ಪ್ರಚಲಿತ

ರೈತರಿಗೆ ಶಾಕ್! ಸಾಲಮನ್ನಾ ಮಾಡಲು ಬಿಡೋದಿಲ್ಲವೆಂದ ಕಾಂಗ್ರೆಸ್! ಸಾಲಮನ್ನಾದ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ..?

ಅಧಿಕಾರ ಹಿಡಿದಾಗಿನಿಂದಲೂ ವಚನ ಭ್ರಷ್ಟ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಬಂದಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಇದೀಗ ಮತ್ತೆ ತನ್ನ ವಚನ ಭ್ರಷ್ಟ ನೀತಿಯನ್ನು ಮುಂದುವರೆಸುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 24 ಗಂಟೆಯಲ್ಲೇ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ಕುಮಾರ ಸ್ವಾಮಿ ಇದೀಗ ಸಂಪೂರ್ಣ ಉಲ್ಟಾ ಹೊಡೆದಿತ್ತು ಇತಿಹಾಸ.

ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕಾಂಗ್ರೆಸ್ ಹಾಗೂ ಜನತಾ ದಳದ ಮೈತ್ರಿ ಸರ್ಕಾರದಿಂದ ಜನತೆ ಕೊಟ್ಟ ಆದೇಶದಂತೆ ನಡೆದುಕೊಳ್ಳದೆ ನಡೆದುಕೊಂಡಿದ್ದರು ಮುಖ್ಯಮಂತ್ರಿ ಕುಮಾರ ಸ್ವಾಮಿ. ಯಾವಾಗ ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿಯವರು ಪ್ರಮಾಣ ವಚನವನ್ನು ಸ್ವೀಕರಿಸಿದರೋ ಅಂದಿನಿಂದ ತಮ್ಮ ಪಕ್ಷದ ಪ್ರಣಾಳಿಕೆಯ ಪ್ರಮುಖ ಭರವಸೆಯಾಗಿರುವ ಸಾಲಮನ್ನಾದ ಬಗ್ಗೆ ರೈತರು ಆಗ್ರಹಿಸಿದ್ದಾರೆ.

Image result for kumaraswamy

ಆದರೆ ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಕುಮಾರ ಸ್ವಾಮಿಯವರು ಹೇಳುತ್ತಲೇ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕರ್ನಾಟಕ ರಾಜ್ಯ ಬಂದ್‍ಗೆ ಕರೆ ನೀಡಿದ್ದರು. ಇದರ ನಂತರ ತನಗೆ 15 ದಿನಗಳ ಸಮಯಾವಕಾಶವನ್ನು ನೀಡಿ, ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. 

ಆದರೆ ದಿನ 18 ಕಳೆದರೂ ಇನ್ನೂ ಯಾವ ಆಶ್ವಾಸನೆಯೂ ಈಡೇರಿಲ್ಲ. ಇದೀಗ ಮತ್ತೆ ಪೊಳ್ಳು ಭರವಸೆಯ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಹೋಗುತ್ತಿದ್ದಾರೆ ಮುಖ್ಯಮಂತ್ರಿ ಕುಮಾರ ಸ್ವಾಮಿ. ಖಂಡಿತಾ ನಾನು ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಈ ಹೇಳಿಕೆಗೆ ಮಿತ್ರ ಪಕ್ಷ ಕಾಂಗ್ರೆಸ್ ಕಿಡಿ ಕಾರಿದೆ. ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಇದಕ್ಕೆ ನಾವು ಒಪ್ಪಿಗೆ ನೀಡೋದಿಲ್ಲ ಎಂದು ಹೇಳಿದೆ! ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಜನತಾ ದಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡಾ ಅಡ್ಡಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರೂ ಕಟ್ಟು ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಮಿತ್ರ ಪಕ್ಷದ ಮಾತು ಕೇಳಬೇಕಾದ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಇದ್ದಾರೆಯೋ ಅಥವಾ ಕಾಂಗ್ರೆಸ್‍ನ ಈ ರೀತಿಯ ನಡವಳಿಕೆ ತನಗೆ ಜಾರಿಕೊಳ್ಳಲು ಸುಲಭವಾಗುತ್ತದೆ ಎನ್ನುವ ಕನಸಿನಲ್ಲಿದ್ದಾರೋ ಗೊತ್ತಿಲ್ಲ.

ಆದರೆ ಇದೀಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ತಂಡ ಮತ್ತೆ ಸಿಡಿದೆದ್ದಿದೆ. 2 ಜಿಲ್ಲೆಗೆ ಒಂದರಂತೆ ತಂಡವನ್ನು ರಚಿಸಿದ್ದು ಈ ತಂಡ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ ತೆರಳಿ ಮೈತ್ರಿ ಸರ್ಕಾರ ಮಾಡುತ್ತಿರುವ ಅನಾಚಾರ ಹಾಗೂ ರೈತ ವಿರೋಧಿ ನಡೆಯನ್ನು ಜನರಿಗೆ ಮನಮುಟ್ಟುವಂತೆ ಹೇಳಲು ಸಿದ್ದವಾಗಿದೆ. ಇದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗಿದ್ದಂತೂ ಸುಳ್ಳಲ್ಲ.

-ಏಕಲವ್ಯ

Tags

Related Articles

Close