ಪ್ರಚಲಿತ

ಕಾಂಗ್ರೆಸ್ ಮೈತ್ರಿಗೆ ಬಿಗ್ ಶಾಕ್..! ಬಹುಮತ ಸಾಬೀತು ಪಡಿಸಿಯೇ ಬಿಟ್ಟ ಚಾಣಾಕ್ಯ..!

ರಾಜಕಾರಣದಲ್ಲಿ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಸದ್ಯ ಕರ್ನಾಟಕದ ರಾಜಕೀಯ ಗಮನಿಸಿದರೆ ಗೊತ್ತಾಗುತ್ತದೆ. ಏಕೆಂದರೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿಗೆ ಬಹುಮತ ಪಡೆಯಲು ಸಾಧ್ಯವಾಗದೇ ಇದ್ದಿದ್ದರಿಂದ ಅಧಿಕಾರಕ್ಕೇರಲು ಕಷ್ಟವಾಗಿತ್ತು. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚಿಸಲು ಮುಂದಾದರೆ , ಬಿಜೆಪಿ ಮಾತ್ರ ಒಬ್ಬಂಟಿಯಾಗಿ ನಾವೇ ಸರಕಾರ ರಚನೆಮಾಡುತ್ತೇವೆ ಎಂದು ಘಂಟಾಘೋಷವಾಗಿ ಹೇಳಿಕೊಂಡಿತ್ತು. ಅದರಂತೆಯೇ ನಾನಾ ರೀತಿಯ ಕಸರತ್ತುಗಳನ್ನು ನಡೆಸಿ , ಸದ್ಯ ಬಿಎಸ್ ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕರಿಸಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.!

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ಬಿಜೆಪಿಗೆ ಬೆಂಬಲ..?

ಬಹುಮತ ಸಾಧಿಸಲು ಸಾಧ್ಯವಾಗದ ಬಿಜೆಪಿ ೧೦೪ ಸ್ಥಾನ ಪಡೆದು ಸರಕಾರ ರಚಿಸಲು ಸಾಧ್ಯವಾಗದೆ ಕೊಂಚಮಟ್ಟಿಗೆ ತೊಂದರೆ ಅನುಭವಿಸುವಂತಾಗಿತ್ತು. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಬತ್ತಳಿಕೆಯಲ್ಲಿದ್ದ ಶಾಸಕರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದು ರೆಸಾರ್ಟ್ ರಾಜಕೀಯ ಮುಂದುವರಿಸಿತ್ತು. ಆದರೆ ಬಿಜೆಪಿ ಹೂಡಿದ ಪ್ರತಿತಂತ್ರಕ್ಕೆ ಇಡೀ ವಿರೋಧಿ ಪಡೆಯೇ ಬೆಚ್ಚಿಬಿದ್ದಿದೆ. ಯಾಕೆಂದರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದು ಖಚಿತ ಎಂದು ಘೋಷಿಸಿದ್ದ ಬಿಜೆಪಿ , ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸಿ ಇಂದು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.

ಇತ್ತ ೧೦೪ ಶಾಸಕರನ್ನು ಹೊಂದಿದ್ದ ಬಿಜೆಪಿ ಇದೀಗ ಏಕಾಏಕಿ ೧೧೪ ಶಾಸಕರ ಬೆಂಬಲ ಇರುವುದಾಗಿ ರಾಜ್ಯಪಾಲರಿಗೆ ಪಟ್ಟಿ ರವಾನಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬಿಜೆಪಿಗೆ ಸ್ಪಷ್ಟ ಬಹುಮತ ಇದೆ ಎಂದು ಹೇಳಿಕೊಂಡಿದ್ದಾರೆ..!

ಒಟ್ಟು ಆರು ಕಾಂಗ್ರೆಸ್ ಶಾಸಕರು , ಎರಡು ಜೆಡಿಎಸ್ ಮತ್ತು ಒಂದು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಈಗಾಗಲೇ ಹೇಳಲಾಗುತ್ತಿದೆ. ಆದ್ದರಿಂದ ರಾಜ್ಯಪಾಲರು ನೀಡಿರುವ ಕಾಲಾವಕಾಶ ಮುಗಿಯುವ ಮುನ್ನವೇ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ ಎಂಬ ವಿಚಾರ ಈಗಾಗಲೇ ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.!

ಒಂದೆಡೆ ಕುಮಾರಸ್ವಾಮಿ , ಬಿಜೆಪಿಯವರು ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ನಾವು ಬಿಜೆಪಿಯಿಂದಲೇ ಶಾಸಕರನ್ನು ಕರೆದುಕೊಂಡು ಬರುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಬಿಹೆಪಿ ಚಾಣಾಕ್ಯ ಅಮಿತ್ ಷಾ ತಂತ್ರಕ್ಕೆ ಇಡೀ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಚ್ಚಿಬಿದ್ದಿದೆ. ಯಾಕೆಂದರೆ ಇದೀಗ ಅಮಿತ್ ಷಾ ರವಾನಿಸಿರುವ ಪತ್ರದಲ್ಲಿ ಬಿಜೆಪಿಗೆ ೧೧೪ ಶಾಸಕರ ಸಂಪೂರ್ಣ ಬೆಂಬಲ ಇದೆ ಎಂದು ನಮೂದಿಸಿದ್ದಾರೆ.

ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗುವುದನ್ನು ವಿರೋಧಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿದೆ. ಆದರೆ ರಾಜ್ಯದ ಜನರ ಬೆಂಬಲ ಬಿಜೆಪಿ ಮತ್ತು ಯಡಿಯೂರಪ್ಪ ನವರಿಗೆ ಇರುವುದರಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.!

–ಪಿ ಆರ್ ಶೆಟ್ಟಿ

Tags

Related Articles

Close