ಪ್ರಚಲಿತ

ಕಾಂಗ್ರೆಸ್‍ನಲ್ಲಿ ಭುಗಿಲೆದ್ದ ಬಂಡಾಯ..! ಮಿತ್ರಪಕ್ಷದಲ್ಲೂ ಭಾರೀ ತಳಮಳ..!

ನೆಟ್ಟಗೆ 6 ತಿಂಗಳು ಕಂಪ್ಲೀಟ್ ಮಾಡ್ರಪ್ಪಾ ಎಂದು ರಾಜ್ಯದ ಜನರು ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಅವರ ಮೈತ್ರಿ ಸರ್ಕಾರಕ್ಕೆ ವ್ಯಂಗ್ಯ ಮಾತುಗಳನ್ನು ಆಡುತ್ತಲೇ ಇದ್ದಾರೆ. ಈ ಸರ್ಕಾರ ಕೆಲವೇ ಸಮಯಗಳಲ್ಲಿ ಬಿದ್ದು ಹೋಗಲಿದೆ. ಪಕ್ಷದೊಳಗೇ ಭಿನ್ನಮತ ಭುಗಿಲೇಳಲಿದೆ ಎಂದು ಅದೆಷ್ಟೋ ಜನ ಭವಿಷ್ಯ ನುಡಿದಿದ್ದರು. ಅಂತೆಯೇ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ್ ಜನತಾ ದಳದ ಮೈತ್ರಿ ಸರ್ಕಾರದಲ್ಲಿ ಇದೀಗ ಭಿನ್ನಮತ ಭುಗಿಲೇಳುವ ಎಲ್ಲಾ ಲಕ್ಷಣಗಳೂ ಗೋಚರಿಸಿದೆ.

ಕಗ್ಗಂಟಾದ ಸಚಿವ ಸ್ಥಾನ..!

ಈಗಾಗಲೇ ಕಾಂಗ್ರೆಸ್ ಹಾಗೂ ಜನತಾದಳ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನಕ್ಕಾಗಿ ಸರ್ಕಸ್ ಬಹಳ ಜೋರಾಗಿಯೇ ನಡೆಯುತ್ತಿದೆ. ಮುಖ್ಯಮಂತ್ರಿ ಸ್ಥಾನ ನಿಮಗೆ ನೀಡಿದ್ದೇವೆ. ಹೀಗಾಗಿ ನಾವು ಕೇಳಿದ ಖಾತೆ ನಾವೇ ಇಟ್ಟುಕೊಳ್ಳುತ್ತೇವೆ ಎಂದು ಷರತ್ತನ್ನು ಇಟ್ಟಿದೆ. ಈ ಹಿಂದೆ ಬೇಷರತ್ತಾಗಿ ಬೆಂಬಲ ಘೋಷಿಸುತ್ತಿದ್ದೇವೆ ಎಂದು ಹೇಳಿದ್ದ ಕಾಂಗ್ರೆಸ್ ಇದೀಗ ಭಾರೀ ಮೋಸ ಮಾಡಿ ತನಗೆ ಬೇಕಾದ ಹುದ್ದೆಗಳನ್ನು ಇಟ್ಟುಕೊಳ್ಳುವತ್ತ ಕಾರ್ಯಪ್ರವೃತ್ತವಾಗಿದೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಮತ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ತಮಗೆ ಹಾಗೂ ತಾವು ಬೆಂಬಲಿತ ನಾಯಕರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ನಾವು ಸುಮ್ಮನೆ ಕೂರೋದಿಲ್ಲ ಎಂದು ಕಾಂಗ್ರೆಸ್ 11 ಶಾಸಕರು ಬಂಡಾಯ ಏಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Image result for kumaraswamy

ತಮಗೆ ಇಂತದ್ದೇ ಸ್ಥಾನಮಾನ ಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಶಾಸಕರು ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಪ್ರಮುಖವಾಗಿ ಲಿಂಗಾಯತ ವೀರಶೈವ ಶಾಸಕರು ತಮ್ಮ ಬೇಡಿಕೆಯನ್ನು ಕಾಂಗ್ರೆಸ್ ನಾಯಕರ ಮುಂದಿಟ್ಟಿದ್ದಾರೆ.

ಇನ್ನು ಬಂಡಾಯದ ಬಿಸಿ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ. ಮಿತ್ರ ಪಕ್ಷ ಜನತಾ ದಳದಲ್ಲೂ ಬಂಡಾಯದ ಹೊಗೆ ಒಳಗಿಂದೊಳಗೆ ಕುದಿಯುತ್ತಿದೆ.ಅದೆಷ್ಟೋ ವರ್ಷಗಳ ನಂತರ ನಮಗೆ ಅಧಿಕಾರ ದೊರಕಿದೆ. ಪ್ರಮುಖ ಖಾತೆಗಳನ್ನು ನಮಗೆ ನೀಡಬೇಕು ಎಂದು ಜನತಾ ದಳದ ಶಾಸಕರು ತಮ್ಮ ಮುಖಂಡರ ಎದುರು ಇಟ್ಟಿದ್ದಾರೆ.

ಎಚ್ಚರಿಕೆ ನೀಡಿದ ಕೈಕಮಾಂಡ್..!

ಈ ಮಧ್ಯೆ ಬಂಡಾಯವೇಳುವ ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ನೇರ ಎಚ್ಚರಿಕೆ ನೀಡಿದೆ ಎಂದು ಎನ್ನಲಾಗಿದೆ. ಈಗಾಗಲೇ ತಮಗೆ ಮಂತ್ರಿ ಮಂಡಲದ ಒಳಗೆ ಪ್ರಮುಖ ಖಾತೆ ಬೇಕು ಎಂದಿರುವ ಕಾಂಗ್ರೆಸ್ ಶಾಸಕರಿಗೆ ಕೈಕಮಾಂಡ್ ಎಚ್ಚರಿಕೆಯ ಸೂಚನೆಯನ್ನೂ ನೀಡಿದೆ.

  • ಏಕಲವ್ಯ
Tags

Related Articles

Close