಬಿಡುವುದಿಲ್ಲ ಎಂಬ ಸಂದೇಶವನ್ನೂ ಪಕ್ಷದ ವರಿಷ್ಟರು ರವಾನಿಸಿದ್ದಾರೆ.

  • ಸುನಿಲ್ ಪಣಪಿಲ
Tags

Related Articles

Close