ಪ್ರಚಲಿತ

ಶಾಕಿಂಗ್! ಈ ಗ್ರಾಮಕ್ಕೆ ಕಾಂಗ್ರೆಸ್ ಕಾಲಿಡುವಂತಿಲ್ಲ! ಕಾಂಗ್ರೆಸ್‍ಗೆ ಶಾಕ್ ತಂದ ಪೋಸ್ಟರ್ ಪಾಲಿಟಿಕ್ಸ್!

ಕಾಂಗ್ರೆಸ್‍ಗೆ ಜನರು ಕ್ಯಾಕರಿಸಿ ಉಗಿಯುತ್ತಿರುವುದು ಇದೇ ಮೊದಲೇನಲ್ಲ. ಸನ್ಯಾಸಿಯ ಮುಖವಾಡವನ್ನು ಧರಿಸಿಕೊಂಡು ಭಿಕ್ಷೆ ಬೇಡಲು ಬಂದ ರಾವಣನ ರೀತಿಯ ಬುದ್ಧಿಯ ಪಕ್ಷವಾದ ಈ ಕಾಂಗ್ರೆಸ್‍ನ ನಿಜಬಣ್ಣ ಬಯಲಾಗಿದ್ದು ಇಂದು ನಿನ್ನೆಯ ಕಥೆಯಲ್ಲ. ಆದರೆ ಈ ಬಾರಿ ಕರುನಾಡಿನ ಜನತೆಯ ಕಣ್ಣು ಕಾಂಗ್ರೆಸ್ ಪಕ್ಷವನ್ನು ಸೋಲಿಸುವತ್ತ ಬಿದ್ದಿದೆ. ಹಲವಾರು ಕೆಟ್ಟ ಆಡಳಿತಕ್ಕೆ ಕಾರಣವಾಗಿದ್ದ ಈ ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇ ಬೇಕು ಎಂಬ ಹಠಕ್ಕೆ ಕರುನಾಡಿನ ಜನತೆ ಬಿದ್ದಿದ್ದಾರೆ.

ಆ ಗ್ರಾಮಕ್ಕೆ ಕಾಂಗ್ರೆಸ್ ಕಾಲಿಡುವಂತಿಲ್ಲ..!

ಅದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಂಬಲ್ಲಿನ ಕನ್ಯಾನ ಎಂಬ ಗ್ರಾಮ. ಈ ಗ್ರಾಮಕ್ಕೆ ಸಂಬಂಧಿಸಿದಂತೆ ಇರುವ ಬಹುತೇಕ ಎಲ್ಲಾ ಸದಸ್ಯರುಗಳೂ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳೇ. ಆದರೆ ಈ ಬಾರಿ ಮಾತ್ರ ಆ ಗ್ರಾಮದ ಜನತೆ ಕಾಂಗ್ರೆಸ್ ಪಕ್ಷವನ್ನೇ ಧಿಕ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಆ ಗ್ರಾಮಕ್ಕೆ ಕಾಲಿಡದಂತೆ ಗ್ರಾಮದ ಜನತೆ ಛಾತಕ ಪಕ್ಷಿಯಂತೆ ಕಾಯುತ್ತಾ ಕುಳಿತ್ತಿದ್ದಾರೆ. ವಿಟ್ಲದ ಕನ್ಯಾನ ಎಂಬ ಆ ಗ್ರಾಮದ ಜನರಿಗೆ ಕಾಂಗ್ರೆಸ್ ಮೇಲಿರುವ ಇಷ್ಟೊಂದು ಕೋಪಕ್ಕೂ ಒಂದು ಕಾರಣ ಇದೆ.

ಹಿಂದೂ ಹುಡುಗಿ ಮತಾಂತರಕ್ಕೆ ಕಾಂಗ್ರೆಸ್ ಬೆಂಬಲ..!

ಹೌದು. ಕೆಲ ಸಮಯಗಳ ಹಿಂದೆ ಆ ಗ್ರಾಮದಲ್ಲಿ ಗಣ್ಯಶ್ರೀ ಎಂಬ ಅಮಾಯಕ ಹಿಂದೂ ಹುಡುಗಿಯನ್ನು ಮತಾಂಧರು ಪ್ರೇಮ ಎಂಬ ಬಲೆಯನ್ನು ಬೀಸಿ ಮೋಸದಿಂದ ಪ್ರೀತಿಯ ನಾಟಕವಾಡಿ ನಂತರ ಆಕೆಯನ್ನು ಮತಾಂತರ ಮಾಡಿದ್ದರು. ಈ ಬಗ್ಗೆ ಆ ಗ್ರಾಮದಲ್ಲಿ ಭಾರೀ ಆಕ್ರೋಷವೇ ಭುಗಿಲೆದ್ದಿತ್ತು. ಕೆಲ ಯುವಕರ ಮಧ್ಯೆ ಜಟಾಪಟಿಯೂ ಆಗಿತ್ತು. ಘರ್ಷಣೆಯೂ ಆಗಿತ್ತು. ಆದರೆ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಮತ್ತೆ ತನ್ನ ಹಳೇ ಚಾಳಿಯನ್ನು ಮತ್ತೆ ಮುಂದಿಟ್ಟಿತ್ತು. ಅಲ್ಪಸಂಖ್ಯಾತರನ್ನು ಓಲೈಸಲು ಮುಂದಾಗಿತ್ತು. ಮತಾಂಧರು ಗಣ್ಯಶ್ರೀ ಎಂಬ ಹುಡುಗಿಯನ್ನು ಮೋಸದಿಂದ ಪ್ರೀತಿಸಿ ಮತಾಂತರ ಮಾಡಿದ ಆ ಘೋರ ಘಟನೆಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿತ್ತು. ಆ ಇಡೀ ಊರಿಗೆ ಊರೇ ಆಕ್ರೋಷ ವ್ಯಕ್ತಪಡಿಸುತ್ತಿದ್ದರೂ ಕಾಂಗ್ರೆಸ್ ಪಕ್ಷ ಮಾತ್ರ ಮತಾಂಧರ ಬೆಂಬಲಕ್ಕೆ ನಿಂತಿತ್ತು. ಇದು ಆ ಗ್ರಾಮದ ಜನತೆಯ ಕೆಂಗಣ್ಣಿಗೆ ಕಾರಣವಾಗಿತ್ತು. ಆಕ್ರೋಷ ಮತ್ತೆ ಭುಗಿಲೆದ್ದಿತ್ತು.

ಗೋಡೆಗಳಲ್ಲಿ ರಾರಾಜಿಸುತ್ತಿದೆ ಕಾಂಗ್ರೆಸ್ ವಿರೋಧಿ ಬರಹಗಳು..!

ಗಣ್ಯಶ್ರೀ ಎಂಬ ಯುವತಿಯನ್ನು ಮೋಸದಿಂದ ಪ್ರೀತಿಸಿ ಮತಾಂತರಗೊಳಿಸಿದ ಆ ಮತಾಂಧರ ಹಾಗೂ ಈ ಪ್ರಕರಣಕ್ಕೆ ಬೆಂಬಲ ನೀಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧದ ಆಕ್ರೋಷ ಇನ್ನೂ ಅಲಿಸಿ ಹೋಗಲೇ ಇಲ್ಲ. ವಿಟ್ಲದ ಕನ್ಯಾನ ಎಂಬ ಆ ಗ್ರಾಮ ಚುನಾವಣೆಗಾಗಿ ಕಾಯುತ್ತಾ ಕುಳಿತಿತ್ತು. ಇದೀಗ ರಾಜ್ಯ ವಿಧಾನ ಸಭಾ ಚುನಾವಣೆಯ ಸಮಯವಾಗಿದ್ದರಿಂದ ಕಾಂಗ್ರೆಸ್ ವಿರುದ್ಧ ಆಕ್ರೋಷ ಭುಗಿಲೆದ್ದಿದೆ. ಮಾತ್ರವಲ್ಲದೆ ಪ್ರತಿಯೋರ್ವ ಹಿಂದೂ ಮನೆಯಲ್ಲೂ ಗೋಡೆಬರಹಗಳು ಕಾಣುತ್ತಿವೆ.

“ಇದು ಹಿಂದೂ ಮನೆ… ಗಣ್ಯಶ್ರೀಯನ್ನು ಕಪಟ ಪ್ರೇಮದಿಂದ ಮತಾಂತರ ಮಾಡಲು ಬೆಂಬಲಿಸಿದ ಕಾಂಗ್ರೆಸ್ಸಿಗರಿಗೆ ಇಲ್ಲಿ ಪ್ರವೇಶವಿಲ್ಲ. ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ” ಎಂಬ ಗೋಡೆಬರಹಗಳು ಆ ಗ್ರಾಮದ ಬಹತೇಕ ಮನೆಗಳಲ್ಲಿ ಗೋಚರಿಸುತ್ತಿವೆ. ಈ ಮೂಲಕ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾರ್ವಜನಿಕೆರು ಬಹಿಷ್ಕಾರ ಹಾಕಿದ್ದಾರೆ. ಬರೋಬ್ಬರಿ 200ಕ್ಕೂ ಅಧಿಕ ಹಿಂದೂಗಳ ಮನೆಗಳಲ್ಲಿ ಇಂತಹಾ ಬರಹಗಳು ಕಾಣುತ್ತಿದ್ದು ಆ ಗ್ರಾಮಕ್ಕೆ ಕಾಂಗ್ರೆಸ್ ನಾಯಕರಿಗೆ ಓಟು ಕೇಳಿಕೊಂಡು ಬರುವ ಯಾವ ಯೋಗ್ಯತೆಯೂ ಇಲ್ಲ ಎಂದು ಹೇಳಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ಧ ಭಾರೀ ಆಕ್ರೋಷ ವ್ಯಕ್ತವಾಗುತ್ತಿದ್ದಂತೆ ಈ ಪೋಸ್ಟರ್ ರಾಜಕೀಯ ಕೂಡಾ ಕಾಂಗ್ರೆಸ್‍ಗೆ ಭಾರೀ ಮುಜುಗರವನ್ನು ಉಂಟುಮಾಡುತ್ತಿದೆ.

ಹೆಚ್ಚುತ್ತಿದೆ ಪೋಸ್ಟರ್ ಪಾಲಿಟಿಕ್ಸ್..!

ಇದು ಕೇವಲ ವಿಟ್ಲದ ಕನ್ಯಾನ ಗ್ರಾಮದ ಸ್ಟೋರಿಯಲ್ಲ. ಇಂತಹ ಪ್ರಕರಣಗಳು ರಾಜ್ಯದ ಬಹುತೇಕ ಕಡೆಗಳಲ್ಲಿ ನಡೆಯುತ್ತಿದೆ. ತಮ್ಮ ಮನೆಯ ಗೋಡೆಗಳಲ್ಲಿ ಅಥವಾ ಗೇಟುಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕರಿಗೆ ಧಿಕ್ಕಾರ ಹೇರಲಾಗಿದೆ. “ನಮ್ಮ ಮನೆ ಹಿಂದೂ ಮನೆ. ಇಲ್ಲಿ ಮತಾಂಧರಿಗೆ ಬೆಂಬಲಿಸುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅವಕಾಶ ಇಲ್ಲ” ಎಂಬ ಬರಹವೂ ಹಾಗೂ “ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ನಮ್ಮ ಮನೆಗೆ ಕಾಂಗ್ರೆಸ್ ಪಕ್ಷಕ್ಕೆ ನಿಷೇಧವಿದೆ” ಎಂಬ ಬರಹವೂ ಬಹುತೇಕ ಮನೆಗಳಲ್ಲಿ ರಾರಾಜಿಸುತ್ತಿದೆ. ಇಂತಹಾ ಪೋಸ್ಟರ್‍ಗಳೇ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್‍ಗೆ ಮಾರಕವಾಗಿ ಪರಿಣಮಿಸಲಿದೆ ಎಂಬ ಮಾತೂ ಕೇಳಿಬರುತ್ತಿದೆ.

ಒಟ್ಟಾರೆ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೋಸ್ಟರ್ ಪಾಲಿಟಿಕ್ಸ್ ಸಖತ್ ಜೋರಾಗಿಯೇ ನಡೆಯುತ್ತಿದೆ. ಶತಾಯ ಗತಾಯ ಈ ಬಾರಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಗಳಿಸಲೇ ಬೇಕು ಎಂದು ರಾಜ್ಯದ ಜನತೆ ಪಣತೊಟ್ಟಿದ್ದಾರೆ. ಹೀಗಾಗಿ ತಮ್ಮ ಮನೆಯ ಗೋಡೆಗಳ ಮೇಲೂ ಇಂತಹಾ ಬರಹಗಳನ್ನು ನಮೂದಿಸಿ ಕಾಂಗ್ರೆಸ್ ವಿರುದ್ಧದ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close