ಪ್ರಚಲಿತ

ಕುಂಭಮೇಳಕ್ಕೆ ಭರ್ಜರಿ ತಯಾರಿ ನಡೆಸುತ್ತಿರುವ ಉತ್ತರ ಪ್ರದೇಶ!! ನೆಹರೂ ಪ್ರತಿಮೆ ತೆರವುಗೊಳಿಸಿದ ಯೋಗಿ ಆದಿತ್ಯನಾಥ ಸರಕಾರ!!

ಯೋಗಿ ಆದಿತ್ಯನಾಥರು ಇಡೀ ಉತ್ತರ ಪ್ರದೇಶವನ್ನು ಕಂಡು ಕೇಳರಿಯದ ರೀತಿಯಲ್ಲಿ ಬದಲಾವಣೆ ಮಾಡಿದ್ದಾರೆ!! ಈಗಾಗಲೇ ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ತೀರ್ಥಯಾತ್ರಿಗಳ ಪ್ರಸಿದ್ಧ ಕುಂಭ ಮೇಳಕ್ಕಾಗಿ ಉತ್ತರಪ್ರದೇಶದಲ್ಲಿ ಅದ್ದೂರಿಯಾಗಿಯೇ ಸಿದ್ದತೆ ನಡೆಯುತ್ತಿದೆ. ಅದರಂತೆಯೇ, ರಸ್ತೆಗೆ ಹೊಂದಿಕೊಂಡಿದ್ದ ನೆಹರೂ ಪ್ರತಿಮೆಯನ್ನು ಅಲಹಬಾದ್‍ನಿಂದ ತೆರವುಗೊಳಿಸಿದ್ದಾರೆ!!

ನೆಹರೂ ಪ್ರತಿಮೆಯನ್ನು ತೆರವುಗೊಳಿಸಿದ ಯೋಗಿ ಸರಕಾರ!!

2019ರ ಜನವರಿಯಲ್ಲಿ ನಡೆಯುವ ಕುಂಭಮೇಳಕ್ಕಾಗಿ ನಗರವನ್ನು ಸುಂದರೀಕರಿಸುವ ನಿಟ್ಟಿನಲ್ಲಿ ನಗರದ ಬಲ್ಸಾನ್ ಚೌರಾಹಾ ದಲ್ಲಿದ್ದ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ!! ನೆಹರೂ ಪ್ರತಿಮೆಯನ್ನು ತೆರವುಗೊಳಿಸುವುದಾದರೆ ಇದೇ ರಸ್ತೆಯಲ್ಲಿ ಮುಂದೆ ಒಂದೆಡೆ ಇರುವ ಪಂಡಿತ್ ದೀನ ದಯಾಳ್ ಅವರ ಪ್ರತಿಮೆಯನ್ನು ಯಾಕೆ ಮುಟ್ಟಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ!! ಅದಕ್ಕೆ ತಕ್ಕುದಾದ ಕಾರಣವನ್ನು ಯೋಗಿ ಸರಕಾರ ನೀಡಿದೆ..

ಕುಂಭಮೇಳ ನಡೆಯುವ ಸ್ಥಳದಲ್ಲಿ ಈಗಾಗಲೇ ರಸ್ತೆ ಅಗಲೀಕರಣ ಪ್ರಾರಂಭವಾಗಿದ್ದು ಹಾಗೇ ಜವಹರ್‍ಲಾಲ್ ನೆಹರೂರವರ ಪ್ರತಿಮೆ ರಸ್ತೆಗೆ ಅಡ್ಡಲಾಗಿರುವುದರಿಂದ ಅದನ್ನು ಈಗ ಸದ್ಯಕ್ಕೆ ಅಲ್ಲಿಂದ ತೆರವುಗೊಳಿಸಲಾಗಿದೆ ಎಂಬುವುದನ್ನು ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾರೆ!! ರಸ್ತೆ ಅಗಲೀಕರಣಕ್ಕಾಗಿ ನಡುರಸ್ತೆಯಲ್ಲಿದ್ದ ನೆಹರೂ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತತ್ಕಾಲಕ್ಕೆ ನೆಹರೂ ಪ್ರತಿಮೆಯನ್ನು ಸಮೀಪದ ಪಾರ್ಕ್ ನಲ್ಲಿ ಇರಿಸಲಾಗಿದೆ.

ಆದರೆ ವಿರೋಧ ಪಕ್ಷಗಳು ಮಾತ್ರ ಯೋಗಿ ಆದಿತ್ಯನಾಥ ಸರಕಾರ ಬೇಕಂತಲೇ ನೆಹರೂ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ ಎಂದು ಸುಖಾಸುಮ್ಮನೆ ದೂರುತ್ತಿದೆ. ಆದರೆ ಯೋಗಿ ಆದಿತ್ಯನಾಥ ಸರಕಾರದ ಉದ್ಧೇಶವೇ ಬೇರೆ.. ಮಾರ್ಗ ಮಧ್ಯ ಇದ್ದ ನೆಹರೂ ಪ್ರತಿಮೆಯನ್ನು ತೆರವುಗೊಳಿಸಿರುವುದು ಅಷ್ಟೇ!! ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಮಾಡಿದ ಅನ್ಯಾಯಕ್ಕೆ ಇದೀಗ ಸರಿಯಾಗಿಯೇ ಶಿಕ್ಷೆಯಾಗಿದೆ ಎಂದು ಹೇಳಬಹುದು!! ಈಗಾಗಲೇ ಮೊಘಲರ ಕರುಹುಗಳನ್ನು ಉತ್ತರ ಪ್ರದೇಶದಲ್ಲಿ ಒಂದೊಂದಾಗಿಯೇ ನಿರ್ನಾಮ ಮಾಡುತ್ತಿದ್ದಾರೆ!! ಇದೀಗ ರಸ್ತೆಗೆ ಅಡ್ಡಲಾಗಿದ್ದ ನೆಹರೂವಿನ ಪ್ರತಿಮೆಯನ್ನು ಕೂಡಾ ತತ್ಕಾಲಕ್ಕೆ ತೆರವುಗೊಳಿಸಲಾಗಿದೆ!

ಅದಲ್ಲದೆ ಈಗಾಗಲೇ ವಿಶ್ವವಿಖ್ಯಾತ ಕುಂಭ ಮೇಳಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರ ಹಮ್ಮಿಕೊಂಡಿರುವ ರಸ್ತೆ ಅಗಲೀಕರಣ ಯೋಜನೆಯ ಅಂಗವಾಗಿ ಇಲ್ಲಿನ ಮುಸ್ಲಿಮರು ಕೂಡಾ ರಸ್ತೆಗೆ ಹೊಂದಿಕೊಂಡಿದ್ದ ಹಳೆ ನಗರ ವ್ಯಾಪ್ತಿಯ ಮಸೀದಿಗಳ ಭಾಗಗಳನ್ನು ಕೆಡಹುವ ಕಾರ್ಯಕ್ಕೆ ಮುಂದಾಗಿದ್ದರು!! ಯಾಕೆಂದರೆ, ಉತ್ತರ ಪ್ರದೇಶ ಸರಕಾರ ಕುಂಭ ಮೇಳಕ್ಕಾಗಿ ರಸ್ತೆ ಅಗಲಿಸುವ ಯೋಜನೆ ಹಾಕಿಕೊಂಡಿರುವುದನ್ನು ಅನುಸರಿಸಿ ಪ್ರಯಾಗ್ ರಾಜ್ ಮುಸ್ಲಿಮರು ಹಳೇ ನಗರದಲ್ಲಿನ ಅನೇಕ ಮಸೀದಿಗಳ ಭಾಗಗಳನ್ನು ತಾವೇ ಖುದ್ದಾಗಿ ಧ್ವಂಸಗೊಳಿಸಲು ಕೂಡಾ ಮುಂದಾಗಿದ್ದರು!!

ಅದಲ್ಲದೆ ಈಗಾಗಲೇ ಅಲಹಾಬಾದ್‍ನ್ನು “ಪ್ರಯಾಗ್‍ರಾಜ್’ ಎಂದೂ ಮರುನಾಮಕರಣ ಮಾಡಿದೆ! ಪ್ರಯಾಗ್ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದ್ದು ಇದು ಗಂಗೆ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ ಕಾರಣಕ್ಕಾಗಿ ಅಲಹಾಬಾದ್ ಅನ್ನು “ಪ್ರಯಾಗ್‍ರಾಜ್’ ಎಂದು ನಾಮಕರಣ ಮಾಡಿದೆ!! ಈಗಾಗಲೇ ಕುಂಭ ಮೇಳದ ಬ್ಯಾನರ್ಗಳಲ್ಲಿ ಅಲಹಾಬಾದ್ ಎಂಬ ಹೆಸರನ್ನು ಪ್ರಯಾಗ್‍ರಾಜ್ ಆಕ್ರಮಿಸಿಕೊಂಡಿದೆ!! ಹೀಗೆ ಉತ್ತರಪ್ರದೇಶವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವುದೇ ಯೋಗಿ ಆದಿತ್ಯನಾಥರ ಕನಸಾಗಿದೆ!! ಇಂತಹ ಮುಖ್ಯಮಂತ್ರಿ ಪ್ರತೀ ರಾಜ್ಯದಲ್ಲೂ ಇದ್ದರೆ ಇಡೀ ಭಾರತ ರಾಮರಾಜ್ಯವಾಗುವುದಂತೂ ಖಂಡಿತ!! ಇನ್ನು ಮುಂದೆಯೂ ಇಂತಹವರನ್ನು ಗೆಲ್ಲಿಸಿದ್ದಲ್ಲಿ ಈ ದೇಶ ಸುಭೀಕ್ಷವಾಗಬಹುದು!!

source :udayavani

– ಪವಿತ್ರ

Tags

Related Articles

FOR DAILY ALERTS
Close