ಪ್ರಚಲಿತ

ಬ್ರೇಕಿಂಗ್! ಜೆಡಿಎಸ್‍ನಲ್ಲೂ ಶುರುವಾಯಿತು ಯುದ್ಧ.! ಕಕ್ಕಾಬಿಕ್ಕಿಯಾದ ಸಿಎಂ ಕುಮಾರ ಸ್ವಾಮಿ?

ಬೇಕಾಗಿದ್ದ ಭಾರತೀಯ ಜನತಾ ಪಕ್ಷವನ್ನು ಕೆಳಗಿಳಿಸಿ, ಮೈತ್ರಿಯ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಹಾಗೂ ಜನತಾ ದಳ ಸರ್ಕಾರದಲ್ಲಿ ಇದೀಗ ಎಲ್ಲವೂ ಅಯೋಮಯ. ಅದೇಗೋ ಸರ್ಕಾರ ಸರ್ಕಸ್ ನಡೆಸಿ ಮುಖ್ಯಮಂತ್ರಿ ಆದ ಕುಮಾರ ಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾದ ಜಿ.ಪರಮೇಶ್ವರ್‍ಗೆ ನಂತರ ಸಂಕಟದ ಮೇಲೆ ಸಂಕಟ. ಇವತ್ತೋ ನಾಳೆಯೋ ಬಿದ್ದುಹೋಗುವ ಸರ್ಕಾರ ಎಂಬ ಭಯಕ್ಕೆ ಹೆದರಿರುವ ಉಭಯ ಪಕ್ಷಗಳ ನಾಯಕರು ಇದೀಗ ಸಂಪುಟ ವಿಸ್ತರಣೆಯ ಸಂಕಟದಲ್ಲಿ ಸಿಲುಕಿಹಾಕಿಕೊಂಡಿದ್ದರೆ.

ಅತ್ತ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ಉಂಟಾಗುತ್ತಿರುವ ನಡುವೆಯೇ ಇತ್ತ ಕೂಲ್ ಆಗಿದ್ದ ಜನತಾ ದಳದಲ್ಲೂ ಭಿನ್ನಮತ ಭುಗಿಲೇಳುವ ಸಂಕಟ ಎದುರಾಗಿದೆ. ಕಾಂಗ್ರೆಸ್‍ನಲ್ಲಿ ಯಾರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂಬ ಗೊಂದಲ ಎದುರಾಗಿರುವುದು ಹಳೇ ವಿಚಾರ. ಒಂದು ಕಡೆ ಲಿಂಗಾಯತ ಶಾಸಕರು ಲಾಬಿ ನಡೆಸುತ್ತಿದ್ದರೆ, ಮತ್ತೊಂದು ಕಡೆ ಡಿಕೆ ಶಿವಕುಮಾರ್ ಅವರಿಗೆ ಪ್ರಮುಖ ಯಾವ ಖಾತೆನೂ ಸಿಗಲಿಲ್ಲ ಎಂಬ ಮನಸ್ತಾಪ ಕಾಂಗ್ರೆಸ್ ಪಕ್ಷವನ್ನು ಕುಕ್ಕಿ ತಿನ್ನುತ್ತಿದೆ.

Image result for kumaraswamy

ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗಲೇ ನಮ್ಮಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳುತ್ತಿರುವಾಗಲೇ ಇದೀಗ ಭಿನ್ನಮತ ಭುಗಿಲೇಳುತ್ತಿದೆ. ಜನತಾ ದಳದ ನಾಯಕ ಹಾಗೂ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡ ಅವರ ಪುತ್ರ ರೇವಣ್ಣರ ಪಟ್ಟಿನಿಂದಾಗಿ ಜನತಾ ದಳದಲ್ಲೂ ಅಲ್ಲೋಲ ಕಲ್ಲೋಲ ಆಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಪಟ್ಟು ಹಿಡಿದಿದ್ದ ಇಂಧನ ಖಾತೆಯನ್ನು ಬಿಟ್ಟುಕೊಡದ ಜನತಾ ದಳ ಆ ಖಾತೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆ ಖಾತೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಸಹೋದರ ಹೆಚ್.ಡಿ.ರೇವಣ್ಣ ಅವರಿಗೆ ಬೇಕು ಎಂದು ಹಠ ಹಿಡಿದ ಪರಿಣಾಮ ಅದು ಕಾಂಗ್ರೆಸ್ ಕೈತಪ್ಪಿ ಜನತಾ ದಳದ ಜೋಳಿಗೆಗೆ ಬಂದು ಬಿದ್ದಿತ್ತು. ಆದರೆ ಇದೀಗ ರೇವಣ್ಣ ಎರಡೆರಡು ಖಾತೆಗಳನ್ನು ಕೇಳುತ್ತಿರುವ ಹಿನ್ನೆಲೆಯಲ್ಲಿ ಜನತಾ ದಳದೊಳಗೆಯೇ ಯುದ್ಧ ಆರಂಭವಾಗಿದೆ.

Image result for siddaramaiah

“ನಾನು ಮುಖ್ಯಮಂತ್ರಿ ಸಿದ್ದರಾಮಯ್ಯರ ಎದುರೇ ಸ್ಪರ್ಧಿಸಿ ಗೆಲುವು ಕಂಡಿದ್ದೇನೆ. ಇದು ಒಂದು ಐತಿಹಾಸಿಕ ಗೆಲುವು ಅನ್ನೋದ್ರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಹೀಗಾಗಿ ಓರ್ವ ರಾಜ್ಯ ಪ್ರಭಾವಿ ಮುಖ್ಯಮಂತ್ರಿಯನ್ನೇ ಸೋಲಿಸಿದ ಕಾರಣದಿಂದಾಗಿ ತಾವುಗಳು ನಮಗೆ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದ್ರು.

ರೇವಣ್ಣ ಕೂಡಾ ತನಗೆ ಎರಡೆರಡು ಖಾತೆಗಳನ್ನು ನೀಡಬೇಕು. ಇಂಧನ ಖಾತೆಯೊಂದಿಗೆ ಲೋಕೋಪಯೋಗಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಹಠ ಹಿಡಿದಿದ್ದಾರೆ. ಈ ಮೂಲಕ ಸುಮ್ಮನಿದ್ದ ಪಕ್ಷವನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅನ್ನೋದ್ರಲ್ಲಿ ಯಾವುದೇ ಶಂಕೆಯಿಲ್ಲ..

  • ಏಕಲವ್ಯ
Tags

Related Articles

Close