ಪ್ರಚಲಿತ

ಶಾಕ್! ಅತಿದೊಡ್ಡ ಕೇಸ್ ನಲ್ಲಿ ಸಿಕ್ಕಿಬಿದ್ದ ಸಿದ್ದರಾಮಯ್ಯ.! ಜೈಲುಕಂಬಿ ಎಣಿಸಲು ಸಿದ್ದರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಜೆ ಜಾರ್ಜ್ ಹಾಗೂ ಬೈರತಿ ಬಸವರಾಜ್..!

ಅಧಿಕಾರ ಅವಧಿಯಲ್ಲಿ ತಾನು ಆಡಿದ್ದೇ ಆಟ ಎಂದು ಮೆರೆದಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೇಕಾದಷ್ಟು ಹಗರಣಗಳ ರಾಶಿಯನ್ನೇ ಮಾಡುಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅದೆಷ್ಟೇ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದರೂ ತನ್ನದೇ ಅಧಿಕಾರ ಇದ್ದಿದ್ದರಿಂದ ಪಾಸಾಗುತ್ತಿದ್ದರು. ತಾನೇ ರಚಿಸಿದ ಎಸಿಬಿಯಲ್ಲಿಯೇ ಅನೇಕ ಪ್ರಕರಣಗಳು ದಾಖಲಾಗಿದ್ದರೂ ಅದರ ತನಿಖೆ ನೆಲಕಚ್ಚಿದೆ. ಆದರೆ ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲುಪಾಲಾಗುವ ಎಲ್ಲಾ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಹಳೇ ನೋಟು ನವೀಕರಣ ಕೇಸ್ ನಲ್ಲಿ ಸಿಕ್ಕಿಬಿದ್ದ ಸಿದ್ದು..!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ನಿರ್ಧಾರವಾಗಿದ್ದ ನೋಟು ಅಪನಗದೀಕರಣದ ವಿಚಾರ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಭಾರೀ ಸುದ್ದಿ ಮಾಡಿತ್ತು. ದೇಶದ ಭ್ರಷ್ಟ ನಾಯಕರು, ರಾಜಕಾರಣಿಗಳು ಎಂಬಂತೆ ಕೆಲ ಕಳ್ಳ ಕುಳಗಳು ಮೋದಿಯವರ ಈ ನಿರ್ಧಾರದಿಂದ ಸಿಕ್ಕಿಬಿದ್ದಿದ್ದರು. ಅಂದು ಆರಂಭವಾದ ಬೇಟೆ ಇಂದಿನವರೆಗೂ ನಡೆಯುತ್ತಲೇ ಇದೆ.

ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದಲ್ಲಿ . ನೋಟು ಅಪನಗದೀಕರಣದ ಸಮಯದಲ್ಲಿ ಕೋಟಿಗಟ್ಟಲೆ ಹಣಗಳನ್ನು ಬ್ಯಾಂಕುಗಳಲ್ಲಿ ಹಣ ಬದಲಾವಣೆ ಮಾಡಿಕೊಂಡಿರುವ ಕೇಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಬಿದ್ದಿದೆ. ನೋಟು ಬ್ಯಾನ್ ಸಂದರ್ಭದಲ್ಲಿ ಬರೋಬ್ಬರಿ ೪೧೦ ಕೋಟಿಗಳಷ್ಟು ಹಣಗಳನ್ನು ಅಕ್ರಮವಾಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಸಚಿವರಾದ ಕೆಜೆ ಜಾರ್ಜ್ ಹಾಗೂ ಬೈರತಿ ಬಸವರಾಜ್ ಕೂಡಾ ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರು ಒನ್ ಎಂಬ ಸಂಸ್ಥೆಯನ್ನು ಉಪಯೋಗಿಸಿಕೊಂಡು ಈ ದಂಧೆಯನ್ನು ಮಾಡಿದ್ದಾರೆ.! ಈ ಬಗ್ಗೆ ಸ್ವತಃ ದಾಖಲೆ ನೀಡಿದ ಭಾರತೀಯ ಜನತಾ ಪಕ್ಷದ ಬೆಂಗಳೂರು ನಗರ ವಕ್ತಾರರಾಗಿರುವ ಎನ್ ಆರ್ ರಮೇಶ್ ಈ ಬಗ್ಗೆ ಅಧಿಕೃತ ದಾಖಲೆಯನ್ನು ಬಿಡುಗಡೆಗೊಳಿಸಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್ ಹಾಗೂ ಬೈರತಿ ಬಸವರಾಜ್ ಬೆಂಗಳೂರು ಒನ್ ಎಂಬ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು,ಅಲ್ಲಿ ಸಣ್ಣ ಗ್ರಾಹಕರಿಂದ ಸಂಗ್ರಹವಾದ ಹಣಗಳನ್ನು ಇವರ ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳಲಾಗಿದೆ” ಎಂದು ಆರೋಪಿಸಿದ್ದಾರೆ.

ಸತತ ೧೪೧ ದಿನಗಳಂತೆ ಸ್ವಲ್ಪ ಸ್ವಲ್ಪ ಹಣಗಳನ್ನೇ ಕ್ರಮವಾಗಿ ಬದಲಾಯಿಸಿಕೊಂಡು ಇವರ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ನವಂಬರ್ ೧೦ ೨೦೧೬ರಿಂದ ಮಾರ್ಚ್ ೩೧ ೨೦೧೭ರವರೆಗೆ ನಿರಂತರವಾಗಿ ಹಣವನ್ನು ಬದಲಾಯಿಸಿಕೊಂಡಿದ್ದಾರೆ. ೫೦೦ ಹಾಗೂ ೧೦೦೦ ಮುಖಬೆಲೆಯ ಅಂದಿನ ಹಳೇ ನೋಟುಗಳನ್ನು ಬ್ಯಾಂಕ್ ಗೆ ನೀಡಿ ಹೊಸ ನೋಟುಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ೫೧೪ ಕೋಟಿ ವ್ಯವಹಾರ ನಡೆದಿದ್ದು ಅದರಲ್ಲಿ ೪೧೦ ಕೋಟಿ ಅಕ್ರಮ ಎಂದು ಸಾಭಿತಾಗಿದೆ. ಅಪನಗದೀಕರಣದ ನಂತರ ಹಳೆ ನೋಟುಗಳನ್ನು ಬದಲಾಯಿಸಿ ಚಾಲ್ತಿಯಲ್ಲಿರುವ ನೋಟುಗಳನ್ನು ಸ್ವೀಕರಿಸುವ ಕ್ರಮ ಇತ್ತು.

ಆದರೆ ಬೆಂಗಳೂರು ಒನ್ ಎಂಬ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಈ ಮೂವರು ಕಾಂಗ್ರೆಸ್ ನಾಯಕರು ಮಹಾ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ವಿಚಾರ ಇದೀಗ ದಾಖಲೆ ಸಮೇತ ಬಹಿರಂಗವಾಗಿದೆ.

ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ಮೇಲೆ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರಕ್ಕೂ ಸಿಟ್ಟು ಇದ್ದು ಸಿದ್ದರಾಮಯ್ಯ ಹಾಗೂ ಅವರ ಆಪ್ತರು ಜೈಲುಪಾಲಾಗುವ ಎಲ್ಲಾ ಸಾಧ್ಯತೆಯೂ ಇದೆ ಎನ್ನಲಾಗಿದೆ.

 

-ಸುನಿಲ್ ಪಣಪಿಲ

Tags

Related Articles

Close