ಪ್ರಚಲಿತ

ಡಿಕೆಶಿಗೆ ಶಾಕ್! ತಹಶೀಲ್ದಾರ್ ಕಛೇರಿಗೇ ನುಗ್ಗಿದ ಸಿಬಿಐ..! ಕನಕಪುರ ಭದ್ರಕೋಟೆಯನ್ನು ಛಿದ್ರ ಮಾಡಿದ ಸಿಬಿಐ..?

ಡಿಕೆ ಶಿವಕುಮಾರ್ ಅವರ ಅಕ್ರಮ ಹಣಗಳಿಂದ ಕಟ್ಟಿದ ಕೋಟೆ ಛಿದ್ರವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಐಟಿ ಇಲಾಖೆಯ ಅಧಿಕಾರಿಗಳು ಡಿಕೆಶಿವಕುಮಾರ್ ಅವರ ಕೋಟೆಯನ್ನು ಛಿದ್ರ ಮಾಡಿತ್ತು. ನಂತರ ಅವರ ಮೇಲೆ ಎಫ್‍ಐಆರ್ ದಾಖಲಿಸಿ ಇಡಿಗೆ ವರ್ಗಾಯಿಸಲಾಗಿತ್ತು. 

ನಂತರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ ಅಧಿಕಾರಿಗಳು ಕೂಡಾ ಡಿಕೆ ಶಿವಕುಮಾರ್ ಅವರನ್ನು ಬೆಂಬಿಡದೆ ಕಾಡಿದ್ದರು. ನೋಟ್ ಬ್ಯಾನ್ ಸಂದರ್ಭದಲ್ಲಿ ಅಕ್ರಮ ಹಣಗಳನ್ನು ನವೀಕರಣ ಮಾಡಿದ್ದು, ಅದೆಷ್ಟೋ ಕೋಟಿಗಳಷ್ಟು ಹಣಗಳನ್ನು ವರ್ಗಾವಣೆ ಮಾಡಿದ್ದು, ಲೆಕ್ಕವಿಲ್ಲದಷ್ಟು ಅಕ್ರಮ ಹಣಗಳು ಪತ್ತೆಯಾಗಿದ್ದು ಸಹಿತ ಅನೇಕ ಪ್ರಕರಣಗಳು ಡಿಕೆ ಶಿವಕುಮಾರ್ ಅವರ ಹೆಗಲೇರಿತ್ತು. ಮಾತ್ರವಲ್ಲದೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಜೇಬಿನಲ್ಲಿದ್ದ ಚೀಟಿಯೊಂದನ್ನು ತರಾತುರಿಯಲ್ಲಿ ಹರಿದು ಹಾಕಿದ್ದರು. ಆ ಚೀಟಿ ಯಾವುದು ಎಂಬುವುದರ ಬಗ್ಗೆ ಡಿಕೆ ಶಿವಕುಮಾರ್ ಇನ್ನೂ ಹೇಳಿಕೆ ನೀಡಿಲ್ಲ. ಹೀಗಾಗಿ ಈ ಪ್ರಕರಣವನ್ನೂ ಅವರು ಎದುರಿಸುತ್ತಿದ್ದಾರೆ.

ತಹಶೀಲ್ದಾರ್ ಕಛೇರಿಗೆ ದಾಳಿ..!

ಇಂದು ಸಿಬಿಐನ 982ನೇ ವಿಶೇಷ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಸಿಬಿಐ ಅಧಿಕಾರಿಗಳು ಏಕಕಾಲದಲ್ಲಿ ಡಿಕೆ ಸಹೋದರರ 5 ಮನೆಗಳು ಸೇರಿದಂತೆ ಕಛೇರಿಗಳ ಮೇಲೆ ದಾಳಿ ನಡೆಸಿದರು. ಕೆಲ ಕಾಲ ವಿಚಾರಣೆಯನ್ನು ನಡೆಸಿದ ಸಿಬಿಐ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನ ಕಳೆಹಾಕಿದ್ದರೆ ಎಂದು ಎನ್ನಲಾಗುತ್ತಿದೆ.

ಈ ಮಧ್ಯೆ ಇಂದು ಬೆಳಿಗ್ಗೆ 10:30ಕ್ಕೆ ಸಿಬಿಐ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಭದ್ರಕೋಟೆಯಾಗಿರುವ ಕನಕಪುರ ತಹಶೀಲ್ದಾರ್ ಕಛೇರಿಗೆ ದಾಳಿ ಮಾಡಿದ್ದಾರೆ. ಕನಕ ಪುರದಲ್ಲಿರುವ ತಾಲೂಕು ಕಛೇರಿ ಹಾಗೂ ತಹಶೀಲ್ದಾರ್ ಕಛೇರಿಗೆ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಕಳ್ಳರು ಎಲ್ಲೇ ಇದ್ದರೂ ನಾವು ಬಿಡೋದಿಲ್ಲ ಎನ್ನುವ ಸಂದೇಶವನ್ನು ಸಾರುತ್ತಿದ್ದಾರೆ.

ಇದಿಷ್ಟೇ ನಡೆದರೆ ಓಕೆ. ಇನ್ನು ಜಾರಿ ನಿರ್ಧೇಶನಾಲಯ ಹಾಗೂ ಸಿಬಿಐ ಮನವಿಯಂತೆ ಡಿಕೆಶಿವಕುಮಾರ ಮೇಲೆ ಕೇಸು ದಾಖಲಿಸಲು ಅನುಮತಿಯನ್ನು ನೀಡಿದ್ದೇ ಆದಲ್ಲಿ ಡಿಕೆ ಶಿವಕುಮರ್ ಅವರ ಭದ್ರ ಕೋಟೆ ಛಿದ್ರವಾಗಲಿದೆ.

-ಸುನಿಲ್ ಪಣಪಿಲ

Tags

Related Articles

Close