ಪ್ರಚಲಿತ

ಜೆಡಿಎಸ್ ಗೆ ಭಾರೀ ಮುಖಭಂಗ! ಅಭ್ಯರ್ಥಿಯ ಬೆಂಬಲಿಗರ ಬಂಧನ..! ಶಿಕ್ಷಕರ ಕ್ಷೇತ್ರಕ್ಕೆ ಇವರು ಮಾಡಿದ ಅವಮಾನವೇನು ಗೊತ್ತಾ..?

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಚಿಕ್ಕಂದಿನಿಂದಲೂ ನಮಗೆ ಹೇಳಿಕೊಂಡು ಬರುತ್ತಾರೆ. ನೋ ಡೌಟ್… ಇದನ್ನು ಹೇಳೋದು ನಮ್ಮ ಶಿಕ್ಷಕರೆ. ಸಮಾಜವನ್ನು ತಿದ್ದಿ, ಭ್ರಷ್ಟಾಚಾರ, ಅನಾಚಾರಗಳ ದಾರಿ ಹಿಡಿತದಂತೆ ಮಕ್ಕಳಿಗೆ ಬುದ್ಧಿ ಹೇಳುವ ಇಂತಹಾ ಶಿಕ್ಷಕರ ಕ್ಷೇತ್ರಕ್ಕೇ ಇಂದು ರಾಜ್ಯದಲ್ಲಿ ಆಡಳಿತ ನಡೆಸುವ ಜನತಾ ದಳ ಭಾರೀ ಅವಮಾನವನ್ನೇ ಮಾಡಿದೆ. 12 ವರ್ಷ ಉತ್ತಮ ಚಾರಿತ್ರ್ಯವನ್ನು ಹೊಂದಿಕೊಂಡು ಕೆಲಸ ಮಾಡುತ್ತಿರುವ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಈ ಬಾರಿ ಶತಾಯ ಗತಾಯ ಸೋಲಿಸಲೇಬೇಕೆಂಬ ಹಠದಲ್ಲಿರುವ ವಿರೋಧ ಪಕ್ಷಗಳು ಇದೀಗ ವಾಮಮಾರ್ಗವನ್ನು ಹಿಡಿದಿದೆ.

Related image

 

ಜೆಡಿಎಸ್ ಅಭ್ಯರ್ಥಿ ಬೆಂಬಲಿಗರ ಬಂಧನ..!

ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಪರ ಮತದಾರರಿಗೆ ಹಣ ಹಂಚುತ್ತಿದ್ದ ಸಂದರ್ಭದಲ್ಲಿ ದಿಢೀರ್ ದಾಳಿ ಮಾಡಿದ ಚುನಾವಣಾ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಚುನಾವಣಾಧಿಕಾರಿ ಮತ್ತು ಪೊಲೀಸ್ ರಿಂದ ನಡೆದ ದಾಳಿಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಈ ವೇಳೆ ಶಿಕ್ಷಕರಿಗೆ ಆಮಿಷವೊಡ್ಡಲು ಹಾಗೂ ಹಣ ಹಂಚಲು ಬಳಸುತ್ತಿದ್ದ ಮಾರುತಿ ಕಾರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಯೊಬ್ಬ ಮತದಾರರಿಗೆ ಎರಡು ಸಾವಿರ ರೂಪಾಯಿ ಆಮಿಷವೊಡ್ಡಿ ಅಭ್ಯರ್ಥಿಯಿಂದ ಮತ ಸೆಳೆಯುವ ಯತ್ನವನ್ನು ಅಭ್ಯರ್ಥಿಯ ಬೆಂಬಲಿಗರು ಮಾಡುತ್ತಿದ್ದರು. ಈ ವೇಳೆ ದಾಳಿ ಮಾಡಿದ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಈ ದಂಧೆ ನಡೆಸುತ್ತಿರುವಾಗ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಜೆಡಿಎಸ್ ಅಭ್ಯರ್ಥಿಯ ಬೆಂಬಲಿಗರ ಹೆಡೆಮುರಿ ಕಟ್ಟಿದ್ದಾರೆ.

ಇದೇ ಮೊದಲಲ್ಲ..!

* ಈ ಹಿಂದೆಯೂ ಜೆಡಿಎಸ್ ಬೆಂಬಲಿಗರು ಹಾಗೂ ಅಭ್ಯರ್ಥಿಯಿಂದ ಶಿವಮೊಗ್ಗದಲ್ಲಿ ಪಿಯು ಮೌಲ್ಯ ಮಾಪನ ಕೇಂದ್ರದಲ್ಲಿ ಉಪನ್ಯಾಸಕರಿಗೆ ಬಾಡೂಟ ನೀಡಿ ಸಿಕ್ಕಿಬಿದ್ದ ಘಟನೆ ನಡೆದಿತ್ತು .

* ಹೆಚ್ಚಿನ ಪ್ರೌಢ ಶಾಲಾ ಶಿಕ್ಷಕರಿಗೆ ಶಾಲೆಗಳಲ್ಲಿ ಸ್ವತಃ ಹೋಗಿ ಬ್ಯಾಗ್ ಹಂಚಿದ ಘಟನೆ ನಡೆದಿತ್ತು. ಕೆಲವೊಂದು ಶಿಕ್ಷಕರು ಮುಜುಗರಗೊಂಡು ಬ್ಯಾಗನ್ನು ವಾಪಸ್ ನೀಡಿದ್ದರು. ಈ ಮೂಲಕ ಶಿಕ್ಷಕರಿಗೆ ಉಡುಗೊರೆಯ ಆಮಿಷ ಒಡ್ಡಿ ಮತವನ್ನು ಸೆಳೆಯಲು ಪ್ರಯತ್ನಿಸಿದ್ದರು .

* ಇತ್ತೀಚೆಗೆ ಮಂಗಳೂರಿನ ಮಿಲಾಗ್ರಿಸ್ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಕ್ರೈಸ್ತ ಮತದಾರರನ್ನು ಒಟ್ಟುಗೂಡಿಸಿ ಇದೇ ಅಭ್ಯರ್ಥಿಯು ಬಾಡೂಟ ಮತ್ತು ಮದ್ಯದ ವ್ಯವಸ್ಥೆಯನ್ನು ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.! ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ  ಊಟ ಮತ್ತು ಮದ್ಯವನ್ನು ವಶಪಡಿಸಿ ಅಭ್ಯರ್ಥಿಯ ಮೇಲೆ ಬಲವಾದ ಕೇಸು ಜಡಿದಿದ್ದರು . ಇದರಲ್ಲಿ ಶಿಕ್ಷಕರ ಕ್ಷೇತ್ರದ ಮಂಗಳೂರಿನ ಪಕ್ಷೇತರ ಅಭ್ಯರ್ಥಿ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಪಾತ್ರವೂ ಇತ್ತು ಎಂಬುವುದು ಬಯಲಾಗಿತ್ತು.

ಬಿಜೆಪಿ ಮನವಿ…

ಈ ಮಧ್ಯೆ ಶಿಕ್ಷಕರ ಕ್ಷೇತ್ರದ ಮತದಾರರಲ್ಲಿ ಬಿಜೆಪಿ ಮನವಿ ಮಾಡಿಕೊಂಡಿದೆ. ‘ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಮುಕ್ತ ಎಂದು ತನ್ನ ಅಭಿವೃದ್ಧಿಯಲ್ಲಿ ಪಾರದರ್ಶಕತೆಯನ್ನು ಮೆರೆಯುತ್ತಿದ್ದರೆ ರಾಜ್ಯದಲ್ಲಿ ಸ್ವತಃ ಸರ್ಕಾರ ನಡೆಸುತ್ತಿರುವ ಪಕ್ಷದ ಅಭ್ಯರ್ಥಿಗಳಿಂದಲೇ ಭಾರೀ ಭ್ರಷ್ಟಾಚಾರ ಹಾಗೂ ಚುನಾವಣೆಗಾಗಿ ಆಮಿಷಗಳು ನಡೆಯುತ್ತಿರುವುದು ಅತ್ಯಂತ ವಿಷಾಧನೀಯ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಕೆಲಸ ಮಾಡುವ ಶಿಕ್ಷಕರಿಗೇ ಅವಮಾನ ಮಾಡುವ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿದರೆ ಅದು ಶಿಕ್ಷಣ ಕ್ಷೇತ್ರಕ್ಕೇ ಮಾಡಿದ ಅವಮಾನ. ಹೀಗಾಗಿ ಬುದ್ಧಿವಂತರೂ ಆಗಿರುವ ಶಿಕ್ಷಕರು ನವಭಾರತವನ್ನು ನಿರ್ಮಾಣ ಮಾಡುವತ್ತ ಉತ್ತಮ ಕೆಲಸ ಮಾಡತ್ತಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಮತ ಹಾಕಿ ಪ್ರಧಾನಿ ಮೋದಿಯವರ ಕೈ ಬಲಪಡಿಸಿ’ ಎಂದು ಬಿಜೆಪಿ ಮನವಿ ಮಾಡಿಕೊಂಡಿದೆ.

Image result for ganesh karnik

ಒಟ್ಟಾರೆ ಶಿಸ್ತಿಗೆ ಹೆಸರಾಗಿರುವ ಶಿಸ್ತಿನ ಪಾಠ ಹೇಳಿಕೊಡುವ ಶಿಕ್ಷಕರಿಗೆ ಆಮಿಷವನ್ನು ಒಡ್ಡುವ ಮೂಲಕ ಜನತಾ ದಳದ ಅಭ್ಯರ್ಥಿತೇ ಶಿಕ್ಷಣ ಕ್ಷೇತ್ರಕ್ಕೆ ಕಳಂಕ ತರಲು ಯತ್ನಿಸುತ್ತಿರುವು ವಿಪರ್ಯಾಸವೇ ಸರಿ. ಉತ್ತಮ ಚಾರಿತ್ರ್ಯತೆಗೆ ಹೆಸರಾಗಿರುವ ಶಿಕ್ಷಕರ ಕ್ಷೇತ್ರದ ಹೆಸರು ಕೆಡಿಸಲು ಯತ್ನಿಸುತ್ತಿರುವ ಭೋಜೇಗೌಡರಂತಹ ಅಭ್ಯರ್ಥಿಗಳು ಜಯಿಸಿದರೆ ಶಿಕ್ಷಣ ಕ್ಷೇತ್ರದ ಪಾಡೇನು ಎಂಬ ಪ್ರಶ್ನೆ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.

source: http://kannada.eenaduindia.com/State/Kodagu/2018/06/06192448/Two-arrested-in-Madikeri-who-was-distribute-money.vpf

  • ಸುನಿಲ್ ಪಣಪಿಲ
Tags

Related Articles

Close