ಪ್ರಚಲಿತ

ಬಿಗ್ ಬ್ರೇಕಿಂಗ್! ಕುಮಾರ ಸ್ವಾಮಿ ಸಿಎಂ, ಪರಮೇಶ್ವರ್ ಡಿಸಿಎಂ..! ಮೈತ್ರಿಗೆ ಜೈ ಎಂದ ಕಾಂಗ್ರೆಸ್ ಜೆಡಿಎಸ್..!

 ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ನಾಲಾಯಕ್ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರ ಒಂದು ನಾಲಾಯಕ್ ಸರ್ಕಾರ ಎಂದು ಸಿಕ್ಕ ಸಿಕ್ಕಲ್ಲಿ ಜನತಾ ದಳದ ನಾಯಕರು ಬಾಯಿಗೆ ಬಂದಂತೆ ಕಾಂಗ್ರೆಸ್ ಪಕ್ಷವನ್ನು ನಿಂದಿಸುತ್ತಿದ್ದರೂ ಇದೀಗ ಅಧಿಕಾರದ ಆಸೆಗಾಗಿ ಹಾಗೂ ಭಾರತೀಯ ಜನತಾ ಪಕ್ಷವನ್ನು ರಾಜ್ಯದ ಅಧಿಕಾರದಿಂದ ಹೊರಗಿಡಬೇಕೆಂಬ ಹಠಕ್ಕಾಗಿ ಇದೀಗ ತನ್ನ ಸ್ವಾಭಿಮಾನವನ್ನೇ ಅಡವಿಟ್ಟು ಜನತಾ ದಳದೊಂದಿಗೆ ಮೈತ್ರಿ ಮಾಡಲು ಮುಂದಾಗಿದೆ. 

ಕರ್ನಾಟಕ ರಾಜ್ಯ ವಿಧಾನ ಸಭೆಯಲ್ಲಿ ಯಾವ ಪಕ್ಷಕ್ಕೂ ಅಧಿಕೃತ ಸರ್ಕಾರ ರಚಿಸುವ ಸ್ಥಾನಗಳು ಸಿಗದ ಕಾರಣದಿಂದಾಗಿ ಜನತಾ ದಳಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ.  ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸುವ ಸನಿಹದಲ್ಲಿತ್ತಾದರೂ ಸ್ವತಂತ್ರವಾಗಿ ಅಧಿಕಾರಕ್ಕೆ ಏರಲು ಸಾಧ್ಯವಾಗಲೇ ಇಲ್ಲ. ರಾಜ್ಯದ ಅತಿದೊಡ್ಡ ಸರ್ಕಾರವಾಗಿ ಭಾರತೀಯ ಜನತಾ ಪಕ್ಷ ಹೊರಹೊಮ್ಮಿದೆಯಾದರೂ 104 ವಿಧಾನ ಸಭಾ ಕ್ಷೇತ್ರಗಳನ್ನು ಮಾತ್ರವೇ ಭಾರತೀಯ ಜನತಾ ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಸರ್ಕಾರ ರಚಿಸಲು 114 ವಿಧಾನ ಸಭಾ ಶಾಸಕರ ಬಲ ಅವಶ್ಯಕ ಇರುವುದರಿಂದ ಭಾರತೀಯ ಜನತಾ ಪಕ್ಷ ಕೇವಲ 10 ಸ್ಥಾನಗಳಿಂದ ವಂಚಿತಗೊಂಡಿದೆ. ಹೀಗಾಗಿಯೇ ಭಾರತೀಯ ಜನತಾ ಪಕ್ಷ ರಾಜ್ಯಪಾಲರ ಮೊರೆ ಹೋಗಿದೆ.

ಆದರೆ ಈ ಮಧ್ಯೆ 77 ಸ್ಥಾನಗಳನ್ನು ಪಡೆದುಕೊಂಡು ಹೀನಾಯ ಸೋಲನ್ನು ಅನುಭವಿಸಿಕೊಂಡಿರುವ ಕಾಂಗ್ರೆಸ್ ಪಕ್ಷ 39 ಸ್ಥಾನಗಳನ್ನು ಪಡೆದುಕೊಂಡ ಜನತಾ ದಳವನ್ನು ಅಪ್ಪಿಕೊಳ್ಳಲು ಮುಂದಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಕರೆ ಮಾಡಿ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆ.

Image result for kumarswamy and parameshwar

ಇದಿಷ್ಟು ಮಾತ್ರವಲ್ಲದೆ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅನೇಕ ಕಾಂಗ್ರೆಸ್ ನಾಯಕರು ಜನತಾ ದಳಕ್ಕೆ ಬಹಿರಂಗವಾಗಿಯೇ ಬೇಷರತ್ ಬೆಂಬಲ ನೀಡಿದ್ದಾರೆ.

ದೇವೇಗೌಡರು ಮಾತ್ರ ಕಾಂಗ್ರೆಸ್ ಜೊತೆ ಹೋಗುವುದರ ಬಗ್ಗೆ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಕಾದು ನೋಡುವ ತಂತ್ರವನ್ನು ಜನತಾ ದಳದ ನಾಯಕರು ಅನುಸರಿಸುತ್ತಿದ್ದು, ಚೆಂಡು ಗೌಡರ ಅಂಗಳದಲ್ಲಿ ಬಿದ್ದಿದೆ. ಆದರೆ ಇದೀಗ ಜಾತಿವಾರು ಲೆಕ್ಕಾಚಾರಗಳು ನನಡೆಯುತ್ತಿದ್ದು, ಲಿಂಗಾಯತ ವೀರಶೈವ ಮುಖ್ಯಮಂತ್ರಿ ಅಭ್ಯರ್ಥಿಯಾದ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಅಪಕೀರ್ತಿ ತಮಗೆ ಬೇಡ ಎಂಬ ಲೆಕ್ಕಾಚಾರವೂ ದೇವೇಗೌಡರಲ್ಲಿದೆ ಎಂದೂ ಹೇಳಲಾಗುತ್ತಿದೆ.

Image result for kumarswamy and parameshwar

ಈ ಮಧ್ಯೆ ಕುಮಾರ ಸ್ವಾಮಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಉಪಮುಖ್ಯಮಂತ್ರಿ ಎಂದು ರಾಜಕೀಯ ವಲಯದಲ್ಲಿ ಲೆಕ್ಕಾಚಾರಗಳು ನಡೆಯುತ್ತಿದೆ.

ಒಟ್ಟಾರೆ ಕೊನೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳತಂತ್ರ ಬಹಿರಂಗವಾಗಿದ್ದು ಇದೀಗ ಭಾರತೀಯ ಜನತಾ ಪಕ್ಷ ಯಾವ ಬಾಣವನ್ನು ಹೂಡಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close