ಪ್ರಚಲಿತ

ಬಿಗ್ ಬ್ರೇಕಿಂಗ್! ಒಂದೇ ವಾರದಲ್ಲಿ ಕುಮಾರಸ್ವಾಮಿ ರಾಜೀನಾಮೆ..!? ಹಳೇ ಹೇಳಿಕೆಗಳೇ ಎಚ್‌ಡಿಕೆ ಗೆ ಮುಳುವಾಯಿತಾ..?

ಅಧಿಕಾರಕ್ಕೆ ಬಂದರೆ ಇಪ್ಪತ್ತ ನಾಲ್ಕು ಗಂಟೆಗಳ ಒಳಗಾಗಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದ ಕುಮಾರಸ್ವಾಮಿ ಅವರು , ಇದೀಗ ಆರು ದಿನಗಳು ಕಳೆದರೂ ಸಾಲ ಮನ್ನಾದ ವಿಚಾರವಾಗಿ ಏನೂ ಕ್ರಮ ಕೈಗೊಳ್ಳದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು , ರಾಜ್ಯದ ಜನರು ನಮಗೆ ಬಹುಮತ ನೀಡಿಲ್ಲ ಆದ್ದರಿಂದ ಅವರಿಗೆ ಸಾಲ ಮನ್ನಾ ಮಾಡುವುದು ಇಷ್ಟವಿಲ್ಲ ಅಂದೆನಿಸುತ್ತದೆ. ನಾವು ಕೇವಲ ೩೮ ಶಾಸಕರನ್ನು ಇಟ್ಟುಕೊಂಡು ಏನು ಮಾಡಲಾಗುತ್ತದೆ ಎಂದು ಉಡಾಫೆಯಿಂದ ನಡೆದುಕೊಳ್ಳುತ್ತಿರುವ ಕುಮಾರಸ್ವಾಮಿ ಅವರು ನಾವು ರಾಜ್ಯದ ಜನರ ಮುಲಾಜಿನಲ್ಲಿಲ್ಲ, ಬದಲಾಗಿ ಕಾಂಗ್ರೆಸ್ ನ ಮುಲಾಜಿನಲ್ಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದೀಗ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ ಬಿ ಎಸ್ ಯಡಿಯೂರಪ್ಪ ನವರು ಇನ್ನು ಒಂದು ವಾರದೊಳಗೆ ರೈತರ ಸಾಲ ಮನ್ನಾ ಮಾಡದೇ ಇದ್ದರೆ ಕುಮಾರಸ್ವಾಮಿ ಅವರ ರಾಜೀನಾಮೆ ಗ್ಯಾರಂಟಿ ಎಂದಿದ್ದಾರೆ..!

ರಾಜ್ಯ ಬಂದ್ ಯಶಸ್ವಿಯಾಗಿದೆ..!

ಅಧಿಕಾರಕ್ಕೆ ಬಂದರೂ ಕೂಡ ರೈತರ ಸಾಲ ಮನ್ನಾ ಮಾಡದ ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಎಸ್ ಯಡಿಯೂರಪ್ಪ ನವರು ಇಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಬೆಂಗಳೂರು ಹೊರತು ಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಬಂದ್ ಯಶಸ್ವಿಯಾಗಿದೆ ಎಂದು ಇದೀಗ ಪತ್ರಿಕಾಗೋಷ್ಠಿ ಕರೆದು ಹೇಳಿಕೆ ನೀಡಿದ ಯಡಿಯೂರಪ್ಪ ನವರು ಮತ್ತೊಮ್ಮೆ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು. ಕುಮಾರಸ್ವಾಮಿ ಅವರು ಹೇಳಿದ ಯಾವುದೇ ಮಾತನ್ನು ಈವರೆಗೆ ಪೂರೈಸಿದವರಲ್ಲ, ಆದ್ದರಿಂದ ಕೇವಲ ಅಧಿಕಾರ ಹಿಡಿಯುವ ಸಲುವಾಗಿ ರೈತರ ವಿಚಾರ ಮುಂದಿಟ್ಟುಕೊಂಡಿದ್ದರು. ಆದರೆ ಕುಮಾರಸ್ವಾಮಿ ಅವರಿಗೆ ರಾಜ್ಯದ ಜನರ ಏಳಿಗೆಯ ಅಗತ್ಯವಿಲ್ಲ, ಕೇವಲ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ನ ಕ್ಷೇಮವೇ ಸದ್ಯ ಕುಮಾರಸ್ವಾಮಿ ಅವರ ಮುಂದಿರುವ ಗುರಿ ಎಂದಿದ್ದಾರೆ. ಆದ್ದರಿಂದ ಇಂದು ಭಾರತೀಯ ಜನತಾ ಪಕ್ಷದ ನೇತ್ರತ್ವದಲ್ಲಿ ನಡೆದ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಸ್ವತಃ ರೈತರೇ ನಮಗೆ ಬೆಂಬಲ ನೀಡಿ ಬೀದಿಗಳಿದು ಬಂದ್ ಆಚರಿಸಿದ್ದಾರೆ ಎಂದರು.

Image result for kumarswamy in sad

ದೇವೇಗೌಡರ ಮೇಲೂ ಬಿಎಸ್‌ವೈ ವಾಗ್ದಾಳಿ..!

ದೇವೇಗೌಡರು ತಮ್ಮ ಮಗನಿಗೆ ಬುದ್ದಿ ಹೇಳುವ ಬದಲು ನಮಗೆ ಹೇಳಲು ಬರುತ್ತಿದ್ದಾರೆ. ವಿಧಾನಸೌಧದಲ್ಲಿ ಮಾತನಾಡುವ ಬಗ್ಗೆ ದೇವೇಗೌಡರು ನಮಗೆ ಬುದ್ಧಿ ಹೇಳುತ್ತಾರೆ, ಆದರೆ ನಮಗೆ ಅದರ ಅಗತ್ಯವಿಲ್ಲ. ಎಲ್ಲಿ ಯಾವ ರೀತಿ ಮಾತನಾಡಬೇಕು ಎಂದು ನಮಗೆ ಗೊತ್ತು, ಅದನ್ನು ದೇವೇಗೌಡರಿಂದ ಕಲಿಯಬೇಕಾಗಿಲ್ಲ ಎಂದು ಟಾಂಗ್ ನೀಡಿದ್ದಾರೆ. ಕುಟುಂಬ ರಾಜಕಾರಣ ನಡೆಸುವ ಜೆಡಿಎಸ್‌ ನ ಎಲ್ಲಾ ಬಣ್ಣ ಬಯಲಿಗೆಳೆಯುತ್ತೇನೆ ಎಂದ ಬಿಎಸ್‌ವೈ, ಅಪ್ಪ ಮಗನ ಎಲ್ಲಾ ಹಗರಣಗಳನ್ನು ಸದ್ಯದಲ್ಲೇ ದಾಖಲೆ ಸಮೇತ ಬಹಿರಂಗಪಡಿಸುವುದಾಗಿ ಹೇಳಿದರು.

Image result for yeddyurappa

ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ರೈತರ ಸಾಲ ಮನ್ನಾ ಮಾಡಲಿ, ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕರ ಭೇಟಿ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ , ಆದರೆ ಇತ್ತ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ. ರೈತರ ಹೆಸರಿನಲ್ಲಿ ಅಧಿಕಾರ ಹಿಡಿದ ಕುಮಾರಸ್ವಾಮಿ ಅಧಿಕಾರ ಕೈಗೆ ಸಿಗುತ್ತಿದ್ದಂತೆ ಅಧಿಕಾರದ ಮದದಲ್ಲೇ ಮೆರೆಯುತ್ತಿದ್ದಾರೆ. ಆದರೆ ಇದು ಕೇವಲ ಕೆಲವೇ ತಿಂಗಳು ಮಾತ್ರ. ಯಾಕೆಂದರೆ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಎಲ್ಲಾ ಹಗರಣಗಳನ್ನು ಬಯಲಿಗೆಳೆದು ರಾಜ್ಯದ ಮುಂದೆ ಪ್ರದರ್ಶಿಸುತ್ತೇನೆ ಎಂದು ಸವಾಲು ಹಾಕಿದರು.!

–ಅರ್ಜುನ್

Tags

Related Articles

Close