ಪ್ರಚಲಿತ

ಬಿಗ್ ಬ್ರೇಕಿಂಗ್! ಶಾಲೆಯಲ್ಲೂ ಶಿಫ್ಟ್‌ವೈಸ್ ಶಿಕ್ಷಣ..! ಪೋಷಕರಿಗೊಂದು ಶಾಕಿಂಗ್ ನ್ಯೂಸ್.!

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮಾಡಿಕೊಂಡ ಅಪವಿತ್ರ ಮೈತ್ರಿಯ ಪರಿಣಾಮವಾಗಿ ದಿನಕ್ಕೊಂದರಂತೆ ಘಟನೆಗಳು ನಡೆಯುತ್ತಲೇ ಇದೆ. ರಾಜ್ಯದಲ್ಲಿ ಆಡಳಿತ ನಡೆಸಬೇಕಾದ ಪಕ್ಷಗಳ ಮುಖಂಡರು ಸಚಿವ ಸ್ಥಾನಕ್ಕಾಗಿ ಕಿತ್ತಾಟ ಆರಂಭಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತನ್ನ ಕುರ್ಚಿ ಉಳಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ. ‌ಆದ್ದರಿಂದಲೇ ಆಡಳಿತ ವ್ಯವಸ್ಥೆ ಸಂಪೂರ್ಣ ಹದಕೆಟ್ಟಿದ್ದು ಇದೀಗ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ವಿಚಿತ್ರ ಪದ್ದತಿ ಆರಂಭವಾಗಿದೆ. ಶಾಲಾ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದ್ದ ಶಿಕ್ಷಣ ಸಂಸ್ಥೆಗಳು ವ್ಯಾಪಾರ ನಡೆಸುತ್ತಿದೆಯೇ ಎಂಬ ಸಂಶಯವೂ ವ್ಯಕ್ತವಾಗಿದ್ದು, ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ರಾಜ್ಯ ಸರಕಾರ ಯಾವ ಕ್ರಮ‌ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕುಮಾರಸ್ವಾಮಿ ಅವರ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚಿಗೆ ಸಚಿವರ ಆಯ್ಕೆ ಮಾಡುವ ಸಂದರ್ಭದಲ್ಲಿ ಸಚಿವರ ವಿದ್ಯಾಭ್ಯಾಸ ನೋಡಿ ಇಡೀ ರಾಜ್ಯವೇ ದಂಗಾಗಿತ್ತು. ಯಾಕೆಂದರೆ ೧೦ನೇ ತರಗತಿ ಪಾಸ್ ಆಗದವರೂ ಕೂಡ ರಾಜ್ಯವನ್ನಾಳುವ ಸಚಿವರಾಗಿದ್ದು ಪವಾಡವೇ ಸರಿ‌. ಶಿಕ್ಷಣ ಸಚಿವರಂತೂ ಎಂಟನೇ ತರಗತಿ ಪೂರ್ಣಗೊಳಿಸಲಾಗದ ಮಂತ್ರಿ ಎಂದರೆ ಇವರು ರಾಜ್ಯದಲ್ಲಿ ಶಿಕ್ಷಣಕ್ಕೆ ಯಾವ ಯೋಜನೆಗಳನ್ನು ಬಿಡುಗಡೆಗೊಳಿಸಲು ಸಾಧ್ಯ ಎಂಬುದು ಇಡೀ ರಾಜ್ಯದ ಜನರಲ್ಲಿ ಪ್ರಶ್ನೆಯಾಗಿತ್ತು. ಆದರೆ ಮೈತ್ರಿ ಸರಕಾರದಲ್ಲಿ ಇಂತಹ ಮಂತ್ರಿಗಳನ್ನೇ ಆಯ್ಕೆ ಮಾಡಿದ್ದು, ರಾಜ್ಯದ ಆಡಳಿತ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ತಿಳಿಸಿಕೊಡುತ್ತದೆ.!

ಶಾಲೆಗಳಿಗೂ ಬಂತು ಶಿಫ್ಟ್ ವೈಸ್ ಶಿಕ್ಷಣ..!

ಈವರೆಗೆ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಕೆಲಸಗಾರರಿಗೆ ಶಿಫ್ಟ್ ವೈಸ್ ಕೆಲಸ ಮಾಮೂಲಾಗಿತ್ತು.‌ ದಿನಕ್ಕೆ ಎರಡು ಅಥವಾ ಮೂರು ಶಿಫ್ಷ್ ಗಳನ್ನು ಮಾಡುತ್ತಿದ್ದ ಕಾರ್ಮಿಕರು ಒಂದೆಡೆಯಾದರೆ ಇದೀಗ ರಾಜ್ಯದಲ್ಲಿ ಶಾಲಾ ಮಕ್ಕಳಿಗೂ ಈ ವ್ಯವಸ್ಥೆ ಬಂದಿದೆ. ಬೆಳಿಗ್ಗೆ ಹೋಗಿ ಸಂಜೆ ವಾಪಾಸಾಗುತ್ತಿದ್ದ ಶಾಲಾ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದು ಭಾರೀ ಆಘಾತ ನೀಡಿದೆ.‌ ಇನ್ನು ಮುಂದೆ ಶಾಲೆಯಲ್ಲಿ ಶಿಫ್ಟ್‌ವೈಸ್ ಶಿಕ್ಷಣ ನೀಡಲಾಗುತ್ತದೆ.‌ ಬೆಳಿಗ್ಗೆ ಮತ್ತು ರಾತ್ರಿ ವೇಳೆ ಶಿಕ್ಷಣ ನೀಡಲಾಗುತ್ತದೆ.‌ ಆದ್ದರಿಂದ ಕೆಲವು ಮಕ್ಕಳು ಹಗಲು ಹೊತ್ತಿನಲ್ಲಿ ಶಾಲೆಗೆ ಹೋದರೆ , ಇನ್ನೂ ಕೆಲವು ವಿದ್ಯಾರ್ಥಿಗಳು ರಾತ್ರಿ ವೇಳೆ ಶಾಲೆಗೆ ಬರುವಂತೆ ಹೊಸ ಪದ್ದತಿಯನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇರುವ ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಫಸ್ಟ್ ಶಿಫ್ಟ್ ಮತ್ತು ಸೆಕೆಂಡ್ ಶಿಫ್ಟ್ ನಲ್ಲಿ ಶಾಲಾ ವಿದ್ಯಾರ್ಥಿಗಳು ಬರುವಂತೆ ಈಗಾಗಲೇ ಸಂಸ್ಥೆಯ ಆಡಳಿತ ಮಂಡಳಿ ಆದೇಶ ನೀಡಿದ್ದು, ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಯಾವುದೇ ಕಾರಣಕ್ಕೂ ಈ ರೀತಿಯ ವ್ಯವಸ್ಥೆ ಇರುವ ಶಾಲೆಗಳಿಗೆ ಕಳುಹಿಸುವುದಿಲ್ಲ ಎನ್ನುತ್ತಿದ್ದಾರೆ ಪೋಷಕರು. ಆದರೆ ಶಾಲಾ ಆಡಳಿತ ಮಂಡಳಿ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ, ನಮ್ಮ ಆದೇಶದ ಪ್ರಕಾರ ಶಾಲಾ ವಿದ್ಯಾರ್ಥಿಗಳು ಹಾಜರಿರಬೇಕು ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ..!

ಆದ್ದರಿಂದ ರಾಜ್ಯ ಸರಕಾರ ಇಂತಹ ಅಧಿಕಪ್ರಸಂಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಶಿಕ್ಷಣ ಸಚಿವರು ಕೂಡ ಇಂತಹ ವ್ಯವಸ್ಥೆಗೆ ಜೈ ಎನ್ನುತ್ತಾರಾ ಕಾದು ನೋಡಬೇಕಾಗಿದೆ. ಶಿಕ್ಷಣ ಸಚಿವರೇ ಸರಿಯಾದ ಶಿಕ್ಷಣ ಪಡೆಯದೇ ಇರುವುದರಿಂದ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ…?!

–ಅರ್ಜುನ್

Tags

Related Articles

Close