ಪ್ರಚಲಿತ

ಬೆಂಗಳೂರಿಗೆ ಬಂದ ರಾಹುಲ್ ಗಾಂಧಿಗೆ ಆರಂಭದಲ್ಲೇ ಅವಮಾನ.! ರಾಗಾ ಸಂವಾದಕ್ಕೆ ತೆರಳಿದರೆ ಎಚ್ಚರಿಕೆಯೆಂದ ಹೆಚ್.ಎ.ಎಲ್.! ಜಾಮ್ ಆಗಲಿದೆಯಂತೆ ಅರ್ಧ ಬೆಂಗಳೂರು.?

ರಫೇಲ್ ಡೀಲ್ ವಿಚಾರದಲ್ಲಿ ಪ್ರಧಾನಮಂತ್ರಿ ಮೋದಿ ಸಹಿತ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಟೊಂಕ ಕಟ್ಟಿ ನಿಂತಿರುವ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ಹೆಚ್.ಎ.ಎಲ್. ಸಂಸ್ಥೆಯ ಉದ್ಯೋಗಿಗಳ ಜೊತೆಗೆ ಸಂವಾದ ಮಾಡಲೆಂದು ಬೆಂಗಳೂರಿಗೆ ಬಂದಿದ್ದಾರೆ.

ಹೆಚ್.ಎ.ಎಲ್. ಉದ್ಯೋಗಿಗಳ ಜೊತೆಗೆ ಸಂವಾದ ನಡೆಸಿ ಪ್ರಧಾನಿ ಮೋದಿಯವರಿಗೆ ಹಿನ್ನೆಡೆ ತರಬೇಕೆಂದು ಯೋಜನೆ ಹಾಕಿಕೊಂಡಿದ್ದ ರಾಹುಲ್ ಗಾಂಧಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಾಹುಲ್ ಗಾಂಧಿಗೆ ಈ ಹಿಂದೆ ಹೆಚ್.ಎ.ಎಲ್. ಪ್ರವೇಶ ನಿರಾಕರಣೆಯಾಗಿತ್ತು. ಯಾವುದೇ ಕಾರಣಕ್ಕೂ ಹೆಚ್.ಎ.ಎಲ್. ಸಂಸ್ಥೆಯನ್ನು ರಾಹುಲ್ ಗಾಂಧಿ ಪ್ರವೇಶಿಸುವುದಕ್ಕೆ ಬಿಡೋದಿಲ್ಲ ಎಂದು ಹೆಚ್.ಎ.ಎಲ್. ಸಂಸ್ಥೆ ಹೇಳಿತ್ತು.

ಈ ಮಧ್ಯೆ ಕಾಂಗ್ರೆಸ್ ನಾಯಕರು ಬೆಂಗಳೂರಿನ ವಿನ್ಸ್ಕ್ ಸ್ಕ್ವೇರ್ ನಲ್ಲಿ ಸ್ಥಳಾವಕಾಶ ಮಾಡಿಕೊಂಡು ಅಲ್ಲಿಗೆ ಹೆಚ್.ಎ.ಎಲ್. ಉದ್ಯೋಗಿಗಳು ಹಾಗೂ ನಿವೃತ್ತ ಉದ್ಯೋಗಿಗಳನ್ನು ಆಮಂತ್ರಿಸಿದ್ದರು. ಆದರೆ ಇದೀಗ ಸ್ವತಃ ಹೆಚ್.ಎ.ಎಲ್. ಸಂಸ್ಥೆಯ ಅಧಿಕಾರಿಗಳೇ ತನ್ನ ಉದ್ಯೋಗಿಗಳು ಹಾಗೂ ನಿವೃತ್ತ ಉದ್ಯೋಗಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ.

Image result for rahul gandhi

ಈ ಬಗ್ಗೆ ಅಧಿಕೃತರ ಸಂದೇಶ ರವಾನಿಸಿರುವ ಹೆಚ್.ಎ.ಎಲ್. ಸಂಸ್ಥೆಯ ಉದ್ಯೋಗಿಗಳ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಯಾರೂ ಹೋಗದಂತೆ ತಾಕೀತು ಮಾಡಿದ್ದಾರೆ. “ನಾವು ದೇಶದ ಒಂದು ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಯಾವ ಪಕ್ಷದ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಈ ಕಾರ್ಯಕ್ರಮಕ್ಕೆ ತೆರಳಿದರೆ ಒಂದು ಪಕ್ಷದ ಪರವಾಗಿ ನಮ್ಮ ನಿಲುವು ಪ್ರದರ್ಶಿಸಿದಂತಾಗುತ್ತದೆ. ಹೀಗಾಗಿ ನಾವು ಯಾವ ಪಕ್ಷದ ಪರವಾಗಿಯೂ ಬ್ಯಾಟಿಂಗ್ ಮಾಡೋದು ಬೇಡ. ನಿವೃತ್ತ ಉದ್ಯೋಗಿಗಳೂ ಹೋಗಕೂಡದು” ಎಂದು ತಾಕೀತು ಮಾಡಿದ್ದಾರೆ. ಈ ಮೂಲಕ ಸ್ಥಳ ಬದಲಾವಣೆ ಮಾಡಿದ್ದರೂ ರಾಹುಲ್ ಗಾಂಧಿಗೆ ಅವಮಾನ ಎದುರಾಗಿದೆ. ಇಂದು ಕೇವಲ ಕಾಂಗ್ರೆಸ್ ಕಾರ್ಯಕರ್ತರನ್ನೇ ಕುಳ್ಳಿರಿಸಿ ಸಂವಾದ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅರ್ಧ ಬೆಂಗಳೂರು ಜಾಮ್.!

ಇಂದು ರಾಹುಲ್ ಗಾಂಧೀ ಬೆಂಗಳೂರಿನ ವಿನ್ಸ್ಕ್ ಸ್ಕ್ವೇರ್ ನಲ್ಲಿ ಸಂವಾದ ನಡೆಸುವ ಕಾರ್ಯಕ್ರಮ ಇರೋದರಿಂದ ಇಂದು ಅರ್ಧ ಬೆಂಗಳೂರೇ ಟ್ರಾಫಿಕ್ ಜಾಂ ಆಗಲಿದೆಯಂತೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರವಾಗಿ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಸಾಮಾನ್ಯರು ಅನುಮತಿ ಕೇಳಿದರೆ ವಿನ್ಸ್ಕ್ ಸ್ಕ್ವೇರ್ ನಲ್ಲಿ ಅವಕಾಶ ನೀಡದ ನೀವು (ಕಾಂಗ್ರೆಸ್) ರಾಹುಲ್ ಗಾಂಧಿಗೆ ಸಂವಾದ ನಡೆಸಲು ಅದೇಗೆ ಅವಕಾಶ ನೀಡಿದ್ದೀರಿ. ಇಂದು ಅರ್ಧ ಬೆಂಗಳೂರೇ ಟ್ರಾಫಿಕ್ ಸಮಸ್ಯೆಯನ್ನು ಎದುರಿಸಲಿದೆ. ಏನು ಮಾಡುತ್ತೀರಿ? ಸಾಮಾನ್ಯರಿಗೊಂದು ನ್ಯಾಯ, ನಿಮ್ಮ ಅಧ್ಯಕ್ಷರಿಗೊಂದು ನ್ಯಾಯವೇ” ಎಂದು ಕಿಡಿಕಾರಿದ್ದಾರೆ.

ಒಟ್ಟಾರೆ ರಾಹುಲ್ ಗಾಂಧಿ ಆಗಮನದ ಆರಂಭದಲ್ಲೇ ವಿಘ್ನ, ಮುಜುಗರ , ಅವಮಾನ ಎಲ್ಲವೂ ಸಂಭವಿಸಿದ್ದು ಮತ್ತೊಮ್ಮೆ ಕರ್ನಾಟಕದಲ್ಲಿ ರಾಗಾ ಯಡವಟ್ಟು ನಡೆಯುವ ಎಲ್ಲಾ ಸಾಧ್ಯತೆಗಳಿವೆ.

-ಏಕಲವ್ಯ

Tags

Related Articles

FOR DAILY ALERTS
Close