ಪ್ರಚಲಿತ

ಬ್ರೇಕಿಂಗ್! ಮೌನ ಮುರಿದ ಅಮಿತ್ ಷಾ..! ಬಿಜೆಪಿ ಗೆಲ್ಲಿಸಲು ಚಾಣಕ್ಯನ ಮಾಸ್ಟರ್ ಪ್ಲಾನ್‌..!

ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿತ್ತು ಕರ್ನಾಟಕ ವಿಧಾನಸಭಾ ಚುನಾವಣೆ, ಯಾಕೆಂದರೆ ಚುನಾವಣೆಯೇ ಒಂದು ರೀತಿ ಕುತೂಹಲ ಕೆರಳಿಸಿದ್ದರೆ, ಇತ್ತ ಚುನಾವಣೆಯ ನಂತರ ಫಲಿತಾಂಶ ಬಂದ ದಿನದಿಂದ ಯಾವುದೇ ಪಕ್ಷ ಬಹುಮತ ಸಾಧಿಸದೇ ಇದ್ದ ಕಾರಣ ಸರಕಾರ ರಚನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಬಿಎಸ್ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು ಕೂಡಾ ಜೆಡಿಎಸ್‌ ಮತ್ತು ಕಾಂಗ್ರೆಸ್ ಮಾಡಿಕೊಂಡ ಮೈತ್ರಿಯಿಂದಾಗಿ ಬಿಜೆಪಿಗೆ ಬಹುಮತ ಗಳಿಸಿಲು ಸಾಧ್ಯವಾಗಲಿಲ್ಲ.

ತಮ್ಮ ಬಳಿ ಬಹುಮತ ಸಾಬೀತಿಗೆ ಬೇಕಾದ ಶಾಸಕರ ಬೆಂಬಲ ಇಲ್ಲದೇ ಇದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ನ ನಿದ್ದೆಗೆಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜಕೀಯ ಚಾಣಕ್ಯ ಅಮಿತ್ ಷಾ ಕೊನೆಯ ಗಳಿಗೆಯವರೆಗೂ ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಇದರಿಂದಾಗಿ ತಮ್ಮದೇ ಕೈಯಲ್ಲಿದ್ದ ಶಾಸಕರನ್ನು ನಂಬಲಾರದೆ ಕಾಂಗ್ರೆಸ್ ರೆಸಾರ್ಟ್ ರಾಜಕೀಯ ನಡೆಸಿತ್ತು. ಆದರೂ ಕೂಡ ಬಹುಮತ ಸಾಬೀತು ಪಡಿಸಲಾಗದ ಬಿಜೆಪಿಗೆ ಅಮಿತ್ ಷಾ ಯಡಿಯೂರಪ್ಪ ನವರಿಗೆ ರಾಜೀನಾಮೆ ನೀಡುವಂತೆ ಹೇಳಿದ್ದರು. ಆದರೆ ಈವರೆಗೂ ಏನೂ ಪ್ರತಿಕ್ರಿಯೆ ನೀಡದ ಅಮಿತ್ ಷಾ ಇದೀಗ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆದ ಎಲ್ಲಾ ವಿಚಾರವನ್ನು ದೇಶದ ಮುಂದೆ ಬಿಚ್ಚಿಟ್ಟಿದ್ದಾರೆ..!

ಜನಾದೇಶವೇ ಬೇರೆ, ಎರಡೂ ಪಕ್ಷಗಳು ನಡೆದುಕೊಂಡಿದ್ದೇ ಬೇರೆ..!

ರಾಜ್ಯದಲ್ಲಿ ಬಿಜೆಪಿ ಬಹುಮತ ಗಳಿಸದೇ ಇದ್ದರೂ ಕೂಡ ಜನರ ತೀರ್ಪಿನಂತೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಚುನಾವಣೆಯ ನಂತರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಜನರ ತೀರ್ಪಿಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಇಡೀ ರಾಜ್ಯದಲ್ಲೇ ಜೆಡಿಎಸ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಇದೀಗ ಅಧಿಕಾರದ ಆಸೆಗೆ ಬಿದ್ದು ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚಿಸಲು ಮುಂದಾಗಿದೆ. ಸರಕಾರ ರಚಿಸಿದರು ಕೂಡಾ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಇದಕ್ಕೆಲ್ಲಾ ಕರ್ನಾಟಕದ ಜನರೇ ಉತ್ತರ ನೀಡಲಿದ್ದಾರೆ ಎಂದ ಅಮಿತ್ ಷಾ , ಕಾಂಗ್ರೆಸ್ ಮತ್ತು ಜೆಡಿಎಸ್‌ ನ ಮೈತ್ರಿ ಅಪವಿತ್ರ ಮೈತ್ರಿ ಎಂದು ಹೇಳಿದರು..!

ಕಾರ್ಯಕರ್ತರಿಗೆ ಧನ್ಯವಾದ ಹೇಳಿದ ಚಾಣಕ್ಯ..!

ರಾಜ್ಯದಲ್ಲಿ ಕಾಂಗ್ರೆಸ್ ಕಳೆದ ಐದು ವರ್ಷದಲ್ಲಿ ಮಾಡಿದ ದುರಾಡಳಿತವೇ ಈ ಬಾರಿಯ ಚುನಾವಣೆಯ ಫಲಿತಾಂಶ. ಅಭಿವೃದ್ಧಿಯ ಕೆಲಸ ಮಾಡಿದ್ದರೆ ಇಂದು ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚಿಸುವ ಅಗತ್ಯವಿರಲಿಲ್ಲ ಎಂದ ಅಮಿತ್ ಷಾ , ಕರ್ನಾಟಕದಲ್ಲಿ ರಾಜ್ಯ ಸರಕಾರದ ಇಬ್ಬಗೆ ನೀತಿಯನ್ನೂ ಮೆಟ್ಟಿ ನಿಂತು ಪಕ್ಷದ ಗೆಲುವಿಗಾಗಿ ಹಗಲು ರಾತ್ರಿ ಎನ್ನದೆ ದುಡಿದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. ನಮಗೆ ಈ ಮಟ್ಟದಲ್ಲಿ ಗೆಲುವು ಲಭಿಸಿದೆ ಎಂದರೆ ಅದಕ್ಕೆ ಕಾರಣ ನಮ್ಮ ಕಾರ್ಯಕರ್ತರು ಎಂದ ಅಮಿತ್ ಷಾ , ಮೈತ್ರಿ ಮಾಡಿಕೊಂಡ ಸರಕಾರ ಎಷ್ಟು ಸಮಯ ಉಳಿಯಲು ಸಾಧ್ಯ ಎಂದು ವ್ಯಂಗ್ಯವಾಡಿದರು..!

ಕಾಂಗ್ರೆಸ್‌ನ ದುರಾಡಳಿತವೇ ಬಿಜೆಪಿಯ ಪ್ರಚಾರವಾಗಿತ್ತು..!

ಅಧಿಕಾರದಲ್ಲಿದ್ದ ಕಾಂಗ್ರೆಸ್ ಪ್ರಚಾರಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುತ್ತಿದ್ದರೆ, ಇತ್ತ ಬಿಜೆಪಿಗೆ ಸಿದ್ದರಾಮಯ್ಯ ಸರಕಾರದ ದುರಾಡಳಿತವೇ ಮುಖ್ಯ ಪ್ರಚಾರ ವಸ್ತುವಾಗಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರು, ಆದರೆ ರಾಜ್ಯ ಸರಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೇವಲ ಓಲೈಕೆ ರಾಜಕಾರಣದಲ್ಲೇ ತೊಡಗಿದ್ದ ಕಾಂಗ್ರೆಸ್ ಗೆ ರಾಜ್ಯದ ಜನ ಸರಿಯಾಗಿ ಉತ್ತರ ನೀಡಿದ್ದಾರೆ. ಆದರೂ ಈ ಕಾಂಗ್ರೆಸ್ ಜನಾದೇಶವನ್ನು ಒಪ್ಪಿಕೊಳ್ಳಲು ತಯಾರಿಲ್ಲ, ಅದೇ ಕಾರಣಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು..!

ಮೋದಿ ಸರಕಾರದ ಉತ್ತಮ ಆಡಳಿತ ಜನರಿಗೆ ತಿಳಿದಿದೆ..!

ಕರ್ನಾಟಕದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರೆ ಜನರು ಬದಲಾವಣೆ ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಾಜ್ಯ ಸರಕಾರದ ಆಡಳಿತಕ್ಕೆ ಬೇಸತ್ತ ಜನರಿಗೆ ನಮ್ಮ ಕೇಂದ್ರ ಸರಕಾರದ ಉತ್ತಮ ಆಡಳಿತ ತಲುಪಿದೆ, ನಮ್ಮ ಗುರಿ ಸಂಪೂರ್ಣವಾಗಿದೆ ಎಂದ ಅಮಿತ್ ಷಾ , ನೋಟಾ ಮತ ಚಲಾವಣೆಯಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದರು. ಜನರು ಕಾಂಗ್ರೆಸ್ ನ್ನು ಕಿತ್ತೊಗೆಯುವ ಸಲುವಾಗಿ ನೋಟಾ ಮತ ಚಲಾಯಿಸಿದ್ದಾರೆ, ಆದ್ದರಿಂದ ಬಿಜೆಪಿ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ ಎಂದರು.

Image result for amit shah


ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರೂ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ಹೀನಾಯವಾಗಿ ಸೋತು, ಒಂದು ಕ್ಷೇತ್ರದಲ್ಲಿ ಕೇವಲ ಅಲ್ಪ ಮತದಿಂದ ಗೆದ್ದಿದ್ದಾರೆ. ಇದರ ಅರ್ಥ ಜನರಿಗೆ ಸಿದ್ದರಾಮಯ್ಯನವರ ಆಡಳಿತದಿಂದ ಮುಕ್ತಿ ಎಂಬುದು ಸ್ಪಷ್ಟ ಎಂದ ಅಮಿತ್ ಷಾ , ಕಾಂಗ್ರೆಸ್ ನಡೆಸಿದ ಅಪವಿತ್ರ ಮೈತ್ರಿಯ ಬಗ್ಗೆ ಕಿಡಿಕಾರಿದರು..!

–ಅರ್ಜುನ್

Tags

Related Articles

Close