ಪ್ರಚಲಿತ

ಬಿಗ್ ಬ್ರೇಕಿಂಗ್! ಬಂಧನದ ಭೀತಿಯಲ್ಲಿ ಡಿಕೆಶಿ..! ಯಾರೂ ಊಹಿಸದ ರೀತಿಯಲ್ಲಿ ದಿಗ್ಬಂಧನ ಹಾಕಿದ ಐಟಿ..!

ಬೆನ್ನು ಬಿಡದೆ ಕಾಡುತ್ತಿರುವ ಐಟಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲಾಗದೆ ಪರದಾಡುತ್ತಿರುವ ಕಾಂಗ್ರೆಸ್ ನ ಪವರ್‌ಫುಲ್ ಲೀಡರ್ ಡಿಕೆ ಶಿವಕುಮಾರ್ ಇದೀಗ ಅಕ್ಷರಶಃ ತತ್ತರಿಸಿದ್ದಾರೆ. ಅಕ್ರಮ ಹಣ ಸಂಪಾದನೆ ಮತ್ತು ನೋಟ್ ಬ್ಯಾನ್ ಸಂದರ್ಭದಲ್ಲಿ ಹಣ ಬದಲಾವಣೆ ಮಾಡಿರುವ ಆರೋಪ ಎದುರಿಸುತ್ತಿರುವ ಡಿಕೆಶಿ ಗೆ ಪದೇ ಪದೇ ಐಟಿ ಶಾಕ್ ನೀಡುತ್ತಲೇ ಇದೆ. ಆದರೆ ರಾಜ್ಯದಲ್ಲಿ ತಮ್ಮದೇ ಸರಕಾರ ಇದೆ ಎಂಬ ಕಾರಣಕ್ಕೆ ಧೈರ್ಯವಾಗಿದ್ದ ಡಿಕೆಶಿಗೆ ಇದೀಗ ನಡುಕ ಉಂಟಾಗಿದೆ. ಯಾಕೆಂದರೆ ಒಂದೆಡೆ ರಾಜ್ಯದಲ್ಲಿ ತನ್ನ ವರ್ಚಸ್ಸು ಕುಂದುತ್ತಿದೆ, ಮತ್ತೊಂದೆಡೆ ಕೇಂದ್ರದ ಕಣ್ಣು ರಾಜ್ಯ ನಾಯಕರ ಮೇಲಿದೆ. ಇವೆಲ್ಲಾ ಕಾರಣದಿಂದ ಕಂಗಾಲಾಗಿರುವ ಡಿಕೆಶಿಗೆ ಇದೀಗ ಬಂಧನದ ಭೀತಿ ಉಂಟಾಗಿದೆ..!

ಆದಾಯ ತೆರಿಗೆ ಆರೋಪದಲ್ಲಿ ಜೈಲು ಸೇರುತ್ತಾರ ಡಿಕೆಶಿ..?

ಈಗಾಗಲೇ ಹಲವಾರು ಆರೋಪದಲ್ಲಿ ಸಿಲುಕಿ ಕಂಗಾಲಾಗಿರುವ ಡಿಕೆಶಿಗೆ ಇದೀಗ ಮತ್ತೊಂದು ಗಂಡಾಂತರ ಎದುರಾಗಿದೆ. ಅದೇನೆಂದರೆ ಇದೀಗ ಹೊರಬಿದ್ದ ತೀರ್ಪಿನ ಪ್ರಕಾರ ಆದಾಯ ತೆರಿಗೆ ಕಾಯಿದೆ 276c ಮತ್ತು 277ರ ಪ್ರಕಾರ ಬಳ್ಳಾರಿ ಉದ್ಯಮಿ ವಿಶ್ವಾಸ್ ಲಾಡ್‌ ವಿರುದ್ಧ ಇದೇ ರೀತಿ ತೀರ್ಪು ಪ್ರಕಟವಾಗಿದ್ದು, ಆರೋಪ ಸಾಬೀತಾದರೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ೨ ಲಕ್ಷ ದಂಡ ವಿಧಿಸಬೇಕಾಗುತ್ತದೆ. ಸಂತೋಷ್ ಲಾಡ್ ಅವರು ಈ ಮೊದಲಿನಿಂದಲೂ ಆದಾಯ ತೆರಿಗೆ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದು, ಜೈಲು ಶಿಕ್ಷೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಇದೀಗ ನ್ಯಾಯಾಲಯ ಹೊರಡಿಸಿರುವ ತೀರ್ಪಿನ ಪ್ರಕಾರ ಆರೋಪಿ ಯಾರೇ ಆಗಿದ್ದರೂ , ಆರೋಪ ನಿಜವಾದರೆ ಆತನಿಗೆ ಜೈಲು ಶಿಕ್ಷೆ ಗ್ಯಾರಂಟಿ.

ಡಿಕೆ ಶಿವಕುಮಾರ್ ಅವರು ಈ ಹಿಂದೆ ಐಟಿ ಇಲಾಖೆ ನಡೆಸಿದ ದಾಳಿ ಸಂದರ್ಭದಲ್ಲಿ 4 ದಿನಕ್ಕಿಂತಲೂ ಅಧಿಕ ದಿನ ತನ್ನ ನಿವಾಸದಲ್ಲಿ ಕುಳಿತು ಅಕ್ಷರಷಃ ಗೃಹಬಂಧನವನ್ನು ಎದುರಿಸಿದ್ದರು. ಈ ವೇಳೆ ಬರೋಬ್ಬರಿ 500 ಕೋಟಿಯಷ್ಟು ದಾಖಲೆ ಇಲ್ಲದ ಹಣಗಳು ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಅದೆಷ್ಟೋ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದಾಖಲೆಗಳು ಹಾಗೂ ಕಾರುಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

Related image

ಈ ವೇಳೆ ತನ್ನ ಜೇಬಿನಲ್ಲಿದ್ದ ಒಂದು ಚೀಟಿಯನ್ನು ಐಟಿ ಅಧಿಕಾರಿಗಳ ತಪಾಸಣೆಯ ವೇಳೆ ಡಿಕೆ ಶಿವಕುಮಾರ್ ಹರಿದು ಹಾಕಿದ್ದರು. ಅದೆಷ್ಟೇ ಒತ್ತಾಯಿಸಿದ್ದರೂ ಆ ಚೀಟಿಯ ಹಿಂದಿರುವ ನಿಗೂಢತೆಯನ್ನು ಬಾಯಿ ಬಿಡಲೇ ಇಲ್ಲ. ಹೀಗಾಗಿ ಅವರ ಮೇಲೆ ಸಾಕ್ಷ್ಯ ನಾಶದ ಪ್ರಕರಣವೂ ದಾಖಲಾಗಿತ್ತು. ಇದೀಗ ಈ ಎಲ್ಲಾ ಪ್ರಕರಣಗಳೂ ಡಿಕೆ ಶಿವಕುಮಾರ್ ಅವರ ಸುತ್ತ ತಿರುಗುತ್ತಿದ್ದು, ಬಂಧನವಾದರೆ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದ ಅನಿವಾರ್ಯವೂ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಆದ್ದರಿಂದ ಡಿಕೆಶಿ ಕೂಡಾ ಇದೇ ಆರೋಪ ಎದುರಿಸುತ್ತಿದ್ದು, ತನ್ನ ಮೇಲಿನ ಆರೋಪ ನಿಜವಾದರೆ ಜೈಲು ಪಾಲಾಗುವುದು ಖಂಡಿತ. ಸಂತೋಷ್ ಲಾಡ್ ಮತ್ತು ಡಿಕೆಶಿ ಮಾತ್ರವಲ್ಲದೆ ಇನ್ನೂ ಅನೇಕ ಕಾಂಗ್ರೆಸಿಗರು ಈ ಆರೋಪದಲ್ಲಿ ಸಿಕ್ಕಿಕೊಂಡಿದ್ದು, ಇದೀಗ ಸಾಲು ಸಾಲು ಜೈಲು ಪಾಲಾಗುವ ಸಮಯ ಬಂದಿದೆ ಎಂದರೆ ತಪ್ಪಾಗದು..!

source: http://dhunt.in/4asXX?s=a&ss=wsp

  • ಸಾರ್ಥಕ್
Tags

Related Articles

Close