ಪ್ರಚಲಿತ

ಶತ್ರುಗಳನ್ನು ಸದೆಬಡಿಯಲು ಕೇಂದ್ರ ಸರಕಾರದಿಂದ ಸೈನ್ಯಕ್ಕೆ ಭರ್ಜರಿ ಗಿಫ್ಟ್!! ಶತ್ರು ರಾಷ್ಟ್ರಕ್ಕೆ ನಡುಕ ಮುಟ್ಟಿಸಿದ ಮೋದಿ!!

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ  ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಶ್ರಮಿಸುತ್ತಿರುತ್ತಾರೆ!! ಒಂದಲ್ಲ ಒಂದು ವಿಷಯಗಳಲ್ಲಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿರುತ್ತಾರೆ!! ಪದೇ ಪದೇ ಭಾರತೀಯ ಸೇನೆ ತನ್ನ ನೆರೆ ರಾಷ್ಟ್ರದ ಉಪಟಳದಿಂದ ಅದೆಷ್ಟೋ ಬಾರಿ ಶತ್ರುರಾಷ್ಟ್ರವನ್ನು ಹೀನಾಯವಾಗಿ ಸೋಲಿಸಿದರೂ ಕೂಡ ತಮ್ಮ ನರಿ ಬುದ್ದಿಯನ್ನು ಬಿಡುವಲ್ಲಿ ಮಾತ್ರ ತಯಾರಾಗಿಲ್ಲ ಎನ್ನುವುದು ವಿಪರ್ಯಾಸ!! ಆದರೆ ಈಗಾಗಲೇ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ನಡೆಸುತ್ತಿದೆ!!

Image result for modi with soldiers

ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಿಂದ ಭಾರತೀಯ ಸೇನೆ ನಾನಾ ರೀತಿಯಲ್ಲಿ ಮುಂದುವರಿದಿದೆ!! ಈಗಾಗಲೇ ಮೋದಿ ಸರಕಾರ ಭಾರತೀಯ ಸೈನಿಕರಿಗೆ ಬುಲೆಟ್ ಫ್ರೂಫ್ ಜಾಕೆಟ್, ಬುಲೆಟ್ ಫ್ರೂಫ್ ಹೆಲ್ಮೆಟ್, ಸಿಆರ್ ಫಿಎಫ್ ಸೈನ್ಯಕ್ಕೆ 100 ನೂತನ ಬುಲೆಟ್ ಫ್ರೂಫ್ ವಾಹನಗಳನ್ನು ನೀಡಿದ್ದು ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆ ಸಮರ್ಥವಾಗಿದ್ದಲ್ಲದೇ, ಶತ್ರುರಾಷ್ಟ್ರವನ್ನು ಯುದ್ದಕ್ಕಾಗಿ ಆಹ್ವಾನ ನೀಡುವಷ್ಟರ ಮಟ್ಟಿಗೆ ಇದೀಗ ಭಾರತೀಯ ಸೇನೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಸರಕಾರ!! ಇದೀಗ ಶತ್ರುಗಳನ್ನು ಸದೆಬಡಿಯಲು ಮೋದಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ!!

ಶತ್ರುಗಳನ್ನು ಸದೆಬಡಿಯಲು ಕೇಂದ್ರ ಸರಕಾರದಿಂದ ಸೈನ್ಯಕ್ಕೆ ಭರ್ಜರಿ ಗಿಫ್ಟ್!!

ಇದೀಗ ಸೇನೆಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡಲು ನಿರ್ಧರಿಸಿದೆ. ರೋಬೋಟಿಕ್ ತಂತ್ರಜ್ಞಾನ (ಕೃತಕ ಬುದ್ಧಿಮತ್ತೆ)ಯುಳ್ಳ ಯುದ್ಧದಲ್ಲಿ ಹೋರಾಡುವ ಯಂತ್ರಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೇಶದಲ್ಲಿ ಭವಿಷ್ಯದಲ್ಲಿ ಉಂಟಾಗುವ ಯುದ್ಧಗಳಿಗೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವ ನೀತಿಯ ಭಾಗವಾಗಿ ಕೇಂದ್ರ ಸರ್ಕಾರ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಈ ಮಾನವರಹಿತ ಯಂತ್ರಗಳನ್ನು ಬಳಸಲು ಮುಂದಾಗಿದೆ. ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಕೃತಕ ಬುದ್ಧಿಮತ್ತೆಯ ಯಂತ್ರಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಭವಿಷ್ಯದ ಯುದ್ಧದ ಪ್ರತಿ ತಂತ್ರಗಳು ಇಂತಹ ತಂತ್ರಜ್ಞಾನಗಳನ್ನು ಹೊಂದಿರುವ ಯಂತ್ರಗಳನ್ನೇ ಅವಲಂಬಿಸಿರುತ್ತದೆ ಎಂದು ಉತ್ಪಾದನೆ ಕಾರ್ಯದರ್ಶಿ ಅಜಯ್ ಕುಮಾರ್ ತಿಳಿಸಿದ್ದಾರೆ. ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ನೇತೃತ್ವದಲ್ಲಿ ರಚನೆ ಆಗಿರುವ ಉನ್ನತ್ತಾಧಿಕಾರದ ಕಾರ್ಯಪಡೆ ಈ ಮಹತ್ವದ ಯೋಜನೆಯ ಕುರಿತ ಕಾರ್ಯಸೂಚಿ ಸಿದ್ಧಪಡಿಸಲಿದೆ. ಖಾಸಗಿ ಕಂಪನಿಗಳು ಮತ್ತು ಸಶಸ್ತ್ರ ಪಡೆಗಳ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ. ರೋಬಾಟಿಕ್ ತಂತ್ರಜ್ಞಾನದ ಅಳವಡಿಕೆ ಹೆಚ್ಚು ಹೆಚ್ಚು ಅಳವಡಿಕೆ ಅನಿವಾರ್ಯ ಆಗಿರುವುದುರಿಂದ ವಿಶ್ವದ ಹಲವು ರಾಷ್ಟ್ರಗಳು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿವೆ ಎಂದು ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಗಡಿಯಲ್ಲಿ ರಕ್ಷಣೆ ಒದಗಿಸಲು ಕೇಂದ್ರ ಸರಕಾರದಿಂದ ಮಾಸ್ಟರ್ ಪ್ಲಾನ್!!

ಚೀನಾ ಎಐ ಸಂಶೋಧನೆ ಮತ್ತು ಮೆಷಿನ್ ಲರ್ನಿಂಗ್‍ಗಾಗಿ ನೂರಾರು ಕೋಟಿ ಡಾಲರ್‍ಗಳನ್ನು ಖರ್ಚು ಮಾಡುತ್ತಿದೆ. 2030ರ ವೇಳೆಗೆ ಜಾಗತಿಕ ಎಐ ಆವಿಷ್ಕಾರ ಕೇಂದ್ರವಾಗಿ ಬೆಳೆಯುವುದು ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟಗಳು ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಸಂಶೋಧನೆ ಮಾಡುತ್ತಿವೆ. ಈ ಕುರಿತು ಕೇಂದ್ರ ಸರ್ಕಾರ ಜೂನ್‍ನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ಭದ್ರತೆ ಒದಗಿಸಲು ಈ ಯೋಜನೆ ಪೂರಕವಾಗಲಿದೆ. ರೋಬೋಟಿಕ್ ತಂತ್ರಜ್ಞಾನದ ಯಂತ್ರಗಳನ್ನು ಬಳಸುವ ಮೂಲಕ ಗಡಿಯಲ್ಲಿ ಹೈಟೆಕ್ ಭದ್ರತೆ ನೀಡಬೇಕು ಎಂದು ಸೇನೆ ಕೇಂದ್ರ ಸರ್ಕಾರದ ಜೊತೆ ಮಾತು ಕತೆ ನಡೆಸಿದೆ!!

ಈಗಾಗಲೇ ಬುಲೆಟ್ ಪ್ರೂಫ್ ಜಾಕೆಟ್, ಬುಲೆಟ್ ಪ್ರೂಫ್ ಹೆಲ್ಮೆಟ್‍ಗಳು.. ಸಿಆರ್ಪಿಎಫ್ ಯೋಧರಿಗೆ 100 ಬುಲೆಟ್ ಪ್ರೂಫ್ ವಾಹನಗಳನ್ನು ನೀಡುತ್ತಿದ್ದು ಈಗ ಮತ್ತೊಂದು ಹೊಸ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆಯನ್ನು ನೀಡುವ ಮೂಲಕ ನರೇಂದ್ರ ಮೋದಿ ಸರಕಾರ ಸೈನಿಕರಿಗೆ ಮಾನಸಿಕ ಸ್ಥೈರ್ಯವನ್ನು ನೀಡುತ್ತಿದೆ!! ಅಂತೂ ಭಾರತೀಯ ಸೇನೆ ಶತ್ರುರಾಷ್ಟ್ರವನ್ನು ಹಿಮ್ಮೆಟ್ಟಿಸುವಲ್ಲಿ ಇನ್ನಷ್ಟು ಬಲಿಷ್ಠವಾಗಲಿದ್ದು, ಶತ್ರುರಾಷ್ಟ್ರಗಳು ಈ ಬಗ್ಗೆ ಭಯಭೀತರಾಗಲಿರುವುದೂ ಮಾತ್ರ ಖಚಿತ!!!

ಪವಿತ್ರ

Tags

Related Articles

Close