ಪ್ರಚಲಿತ

ಬಿಗ್ ಬ್ರೇಕಿಂಗ್! ಡಿಕೆಶಿ ಬಂಧನಕ್ಕೆ ಕ್ಷಣಗಣನೆ..? ಕೋರ್ಟ್ ಆದೇಶದ ಬೆನ್ನಲ್ಲೇ ಡಿಕೆಶಿ ಆಪ್ತರ ಗೃಹಪ್ರವೇಶ ಮಾಡಿದ ಸಿಬಿಐ.! 

ಆದಾಯ ತೆರಿಗೆ ವಿಚಾರದಲ್ಲಿ ಭಾರೀ ಭ್ರಷ್ಟಾಚಾರವನ್ನು ಎಸಗಿದ್ದ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿಕೆ ಸುರೇಶ್‍ಗೆ ಬಂಧನ ಭೀತಿ ಎದುರಾಗಿದೆ. ತನ್ನ ಕಾಂಗ್ರೆಸ್ ಪಕ್ಷದ ಅಧಿಕಾರವದೀಯಲ್ಲಿ ಭಾರೀ ಅವ್ಯವಹಾರವನ್ನು ನಡೆಸಿ ದಾಖಲೆಗಳ ಪ್ರಕಾರ ದಿನಕ್ಕೆ 25 ಲಕ್ಷದಂತೆ ಸಂಪಾದಿಸುತ್ತಿದ್ದ ಡಿಕೆ ಶಿವಕುಮಾರ್ ಇದೀಗ ಸಿಬಿಐ ಬೀಸಿದ ಬಲೆಯಲ್ಲಿ ವಿಲವಿಲ ಅಂತ ಒದ್ದಾಡುತ್ತಿದ್ದಾರೆ.

ಸರ್ಚ್ ವಾರೆಂಟ್ ಆದೇಶಿಸಿದ ಸಿಬಿಐ..!

ಡಿಕೆ ಶಿವಕುಮಾರ್ ಅವರ ಆಪ್ತರ ಮನೆಗಳಲ್ಲಿ ಮಹತ್ತರ ದಾಖಲೆಗಳು ಇವೆ. ಹೀಗಾಗಿ ಅವರ ಮನೆಗಳ ಮೇಲೆ ದಾಳಿ ನಡೆಸಲು ಸರ್ಚ್ ವಾರೆಂಟ್‍ನ್ನು ನ್ಯಾಯಾಲಯ ನೀಡಬೇಕು ಎಂದು ಸಿಬಿಐ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಆದೇಶವನ್ನು ನೀಡಿದ ಸಿಬಿಐನ 82ನೇ ವಿಶೇಷ ನ್ಯಾಯಾಲಯ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಅವರ 11 ಮಂದಿ ಆಪ್ತರ ಮನೆಗಳ ಮೇಲೆ ಸರ್ಚ್ ವಾರೆಂಟ್ ಹೊರಡಿಸಿದೆ.

ಹಣಕಾಸಿನ ಭಾರೀ ಅವ್ಯವಹಾರದ ಹಿನ್ನೆಲೆಯಲ್ಲಿ ಈ ಹಿಂದೆ ಡಿಕೆ ಶಿವಕುಮಾರ್ ಹಾಗೂ ಅವರ ಕೆಲ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಬರೋಬ್ಬರಿ 4 ದಿನಗಳ ಕಾಲ ಡಿಕೆ ಶಿವಕುಮಾರ್ ಅವರನ್ನು ಗೃಹ ಬಂಧನದಲ್ಲಿರಿಸಿಕೊಂಡು ವಿಚಾರಣೆ ನಡೆಸಿದ್ದರು. ಅದೆಷ್ಟೋ ಮಹತ್ವದ ದಾಖಲೆಗಳನ್ನು ಐಟಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 

ಈ ಸಮಯದಲ್ಲೇ ಡಿಕೆ ಶಿವಕುಮಾರ್ ಅವರನ್ನು ಐಟಿ ಬಂಧಿಸಲಾಗುತ್ತಿದೆ ಎಂದೇ ಹೇಳಲಾಗುತ್ತಿತ್ತು. ನಂತರ ಐಟಿ ಇಲಾಖೆಯಿಂದ ಇಡಿಗೆ ಪ್ರಕರಣ ವರ್ಗಾಯಿಸಲಾಗಿತ್ತು. ಆದರೆ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರರನ್ನು ಬಂಧಿಸದೆ ವಿಚಾರಣೆಯನ್ನು ನಡೆಸಿತ್ತು.

ಆದರೆ ಇದೀಗ ಸಿಬಿಐ ನ ವಿಶೇಷ ನ್ಯಾಯಾಲಯ ಈ ಬಗ್ಗೆ ಮಹತ್ವದ ಆದೇಶವನ್ನು ಹೊರಡಿಸಿದ್ದು ಡಿಕೆಶಿ ಸಹೋದರರಿಗೆ ಸಂಕಷ್ಟ ಎದುರಾಗಿದೆ. ತಮ್ಮ ಆಪ್ತರ ಮನೆಗಳಿಗೆ ಸರ್ಚ್ ವಾರೆಂಟ್ ಜಾರಿಯಾದರೆ ಎಲ್ಲಿ ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುವುದೋ ಎಂಬ ಭಯದಲ್ಲಿ ಡಿಕೆಶಿ ಬ್ರದರ್ಸ್ ಕಾಲ ಕಳೆಯುತ್ತಿದ್ದು ಇದೀಗ ಸಿಬಿಐ ಇದಕ್ಕೆ ಮುಹೂರ್ತ ಫಿಕ್ಸ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ.

ದಾಳಿ ಮಾಡೇ ಬಿಡ್ತು ಸಿಬಿಐ..!

ಅತ್ತ ಸಿಬಿಐ ನ್ಯಾಯಾಲಯದಲ್ಲಿ ಇಂತಹದ್ದೊಂದು ಮಹತ್ವದ ಆದೇಶ ಹೊರ ಬೀಳುತ್ತಿದ್ದಂತೆಯೇ ಇತ್ತ ಬೆಂಗಳೂರು ಸಹಿತ 5 ಕಡೆಗಳಲ್ಲಿ ಸಿಬಿಐ ಡಿಕೆಶಿ ಆಪ್ತರ ಗೃಹ ಪ್ರವೇಶ ಮಾಡೇ ಬಿಡ್ತು. ಕನಕಪುರ, ರಾಮನಗರ, ಬೆಂಗಳೂರು ನಗರ,ಯಶವಂತಪುರ,ನೆಲಮಂಗಳ ಸೇರಿದಂತೆ 5 ಕಡೆಗಳಲ್ಲಿ ದಾಳಿ ಮಾಡಿದೆ. ಡಿಕೆಶಿವಕುಮಾರ್ ಕೋಟ್ಯಾಂತರ ರೂಪಾಯಿಗಳಷ್ಟು ಹಣ ಅವ್ಯವಹಾರಗಳನ್ನು ಮಾಡಿದ್ದಾರೆ. ಇದಕ್ಕೆ ಅವರ ಆಪ್ತರು ಸಹಕಾರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ಮಾಡಿದೆ.

ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ ಅವರ ಆಪ್ತರ ಮನೆಗಳು ಹಾಗೂ ಕಛೇರಿಗಳ ಮೇಲೆ ಸಿಬಿಐ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದೆ. ಇದರ ಮಾಹಿತಿಯನ್ನು ತಿಳಿದೇ ಇಂದು ಬೆಳಿಗ್ಗೆ ಡಿಕೆಶಿ ಕೇಂದ್ರದ ಮೇಲೆ ಆರೋಪ ಮಾಡಿದ್ದರು.

ಇದೀಗ ಸಿಬಿಐ ಬೆನ್ನಲ್ಲೇ ಇಡಿ ಕೂಡಾ ಡಿಕೆಶಿ ಬೇಟೆಗೆ ಸಿದ್ದವಾಗುತ್ತಿದೆ. ನೋಟ್ ಅಪನಗದೀಕರಣದ ನಂತರ ಕೋಟ್ಯಾಂತರ ನೋಟ್‍ಗಳನ್ನು ಅಕ್ರಮವಾಗಿ ವಿನಿಮಯ ಮಾಡಿಕೊಂಡಿರುವ ಹಾಗೂ ಸಾಕ್ಷಿಗಳನ್ನು ನಾಶಪಡಿಸಿಕೊಂಡಿರುವ ಕೇಸನ್ನು ಹಿಡಿದುಕೊಂಡು ಇಡಿ ಕೇಸ್ ದಾಖಲಿಸಲು ಮನವಿ ಮಾಡಿಕೊಂಡಿದೆ. ಒಂದೊಮ್ಮೆ ಜಾರಿ ನಿರ್ಧೇಶನಾಲಯದಿಂದ ಅನುಮತಿ ಸಿಕ್ಕಿದ್ದೇ ಆದಲ್ಲಿ ಡಿಕೆಶಿ ಬ್ರದರ್ಸ್ ಯಾವುದೇ ಕ್ಷಣದಲ್ಲೂ ಬಂಧನವಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಇದೀಗ ಐಟಿ, ಇಡಿ, ಸಿಬಿಐ ಹೀಗೇ ಎಲ್ಲಾ ಇಲಾಖೆಯ ಕೆಂಗಣ್ಣು ಡಿಕೆ ಶಿವಕುಮಾರ್ ಅವರ ಅಕ್ರಮ ವಹಿವಾಟಿನ ಮೇಲೆ ಬಿದ್ದಿರುವುದು ಯಥಾ ಶೀಘ್ರ ಕೋಟ್ಯಾಧಿಪತಿ ಜೈಲು ಕಂಬಿ ಎಣಿಸಬಹುದು ಎಂದು ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close